Breaking News

Breaking News

ಮದುವೆಯಾದ ಮೊದಲ ದಿನವೇ ವರದಕ್ಷಿಣೆ ಕಿರುಕುಳ, ತಲಾಖ್!- ಜಮೀರ್ ಪಿಎ ಪ್ರಭಾವ ಎಂದು ಯುವತಿ ಆರೋಪ!

ಬೆಂಗಳೂರು: ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯಿಂದ ದೈಹಿಕ ಹಾಗೂ ಮಾನಸಿಕ ಕಿರುಕುಳ ಅನುಭವಿಸಿದ ಯುವತಿಗೆ ತ್ರಿಪಲ್ ತಲಾಖ್ ನೀಡಿ ಮನೆಯಿಂದ ಹೊರಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪತಿ ಹಲ್ಲೆ ನಡೆಸಿ ಕಾಲಿಗೆ ಬಿಸಿನೀರು ಸುರಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಪ್ರಕರಣದ ಹಿಂದೆ ಸಚಿವ ಜಮೀರ್ ಅಹ್ಮದ್ ಅವರ ಪಿಎ ಮಹ್ಮದ್ ಅಯೂಬ್ ಪಾಷಾ ಅವರ ಪ್ರಭಾವವಿದೆ ಎಂಬ ಆರೋಪವೂ ಕೇಳಿಬಂದಿದೆ. ದೂರು ನೀಡಲು ಸಚಿವರ ಕಚೇರಿ ಹಾಗೂ ಮನೆಗೆ …

Read More »

ನೋ ಪಾರ್ಕಿಂಗ್‌ನಲ್ಲಿ ಬೈಕ್: ಪೊಲೀಸರ ಎದುರೇ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಯುವಕ

ಹಾವೇರಿ: ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಪೊಲೀಸರು ವ್ಹೀಲ್‌ಕ್ಯಾಪ್‌ ಹಾಕಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಘಟನೆ ನಗರದ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ನಡೆದಿದೆ. ನೋ ಪಾರ್ಕಿಂಗ್‌ನಲ್ಲಿ ಬೈಕ್ ನಿಲ್ಲಿಸಿದ್ದಕ್ಕೆ ₹500 ದಂಡ ವಿಧಿಸಲಾಗಿತ್ತು. ದಂಡ ಕಟ್ಟಲು ಸಾಧ್ಯವಿಲ್ಲ ಎಂದು ರಂಪಾಟ ಮಾಡಿದ ಯುವಕ, ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದಾನೆ. ಸ್ಥಳೀಯರು ತಡೆದು ಆತನನ್ನು ರಕ್ಷಿಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ …

Read More »

ಉಗ್ರರೆಂದು ಶಂಕಿಸಿ ಟೆಕ್ಕಿಗಳ ಮೇಲೆ ಬೇಸ್‌ಬಾಲ್‌ ಬ್ಯಾಟ್‌ನಿಂದ ಹಲ್ಲೆ

ಬೆಂಗಳೂರು: ಭಯೋತ್ಪಾದಕರೆಂದು ಶಂಕಿಸಿ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಸಂದೀಪ್ ಕುಮಾರ್ ಹಾಗೂ ರೋಹಿತ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಆ.6ರಂದು ಬೆಳಗಿನ ಜಾವ ಎಇಸಿಎಸ್ ಲೇಔಟ್‌ನಲ್ಲಿರುವ ಐಸ್‌ಕ್ರೀಮ್ ಅಂಗಡಿ ಬಳಿ ಇಬ್ಬರೂ ಸ್ನೇಹಿತನಿಗಾಗಿ ಕಾಯುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ …

Read More »

ರಾಯಚೂರು ಉಗ್ರನ ಬಂಧನ ಪ್ರಕರಣ – ಇನ್ಸ್ಟಾ ಚಾಟಿಂಗ್ ನಲ್ಲಿ ಆತಂಕಕಾರಿ ಮಾಹಿತಿ ಬಯಲು!

ರಾಯಚೂರು: ದೇಶದಲ್ಲಿ ದೊಡ್ಡ ಮಟ್ಟದ ಗಲಭೆ ಸೃಷ್ಟಿಸಲು ಸಂಚು ರೂಪಿಸಿ, ಅರಬ್ ಮೂಲದ ವ್ಯಕ್ತಿಯೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಚರ್ಚೆ ನಡೆಸುತ್ತಿದ್ದ ಆರೋಪದ ಮೇಲೆ ರಾಯಚೂರಿನ 24 ವರ್ಷದ ಮೊಹಮ್ಮದ್ ಶಾಹಿಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದಡಿ ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಯಚೂರು ನಗರದಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಶಾಹಿಲ್, ‘ರಾಣಾ ಭಾಯ್’ ಹೆಸರಿನ ಇನ್‌ಸ್ಟಾಗ್ರಾಂ ಖಾತೆ ಮೂಲಕ ಅರಬ್ ಮೂಲದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ …

Read More »

ಸಿದ್ದೇಶ್ವರ ದೇವಸ್ಥಾನದಲ್ಲಿ ಕಿಡಿಗೇಡಿಗಳ ವಿಕೃತಿ – ಶಿವಲಿಂಗ, ನಂದಿ ಮೂರ್ತಿ ಭಗ್ನ

ಬೆಳಗಾವಿ: ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ ಆರಾಧ್ಯ ದೈವ ಸಿದ್ದೇಶ್ವರ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಧಾರ್ಮಿಕ ವಿಗ್ರಹಗಳಿಗೆ ಹಾನಿ ಮಾಡಿರುವ ಘಟನೆ ನಡೆದಿದೆ. ದೇವಸ್ಥಾನದಲ್ಲಿದ್ದ ಶಿವಲಿಂಗ, ನಂದಿ ಮೂರ್ತಿ, ಆಮೆ ಆಕಾರದ ರಚನೆ ಹಾಗೂ ಮುಂಭಾಗದ ಬೃಂದಾವನವನ್ನು ಧ್ವಂಸಗೊಳಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮದ ಹೊರವಲಯದ ಬೆಟ್ಟದ ಮೇಲಿರುವ ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ಧಾರ್ಮಿಕ ಮಹತ್ವದ ಜೊತೆಗೆ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ವಿವಿಧ ಹಿಂದೂ …

Read More »

ಬೆಂಗಳೂರಿನ ಹೋಟೆಲ್‌ನಲ್ಲಿ ಘೋರ ಕೃತ್ಯ: ಇಬ್ಬರು ಹೆಣ್ಣುಮಕ್ಕಳನ್ನು ಕೊಂದು ತಂದೆಯೂ ಆತ್ಮಹತ್ಯೆಗೆ ಯತ್ನ!

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ತಾಜ್ ಹೋಟೆಲ್‌ನಲ್ಲಿ ತಂದೆಯೊಬ್ಬ ತನ್ನ ಇಬ್ಬರು ಪುಟ್ಟ ಹೆಣ್ಣುಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ಬಳಿಕ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ. ಶೇಕ್ ಜೋಯಾ (10) ಹಾಗೂ ಶೇಕ್ ಜೆಹರಾ (5) ಮೃತ ಮಕ್ಕಳು. ತಂದೆ ಇಮ್ರಾನ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗವಾರ ಮೂಲದ ಇಮ್ರಾನ್ ‘ಜಿಮ್ಮಿ ’ ಕ್ಯಾಬ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದ. ಕೃತ್ಯ ಎಸಗುವ ಉದ್ದೇಶದಿಂದಲೇ ತಾಜ್ …

Read More »

ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸರ ಕಿರುಕುಳಕ್ಕೆ ರೈತರ ಆಕ್ರೋಶ..! ಹೂವಿನ ಗಾಡಿ ಅಡ್ಡಗಟ್ಟಿ ಹಣ ವಸೂಲಿ ಆರೋಪ!

ದಾಖಲೆಗಳ ಹೆಸರಲ್ಲಿ ದುಡ್ಡು ವಸೂಲಿ ಆರೋಪ..! ಟ್ರಾಫಿಕ್ ಪೊಲೀಸರ ವಿರುದ್ಧ ರೈತರು ಪ್ರತಿಭಟನೆಗೆ ಸಜ್ಜು..! ಹುಬ್ಬಳ್ಳಿ | ರೈತರ ಆಕ್ರೋಶಟ್ರಾಫಿಕ್ ಪೊಲೀಸರ ಕಿರುಕುಳಕ್ಕೆ ಬೇಸತ್ತ ರೈತರು..! ಹೂವಿನ ಗಾಡಿಗಳನ್ನೇ ಅಡ್ಡಗಟ್ಟಿ ಕಿರುಕುಳ ಆರೋಪ – ಪ್ರತಿಭಟನೆಗೆ ರೈತರು ಸಜ್ಜು..! ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸರ ವಿರುದ್ಧ ರೈತರಿಂದ ಗಂಭೀರ ಆರೋಪ ಕೇಳಿಬಂದಿದೆ… ಹೂವಿನ ಗಾಡಿಗಳನ್ನು ಅಡ್ಡಗಟ್ಟಿ ದಿನನಿತ್ಯ ಕಿರುಕುಳ ನೀಡಲಾಗುತ್ತಿದೆ, ಜೊತೆಗೆ ಹಣಕ್ಕೆ ಬೇಡಿಕೆ ಇಟ್ಟು, ಪ್ರಶ್ನಿಸಿದ ರೈತರನ್ನು ಅವಾಚ್ಯ ಶಬ್ದಗಳಿಂದ …

Read More »

2 ತಿಂಗಳ ಮಗು ಬಾವಿಯಲ್ಲಿ ಪತ್ತೆ: ತಾಯಿ ಮೇಲೆಯೇ ಡೌಟ್, ನಿಗೂಢ ಸಾವಿನ ರಹಸ್ಯ ಬೆನ್ನತ್ತಿದ ಪೊಲೀಸ್ರು

ಬೀದರ್: ಔರಾದ್ ತಾಲೂಕಿನ ವಡಗಾಂವ ಗ್ರಾಮದಲ್ಲಿ ಎರಡು ತಿಂಗಳ ಹಸುಗೂಸು ಓಂಕಾರನ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಮಗುವನ್ನು ತಾಯಿಯೇ ಕೊಂದು ಬಾವಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ತಾಯಿ ಸೇರಿದಂತೆ ನಾಲ್ವರನ್ನು ಸಂತಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಾವಲಗುಡ್ಡ ಗ್ರಾಮದ ಸಂಜಯ್ ಹಾಗೂ ವಾಣಿಶ್ರೀ ದಂಪತಿಯ ಮಗು ಓಂಕಾರ. ಹೆರಿಗೆಗಾಗಿ ವಡಗಾಂವದಲ್ಲಿರುವ ತವರು ಮನೆಗೆ ಬಂದಿದ್ದ ವಾಣಿಶ್ರೀ ಅವರ ಮಗು ಶನಿವಾರ …

Read More »

ರಾಡ್ ಹಿಡಿದು ಮಧ್ಯರಾತ್ರಿ ಮನೆಗೆ ನುಗ್ಗಿದ ಖದೀಮರು: ಚಿನ್ನಾಭರಣ, ಬೆಳ್ಳಿ, ನಗದು ದೋಚಿ ಪರಾರಿ!

ದೇವನಹಳ್ಳಿ, ಆ.10: ಮಾಲೀಕರು ಊರಿಗೆ ತೆರಳಿದ್ದನ್ನೇ ಬಂಡವಾಳ ಮಾಡಿಕೊಂಡು ಕೆಲಸದವರೇ ಮನೆಗೆ ಕನ್ನ ಹಾಕಿರುವ ಘಟನೆ ಹೊಸಕೋಟೆ ಹೊರವಲಯದಲ್ಲಿ ನಡೆದಿದೆ. ಮನೆಯ ಬಾಗಿಲು ಒಡೆದು ನುಗ್ಗಿದ ಆರೋಪಿಗಳು ಚಿನ್ನಾಭರಣ, ಬೆಳ್ಳಿ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಾಲಮ್ ವಿಲ್ಲಾ ಬಡಾವಣೆಯ ರವಿ ರಾಜನ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಎರಡು ತಿಂಗಳಿಂದ ಮನೆ ಕೆಲಸ ಮಾಡುತ್ತಿದ್ದ ಆರೋಪಿಗಳಿಗೆ ಮನೆಯ ಒಳಗಿನ ಮಾಹಿತಿ ಹಾಗೂ …

Read More »

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದವನ ಬಂಧನ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರ ವಾಹನ ನಿಲುಗಡೆ ಪ್ರದೇಶದಲ್ಲಿ ₹3 ಕೋಟಿ ಮೌಲ್ಯದ 3.078 ಕೆ.ಜಿ. ಹೈಡ್ರೋ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪಿಯನ್ನು ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಮುಂಬೈ ನಿವಾಸಿ ರಾಕೇಶ್ ಸತ್ಯಭೂಷಣ ಅಗರ್‌ವಾಲ್ (40) ಬಂಧಿತ. ಜುಲೈ 30ರಂದು ದೊರೆತ ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತಪಾಸಣೆ ವೇಳೆ ಆತನ ಟ್ರಾಲಿ ಬ್ಯಾಗ್‌ನಲ್ಲಿದ್ದ ಕಪ್ಪು ಪ್ಲಾಸ್ಟಿಕ್ …

Read More »