Breaking News

ಹುಬ್ಬಳ್ಳಿ


ಇಂದು ಧಾರವಾಡಕ್ಕೆ ಸಿಎಂ ಆಗಮನ

ಹುಬ್ಬಳ್ಳಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸೆಂಬರ್ 14 ರ ಇಂದು ಧಾರವಾಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ನಮ್ಮ ಕ್ಲಿನಿಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಕಯಾಗಲಿದ್ದಾರೆ. ಇಂದು ಬೆಳಿಗ್ಗೆ 10-30 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. 11 ಗಂಟೆಗೆ ಹುಬ್ಬಳ್ಳಿ ಭೈರಿದೇವರಕೊಪ್ಪದ ರೇಣುಕಾ ನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಏರ್ಪಡಿಸಿರುವ ನಮ್ಮ ಕ್ಲಿನಿಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12-30 ಗಂಟೆಗೆ ಹುಬ್ಬಳ್ಳಿ ಭೈರಿದೇವರಕೊಪ್ಪ, ಸಪ್ತಗಿರಿ …

Read More »

ಡಿ.17ರಂದು ರಾಜ್ಯದಾದ್ಯಂತ ಕಾಲೇಜುಗಳಿಗೆ ಬಂದ್ ಕರೆ ಕೊಟ್ಟ NSUI

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಸಾಕಷ್ಟು ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಎನ್ಎಸ್‌ಯುಐ ಸಂಘಟನೆ ಕಾರ್ಯಕರ್ತರು ಡಿ.17 ರಂದು ರಾಜ್ಯದಾದ್ಯಂತ ಎಲ್ಲಾ ಕಾಲೇಜುಗಳಿಗೆ ಬಂದ್ ಕರೆ ಕೊಟ್ಟಿದೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘಟನೆ ಮುಖ್ಯಸ್ಥ ಹಾಗೂ ಕವಿವಿ ಸಿಂಡಿಕೇಟ್ ಸದಸ್ಯ ರವಿ ಮಾಳಗೇರ, ಯುಯುಸಿಎಸ್ ಎಂಬ ಪದ್ಧತಿ ಜಾರಿಗೆ ತಂದ ಮೇಲೆ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸಾಕಷ್ಟು ವಿಳಂಬವಾಗುತ್ತಿದೆ. ವಿದ್ಯಾರ್ಥಿಗಳು ಮೂರನೇ ಸೆಮಿಸ್ಟರ್‌ಗೆ ಹೋದರೂ ಅವರಿಗೆ ಇನ್ನೂ ಮೊದಲ …

Read More »

ಭೀಕರ ರಸ್ತೆ ಅಪಘಾತ, ಚಾಲಕ ಪ್ರಾಣಾಪಾಯದಿಂದ ಪಾರು

ಹುಬ್ಬಳ್ಳಿ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಾಲಕ ಅಮರಗೋಳದಿಂದ ಹುಬ್ಬಳ್ಳಿಯತ್ತ ಅತಿವೇಗವಾಗಿ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರು ರೋಡ್ ಡಿವೈಡರ್‌ಗೆ ರಭಸವಾಗಿ ಗುದ್ದಿದ್ದರಿಂದ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಗಾಯಾಳು ಚಾಲಕನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಈ ಘಟನೆ ಸಂಬಂಧವಾಗಿ ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬೈಕ್ ಸ್ಕಿಡ್ ಪಶುಸಂಗೋಪನಾ ನೌಕರ ಸಾವು

ಹುಬ್ಬಳ್ಳಿ: ಬೈಕ್ ಸವಾರನೊಬ್ಬ ಆಯ ತಪ್ಪಿ ಪಾದಚಾರಿಗೆ ಗುದ್ದಿ ಬೈಕ್ ಸ್ಕಿಡ್ ಆಗಿ ಬಿದ್ದು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಕಲಘಟಗಿ ರಸ್ತೆಯಲ್ಲಿ ನಡೆದಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪಶು ಸಂಗೋಪನಾ ಇಲಾಖೆಯ ನೌಕರ ಶ್ರೀಕಾಂತ ನಿಂಬಾಳ್ಕರ್ (37) ಮೃತ ಬೈಕ್ ಸವಾರನಾಗಿದ್ದು, ನೌಕರಿಗೆಂದು ಹೋಗುತ್ತಿರುವಾಗ ಬೈಕ್ ಸ್ಕಿಡ್ ಆಗಿ ಪಾದಾಚಾರಿಗೆ ಗುದ್ದಿದ್ದಾನೆ.ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಶ್ರೀಕಾಂತ ಮೃತಪಟ್ಟ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಪಾದಚಾರಿ ಸಿದ್ದು ಎಮ್ಮೆಟ್ಟಿಗೆ ಗಂಭೀರ ಗಾಯ, …

Read More »

ಜನೆವರಿ ೬ ರಂದು ಕಾಕ್ಟೈಲ್ ಚಿತ್ರ ತೆರೆಗೆ

ಹುಬ್ಬಳ್ಳಿ;ವಿಜಯಲಕ್ಷ್ಮಿ ಕಂಬೈನ್ಸ್ ಬೆಂಗಳೂರು ಕಾಕ್ಟೇಲ್ ಚಲನಚಿತ್ರವು ಜನೆವರಿ ೬ ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ಮಾಪಕರಾದ ಡಾ. ಶಿವಪ್ಪ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಕ್ಟೈಲ್ ಒಂದು ವಿಭಿನ್ನ ಕಥಾಹಂದರ ಹೊಂದಿರುವ ಒಂದು ಅದ್ಭುತ ಕಥೆಯಾಗಿದ್ದು, ಚಿತ್ರದಲ್ಲಿ ೨ ಹಾಡುಗಳು ಇವೆ.ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರದ ಶೂಟಿಂಗ್ ನಡೆದಿದೆ.ಇನ್ನೂ ಚಿತ್ರದಲ್ಲಿ ಬಿರೇನ್ ಕೇಶನ್, ಚರಿಷ್ಮಾ, ಶೋಭರಾಜ್ ಸೇರಿದಂತೆ ಮುಂತಾದ ಗಣ್ಯರು ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದರು. …

Read More »

ದುಶ್ಚಟಗಳ ದಾಸನಾದ ಮಗ – ಸುಪಾರಿ ಕೊಟ್ಟು ಕೊಲೆ ಮಾಡಿಸಿಯೇ ಬಿಟ್ಟ ತಂದೆ..!

ಹುಬ್ಬಳ್ಳಿ : ಒಂದು ಇರುವೆ ಸಹ ಸಾಯಿಸಲು ಸಹ ಬಿಡದ ವಿಶ್ವಕ್ಕೆ ಶಾಂತಿ ಮಂತ್ರ ಕೋರಿದ ಜೈನ್ ಸಮುದಾಯವೇ ತಲೆ ತಗ್ಗಿಸುವಂತೆ, ನಾಗರಿಕ ಸಮಾಜವೇ ನಾಚುವಂತೆ ಸ್ವತಃ ತಂದೆಯೇ ಹೆತ್ತ ಮಗನನ್ನು ಕೊಂದ ಪ್ರಕರಣ ಅಂತಿಮ ಘಟ್ಟ ತಲುಪಿದೆ. ಮಣ್ಣಿನಲ್ಲಿ ಮುಚ್ಚಿಟ್ಟ ಶವದ ಜೊತೆಗೆ ಸತ್ಯವನ್ನು ಹೊರೆಳೆದ ಪೊಲೀಸರು, ಅಂತಿಮ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಮಗನನ್ನು ಕಳೆದುಕೊಂಡ ತಾಯಿ ತನ್ನ ಗಂಡ ಹೇಳಿದ ಸುಳ್ಳನ್ನು ಸತ್ಯವೆಂದು ನಂಬಿ, ಇನ್ನೂ ಬಾರದ …

Read More »

ಗುಜರಾತ್ ಚುನಾವಣೆ ಫಲಿತಾಂಶ ರಾಜ್ಯದ ಚುನಾವಣೆಗೆ ಬೂಸ್ಟರ್: ಶೆಟ್ಟರ್

ಹುಬ್ಬಳ್ಳಿ: ಗುಜರಾತ್ ರಾಜ್ಯದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಭೂತಪೂರ್ವ ಜಯ ಸಿಕ್ಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಕುರಿತು ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಗುಜರಾತ್ ರಾಜ್ಯದ ಅಭೂತಪೂರ್ವ ಜಯ ನಿಜಕ್ಕೂ ರಾಜ್ಯದ ಚುನಾವಣೆಗೆ ಬೂಸ್ಟರ್ ಆಗಿ ಪರಿಣಮಿಸುತ್ತದೆ. ಗುಜರಾತ್ ರಾಜ್ಯದ ಜನರು ಭಾರತೀಯ ಜನತಾ …

Read More »

ಜನ ಸಂಕಲ್ಪ ಯಾತ್ರೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಜನ ಸಂಕಲ್ಪ ಯಾತ್ರೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ ಮುಂಬಯಿ ಕರ್ನಾಟಕ, ಹೈದ್ರಾಬಾದ್ ಕರ್ನಾಟದಲ್ಲಿ ಯಶಸ್ವಿಯಾಗಿದೆ. ಚುನಾವಣೆ ವರ್ಷ ಹೀಗಾಗಿ ಜನರ ಬಳಿ ಹೋಗುತ್ತಿದ್ದೇವೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಚುನಾವಣೆಯಂತೆ ಜನರ ಬಳಿ ಹೋಗುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಆಗುತ್ತಿದೆ . ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಲ್ಲಿ ಗೋಡೆ ಬರಹ ವಿಚಾರವಾಗಿ …

Read More »

ಪ್ರತ್ಯೇಕ ಮುಸ್ಲಿಂ ಕಾಲೇಜು ತೆರೆದರೇ ಉಗ್ರ ಹೋರಾಟ – ವಿನಾಯಕ ಮಾಲಡ್ಕರ್ ಎಚ್ಚರಿಕೆ

ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿಯು ರಾಜ್ಯದಲ್ಲಿ ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪಿಸುವ ಕುರಿತು ಅಪಸ್ವರಗಳು ಕೇಳಿ ಬಂದಿದ್ದು, ಇದೀಗ ಯಾವುದೇ ಕಾರಣಕ್ಕೂ ಮುಸ್ಲಿಂ ಕಾಲೇಜು ತೆರೆಯಲು ನಾವು ಅವಕಾಶ ಕೋಡುವುದಿಲ್ಲ ಎಂದು ಹಿಂದೂಸ್ಥಾನ ಜನತಾ ಪಾರ್ಟಿ ಸಂಘಟನೆ ರಾಜ್ಯಾದ್ಯಕ್ಷ ವಿನಾಯಕ ಮಾಲಡ್ಕರ್ ಉಗ್ರ ಹೋರಾಟ ಮಾಡುವುದಾಗಿ ಒತ್ತಾಯಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಹಿಂದೂಗಳ ಮತಗಳಿಂದ ಗೆದ್ದು ಬಂದು ರಾಜ್ಯದ ಹಿಂದುಗಳಿಗೆ ಮೋಸ ಮಾಡ್ತಾಯಿದೆ,ಬಿಜೆಪಿ ತನ್ನ ಹುಚ್ಚಾಟ ನಿಲ್ಲಿಸದೇ ಹೋದ್ರೆ ನಾವು …

Read More »

ಮಾಜಿ ಸಿಎಂ ಕ್ಷೇತ್ರದಲ್ಲಿ ಸ್ಪರ್ದಿಸಲು ಫಾರೂಕ್ ಒಲವು: ಹೈಕಮಾಂಡ ಚಿತ್ತ ಯಾರತ್ತ….?

ವಿಧಾನಸಭೆ ಚುನಾವಣೆ ಕಾವು ರಂಗೆರುತ್ತಿದ್ದು ಹುಬ್ಬಳ್ಳಿ -ಧಾರವಾಡದ ಕ್ಷೇತ್ರಗಳು ಇದಕ್ಕೆ ಕಮ್ಮಿ ಇಲ್ಲ‌ ಅಂತಲೇ ಹೇಳಬಹುದು ..ಈಗಾಗಲೇ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಭಾರಿ ಪೈಪೋಟಿ ನಡೆದಿದ್ದು .ಕಾಂಗ್ರೆಸ್ ನ ಹಲವು ನಾಯಕರು ಮಾಜಿ ಮಂತ್ರಿ ಜಗದೀಶ್ ಶೆಟ್ಟರ್ ವಿರುದ್ದ ಸೆಣಸಾಡಲು ಮುಂದೆ ಬರುತ್ತಿದ್ದಾರೆ ಸತತ ೬ಭಾರಿ ಸ್ಪರ್ಧಿಸಿ ಜಯಗಳಿಸಿರುವ ಜಗದೀಶ್ ಶೆಟ್ಟರ್ ಅವರ ಈ ಕ್ಷೇತ್ರದಲ್ಲಿ ಈ ಮೊದಲು ಕಾಂಗ್ರೆಸ್ ಅಭ್ಯರ್ಥಿಗಳನ್ನ ಇಳಿಸಲು ಹುಡುಕಾಟ ನಡೆಸಿ ಚುನಾವಣೆಯಲ್ಲಿ ನಿಲ್ಲಿಸುವ …

Read More »