Breaking News

Breaking News

ಮಹಾತ್ಮ ಗಾಂಧಿಯವರ ದಿನ ಆಚರಣೆ

ನವಲಗುಂದ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 155ನೇ ಹಾಗೂ ಭಾರತದ ಧೀಮಂತ ನಾಯಕ ದೇಶದ ಎರಡನೇ ಪ್ರದಾನಮಂತ್ರಿ ಲಾಲಬಹಾದ್ದೂರ ಶಾಸ್ತ್ರೀಯವರ 120ನೇ ಜನ್ಮದಿನಾಚರಣೆಯನ್ನು ಉಭಯ ಮಹಾವಿದ್ಯಾಲಯದ ಅಡಿಯಲ್ಲಿ ಆಚರಣೆ ಮಾಡಲಾಯಿತು. ಜಯಂತಿ ನಿಮಿತ್ತ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಎಂ.ಎನ್ ಹಾರೋಗೇರಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಉಭಯ ಧೀಮಂತ ಮಹಾಪುರುಷರ ಕುರಿತು ಮಾತನಾಡಿದರು. ನಂತರ ಕರ್ನಾಟಕ ಸರ್ಕಾರವು ಮಹಾತ್ಮಾ ಗಾಂಧಿಯವರ ಕನಸು ಮತ್ತು ಸಂದೇಶದ ತಿರುಳನ್ನು ಪ್ರತಿಜ್ಞಾವಿಧಿಯಾಗಿ ಸ್ವೀಕರಿಸಲು …

Read More »

ಸಿದ್ಧಾರೂಢರ ದರ್ಶನ ಪಡೆದ ವಿ.ಸೋಮಣ್ಣ

ಹುಬ್ಬಳ್ಳಿ: ಪ್ರತಿಷ್ಠಿತ ಶ್ರೀ ಸಿದ್ಧಾರೂಢರ ಮಠಕ್ಕೆ ಆಗಮಿಸಿದ ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ಸಿದ್ಧಾರೂಢರ ದರ್ಶನ ಪಡೆದರು. ಪ್ರತಿಷ್ಠಿತ ಮಠಕ್ಕೆ ಭೇಟಿ ನೀಡಿದ ಸಚಿವ ವಿ. ಸೋಮಣ್ಣ ಅವರು ಸಿದ್ಧಾರೂಢರಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಇವರ ಜೊತೆಗೆ ಶಾಸಕ ಮಹೇಶ ಟೆಂಗಿನಕಾಯಿ, ಸ್ವರ್ಣ ಗ್ರೂಪ್ ಆಪ್ ಕಂಪನಿ ಮಾಲೀಕರಾದ ವಿಎಸ್‌ವಿ ಪ್ರಸಾದ್‌ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು. ಪ್ರಥಮ ಬಾರಿಗೆ ಸಿದ್ಧಾರೂಢ ಮಠಕ್ಕೆ …

Read More »

ಸತ್ಯ, ಅಹಿಂಸೆ ಆಧಾರಿತ ಗಾಂಧೀ ಪ್ರಣಿತ ಭಾರತವೇ ನಮ್ಮ ಆದ್ಯತೆ:ಸಚಿವ ಸಂತೋಷ ಲಾಡ್

ಧಾರವಾಡ : ರಾಷ್ಟ್ರಪಿತ ಮಹಾತ್ಮಗಾಂಧೀ ಅವರು ನೀಡಿರುವ ಸತ್ಯ, ಅಹಿಂಸೆ ಆಧಾರಿತ ಗಾಂಧೀ ಪ್ರಣಿತ ಭಾರತವೇ ನಮ್ಮ ಆದ್ಯತೆ, ಗಾಂಧೀಜಿ ಅವರ ಜೀವನ ಮೌಲ್ಯಗಳು ನಮಗೆ ದಾರಿದೀಪವಾಗಿವೆ ಎಂದು ರಾಜ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರು ಹೇಳಿದರು. ಅವರು ನಗರದ ಆಲೂರು ವೆಂಕಟರಾವ್ ಸಾಂಸ್ಕøತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ …

Read More »

ಅತ್ಯತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ಪುರಸ್ಕøತ ಡಿಸಿ ದಿವ್ಯ ಪ್ರಭು ಅವರಿಗೆ ಸರಕಾರಿ ನೌಕರರ ಸಂಘದಿಂದ ಸನ್ಮಾನ

ಧಾರವಾಡ : ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ಪುರಸ್ಕøತರಾದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ಮತ್ತು ಉತ್ತಮ ಜಿಲ್ಲಾ ವಿಪತ್ತು ಸಮಾಲೋಚಕ ಪ್ರಶಸ್ತಿ ಪುರಸ್ಕೃತ ವೆಂಕಟೇಶ ಬುಳ್ಳಾ ಹಾಗೂ ಅತ್ಯುತ್ತಮ ಗ್ರಾಮ ಆಡಳಿತ ಅಧಿಕಾರಿ ಪ್ರಶಸ್ತಿ ಪುರಸ್ಕೃತ ರಾಕೇಶ ತಂಗಡಗಿ ಅವರನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟಕದಿಂದ ಸನ್ಮಾನಿಸಿ, ಗೌರವಿಸಲಾಯಿತು. ನೌಕರರ ಸಂಘದ ಜಿಲ್ಲಾ ಅಧ್ಯಕ್ಷ …

Read More »

ಮಹಾತ್ಮಾಗಾಂಧಿ ಜನ್ಮ ದಿನ ಆಚರಣೆ

ಕುಂದಗೋಳ : ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿ ಹಾಗೂ ಲಾಲ್ ಬಹುದ್ದೂ‌ರ್ ಶಾಸ್ತ್ರಿ ಅವರ ಜಯಂತಿಯನ್ನು ತಹಶೀಲ್ದಾ‌ರ್ ರಾಜು ಮಾವರಕರ ನೇತೃತ್ವದಲ್ಲಿ ಆಚರಿಸಲಾಯಿತು. ಬಳಿಕ ಪಟ್ಟಣದ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ತಾಲೂಕು ಆಡಳಿತ ಮಹಾತ್ಮಾಗಾಂಧಿ ಅವರಿಗೆ ಗೌರವ ಸೂಚಿಸಿದರು. ಈ ಸಂದರ್ಭದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More »

“ನನ್ನ ಬದುಕೇ ನನ್ನ ಸಂದೇಶ” ಎಂದು ಸರಳವಾಗಿ ಹೇಳಿದವರು: ಎನ್.ಹೆಚ್.ಕೋನರಡ್ಡಿ

ನವಲಗುಂದ: ಹುಟ್ಟು ನಿಶ್ಚಿತ, ಸಾವು ಖಚಿತ ಇವೆರಡರ ನಡುವೆ ಇರುವ ಬದುಕಿನಲ್ಲಿ ನಾವು ಏನು ಸಾಧನೆ ಮಾಡುತ್ತೇವೆ, ಏನು ಸಂದೇಶ ನೀಡುತ್ತೇವೆ ಎನ್ನುವುದು ಮುಖ್ಯ. ಮಹಾತ್ಮ ಗಾಂಧೀಜಿ ಅವರು “ನನ್ನ ಬದುಕೇ ನನ್ನ ಸಂದೇಶ” ಎಂದು ಸರಳವಾಗಿ ಹೇಳಿದವರು ಎಂದು ಶಾಸಕ ಎನ್.ಹೆಚ್.ಕೋನರಡ್ಡಿ ಹೇಳಿದರು. ನಗರದ ತಹಶೀಲ್ದಾರ ಅವರ ಕಾರ್ಯಾಲಯದಲ್ಲಿ ತಾಲೂಕು ಆಡಳಿತದ ವತಿಯಿಂದ ಮಹಾತ್ಮ ಗಾಂಧೀಜಿ ಅವರ 155ನೇ ಜಯಂತಿ ಹಾಗೂ ಲಾಲ ಬಹದ್ದೂರ ಶಾಸ್ತ್ರೀ ಅವರ ಜನ್ಮ …

Read More »

ನಾಡಿಗೆಲ್ಲ ಅಹಿಂಸಾ ಧರ್ಮವನ್ನು ಬೋಧಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ : ಮಾಬುಸಾಬ ಯರಗುಪ್ಪಿ

ನವಲಗುಂದ: ನಾಡಿಗೆಲ್ಲ ಅಹಿಂಸಾ ಧರ್ಮವನ್ನು ಬೋಧಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದು ಅವರನ್ನೆಲ್ಲ ನೆನೆದು ಗೌರವ ಸಮರ್ಪಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಮಾದರಿ ಕೇಂದ್ರ ಶಾಲೆ ನಂ-3ರಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಲಾಲ್ ಬಹಾದ್ದೂ‌ರ್ ಶಾಸ್ತ್ರಿಜಿಯವರ ಜಯಂತಿಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಬ್ರಿಟಿಷರಿಂದ ಅಹಿಂಸಾ ಮಾರ್ಗದ ಮೂಲಕ ನಮ್ಮ ದೇಶವನ್ನು …

Read More »

ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಧ್ವಜ ಹಾರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್

ಧಾರವಾಡ:ಧಾರವಾಡದಲ್ಲಿ ಟಿಪ್ಪು ಧ್ವಜವನ್ನು ಮೇಲೆ ಹಾರಿಸಿ, ಅದರ ಕೆಳಗಡೆ ರಾಷ್ಟ್ರಧ್ವಜ ಕಟ್ಟಲಾಗಿದೆ. ಇಲ್ಲಿ ರಾಷ್ಟ್ರದ್ರೋಹದ ಕೆಲಸ ನಡೆದಿದೆ. ತಕ್ಷಣ ಅಂತಹ ರಾಷ್ಟ್ರದ್ರೋಹಿಗಳನ್ನು ಬಂಧಿಸಿ ರಾಷ್ಟ್ರದ್ರೋಹಿ ಸೆಕ್ಷನ್ ಹಾಕಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಒತ್ತಾಯಿಸಿದ್ದಾರೆ. ಧಾರವಾಡದ ರಿಗಲ್ ಸರ್ಕಲ್‌ನಲ್ಲಿರುವ ಕಂಬದ ಮೇಲೆ ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಧ್ವಜ ಹಾರಾಡಿದ್ದು, ಅದರ ಕೆಳಭಾಗದಲ್ಲಿ ರಾಷ್ಟ್ರಧ್ವಜ ಕಟ್ಟಿ ಅವಮಾನ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿ …

Read More »

ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಬಾವುಟ ಹಾರಾಟ: ಸ್ಥಳಕ್ಕೆ ಎನ್.ಶಶಿಕುಮಾರ್ ಭೇಟಿ

ಧಾರವಾಡ: ಧಾರವಾಡದ ಟಿಪ್ಪು ಸರ್ಕಲ್‌ನಲ್ಲಿರುವ ಕಂಬದ ಮೇಲೆ ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಬಾವುಟ ರಾಷ್ಟ್ರಧ್ವಜದ ಮೇಲ್ಬಾಗದಲ್ಲಿ ಹಾರಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಪೊಲೀಸ್‌ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ದಲಿತ ಪರ ಸಂಘಟನೆಗಳು ಇಂದು ಗಾಂಧಿ ಜಯಂತಿ ಆಚರಣೆ ಮಾಡಿವೆ. ಕೆಲವರು ಧ್ವಜಗಳನ್ನು ಅಲ್ಲಿಆರೋಹಣ ಮಾಡಿ ಹೋಗಿದ್ದರು. ಅದೇ ಸ್ಥಳದಲ್ಲಿ ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಧ್ವಜ ಕಟ್ಟಿದ್ದರು. ಅದು ರಾಷ್ಟ್ರಧ್ವಜಕ್ಕಿಂತ ಸ್ವಲ್ಪ ಮೇಲೆ …

Read More »

ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಯ ವಿಸ್ತರಣೆಗೆ ಚಾಲನೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: ಖಾಸಗಿ ಕಂಪನಿಯಾದ ರೆಫೆಕ್ಸ್ ಇವೀಲ್ಜ್ ನಿರ್ವಹಿಸುತ್ತಿರುವ ಹೊಸ ಎಲೆಕ್ಟ್ರಿಕ್ ಏರ್‌ಪೋರ್ಟ್ ಟ್ಯಾಕ್ಸಿ ಸೇವೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಚಾಲನೆ ನೀಡಿದರು. ಏರ್‌ಪೋರ್ಟ್ ಆಪರೇಟರ್‌ನ ಸಹಯೋಗದೊಂದಿಗೆ ರೆಫೆಕ್ಸ್ ಇವೀಲ್ಜ್ ಕಂಪನಿಯು ಏರ್‌ಪೋರ್ಟ್ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದು, ಈಗಾಗಲೇ 200 ಎಲೆಕ್ಟ್ರಿಕ್ ಕಾರುಗಳು ಕಾರ್ಯಾಚರಿಸುತ್ತಿವೆ. ಇದೀಗ ಇನ್ನೂ 170 ಎಲೆಕ್ಟ್ರಿಕ್ ಕಾರುಗಳು ಸೇವೆಗೆ ಸೇರ್ಪಡೆಯಾದಂತಾಗಿದೆ. ಇ ಟ್ಯಾಕ್ಸಿ ಸೇವೆಗೆ ಚಾಲನೆ ನೀಡಿರುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸಾಮಾಜಿಕ ಮಾಧ್ಯಮ ಎಕ್ಸ್​ …

Read More »