Breaking News

Breaking News

ಸಿದ್ದರಾಮಯ್ಯ ಆಪ್ತ ಸಂತೋಷ್‌ ಲಾಡ್‌ಗೆ ಮತ್ತೆ ಒಲಿದ ಸಚಿವ ಸ್ಥಾನ

ಧಾರವಾಡ: ಕಲಘಟಗಿ ಕ್ಷೇತ್ರದ ಶಾಸಕ ಸಂತೋಷ್‌ ಎಸ್‌.ಲಾಡ್‌ ಅವರಿಗೆ ಮತ್ತೆ ಸಚಿವ ಸ್ಥಾನ ಒಲಿದಿದೆ. ‌ಮೂರನೇ ಬಾರಿಗೆ ಅವರಿಗೆ ಸಚಿವರಾಗುವ ಅವಕಾಶ ಲಭಿಸಿದೆ. ಲಾಡ್‌ ಅವರು ಮರಾಠ ಸಮುದಾಯದವರು. ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಲಾಡ್‌ ಅವರು ಕಾರ್ಮಿಕ ಸಚಿವ ಮತ್ತು ಧಾರವಾಡ ಜಿಲ್ಲಾ ಉಸ್ತವಾರಿ ಸಚಿವರಾಗಿದ್ದರು. 2013ರಲ್ಲಿ ಅವರು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವರಾಗಿದ್ದರು. ಸಂತೋಷ್‌ ಲಾಡ್‌ ಅವರು ಸಿದ್ದರಾಮಯ್ಯ ಅವರ ಆಪ್ತರು. ಸಂತೋಷ್‌ ಅವರು ಲಾಡ್‌ …

Read More »

ಚಾಮರಾಜಪೇಟೆ ಪೊಲೀಸ್ ಠಾಣೆ ಬಳಿಯೇ ಕೊಕೇನ್ ಡೆಲಿವರಿ ದಂಧೆ! 50 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ

ಬೆಂಗಳೂರು ಚಾಮರಾಜಪೇಟೆ ಪೊಲೀಸ್ ಠಾಣೆ ಸಮೀಪ ಡೆಲಿವರಿ ಬೈಕ್ ಸೇವೆ ಬಳಸಿಕೊಂಡು ಕೊಕೇನ್ ಸಾಗಿಸುತ್ತಿದ್ದ ಆರೋಪದ ಮೇಲೆ 30 ವರ್ಷದ ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅನುಮಾನಾಸ್ಪದವಾಗಿ ಪದೇಪದೆ ಡೆಲಿವರಿ ಬೈಕ್‌ಗಳು ಅಪಾರ್ಟ್‌ಮೆಂಟ್‌ಗೆ ಬರುತ್ತಿದ್ದುದನ್ನು ಗಮನಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆಹಿಡಿದಿದ್ದಾರೆ. ಪರಿಶೀಲನೆ ವೇಳೆ ಚಾಕೊಲೇಟ್ ಬಾಕ್ಸ್‌ಗಳೊಳಗೆ ಬಚ್ಚಿಟ್ಟಿದ್ದ 116.3 ಗ್ರಾಂ ಕೊಕೇನ್ ಪತ್ತೆಯಾಗಿದ್ದು, ಇದರ ಮೌಲ್ಯ ಸುಮಾರು ₹50 ಲಕ್ಷ ಎಂದು ಅಂದಾಜಿಸಲಾಗಿದೆ. ಡೆಲಿವರಿ ರೈಡರ್‌ಗಳಿಗೆ ವೇಗವಾಗಿ …

Read More »

ಹಾಸನದಲ್ಲಿ ಆಘಾತಕಾರಿ ಘಟನೆ: ತಂದೆ ಮೊಬೈಲ್ ಕೊಡಿಸದಿದ್ದಕ್ಕೆ ನೇಣು ಬಿಗಿದುಕೊಂಡು 13 ವರ್ಷದ ಬಾಲಕ ಆತ್ಮಹತ್ಯೆ

ಹಾಸನ ಹೊರವಲಯದ ಯಡಿಯೂರು ಗ್ರಾಮದಲ್ಲಿ ತಂದೆ ಮೊಬೈಲ್ ಫೋನ್ ಕೊಡಿಸದಿದ್ದಕ್ಕೆ ಮನನೊಂದು 13 ವರ್ಷದ ಪ್ರೀತಮ್ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಪ್ರೀತಮ್ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಮೊಬೈಲ್‌ಗಾಗಿ ಪದೇ ಪದೇ ಒತ್ತಾಯಿಸಿದರೂ, ಓದಿನ ಮೇಲೆ ಪರಿಣಾಮ ಬೀಳಬಹುದು ಎಂದು ತಂದೆ ನಿರಾಕರಿಸಿದ್ದರು. ಇದರಿಂದ ಮನನೊಂದ ಬಾಲಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಆಸ್ಪತ್ರೆಗೆ ಕರೆದೊಯ್ದರೂ ಬಾಲಕ …

Read More »

ಚುನಾವಣಾ ಆಯೋಗದ ಅಧಿಕಾರಿ ಹೆಸರಿನಲ್ಲಿ ಕರೆ ಮಾಡಿ ವೃದ್ಧನಿಗೆ 3.5 ಲಕ್ಷ ರೂ. ವಂಚಿಸಿದ ಸೈಬರ್ ಕಳ್ಳ!

ಬೆಂಗಳೂರು ನಗರದ 82 ವರ್ಷದ ಪಾರ್ಥಸಾರಥಿ ಎಂಬುವವರಿಗೆ ಚುನಾವಣಾ ಆಯೋಗದ ಅಧಿಕಾರಿ ಎಂದು ಕರೆ ಮಾಡಿದ ಸೈಬರ್ ವಂಚಕ, SIR ಅರ್ಜಿ ತಿರಸ್ಕೃತವಾಗಿದೆ ಎಂದು ನಂಬಿಸಿ ವಾಟ್ಸ್‌ಆಯಪ್ ಮೂಲಕ ಲಿಂಕ್ ಕಳುಹಿಸಿದ್ದ. ಅದರಲ್ಲಿ ವೈಯಕ್ತಿಕ ಮಾಹಿತಿ ಭರ್ತಿ ಮಾಡಿ ₹5 ನೋಂದಣಿ ಶುಲ್ಕ ಪಾವತಿಸುವಂತೆ ಸೂಚಿಸಿದ್ದಾನೆ. ವೃದ್ಧರು ₹5 ಪಾವತಿಸಲು ಪ್ರಯತ್ನಿಸಿದಾಗ ವಹಿವಾಟು ವಿಫಲವಾಗಿದೆ ಎಂದು ತೋರಿಸಿದೆ. ಬಳಿಕ ಕ್ಯೂಆರ್ ಕೋಡ್ ಕಳುಹಿಸುವುದಾಗಿ ಹೇಳಿದ ವಂಚಕ, ಅವರ ಕ್ರೆಡಿಟ್ ಕಾರ್ಡ್‌ನಿಂದ …

Read More »

ರಾಘವೇಂದ್ರ ಹಿಟ್ನಾಳಗೆ ಸಿಗದ ಸಚಿವ ಸ್ಥಾನ: ಕೊಪ್ಪಳದಲ್ಲಿ ಆಕ್ರೋಶ, ಪ್ರತಿಭಟನೆ

ಕೊಪ್ಪಳ ಕ್ಷೇತ್ರದ ಶಾಸಕ ಕುರುಬ ಸಮುದಾಯದ ರಾಘವೇಂದ್ರ ಹಿಟ್ನಾಳ ಅವರಿಗೆ ಸಚಿವ ಸ್ಥಾನ ಸಿಗದ್ದಕ್ಕೆ ಅವರ ಬೆಂಬಲಿಗರು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಅಶೋಕ ‌ವೃತ್ತದಲ್ಲಿ ಸೋಮವಾರ ಹಿಟ್ನಾಳ ಬೆಂಬಲಿಗರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಪಕ್ಷದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಹಾಗೂ ಸಿದ್ದರಾಮಯ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೊಪ್ಪಳ ಕ್ಷೇತ್ರಕ್ಕೆ ಸಚಿವ ಸ್ಥಾನ ತಪ್ಪಲು ಸಿದ್ದರಾಮಯ್ಯ ಕಾರಣ. ರಾಘವೇಂದ್ರ ಹಿಟ್ನಾಳ ಸತತ ‌ಮೂರು ಬಾರಿ ಶಾಸಕರಾಗಿದ್ದರೂ ಸಚಿವ ಸ್ಥಾನ ಕೊಟ್ಟಿಲ್ಲ …

Read More »

ಭ್ರಷ್ಟರೊಡನೆ ವೇದಿಕೆಯೇರಲ್ಲ ಎಂದ ಪೊಲೀಸ್ – ಶಾಸಕನ ಮಗನಿಂದ ಹಲ್ಲೆ!

ಭದ್ರಾವತಿಯ ಜನ್ನಾಪುರದ ಮಲ್ಲೇಶ್ವರ ಸಭಾಭವನದಲ್ಲಿ ನಡೆದ ಎಸ್. ಜಾನಕಿ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಉಮೇಶ್ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಕಾರ್ಯಕ್ರಮದಲ್ಲಿ ಶಾಸಕರ ಮಗ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದ ವೇಳೆ, ಉಮೇಶ್ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ಆದರೆ, “ನಾನು ಭ್ರಷ್ಟರ ಜೊತೆ ಒಂದೇ ವೇದಿಕೆಯಲ್ಲಿ ಕೂರುವುದಿಲ್ಲ” ಎಂದು ಉಮೇಶ್ ಆಹ್ವಾನ ನಿರಾಕರಿಸಿದ್ದರಿಂದ ವಾಗ್ವಾದ ಉಂಟಾಗಿದೆ ಎನ್ನಲಾಗಿದೆ. ಬಳಿಕ ಶಾಸಕರ ಬೆಂಬಲಿಗರು ಉಮೇಶ್ ಹಾಗೂ ಅವರ ಸಂಬಂಧಿ ಸುಹಾಸ್ …

Read More »

ಟೋಲ್‌ ಸಿಬ್ಬಂದಿಗೆ ಗನ್‌, ಲಾಂಗ್‌ ತೋರಿಸಿ ಬೆದರಿಕೆ; ಬ್ಯಾರಿಕೇಡ್ ಗೆ ಕಾರು ಗುದ್ದಿಸಿ ಹೋದ ಪುಂಡರು

ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಚೌಲಗೆರೆ ಟೋಲ್‌ಪ್ಲಾಜಾದಲ್ಲಿ ಸುಂಕ ಪಾವತಿಸಲು ನಿರಾಕರಿಸಿದ ಐವರು ಪುಂಡರು ಟೋಲ್ ಸಿಬ್ಬಂದಿಗೆ ಗನ್ ಹಾಗೂ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಮಾರುತಿ 800 ಕಾರಿನಲ್ಲಿ ಬಂದ ಆರೋಪಿಗಳು ಟೋಲ್ ಶುಲ್ಕ ಕೇಳಿದ್ದಕ್ಕೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಆರೋಪಿಗಳು ಗನ್ ಹಾಗೂ ಲಾಂಗ್ ತೋರಿಸಿ ಟೋಲ್ ಬ್ಯಾರಿಯರ್ ತೆರೆಯುವಂತೆ ಬೆದರಿಕೆ ಹಾಕಿದ್ದಾರೆ. ಯಾವುದೇ ಸುಂಕ ಪಾವತಿಸದೇ ಕಾರನ್ನು …

Read More »

ತುಮಕೂರು ಸೈಬರ್ ವಂಚನೆ ₹20 ಲಕ್ಷ ಕಳೆದುಕೊಂಡ ವ್ಯಕ್ತಿ

ತುಮಕೂರು: ಅಧಿಕ ಲಾಭದ ಆಮಿಷ ತೋರಿಸಿ ಸೈಬರ್ ವಂಚಕರು ಕೊರಟಗೆರೆ ತಾಲೂಕಿನ ಸಿಂಗ್ರಿಹಳ್ಳಿಯ ಎಸ್.ಕೆ. ಮಂಜುನಾಥ್ ಅವರಿಂದ ₹20.37 ಲಕ್ಷ ವಂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ ಷೇರು ಮಾರುಕಟ್ಟೆ ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿದ ಬಳಿಕ ಅವರನ್ನು ವಾಟ್ಸ್‌ಆಪ್‌ ಗುಂಪಿಗೆ ಸೇರಿಸಿ ಹೂಡಿಕೆ ಮಾಡಲು ಪ್ರೇರೇಪಿಸಲಾಗಿತ್ತು. ಆರೋಪಿಗಳ ಸೂಚನೆಯಂತೆ ಮಂಜುನಾಥ್ ಹಂತ ಹಂತವಾಗಿ ₹21.12 ಲಕ್ಷವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದು, ಕೇವಲ ₹75 ಸಾವಿರ ಮಾತ್ರ ಮರಳಿದೆ. ಬಳಿಕ ಟ್ರೇಡಿಂಗ್ …

Read More »

ಮಹಿಳೆಗೆ ವೀಡಿಯೋ ಕರೆ ಮಾಡಿ ಖಾಸಗಿ ಅಂಗ ಪ್ರದರ್ಶನ – ವಿಕೃತಕಾಮಿ ಅರೆಸ್ಟ್!

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆಗೆ ವೀಡಿಯೋ ಕರೆ ಮಾಡಿ ಖಾಸಗಿ ಅಂಗ ಪ್ರದರ್ಶಿಸಿ ಅಶ್ಲೀಲವಾಗಿ ವರ್ತಿಸಿದ್ದ ತಮಿಳುನಾಡು ಮೂಲದ ಯುವಕನನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತ್ಯಾಗರಾಜನಗರ ನಿವಾಸಿ 34 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಫೇಸ್‌ಬುಕ್‌ನಲ್ಲಿದ್ದ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಪಡೆದು ಮೊದಲು ಸಂದೇಶ ಕಳುಹಿಸಿದ್ದ. ಬಳಿಕ ಜುಲೈ 30ರಂದು ವೀಡಿಯೋ ಕರೆ ಮಾಡಿ ಅಶ್ಲೀಲವಾಗಿ ವರ್ತಿಸಿ ಮಹಿಳೆಗೆ …

Read More »

ಹುಣ್ಣಿಮೆ ದಿನವೇ ನಡೀತು ಘೋರ ಕೃತ್ಯ; ಹಸಿರು ಸೀರೆ, ಬಳೆ ಜೊತೆ ಅರೆಬೆಂದ ಸ್ಥಿತಿಯಲ್ಲಿ ಯುವತಿ ಶವ, ಅಸಲಿಗೆ ಅಲ್ಲಿ ಆಗಿದ್ದೇನು?

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಅಶ್ರಿಹಾಳ್ ಗ್ರಾಮದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಹುಣ್ಣಿಮೆಯ ಮರುದಿನ ಶಿವಕುಮಾರ್ ಎಂಬುವರ ಜಮೀನಿನಲ್ಲಿ ಶವ ಪತ್ತೆಯಾಗಿದ್ದು, ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯುವತಿಯನ್ನು ವಾಮಾಚಾರಕ್ಕೆ ಬಲಿ ಕೊಟ್ಟಿರಬಹುದೇ ಅಥವಾ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಸುಟ್ಟು ಹಾಕಲಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಪ್ರದೇಶ ಬೆಟ್ಟಗುಡ್ಡಗಳಿಂದ ಕೂಡಿದ್ದು, ಸಿಸಿಟಿವಿ ಕ್ಯಾಮೆರಾಗಳಿಲ್ಲದ ಕಾರಣ ತನಿಖೆ ಪೊಲೀಸರಿಗೆ ಸವಾಲಾಗಿದೆ. …

Read More »