Shaikh BigTv
September 6, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಮಹಿಳೆಯರೊಂದಿಗೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗೆ ಪೊಲೀಸರು ಬೆತ್ತದ ರುಚಿ ತೋರಿಸಿ ಅಲ್ಲಿಂದ ಕಳುಹಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಬ್ಬಳ್ಳಿಯ ಗೋಕುಲ್ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಬುಧವಾರ ರಾತ್ರಿ ವ್ಯಕ್ತಿಯೊಬ್ಬ ವಿಪರೀತ ಕುಡಿದು ನಿಲ್ದಾಣದಲ್ಲಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಇದನ್ನು ಗಮನಿಸಿದ ಬಸ್ ಚಾಲಕರು ಹಾಗೂ ನಿರ್ವಾಹಕರು ಆತನನ್ನು ಅಲ್ಲಿಂದ ಹೋಗು ಎಂದರೂ ಹೋಗದ ಕಾರಣ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬಂದು …
Read More »
Shaikh BigTv
September 5, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ ಎಂಬ ಆರೋಪದಡಿ, ಕಾಮುಕನೊಬ್ಬನನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಡುಗಿಯರಿಗೆ ತನ್ನ ಮರ್ಮಾಂಗ ತೋರಿಸಿ ಯುವಕನೊಬ್ಬ ಕುಡಿದ ಮತ್ತಿನಲ್ಲಿ ಗದಗ ರಸ್ತೆಯಲ್ಲಿ ಸಿಕ್ಕ ಸಿಕ್ಕ ಹುಡುಗಿಯರಿಗೆ ತನ್ನ ಮರ್ಮಾಂಗ ತೋರಿಸುತ್ತ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾನೆಂದು ಆರೋಪಿಸಿ, ಆತನನ್ನು ಎಳೆದು ಹಿಗ್ಗಾಮುಗ್ಗ ಥಳಿಸಿ ಕೇಶ್ವಾಪುರ ಪೊಲೀಸ್ ಠಾಣೆಗೆ ಎಳೆದೊಯ್ದ ಘಟನೆ ನಡೆದಿದೆ.
Read More »
Shaikh BigTv
September 5, 2024
Breaking News, ಹುಬ್ಬಳ್ಳಿ
ಧಾರವಾಡ: ಅನಗತ್ಯ ಆರೋಪ ಮಾಡಿ ದೂರರ್ಜಿಯನ್ನು ಸಲ್ಲಿಸಿದ್ದ ಧಾರವಾಡದ ಸಾಮಾಜಿಕ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಓ) ಪ್ರಸನ್ನ ಸುಬೇದಾರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶಕುಮಾರ ದೀಕ್ಷಿತ್ ಆದೇಶ ಹೊರಡಿಸಿದ್ದಾರೆ. ತಮ್ಮದೇ ಇಲಾಖೆಯ ತಮ್ಮದೇ ಕೆಡರ್‌ನ ಅಧಿಕಾರಿಗಳ ಮೇಲೆ ಮೂರನೇ ವ್ಯಕ್ತಿಯ ಹೆಸರಿನಲ್ಲಿ ಅನಗತ್ಯ ಆರೋಪ ಮಾಡಿದರು.03-09-2024ರಿಂದ ಕೂಡಲೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ. ಧಾರವಾಡ ಸಾಮಾಜಿಕ ವಲಯ ಆರ್‌ಎಫ್‌ಓ ಸುಬೇದಾರ ತಮ್ಮ ಸಹೋದ್ಯೋಗಿ ಅಧಿಕಾರಿಗಳ …
Read More »
Shaikh BigTv
September 5, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಯಾರಾದರೂ ಹೇಳಲಿ ಸಿ.ಎಂ. ಇಬ್ರಾಹಿಂ ಒಂದು ರೂಪಾಯಿ ತಿಂದಿದ್ದಾರೆ ಎಂದು, ಬಿಜೆಪಿಯವರೇ ನಿಮಗೆ ಯಾಕಪ್ಪ ಸಾಬರಿಗೆ ದಾನ ಕೊಡುವ ಚಿಂತೆ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾರಾದರೂ ಒಬ್ಬರು ಹೇಳಲಿ ಒಂದು ರೂಪಾಯಿ ತಿಂದಿದ್ದೇವೆ ಎಂದು, ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ ಹೀಗಾಗಿ ಸಾಬರು ಕೊಡುವ ದೇಣಿಗೆ, ದಾನದ ಬಗ್ಗೆ ರೂಲ್ಸ್ ಮಾಡ್ತಾರೆ ಎಂದರು. ನನ್ನ …
Read More »
Shaikh BigTv
September 5, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಹಿಜಾಬ್ ಪ್ರಕರಣದಲ್ಲಿ ಭಾಗಿಯಾದ ಕಾರಣ ಉಡುಪಿ ಪ್ರಾಂಶುಪಾಲ ರಾಮಕೃಷ್ಣ ಅವರ ಹೆಸರನ್ನು ಸರ್ಕಾರ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿಯಿಂದ ಕೈಬಿಟ್ಟಿದ ವಿಚಾರ, ಒಬ್ಬರು ಉತ್ತಮ ಶಿಕ್ಷಕರು ಅಂದರೆ ಅವರು ಉತ್ತಮ ಶಿಕ್ಷಕರೇ. ಶಿಕ್ಷಕರ ವೈಯಕ್ತಿಕ ವಿಚಾರ ಇಟ್ಟುಕೊಂಡು ಪ್ರಶಸ್ತಿಯಿಂದ ಹೊರಗಿಟ್ಟಿರುವುದು ಸರಿಯಲ್ಲ. ಈ ಹಿಂದಿನಿಂದಲೂ ಕಾಂಗ್ರೆಸ ವೈಯಕ್ತಿಕ ನಂಬಿಕೆಯ ಮೇಲೆ ಪ್ರಶಸ್ತಿ ನೀಡುತ್ತಾ ಬಂದಿದೆ. ಮೊದಲಿನಿಂದಲೂ ಕಾಂಗ್ರೆಸ್ ಲೇಫ್ಟಿಸ್ಟ್ ಪರ ಇದೆ ಎಂದು ವಿಪ ಪಕ್ಷದ ಉಪಾಧ್ಯಕ್ಷ ಅರವಿಂದ ಬೆಲ್ಲದ …
Read More »
Shaikh BigTv
September 5, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಗಣೇಶ ಚತುರ್ಥಿ ಹಬ್ಬವನ್ನು ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಅಚ್ಚುಕಟ್ಟಾಗಿ ನಡೆಸಲು ಶಾಸಕರಾದ ಮಹೇಶ ಟೆಂಗಿನಕಾಯಿ ಅವರ ನೇತೃತ್ವದಲ್ಲಿ ಪೂರ್ವಸಭೆಯನ್ನು ನಡೆಸಲಾಯಿತು. ಹೌದು.. ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಲ್ಲಿಂದು ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಿದರು. ಮೇಯರ್ ರಾಮಪ್ಪ ಬಡಿಗೇರ, ಉಪಮಹಾಪೌರರು ದುರ್ಗಮ್ಮ ಬಿಜವಾಡ, ಪಾಲಿಕೆಯ ಸಭಾ ನಾಯಕರು ವೀರಣ್ಣ ಸವಡಿ, ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಭಾಗವಹಿಸಿದ್ದು, ಅವಳಿನಗರದಲ್ಲಿ ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಣೆ ಮಾಡುವಂತೆ ಸೂಚನೆ …
Read More »
Shaikh BigTv
September 5, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ರೇಣುಕಾ ನಗರದ ಬಾಲಮಾರುತಿ ದೇವಸ್ಥಾನದಲ್ಲಿ ಇಂದು ಮೇಯತ್ ರಾಮಣಗಣ ಬಡಗೇರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯತಾ ಅಭಿಯಾನವನ್ನು ಭೂತ್ ಮಟ್ಟದಲ್ಲಿ ಪ್ರಾರಂಭಿಸಲು ಸಭೆ ನಡೆಸಿದರು. ಈ ವೇಳೆಯಲ್ಲಿ ಸದಸ್ಯತಾ ಅಭಿಯಾನದ ಮಂಡಲ ಸಂಚಾಲಕರು ಹನುಮಂತ. ಹರಿವಾಣ ಅಶೋಕ ವಾಲೀಕಾರ ವಾರ್ಡ್ ಅಧ್ಯಕ್ಷರು ರಾಚಯ್ಯ. ಮಠಪತಿ ಹಾಗೂ ಭೂತ್ ಅಧ್ಯಕ್ಷರುಗಳು ಹಾಗೂ ಸದಸ್ಯರು ಇದ್ದರು.
Read More »
Shaikh BigTv
September 5, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಕಳೆದ ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಚಿನ್ನಾಭರಣ ಅಂಗಡಿ ಕಳ್ಳತನದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, 77 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇಲ್ಲಿನ ಕೇಶ್ವಾಪುರ ಠಾಣೆಯ ವ್ಯಾಪ್ತಿಯ ರಮೇಶ ಮುಂಭಾಗದಲ್ಲಿರುವ ಶ್ರೀ ಭುವನೇಶ್ವರಿ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನವಾಗಿತ್ತು. ಕಳ್ಳತನವಾಗಿರುವ ಚಿನ್ನಾಭರಣಗಳಲ್ಲಿ 780 ಗ್ರಾಂ ಚಿನ್ನ, 23.3 ಕೆಜಿ ಮೌಲ್ಯದ ಬೆಳ್ಳಿ ಆಭರಣ, ಕಳ್ಳತನ ಕೃತ್ಯಕ್ಕೆ …
Read More »
Shaikh BigTv
September 5, 2024
Breaking News, ಹುಬ್ಬಳ್ಳಿ
ಹುಬ್ವಳ್ಳಿ: ರಾಜ್ಯ ಸರ್ಕಾರ ನಿವೃತ್ತ ನೌಕರರಿಗೆ ಸರ್ಕಾರದಿಂದ ತಾರತಮ್ಯ ಮಾಡಿದೆಂದು ಹೋರಾಟ ಮಾಡುಲು ಮುಂದಾಗಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ 7 ನೇ ವೇತನ ಆಯೋಗವನ್ನು ಹೊರಡಿಸಿದೆ. ಆದ್ರೆ ಪರಿಷ್ಕರಣೆಯಂತೆಯೇ ನೀಡಬೇಕಿದ್ದ ಆರ್ಥಿಕ ಸೌಲಭ್ಯದಲ್ಲಿ ತಾರತಮ್ಯ ಮಾಡಿದೆ. ಇದೇ 18 ರಂದು ಬೆಂಗಳೂರು ಛೆಲೋ ಹೋರಾಟ ಮಾಡಲು ಮುಂದಾಗಿದ್ದಾರೆ. 7 ನೇ ವೇತನ ಆಯೋಗದಂತೆ ನಿವೃತ್ತಿ ವೇತನ ಪಡೆಯಬೇಕಿದ್ದ ನಿವೃತ್ತಿ ಶಿಕ್ಷಕರು, ಆದ್ರೆ ಇವರು ಇನ್ನೂ 6 ನೇ ವೇತನ ಆಯೋಗದ …
Read More »
Shaikh BigTv
September 5, 2024
Breaking News, ಹುಬ್ಬಳ್ಳಿ
ಧಾರವಾಡ: ಆಡಳಿತದಲ್ಲಿ ಸರಳತೆ ಮತ್ತು ಜನಸ್ನೇಹಿ ಆಗಿದ್ದಾಗ ಮಾತ್ರ ಸರ್ಕಾರದ ಜನಕಲ್ಯಾಣ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳು ಅರ್ಹರಿಗೆ ತಲುಪಲು ಸಾಧ್ಯವಾಗುತ್ತದೆ. ಆಡಳಿತದಲ್ಲಿ ಸುಧಾರಣೆಯೊಂದಿಗೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಅಗತ್ಯವಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು. ಧಾರವಾಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಜಿಲ್ಲಾಮಟ್ಟದ ಅಧಿಕಾರಿಗಳ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ಅಭಿಪ್ರಾಯ ಮತ್ತು ಸಲಹೆ ಪಡೆಯುವ ಕುರಿತು ಜರುಗಿದ ಸಭೆಯ …
Read More »