Breaking News

ಹುಬ್ಬಳ್ಳಿ

ದೀಪಾವಳಿ ಶುಭಾಶಯ ತಿಳಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಹುಬ್ಬಳ್ಳಿ : ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ತಿಳಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಈ ದೀಪದ ಹಬ್ಬ ದೀಪಾವಳಿ ರಾಜ್ಯದ ಜನತೆಗೆ, ದೇಶದ ಜನತೆಗೆ ಅವರ ಜೀವನದಲ್ಲಿ ಬೆಳಕನ್ನು ನೀಡಲೆಂದು ಹರಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ವಿಕಸಿತ ಭಾರತ ಗುರಿಗೆ ಎಲ್ಲರು ಕೈ ಜೋಡಿಸಿ, ಮತ್ತೊಮ್ಮೆ ದೀಪಾವಳಿ ಹಬ್ಬದ ಶುಭಾಶಯಗಳು.

Read More »

ನಮ್ಮ ಧಾರವಾಡ ಜಿಲ್ಲೆಯಲ್ಲೇ 500 ಎಕರೆ ಆಸ್ತಿ ವಕ್ಷಗೆ ಒಳಪಟ್ಟಿದೆ: ಅರವಿಂದ ಬೆಲ್ಲದ

ಧಾರವಾಡ: ಇಡೀ ರಾಜ್ಯದ ಜನತೆಗೆ ಆಘಾತ ಕೊಡುವ ಬೆಳವಣಿಗೆಯೊಂದು ನಡೆಯುತ್ತಿದೆ. ನಮ್ಮ ಧಾರವಾಡ ಜಿಲ್ಲೆಯಲ್ಲೇ 500 ಎಕರೆ ಆಸ್ತಿ ವಕ್ಷಗೆ ಒಳಪಟ್ಟಿದೆ ಎಂಬ ಮಾಹಿತಿ ಇದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಉಪ್ಪಿನ ಬೆಟಗೇರಿ ಗ್ರಾಮದ ಕೆಲ ರೈತರ ಜಮೀನಿನ ಪಹಣಿಯಲ್ಲೂ ವಕ್ಷ ಆಸ್ತಿ ಎಂದು ನಮೂದಾಗಿದೆ. ಧಾರವಾಡದ ಸ್ಮಶಾನ ಕೂಡ 1995 ರಲ್ಲಿ ವಕ್ಷ ಆ್ಯಕ್ಟ್ ಮಾಡಿದ್ದ ವೇಳೆ …

Read More »

ವಿವಿಧ ಸ್ಥಳಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಭೇಟಿ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 54 ರ ವ್ಯಾಪ್ತಿಯ ಗ್ರೀನ್ ಗಾರ್ಡನ್, ರಾಜಧಾನಿ ಕಾಲೋನಿ, ಸಿದ್ದಲಿಂಗೇಶ್ವರ ಕಾಲೋನಿ ಹಾಗೂ ವಿಕಾಸ ನಗರದ ಸಾರ್ವಜನಿಕರಿಂದ ರಸ್ತೆ ಕಾಮಗಾರಿ ಹಾಗೂ ಸಂಚಾರ ದಟ್ಟಣೆ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮೋಹನ ಬರೋಡೆ, ಸಂದೀಪ ಜಡಿ, ವಿನಾಯಕ ದೊಂಗಡಿ ಇದ್ದರು.

Read More »

“ನನ್ನ ಭಾರತ ಅಡಿಯಲ್ಲಿ ದೀಪಾವಳಿ ವಿಥ್ ಮೈ ಭಾರತ” ಸ್ವಚ್ಚತಾ ಕಾರ್ಯಕ್ರಮ

ಹುಬ್ಬಳ್ಳಿ: ನಗರದಲ್ಲಿ ಸ್ವಚ್ಚತಾ ಕಾರ್ಯಕ್ರಮ ಭಾರತ ಸರಕಾರದ ನೆಹರು ಯುವ ಕೇಂದ್ರ, ಶ್ರೀ ವಾಯುಪುತ್ರ ಸಾಂಸ್ಕೃತಿಕ ಕಲಾ ಕ್ರೀಡಾ ಶಿಕ್ಷಣ, ಗ್ರಾಮ ಅಭಿವೃದ್ಧಿ ಯುವ ಸಂಘ, ರಂಗಜೀವನ ಸಂಘ, ಚಂದ್ರ ಸ್ಪೂರ್ತಿ ಸಾಂಸ್ಕೃತಿಕ ಕಲಾ ಸಂಘ ಹಾಗೂ ಆದರ್ಶ ಮಹಿಳಾ ಸಾಂಸ್ಕೃತಿಕ ಕಲಾ ಸಂಘ ಇವರ ಸಹಯೋಗದಲ್ಲಿ ಇಂದು “ನನ್ನ ಭಾರತ ಅಡಿಯಲ್ಲಿ ದೀಪಾವಳಿ ವಿಥ್ ಮೈ ಭಾರತ” ಅಂಗವಾಗಿ ನಗರದ ಹಲವೆಡೆ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ …

Read More »

ಪುನೀತ್ ರಾಜ್‌ಕುಮಾರ್ ಸ್ಮರಿಸಿದ ಕಮೀಷನರ್ ಎನ್ ಶಶಿಕುಮಾರ್

ಹುಬ್ಬಳ್ಳಿ: ಕರುನಾಡಿನ ಪವರ್ ಸ್ಟಾರ್ ಪುನೀತ್ ರಾಜಕುಮಾ‌ರ್ ಅವರು ನಮ್ಮನ್ನು ಆಗಲಿ ಇದೀಗ ಮೂರು ವರ್ಷ ಕಳೆದಿದೆ. ಆದರೂ ಕೂಡಾ ಅವರು ನಮ್ಮ ನಡುವೆಯೇ ಇದ್ದಾರೆ ಎಂಬುದಕ್ಕೆ ಕರುನಾಡಿನ ಜನ ಅವರ ಮೇಲೆ ಇಟ್ಟ ಪ್ರೀತಿ ಕಾರಣ. ಪುನೀತ್ ರಾಜ್‌ಕುಮಾರ್ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದು ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಇದ್ದ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಪೊಲೀಸ್‌ ಕಮಿಷನರ್‌ ಎನ್ ಶಶಿಕುಮಾರ್ ಪುನೀತ್ ಅಭಿನಯದ ಹಾಡನ್ನು ಹಾಡಿ ಅಪ್ಪುವನ್ನು …

Read More »

ಹೆಚ್ಚು ಹಣ ಹೊಡಿಕೆ ಮಾಡುವಂತೆ ನಂಬಿಸಿ ಮಹಿಳೆಗೆ ವಂಚನೆ

ಹುಬ್ಬಳ್ಳಿ : ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ಇಲ್ಲಿನ ಗೋಕುಲ ರಸ್ತೆಯ ಬಸವೇಶ್ವರ ನಗರದ ಪ್ರಸನ್ನ ಕಾಲೊನಿಯ ಚಿತ್ರಾ ಹೇಮಂತ ಲಾಡ್ ಅವರಿಗೆ 97.50 ಲಕ್ಷ ರೂಪಾಯಿ ವಂಚಿಸಲಾಗಿದೆ. ಚಿತ್ರಾ ಅವರು ಷೇರು ಟ್ರೇಡಿಂಗ್ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ. ಆಗ ಸಿಕ್ಕ ಲಿಂಕ್ ಕ್ಲಿಕ್ ಮಾಡಿದಾಗ ಅವರ ಮೊಬೈಲ್ ಸಂಖ್ಯೆ ‘ಬಿ1 ವಿಜಯ್ ಬಜಾಜ್ ವೆಲ್ತ್ ಫ್ರೀಡಂ ಲರ್ನಿಂಗ್ ಗ್ರೂಪ್’ …

Read More »

ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಣದ ಹೊಳೆಯನ್ನೇ ಹರಿಸುತ್ತಿದೆ : ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಣದ ಹೊಳೆಯನ್ನೇ ಹರಿಸುತ್ತಿದೆ. ಆದಾಗ್ಯೂ NDA ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಜೋಶಿ, ಕಾಂಗ್ರೆಸ್ ನವರು ಈ ಮೂರೂ ಕ್ಷೇತ್ರಗಳಲ್ಲಿ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಚಿವರನ್ನು ಇರಿಸಿ, ಹಣದ ಹೊಳೆ ಹರಿಸುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ನವರು ಭ್ರಮನಿರಸನರಾಗಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸರ್ಕಾರಿ …

Read More »

ಎನ್‌. ಶಶಿಕುಮಾ‌ರ್ ನೇತೃತ್ವದಲ್ಲಿ 258 ಬೈಕ್ ಹಾಗೂ 3 ಆಟೋಗಳನ್ನು ಸೀಜ್

ಹುಬ್ಬಳ್ಳಿ: ನಗರದಲ್ಲಿ ಶನಿವಾರ ರಾತ್ರಿ ಕಮಿಷನ‌ರ್ ಎನ್‌. ಶಶಿಕುಮಾ‌ರ್ ನೇತೃತ್ವದಲ್ಲಿ ದಕ್ಷಿಣ ಉಪ ವಿಭಾಗದಲ್ಲಿ 14 ಚೆಕ್ ಪೋಸ್ಟ್ ಹಾಕಿ ವಾಹನಗಳ ಪರಿಶೀಲನೆ ಮಾಡುವಾಗ ದಾಖಲೆಗಳು ಇಲ್ಲದೆ ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 258 ಬೈಕ್ ಹಾಗೂ 3 ಆಟೋಗಳನ್ನು ಸೀಜ್ ಮಾಡಲಾಯಿತು. ಸದ್ಯ ಈ ಎಲ್ಲ ವಾಹನಗಳ ಪೈಕಿ ಇದೀಗ ವಾಹನಗಳ ಸರಿಯಾದ ದಾಖಲೆಗಳು ಇದ್ದ ವಾಹನಗಳನ್ನು ಬಿಟ್ಟು ಕಳುಹಿಸಿ, ದಾಖಲೆಗಳು ಇಲ್ಲದ ವಾಹನಗಳಿಗೆ 166500 ರೂಪಾಯಿ ದಂಡವನ್ನು ವಿಧಿಸಲಾಗಿದೆ. …

Read More »

ಕೊಳೆತ ಟಮೊಟೆ ಮಾರಾಟ : ಸಾರ್ವಜನಿಕರಿಂದ ವಿಡಿಯೋ ಹಂಚಿಕೆ

ಹುಬ್ಬಳ್ಳಿ: ಅತೀದೊಡ್ಡ ಮಾರುಕಟ್ಟೆಯನ್ನು ಹೊಂದಿದ ನಮ್ಮ ಹುಬ್ಬಳ್ಳಿಯ ಎಪಿಎಮ್‌ಸಿಯಲ್ಲಿ, ಕೊಳೆತ ಟಮೊಟೆ ಮಾರುತ್ತಿದ್ದಾರೆಂದು ಸಾರ್ವಜನಿಕರು ವಿಡಿಯೋ ಕಳಸಿದ್ದಾರೆ. ಬೆಳಗಿನ ಜಾವ ಹುಬ್ಬಳ್ಳಿ ಎಪಿಎಮ್‌ಸಿಯಲ್ಲಿ ತರಕಾರಿ ಮಾರಾಟ ಮಾಡಿಕೊಂಡು ನಂತರ, ನಗರದ ವಿವಿಧ ಮಾರುಕಟ್ಟೆಗೆ ಮಾರಾಟ ಮಾಡಲು ಹೋಗುತ್ತಾರೆ. ದಿನಂಪ್ರತಿ ಮಾರಾಟ ಮಾಡುವ ವೇಳೆ ಟಮೊಟೆಗಳು ಕೊಳೆತು ಹುಳ ಹತ್ತಿದ್ದ ಟಮೊಟೆಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಸಾರ್ವಜನಿಕರು ವಿಡಿಯೋ ಮಾಡಿ ಕಳಿಸಿದ್ದಾರೆ. ಈ ಬಗ್ಗೆ ಎಪಿಎಮ್‌ಸಿ ಅಧ್ಯಕ್ಷರು ಇತ್ತ ಗಮನಿಸಬೇಕಾಗಿದೆ.

Read More »

ಕನ್ನಡ ಶಾಲೆಗೆ ಬಣ್ಣ ಹಚ್ಚಿದ ಹಳೇ ವಿದ್ಯಾರ್ಥಿಗಳ ಸಂಘ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಸಿದ್ದಾರೂಢರ ನಗರದಲ್ಲಿರುವ ರೇವಣಸಿದ್ದೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ, 2 ನೇ ಶಾಲೆಗೆ ಬಣ್ಣ ಹಚ್ಚುವ ಮಹತ್ತರ ಕಾರ್ಯವನ್ನು ಮಾಡಿದ್ದಾರೆ. ಈ ಕನ್ನಡ ಶಾಲೆಯಲ್ಲಿ ಅದೆಷ್ಟೋ ಮಕ್ಕಳು ಓದುತ್ತಿದ್ದಾರೆ. ಈಗ ಆ ಶಾಲೆ ಬಣ್ಣದಿಂದ ಕಂಗೊಳಿಸಿದ್ದನ್ನು ನೋಡಿ ಮಕ್ಕಳು ಖುಷಿ ಖುಷಿಯಿಂದ ಶಾಲೆಗೆ ಹೋಗುತ್ತಿದ್ದಾರೆ. ಈ ಹಳೆ ವಿದ್ಯಾರ್ಥಿ ಸಂಘದ ಇಂತಹ ಒಳ್ಳೆಯ ಕೆಲಸಕ್ಕೆ ಹುಬ್ಬಳ್ಳಿ ಧಾರವಾಡ ಜನರು ಮೆಚ್ಚುಗೆ …

Read More »