Breaking News

Breaking News

ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜನರು ತಿರುಗಿ ಬಿದ್ದಿದ್ದಾರೆ: ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜನರು ತಿರುಗಿ ಬಿದ್ದಿದ್ದಾರೆ. ಈ ಅಲೆಗೆ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುವುದು ಗ್ಯಾರಂಟಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ವಕ್ಸ್ ಆಸ್ತಿ ಹೆಸರಿನಲ್ಲಿ ನೊಟೀಸ್ ಕೊಟ್ಟಿರುವುದಕ್ಕೆ ರಾಜ್ಯಾದ್ಯಂತ ಜನರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಮುಖ್ಯಮಂತ್ರಿಗಳಿಗೆ ತಮ್ಮ ತಪ್ಪಿನ ಅರಿವಾಗಿ ನೊಟೀಸ್ ವಾಪಾಪಸ್‌ ತೆಗೆದುಕೊಳ್ಳಲು ಹೇಳಿದ್ದಾರೆ. …

Read More »

ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಬಸ್: 36 ಜನರ ಸಾವು

ಉತ್ತರಾಖಂಡ್: ಉತ್ತರಾಖಂಡದ ಅಲ್ಮೋರಾದಲ್ಲಿ ಇಂದು ಬಸ್ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 36 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು 19 ಮಂದಿ ಗಾಯಗೊಂಡಿದ್ದಾರೆ. ಪೌರಿ ಜಿಲ್ಲೆಯ ನೈನಿದಂಡಾದಿಂದ ನೈನಿತಾಲ್ನ ರಾಮ್ನಗರಕ್ಕೆ ತೆರಳುತ್ತಿದ್ದ ಬಸ್ ಕಮರಿಗೆ ಬಿದ್ದಿದೆ. ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್‌ಎಫ್) ತಂಡಗಳು ಮಾರ್ಚುಲಾದ ಸಾಲ್ಟ್ ಪ್ರದೇಶದಲ್ಲಿ ಅಪಘಾತದ ಸ್ಥಳದಲ್ಲಿವೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾವಿನ ಸಂಖ್ಯೆ …

Read More »

ಶ್ರೀ ಮಾರುತಿ ದೇವಸ್ಥಾನ ಅಭಿವೃದ್ಧಿಗೆ 1 ಲಕ್ಷ 50 ವೀರೇಂದ್ರ ಹೆಗಡೆಯವರು ಕೊಡುಗೆ

ಕುಂದಗೋಳ : ಶ್ರೀ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯಿಂದ ಕುಂದಗೋಳ ಪಟ್ಟಣದ ಕಾಳಿದಾಸ ನಗರದ ಶ್ರೀ ಮಾರುತಿ ದೇವಸ್ಥಾನ ಅಭಿವೃದ್ಧಿಗೆ 1 ಲಕ್ಷ 50 ಸಾವಿರ ರೂಪಾಯಿಗಳನ್ನು ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಕೊಡುಗೆ ನೀಡಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯೋಜನಾಧಿಕಾರಿಗಳು ಚೆಕ್‌’ನ್ನು ಮಾರುತಿ ದೇವಸ್ಥಾನ ಟ್ರಸ್ಟ್ ಕಮೀಟಿ ಅವರಿಗೆ ಹಸ್ತಾಂತರಿಸಿದರು.

Read More »

ವಕ್ಫ್ ವಿಷಯ ಬಳಸಿಕೊಂಡು ಬಿಜೆಪಿ ಚುನಾವಣೆ ಎದುರಿಸುತ್ತಿದೆ: ವಿನಯ್ ಕುಲಕರ್ಣಿ

ಹಾವೇರಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೇಹಾ ಹತ್ಯೆ ಕೇಸ್ ಬಳಸಿಕೊಂಡರು ಈಗ ವಕ್ಫ್‌ ವಿಷಯ ಬಳಿಸಿಕೊಂಡು ಚುನಾವಣೆ ಎದುರಿಸ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಚಿವ ವಿನಯ್ ಕುಲಕರ್ಣಿ ಕಿಡಿ ಕಾರಿದ್ದಾರೆ. ಇಂದು(ಭಾನುವಾರ) ಜಿಲ್ಲೆಯ ಶಿಗ್ಗಾವಿ ತಾಲೂಕಿನ‌ ಬಂಕಾಪುರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ, ವಕ್ಫ್‌ ವಿವಾದ ಚುನಾವಣೆ ಮೇಲೆ ಪರಿಣಾಮ ಬೀರೋಕೆ ಸಾಧ್ಯವಿಲ್ಲ. ನೋಟಿಸ್ಹಿಂ ಪಡೆಯುವ ಕೆಲಸ ಈಗಾಗಲೇ ಆಗಿದೆ ನಾವೂ ರೈತರೇ, ರೈತರಿಗೆ …

Read More »

ವಕ್ಫ್ ಆಸ್ತಿ ಕುರಿತು ಬಿಜೆಪಿಯಿಂದ ವದಂತಿ ಹಬ್ಬಿಸುವ ಯತ್ನ: ಸಚಿವ ಝಮೀರ್ ಅಹ್ಮದ್

ಕಲಬುರಗಿ : ವಕ್ಫ್ ಆಸ್ತಿ ಕುರಿತು ಬಿಜೆಪಿ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುವ ಪ್ರಯತ್ನ ಮಾಡುತ್ತಿದೆ ಇದರಿಂದ ಬಿಜೆಪಿಗೆ ಯಾವುದೇ ರೀತಿಯ ಲಾಭ ಆಗುವುದಿಲ್ಲ ಎಂದು ಸಚಿವ ಝಮೀರ್ ಅಹ್ಮದ್ ಖಾನ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಫ್ ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚೆಯಿಂದಲೂ ಇದೆ ವಕ್ಫ್ ಬಳಿ ಇರುವುದು ಸರಕಾರ ಕೊಟ್ಟಿರುವ ಜಮೀನಲ್ಲ, ಬದಲಿಗೆ ದಾನಿಗಳು ಕೊಟ್ಟಿರುವ ಜಮೀನಾಗಿದೆ. ಅದೀಗ ಮಂಡಳಿ ಬಳಿಯಿದೆ ಇಷ್ಟಾದರೂ ಕೇಂದ್ರ …

Read More »

ದೇಶದಾದ್ಯಂತ 2026ರ ವೇಳೆಗೆ ನಕ್ಸಲಿಸಂ ನಿರ್ನಾಮ ಮಾಡಲಾಗುವುದು: ಕೇಂದ್ರ ಸಚಿವ ಅಮಿತ್ ಶಾ

ರಾಂಚಿ: ಹೇಮಂತ್‌ ಸೊರೇನ್‌ ನೇತೃತ್ವದ ಜೆಎಂಎಂ ಒಕ್ಕೂಟ ನಕ್ಸಲಿಸಂಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದ ಗೃಹ ಸಚಿವ ಅಮಿತ್‌ ಶಾ, 2026ರ ಮಾರ್ಚ್‌ ವೇಳೆ ದೇಶದಾದ್ಯಂತ ನಕ್ಸಲಿಸಂ ಅನ್ನು ನಿರ್ನಾಮ ಮಾಡಲಾಗುವುದು ಎಂದು ಹೇಳಿದರು. ಜಾರ್ಖಂಡ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿ ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಕ್ಸಲ್‌ ಬೆದರಿಕೆಗಳಿಂದ ದೇಶವನ್ನು ಮುಕ್ತ ಮಾಡಲಿದೆ. ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ನಕ್ಸಲಿಸಂಗೆ ಉತ್ತೇಜನ ನೀಡುತ್ತಿರುವ ದಲಿತ …

Read More »

ಪಂಜಾಬ್ ನಲ್ಲಿ ಇಲ್ಲಿಯವರೆಗೆ 85.41 ಲಕ್ಷ ಟನ್ ಭತ್ತ ಖರೀದಿ

ನವದೆಹಲಿ: 2024-25ನೇ ಸಾಲಿನ ಮಾರುಕಟ್ಟೆ ವರ್ಷದಲ್ಲಿ ಪಂಜಾಬ್‌ನಲ್ಲಿ ಇಲ್ಲಿಯವರೆಗೆ 85.41 ಲಕ್ಷ ಟನ್‌ ಭತ್ತ ಖರೀದಿಸಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಇಂದು ತಿಳಿಸಿದೆ. ಭಾರತೀಯ ಆಹಾರ ನಿಗಮದ ರಾಜ್ಯ ಘಟಕದಿಂದ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. 4 ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್‌ ಖಾತೆಗಳಿಗೆ ₹19,800 ಕೋಟಿ ಪಾವತಿಸಲಾಗಿದೆ’ ಎಂದು ತಿಳಿಸಿದೆ. ಈ ಋತುವಿನಲ್ಲಿ ಪಂಜಾಬ್‌ನಿಂದ 185 ಲಕ್ಷ ಟನ್‌ ಭತ್ತ ಖರೀದಿಸುವ ಗುರಿ ಹೊಂದಲಾಗಿದೆ. ಎ ಗ್ರೇಡ್‌ ಭತ್ತಕ್ಕೆ …

Read More »

ಶಿಗ್ಗಾಂವಿ ಉಪಚುನಾವಣೆಯಲ್ಲಿ ನಾವೇ ಗೆಲ್ತೀವಿ: ಕಾಂಗ್ರೆಸ್​ ಶಾಸಕ ಲಕ್ಷ್ಮಣ ಸವದಿ

ಹುಬ್ಬಳ್ಳಿ: ಶಿಗ್ಗಾಂವಿ ಉಪಚುನಾವಣೆ ಗೆಲುವಿಗಾಗಿ ಸಭೆ ಮಾಡಲಾಗಿದೆ ಮೂರು ಪುರಸಭೆ, ಆರು ಜಿಲ್ಲಾ ಪಂಚಾಯತ್‌, 23 ತಾಲೂಕ ಪಂಚಾಯತ್‌ ಸಭೆ ಮಾಡಿದ್ದೇವೆ. ಸಭೆಯಲ್ಲಿ ಅನೇಕ ಹಿರಿಯರು ಭಾಗಿಯಾಗಿದ್ದು ಪದಾಧಿಕಾರಿಗಳಿಗೆ ಅನೇಕ ಸೂಚನೆ ಕೊಟ್ಟಿದ್ದೇವೆ. ನಮ್ಮ ಪ್ರಕಾರ ಶಿಗ್ಗಾಂವಿಯಲ್ಲಿ ನಾವೇ ಗೆಲ್ತೀವಿ ಎಂದು ಅಥಣಿ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು, ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವಿರೋಧಿ ಅಲೆ ಇದೆ ನಾನು …

Read More »

ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 31 ಆರೋಪಿಗಳ ಬಂಧನ

ಹುಬ್ಬಳ್ಳಿ : ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 31 ಆರೋಪಿಗಳ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ದೀಪಗಳ ಹಬ್ಬ ದೀಪಾವಳಿ ನೆಪದಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜೂಜುಕೋರರು ಇಸ್ಪೀಟ್ ಆಟದಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ಗ್ರಾಮೀಣ ಠಾಣೆ ಇನ್ಸೆಕ್ಟ‌ರ್ ಮುರುಗೇಶ ಚನ್ನಣ್ಣವರ ಹಾಗೂ ಪಿಎಸ್‌ಐ ಸಚಿನ್‌ ಅಲಮೇಲ್ಕ‌ರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಕುಸುಗಲ್, ಅಂಚಟಗೇರಿ, ಚನ್ನಾಪುರ, ಚವರಗುಡ್ಡದಲ್ಲಿ ಒಟ್ಟು 31 ಜನರನ್ನು ಬಂಧಿಸಿ, …

Read More »

BRTS ರಸ್ತೆ ಮೇಲೆ ಹೆಬ್ಬಾವೊಂದು ಪತ್ತೆ

ಹುಬ್ಬಳ್ಳಿ : BRTS ರಸ್ತೆ ಮೇಲೆ, ಜಾಲರಿ ಮೇಲೆ ಬೃಹತ್ತಾದ ಹೆಬ್ಬಾವೊಂದು ಕಂಡು ಬಂದಿದ್ದು, ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕಾಲೇಜು ಮುಂಬಾಗದಲ್ಲಿ ನಿನ್ನೆ ರಾತ್ರಿ ನಡೆದಿದೆ. ಸುಮಾರು 10 ರಿಂದ 12 ಪೂಟ್‌ ಇರುವಂತ ಹೆಬ್ಬಾವು ಶನಿವಾರ ರಾತ್ರಿ ಬಿಆರ್‌ಟಿಎಸ್ ರಸ್ತೆಯಲ್ಲಿ ಸಂಚರಿಸುತ್ತಿತ್ತು, ಅದನ್ನು ನೋಡಿದ ಸುನೀಲ ಎಂಬ ಯುವಕ, ಬಸ್‌ ತಡೆದಿದ್ದಾನೆ. ಅಷ್ಟೇ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಡಿಸಿಪಿ ಮಹಲಿಂಗ ನಂದಗಾವಿ ಅವರನ್ನು ತಡೆದು ತೋರಿಸಿದ್ದಾನೆ. ಕೂಡಲೇ …

Read More »