Breaking News

Breaking News

ಭೀಮನ ಅಮಾವಾಸ್ಯೆಯಂದು ಪತಿಯನ್ನೇ ಕೊಂದ ಪತ್ನಿ

ಕೋಲಾರ: ಭೀಮನ ಅಮಾವಾಸ್ಯೆಯಂದು ಪತಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ಜಗದಾಂಭ (58) ಎಂಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರನ್ನು ನಾರಾಯಣಸ್ವಾಮಿ (68) ಎಂದು ಗುರುತಿಸಲಾಗಿದೆ. ಹಣದ ವಿಚಾರವಾಗಿ ಪತಿಯನ್ನು ತೋಟದ ಮನೆಗೆ ಕರೆಸಿಕೊಂಡಿದ್ದ ಜಗದಾಂಭ, ರಾತ್ರಿ ಊಟದಲ್ಲಿ 10 ನಿದ್ರೆ ಮಾತ್ರೆ ಬೆರೆಸಿ ನೀಡಿದ್ದಾಳೆ ಎನ್ನಲಾಗಿದೆ. ನಿದ್ರೆಗೆ ಜಾರಿದ ಬಳಿಕ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆ ಬಳಿಕ ಜಗದಾಂಭ ಸ್ವತಃ ಪೊಲೀಸ್ …

Read More »

ಚರ್ಚ್, ದೇವಸ್ಥಾನದ ವಿಚಾರವಾಗಿ ಜಗಳ: 15 ಮಂದಿಗೆ ಗಾಯ, 20 ಮಂದಿ ವಿರುದ್ಧ ಎಫ್ ಐಆರ್

ರಾಯಚೂರು: ದೇವಸ್ಥಾನ ಹಾಗೂ ಚರ್ಚ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಸುಮಾರು 15 ಮಂದಿ ಗಾಯಗೊಂಡಿರುವ ಘಟನೆ ರಾಯಚೂರು ತಾಲೂಕಿನ ಗಿಲ್ಲೆಸುಗೂರು ಕ್ಯಾಂಪ್‌ನಲ್ಲಿ ನಡೆದಿದೆ. ಈ ಸಂಬಂಧ 20 ಮಂದಿಯ ವಿರುದ್ಧ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುನರ್ವಸತಿ ಪ್ರದೇಶದಲ್ಲಿರುವ ಚರ್ಚ್ ಮತ್ತು ಆಂಜನೇಯ ದೇವಸ್ಥಾನದ ವಿಚಾರವಾಗಿ ಕಳೆದ ಎರಡು ತಿಂಗಳಿಂದ ವಿವಾದ ನಡೆಯುತ್ತಿತ್ತು. ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಪೊಲೀಸರ ಸಮ್ಮುಖದಲ್ಲಿ ಈ ಹಿಂದೆ ಸಂಧಾನ …

Read More »

ಬೆಂಗಳೂರಿನ ಖಜಾನೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ: 70,000 ಸಂಬಳದ ಅಧಿಕಾರಿಗೆ ತಿಂಗಳಿಗೆ 6 ಲಕ್ಷ ಜಮೆ ಪತ್ತೆ!

ಬೆಂಗಳೂರು: ಸರ್ಕಾರಿ ಬಿಲ್‌ಗಳ ವಿಲೇವಾರಿಗೆ ವಿಳಂಬ ಮಾಡಿ ಕಮಿಷನ್ ಪಡೆಯಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರಿನ ವಿವಿಧ ಖಜಾನೆ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. 13 ತಂಡಗಳು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಕೆಜಿಐಡಿ ಖಜಾನೆ ಕಚೇರಿಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿವೆ. ಪರಿಶೀಲನೆ ವೇಳೆ ಬಿಲ್‌ಗಳನ್ನು ‘ರೌಂಡ್ ರಾಬಿನ್’ ನಿಯಮದಂತೆ ಸಮಾನವಾಗಿ ಹಂಚಿಕೆ ಮಾಡದೆ, ಆಯ್ದ ಸಿಬ್ಬಂದಿಗೆ ವಹಿಸಿ ವಾರಗಟ್ಟಲೆ ಬಾಕಿ ಇರಿಸಲಾಗುತ್ತಿತ್ತು …

Read More »

ಗಾಂಜಾ ಸೇವಿಸಿ ಚಾಕು ಹಿಡಿದು ಗಲಾಟೆ; ಯುವಕನ ಬಂಧನ

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ 22 ವರ್ಷದ ಮಹಮ್ಮದ್ ಅಫ್ಷಾನ್ ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಲ್ಲಹಳ್ಳಿ ಗ್ರಾಮದ ಮೈಸೂರು ರಸ್ತೆ–ರಾಜ್‌ಕುಮಾರ್ ರಸ್ತೆ ಜಂಕ್ಷನ್ ಬಳಿ ಯುವಕನೊಬ್ಬ ಚಾಕು ಹಿಡಿದು ಗಲಾಟೆ ಮಾಡುತ್ತಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಸ್ಥಳಕ್ಕೆ ತೆರಳಿದ ಪೊಲೀಸರು, ಸಾರ್ವಜನಿಕರಿಗೆ ಅವಾಚ್ಯವಾಗಿ ಬೈದು ಚಾಕು ತೋರಿಸಿ ಬೆದರಿಸುತ್ತಿದ್ದ ಆರೋಪಿಯನ್ನು ವಶಕ್ಕೆ …

Read More »

ಬೆಂಗಳೂರು : 350 ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ಅಗ್ನಿಗಾಹುತಿ

ಬೆಂಗಳೂರು, ಆ.12: ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎನ್‌ಆರ್‌ಐ ಲೇಔಟ್‌ನ ಖಾಲಿ ಜಾಗದಲ್ಲಿ ನಿಲುಗಡೆ ಮಾಡಲಾಗಿದ್ದ 350ಕ್ಕೂ ಹೆಚ್ಚು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿವೆ. ಇಲ್ಲಿ ಸುಮಾರು 500ಕ್ಕೂ ಹೆಚ್ಚು ಇವಿ ವಾಹನಗಳನ್ನು ಡೆಲಿವರಿ ಸಿಬ್ಬಂದಿಗೆ ದಿನದ ಬಾಡಿಗೆ ಆಧಾರದ ಮೇಲೆ ನೀಡಲಾಗುತ್ತಿತ್ತು. ನಿನ್ನೆ ರಾತ್ರಿ 8.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಅಕ್ಕಪಕ್ಕದ ವಾಹನಗಳಿಗೂ ವ್ಯಾಪಿಸಿದೆ. ಅಗ್ನಿಶಾಮಕ ಸಿಬ್ಬಂದಿ ಎರಡು ವಾಹನಗಳೊಂದಿಗೆ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ …

Read More »

ಮುದರಂಗಡಿ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣ: ಕೃತ್ಯಕ್ಕಾಗಿ ಹಣ ವರ್ಗಾವಣೆಗೆ ಸಹಕರಿಸಿದ ಮತ್ತಿಬ್ಬರು ಆರೋಪಿಗಳ ಸೆರೆ

ಉಡುಪಿ: ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎರ್ಮಾಳ್ ತೆಂಕ ಪಂಚಾಯತ್ ಕಛೇರಿ ಬಳಿಯ ನಿವಾಸಿಗಳಾದ ಚಿರಾಗ್ ಪೂಜಾರಿ(26) ಹಾಗೂ ಮೊಹಮ್ಮದ್ ಇರ್ಷಾದ್(43) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಿದಾಗ ಚಿರಾಗ್ ಪೂಜಾರಿ ಹಾಗೂ ಮೊಹಮ್ಮದ್ ಇರ್ಷಾದ್ ಎಂಬವರು ಕೃತ್ಯ ನಡೆಸಲು ಹಣ ವರ್ಗಾವಣೆ ಮಾಡಲು …

Read More »

ಮಂಗಳೂರು : ಪೊಲೀಸರ ವಶದಿಂದ ಪರಾರಿಯಾಗಿದ್ದ ಸರಗಳ್ಳ ವಿಜಯಪುರದಲ್ಲಿ ಬಂಧನ

ಮಂಗಳೂರಿನಲ್ಲಿ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ವಶದಲ್ಲಿದ್ದಾಗ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಅಲ್ತಾಫ್ ಹುಸೈನ್‌ನನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ವಿಜಯಪುರದಲ್ಲಿ ಬಂಧಿಸಿದ್ದಾರೆ. ಜೂ.14ರಂದು ಸೂಟರ್‌ಪೇಟೆಯಲ್ಲಿ ಮಹಿಳೆಯೊಬ್ಬರಿಂದ ಬಂಗಾರದ ಸರ ಕಸಿದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದ ಪ್ರಕರಣದಲ್ಲಿ ಅಲ್ತಾಫ್ ಸೇರಿ ಮೂವರನ್ನು ಜೂ.26ರಂದು ಪೊಲೀಸರು ವಶಕ್ಕೆ ಪಡೆದಿದ್ದರು. ಠಾಣೆಗೆ ಕರೆತರುತ್ತಿದ್ದ ವೇಳೆ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಅಲ್ತಾಫ್ ಪರಾರಿಯಾಗಿದ್ದ. ಘಟನೆಯಲ್ಲಿ ಸಿಬ್ಬಂದಿಗೆ ಸಣ್ಣಪುಟ್ಟ …

Read More »

ಒಂದೇ ಜಾಗ.. ಒಂದೇ ವಾರದಲ್ಲಿ ಕೃಷ್ಣ ನದಿಗೆ ಬಿದ್ದ ಮೂರು ಕಾರುಗಳು.. ಬಾಗಲಕೋಟೆಯ ಈ ಜಾಗದಲ್ಲಿ ಏನೋ ಸಮಸ್ಯೆ..

ಬೀಳಗಿ ತಾಲೂಕಿನ ಗಲಗಲಿ–ರಬಕವಿ ರಸ್ತೆಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ವಾಹನ ಸವಾರರು ಆತಂಕದಲ್ಲಿ ಸಂಚರಿಸುವಂತಾಗಿದೆ. ಕಳೆದ ಒಂದು ವಾರದಲ್ಲೇ ಮೂರು ಕಾರುಗಳು ಕೃಷ್ಣಾ ನದಿಗೆ ಬಿದ್ದಿದ್ದು, ಓರ್ವ ಬೈಕ್ ಸವಾರ ಕೂಡ ಗಾಯಗೊಂಡಿದ್ದಾರೆ. ಇಂದು ಕೋಲೂರು ಗ್ರಾಮದ ಈರಣ್ಣ ಅಂಬಿಗೇರ ಅವರ ಕಾರು ರಸ್ತೆಯಲ್ಲಿದ್ದ ಜಲ್ಲಿಕಲ್ಲಿನಿಂದ ನಿಯಂತ್ರಣ ತಪ್ಪಿ ನದಿಗೆ ಉರುಳಿದೆ. ಈರಣ್ಣ ಕಾರಿನ ಡೋರ್ ಒದ್ದು ಹೊರಬಂದು, ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರ ನೆರವಿನಿಂದ ಪಾರಾಗಿದ್ದಾರೆ. ಬಳಿಕ ಜೆಸಿಬಿ ಮೂಲಕ …

Read More »

ಭೀಮನ ಅಮಾವಾಸ್ಯೆ ಹಿಂದಿನ ದಿನವೇ ಭೀಕರ ಅಪಘಾತಕ್ಕೆ 7 ಜನ ಬಲಿ

ಬೀದರ್ ಮೂಲದ ಕೂಲಿ ಕಾರ್ಮಿಕರು ತೆಲಂಗಾಣದ ಜಾಹಿರಾಬಾದ್ ಬಳಿ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಹೈದರಾಬಾದ್–ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಆಟೋ ಚಾಲಕ ಸೇರಿ 7 ಮಂದಿ ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಮೆದಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಶ್ರೀದೇವಿ, ರೇಖಾ, ಕವಿತಾ, ರೇಷ್ಮಾ, ದೇವದಾಸ್, ನಿಖಿತಾ ಸೇರಿದಂತೆ 7 ಮಂದಿ ಎಂದು ಗುರುತಿಸಲಾಗಿದೆ. ಕೂಲಿ ಕೆಲಸಕ್ಕೆ ತೆರಳುತ್ತಿದ್ದ …

Read More »

ಪಿಎಸ್‌ಐಗೆ ಕಟ್ಟಿಗೆಯಿಂದ ಹಲ್ಲೆ, ಮುಂಗೈ ಮೂಳೆ ಮುರಿತ

ಯಾದಗಿರಿ: ಪ್ಯಾಟ್ರೋಲಿಂಗ್ ಕರ್ತವ್ಯದಲ್ಲಿದ್ದ ಪಿಎಸ್‌ಐ ಮೇಲೆ ವ್ಯಕ್ತಿಯೊಬ್ಬ ಕಟ್ಟಿಗೆಯಿಂದ ಹಲ್ಲೆ ಮಾಡಿದ ಪರಿಣಾಮ ಎಡಗೈ ಮುಂಗೈ ಮೂಳೆ ಮುರಿದ ಘಟನೆ ಸೈದಾಪುರದಲ್ಲಿ ಸೋಮವಾರ ಸಂಜೆ ನಡೆದಿದೆ. ಸೈದಾಪುರ ಠಾಣೆಯ ಪಿಎಸ್‌ಐ ಭೀಮರಾಯ ದಾನನ್ನೋರ ಗಾಯಗೊಂಡವರು. ಕಾಂಚನಾ ಲಾಡ್ಜ್ ಸಮೀಪ ಮಳೆಯಿಂದಾಗಿ ಅಂಗಡಿ ಮುಂದೆ ನಿಂತಿದ್ದ ವ್ಯಕ್ತಿಯೊಬ್ಬರು ಕೆಲವರು ಹಲ್ಲೆ ಮಾಡಲು ಬೆನ್ನಟ್ಟುತ್ತಿದ್ದಾರೆ ಎಂದು ಪೊಲೀಸರ ಬಳಿ ರಕ್ಷಣೆ ಕೋರಿದ್ದರು. ಈ ವೇಳೆ ಕಾರಿನಲ್ಲಿ ಬಂದ ಮೂವರು ಆತನ ಮೇಲೆ ಹಲ್ಲೆ …

Read More »