Breaking News

ಹುಬ್ಬಳ್ಳಿ

ಕೋವಿಡ್ 4 ನೇ ಅಲೆಯ ಭೀತಿ ಹಿನ್ನೆಲೆ ಕ್ರಮಗಳನ್ನು ಕೈಗೊಳ್ಳಲಾಗಿದೆ : ಬೊಮ್ಮಾಯಿ

ಹುಬ್ಬಳ್ಳಿ : ಹಿಂದಿ ಭಾಷೆ ಹೇರಿಕೆ ವಿಚಾರ. ನಟ ಸುದೀಪ್ ಹೇಳಿದ್ದು ಸರಿಯಿದೆ. ಭಾಷಾವಾರು ಪ್ರಾಂತವಾರು ಆದಮೇಲೆ ಎಲ್ಲವೂ ಮಾತೃಭಾಷೆ ಆಗಿದೆ. ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಭಾಷೆಯೇ ಸಾರ್ವಭೌಮವಾಗಿದೆ ಎಂದು ನಗರದ ವಿಮಾನ ನಿಲ್ದಾಣದಲ್ಲಿ ಸಿಎಂ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ 4 ನೇ ಅಲೆಯ ಭೀತಿ ಹಿನ್ನೆಲೆ ಟೆಸ್ಟ್ ಗಳನ್ನ ಮತ್ತೆ ಜಾಸ್ತಿ ಮಾಡುತ್ತೇವೆ. 8500 ಜಿನೋಮ್ ಟೆಸ್ಟ್ ಗಳನ್ನ ಈಗಾಗಲೇ ಮಾಡಿದ್ದೇವೆ. ಸಾರಿ ,ಐ …

Read More »

ಸರ್ಕಾರದ ವಿರುದ್ಧ ಗರಂ ವಿದ್ಯಾರ್ಥಿಗಳು

ಹುಬ್ಬಳ್ಳಿ: ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯಲು ಅವ್ಯವಾಹರ ನಡೆಯುತ್ತಿರುವ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತ ನಗರದ ತಹಶಿಲ್ದಾರರ ಕಚೇರಿ ಎದುರಿಗೆ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟಪ್ರತಿಭಟನೆ ಮಾಡಿ, ತಹಶೀಲ್ದಾರರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈಗಾಗಲೇ ರಾಜ್ಯದಲ್ಲಿ ಪಿಎಸ್‌ಐ ಹಗರಣ ಹೊರ ಬಂದಿದೆ. ಅದೇ ರೀತಿ ಹಲವಾರು ಸರ್ಕಾರಿ ನೌಕರಿಗಳಲ್ಲಿ ಪರ್ಸಂಟೇಜ್ ಆಧಾರದಲ್ಲಿ …

Read More »

ತೆರಿಗೆ ನಿರ್ಧಾರಕ್ಕೆ ಬೇಸತ್ತು ಕೋರ್ಟ್ ಮೆಟ್ಟಿಲೇರಿದ ನಗರದ ವಾಣಿಜ್ಯೋದ್ಯಮ ಸಂಸ್ಥೆ

ಹುಬ್ಬಳ್ಳಿ: ಈಗಾಗಲೇ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದಾರೆ. ಇದರ ನಡುವೆ ಆ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳದ ಶಾಕ್ ನೀಡಿದೆ. ಇದರ ವಿರುದ್ಧ ಅಲ್ಲಿನ ಚೆಂಬರ್ ಆಫ್ ಕಾಮರ್ಸ್ ಧ್ವನಿ ಎತ್ತಿ ಸರ್ಕಾರಕ್ಕೆ ಚಾಟಿ ಬಿಸಲು ಸಿದ್ದವಾಗಿದೆ. ಹು-ಧಾ ಮಹಾನಗರ ಪಾಲಿಕೆ ರಾಜ್ಯದ ಅತಿದೊಡ್ಡ ಮಹಾನಗರ ಪಾಲಿಕೆಯ ಹೆಗ್ಗಳಿಕೆ ಪಾತ್ರವಾಗಿದೆ. ಈ ಮಹಾನಗರ ಪಾಲಿಕೆ ಆಸ್ತಿ ತೆರಿಗೆಯನ್ನು ಶೇ.37 ರಿಂದ ಶೇ.900 ರಷ್ಟು ಹೆಚ್ಚಳ ಮಾಡಿದ್ದು, ಇದು ಸಂಪೂರ್ಣ …

Read More »

ಏ. 30ವರಗೆ ತೌಫಿಲ್ ಮುಲ್ಲಾ ನ್ಯಾಯಾಂಗ ಬಂಧನ: ನಾಲ್ಕನೇ ಹೆಚ್ಚು ನ್ಯಾಯಾಲಯ ಆದೇಶ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೌಫಿಲ್ ಮುಲ್ಲಾ ಎಂಬಾತನನ್ನು ಇಂದು ನಾಲ್ಕನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಏಪ್ರಿಲ್ 30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದ ನ್ಯಾಯಾಲಯ ಇಂದು ಪ್ರಕರಣದ ಕುರಿತು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬೆನ್ನಲ್ಲೇ ನ್ಯಾಯಾಲಯ ಏಪ್ರಿಲ್ 30ರ ವರೆಗೆ ನ್ಯಾಯಾಂಗ ಬಂಧನ ಆದೇಶ ನೀಡಿದೆ. ಇನ್ನೂ ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಶಿರ್ …

Read More »

ರಾಜ್ಯ ಹೆದ್ದಾರಿ ಬಳಿ ಕಸದ ರಾಶಿ : ಕಣ್ಣಿದ್ದು ಕುರುಡಾದ ಅಧಿಕಾರಿಗಳು

ಹುಬ್ಬಳ್ಳಿ: ಹುಬ್ಬಳ್ಳಿ – ಲಕ್ಷೇಶ್ವರ ರಾಜ್ಯ ಹೆದ್ದಾರಿ ಬಳಿಯ ನೂಲ್ವಿ ಕ್ರಾಸ್ ಸಂಪೂರ್ಣ ತ್ಯಾಜ್ಯ ವಿಲೇವಾರಿ ತಾಣವಾಗಿದೆ . ಹೀಗಾಗಿ ವಾಹನ ಸವಾರರಿಗೆ ಮತ್ತು ಸ್ಥಳೀಯರಿಗೆ ರೋಗದ ಭೀತಿ ಎದುರಾಗಿದೆ. ನೂಲ್ವಿ ಕ್ರಾಸ್ ಬಯಲಿನಲ್ಲಿ ಎಲ್ಲೆಂದರಲ್ಲಿ ಕ ರಾಶಿ ಬಿದ್ದಿದ್ದು ಸಾರಾಯಿ ಬಾಟಲ್ , ತರಕಾರಿ ತ್ಯಾಜ್ಯ , ಹಣ್ಣು – ಹಂಪಲುಗಳ ತ್ಯಾಜ್ಯ ಸೇರಿ ಮಾಂಸ – ಮೊಟ್ಟೆಯ ತ್ಯಾಜ್ಯ ಎಸೆಯಲಾಗಿದೆ . ಹಾಗೂ ರಸ್ತೆಯ ಇನ್ನೊಂದು ಬದಿ …

Read More »

ಏ.29 ರಿಂದ ಮೇ 1 ರವರೆಗೆ ಹುಬ್ಬಳ್ಳಿ ಆರ್ಟ್ಸ್ ಸರ್ಕಲ್ ವಜ್ರ ಮಹೋತ್ಸವ್

ಹುಬ್ಬಳ್ಳಿ: ಹುಬ್ಬಳ್ಳಿ ಆರ್ಟ್ಸ್ ಸರ್ಕಲ್ ವಜ್ರ ಮಹೋತ್ಸವವನ್ನು ಏ.29 ರಿಂದ ಮೆ.1 ರ ವರೆಗೆ ಮೂರು ದಿನಗಳಕಾಲ ಭವ್ಯವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ ಆಟ್ಸ ಸರ್ಕಲ್‌ನ ಚಂದ್ರಿಕಾ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅತ್ಯಂತ ಪ್ರಸಿದ್ಧ ಕಾಲವಿದರು ಈ ಉತ್ಸವದಲ್ಲಿ ಭಾಗವಹಿಸುತ್ತಾರೆ. ಬೆಳಿಗ್ಗೆ 8 ಘಂಟೆ ಯಿಂದ 10.30 ವರೆಗೆ ಮತ್ತು ಸಂಜೆಯ 5 ಘಂಟೆಯಿಂದ 9 ರವರೆಗೆ ಅವದಿಯಲ್ಲಿ, ಮೂರು ದಿನಗಳ ಕಾಲ ಕೋಳಲು, ಸಂಗೀತ …

Read More »

ಶಿಕ್ಷಕರ ಬೇಡಿಕೆ ಈಡೇರದಿದ್ದರೆ ಅಹಿಂಸಾತ್ಮಕ ಚಳುವಳಿ ಹೋರಾಟ ಸತ್ಯಾಗ್ರಹ :ಸಜ್ಜನ

ಹುಬ್ಬಳ್ಳಿ :ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆಯ ಶಿಕ್ಷಕರ ವಿವಿಧ ಬೇಡಿಕೆಗಳ ನೆನಗುದಿಗೆ ಬಿದ್ದಿದ್ದು, ಜೂನ್ ೧೫ ರೊಳಗೆ ಬೇಡಿಕೆ ಈಡೇರಿಸಬೇಕುಇಲ್ಲದಿದ್ದರೆ ಅಹಿಂಸಾತ್ಮಕ ಚಳುವಳಿ ಹೋರಾಟ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಸರ್ಕಾರಕ್ಕೆ ಆಗ್ರಹಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಶೀಘ್ರವಾಗಿ ಕೇಂದ್ರ ಮಾದರಿ ಏಳನೇ ವೇತನ ಆಯೋಗ ಸಮಿತಿ ರಚಿಸಬೇಕು. ವಿಳಂವಾದಲ್ಲಿ ಶೇ. ಇಪ್ಪತೈದು ಮಧ್ಯಂತರ ಪರಿಹಾರ ನೀಡಬೇಕು, …

Read More »

ಸಿದ್ದಪ್ಪ ಕಂಬಳಿ ಪ್ರತಿಮೇಗೆ ಮಾಲಾರ್ಪಣೆ

ಹುಬ್ಬಳ್ಳಿ : ಸಿದ್ದಪ್ಪ ಕಂಬಳಿ ಪುಣ್ಯಸ್ಮರಣೆ ಅಂಗವಾಗಿ ನಗರದಲ್ಲಿ ಇಂದು  ಸಿದ್ದಪ್ಪ ಕಂಬಳಿ ಮಾರ್ಗದಲ್ಲಿನ ಚಿಟಗುಬ್ಬಿ ಆಸ್ಪತ್ರೆ ಹತ್ತಿರದಲ್ಲಿರುವ ಅವರ ಪ್ರತಿಮೇಗೆ  ಅವರ ಮಹಾನಗರ ಪಾಲಿಕೆ ವತಿಯಿಂದ ಪೂಜೆಯನ್ನು ಮಾಡಿ  ಮಾಲಾರ್ಪಣೆಯನ್ನು ಮಾಡಲಾಯಿತು.

Read More »

ಹುಬ್ಬಳ್ಳಿಯಲ್ಲಿ ಮಳೆಯ ಅವಾಂತರ:ರೈಲ್ವೆ ನಿಲ್ದಾಣದ ಅಂಡರ್ ಪಾಸ್ ನಲ್ಲಿ ನೀರು

ಹುಬ್ಬಳ್ಳಿ: ನಿನ್ನೆ ಹುಬ್ಬಳ್ಳಿಯಲ್ಲಿ ಸುರಿದ ಬಾರಿ ಮಳೆಯಿಂದ ಬಹುತೇಕ ಕಡೆಯಲ್ಲಿ ಅವಘಡಗಳು ಸಂಭವಿಸಿದ್ದು, ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಅಂಡರ್ ಪಾಸ್ ನಲ್ಲಿ ಕೂಡ ನೀರು ನಿಂತಕೊಂಡು ಪ್ರಯಾಣಿಕರು ಪರದಾಡುವಂತಾಗಿದೆ. ನಿನ್ನೆ ಸುರಿದ ಬಾರಿ ಮಳೆಯಿಂದ ಹುಬ್ಬಳ್ಳಿಯ ತಾಲೂಕಿನಲ್ಲಿ ಸಾಕಷ್ಟು ಹಾನಿಯಾಗಿದ್ದು, ರೈಲ್ವೆ ನಿಲ್ದಾಣದ ಅಂಡರ್ ಪಾಸ್ ನಲ್ಲಿ ಕೂಡ ನೀರು ಹೊಕ್ಕಿರುವುದು ನಿಜಕ್ಕೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಅಕಾಲಿಕ ಮಳೆಯು ಅವಾಂತರ ಸೃಷ್ಟಿಸುತ್ತಿದ್ದು, ನಿನ್ನೆಯ …

Read More »

ಶಿಕ್ಷಕರ ಚುಣಾವಣೆಗೆ ನಾನು ಪ್ರಭಲ ಆಕಾಂಕ್ಷಿ: ದೇಶಪಾಂಡೆ

ಹುಬ್ಬಳ್ಳಿ: ಜೂನ್ 2022 ರಲ್ಲಿ ನಡೆಯುವ ಕರ್ನಾಟಕ ಪಶ್ಷಿಮ ಶಿಕ್ಷಕರ ಮತಕ್ಷೇತ್ರಕ್ಕೆ ಚುಣಾವಣೆಗೆ ಭಾರತೀಯ ಜನಾತಾ ಪಾರ್ಟಿ ಯ ವತಿಂಯಿಂದ ನಾನು ಚುಣಾವಣೆಗೆ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದನೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸುಧೀದ್ರ ದೇಶಪಾಂಡೆ ಹೇಳಿದರು.. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಮೂವತ್ತು ವರ್ಷಗಳಿಗಿಂತ ಹೆಚ್ಚಿನ ಕಾಲ ನಾನು ಶಿಕ್ಷಕರ ಕುಂದು ಕೋರತೆಗಳಿಗಾಗಿ ಹೋರಾಟ ಮಾಡಿದ್ದೆನೆ, ಮತ್ತು ಕಳೆದ 35 ವರ್ಷ ಗಳಿಂದ ಸಂಘ ಪರಿವಾರದ …

Read More »