Breaking News

Breaking News

ಸಿದ್ದರಾಮಯ್ಯ ವಿರುದ್ಧ ಗುಡುಗಿದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ

ಹುಬ್ಬಳ್ಳಿ: ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದಾರೆ, ನಾವು ಭಿಕ್ಷೆ ಕೊಟ್ಟಿದ್ದೇವೆ, ಧರ್ಮಕ್ಕೆ ಕೊಟ್ಟಿದ್ದೇವೆ ಅಂತ ನೀವು ಹೇಳಿಕೊಳ್ಳುತ್ತಿದ್ದೀರಿ ಯಾವ ಕ್ಷೇತ್ರವನ್ನು ಬಿಜೆಪಿ ಅವರಿಗೆ ಭಿಕ್ಷೆ ಕೊಟ್ಟಿದ್ದೀರಿ ಬಹಿರಂಗಪಡಿಸಿ ಯಾರು ಭಿಕ್ಷೆ ಕೊಟ್ರು, ಯಾರು ತೆಗೆದುಕೊಂಡ್ರು ಅಂತ ಬಹಿರಂಗಪಡಿಸಲಿ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು. ಹುಬ್ಬಳ್ಳಿಯಲ್ಲಿ ಕುಮಾರ್ ಬಂಗಾರಪ್ಪ ಮತ್ತಿತರರ ಸಭೆ ವಿಚಾರವಾಗಿ ಮಾತನಾಡಿದ ಅವರು,ಭ್ರಷ್ಟಾಚಾರಿಗಳೆಲ್ಲ ಜೈಲು ಸೇರಲಿ ಭ್ರಷ್ಟರೆಲ್ಲ ಜೈಲಿಗೆ ಹೋದರೆ ಹೊಸ …

Read More »

ಸಿದ್ದರಾಮಯ್ಯಗೆ ರಾಜಿನಾಮೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಹುಬ್ಬಳ್ಳಿ: ಸಿದ್ದರಾಮಯ್ಯ ತಾವು ಮಾತಿಗೊಮ್ಮೆ ನಾನು ಹಿಂದುಳಿದವರ ಪರ, ಹಿಂದುಳಿದ ವರ್ಗಗಳ ನಾಯಕ ಎಂದು ಹೇಳುತ್ತಾರೆ ಆದರೆ ಹಿಂದುಳಿದ ವರ್ಗಗಳ ದುಡ್ಡನ್ನ ತೆಗೆದುಕೊಂಡು ರಾಜಕಾರಣ ಮಾಡಿದರು, ವಾಲ್ಮೀಕಿ ಹಗರಣದ ದುಡ್ಡನ್ನ ದುರುಪಯೋಗ ಮಾಡಿಕೊಂಡು ಅಂದ್ರಪ್ರದೇಶ ಹಾಗೂ ಬಳ್ಳಾರಿ ಕೊಟ್ಟಿದಾರೆ ಆದ್ದರಿಂದ ಅವರೆ ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಶಾಸಕ ಎಮ್.ಆರ್.ಪಾಟೀಲ್ ಆಗ್ರಹಿಸಿದರು. ಬಿಜೆಪಿ ಪಕ್ಷದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಒತ್ತಾಯ ಮಾಡಿದರು.

Read More »

ಪೂರ್ವಭಾವಿ ಸಭೆಗೆ ಆಗಮಿಸಿದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಂದ ಎಚ್ಚರಿಕೆಯ ಸೂಚನೆ

ಕುಂದಗೋಳ: ಅಕ್ಟೋಬರ್ 17 ರಂದು ನಡೆಯಲಿರುವ ವಾಲ್ಮೀಕಿ ಜಯಂತಿ ಆಚರಣೆ ಪೂರ್ವಭಾವಿ ಸಭೆಗೆ ಆಗಮಿಸಿದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರು ಸಭೆಯನ್ನು ಬಹಿಷ್ಕರಿಸಿ, ಪ್ರತಿಭಟನೆ ಎಚ್ಚರಿಕೆ ನೀಡಿದ ಘಟನೆ ಕುಂದಗೋಳದಲ್ಲಿ ನಡೆದಿದೆ. ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ತಹಶೀಲ್ದಾರ್ ರಾಜು ಮಾವರಕರ ನೇತೃತ್ವದಲ್ಲಿ ಆಯೋಜನೆಗೊಂಡ ಸಭೆಗೆ ಕುಂದಗೋಳ ತಾಲೂಕಿನ ವಿವಿಧ ಇಲಾಖೆಗಳ ಮುಖ್ಯ ಅಧಿಕಾರಿಗಳು ಬಾರದೇ ಸಹ ಸಿಬ್ಬಂದಿ ಸಭೆಗೆ ಕಳುಹಿಸಿದ್ದಕ್ಕೆ ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು ಗರಂ …

Read More »

ಹುಬ್ಬಳ್ಳಿಯಲ್ಲಿ ಸದಸ್ಯತ್ವ ಅಭಿಯಾನ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ. 51 ರ ಆರ್. ಎನ್. ಶೆಟ್ಟಿ ರಸ್ತೆಯ ಚೈತನ್ಯ ನಗರದಲ್ಲಿ, ಕೇಂದ್ರ ಸಚಿವರಾದ ವಿ. ಸೋಮಣ್ಣ ಅವರು ಮನೆ ಮನೆಗೆ ತೆರಳಿ ಸದಸ್ಯತಾ ಅಭಿಯಾನ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಾಜಿ ಮಹಾಪೌರರಾದ ಪ್ರಕಾಶ ಕ್ಯಾರಕಟ್ಟಿ, ಕೃಷ್ಣಾ ಗಂಡಗಾಳೇಕರ, ಸಿದ್ದೇಶ ಕಬಾಡರ, ಪ್ರಶಾಂತ ಬದ್ದಿ, ಶಂಕರ ಪುರೋಹೀತ, ವಿಜಯ ಕುಮಾರ, ನಿಜಗುಣಿ ಮಳಗಿ, ಶ್ರೀ …

Read More »

ಸತತ ಮಳೆಯಿಂದಾಗಿ ತೊಗರಿ ಬೆಳೆಗೆ ನೆಟೆ ರೋಗ: ಆತಂಕದಲ್ಲಿ ರೈತರು

ಹುಲಸೂರ: ಸತತ ಸುರಿಯುತ್ತಿರುವ ಮಳೆಯಿಂದ ಮಾಂಜ್ರಾ ತೀರದ ಎರೆ ಜಮೀನುಗಳಲ್ಲಿ ನೀರು ಸಂಗ್ರಹಗೊಂಡಿದ್ದು, ಬಿತ್ತನೆ ಮಾಡಿದ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗುವ ಭೀತಿಯಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಪಟ್ಟಣದ ಸೇರಿದಂತೆ ಮಾಂಜ್ರಾ ತೀರದ ಗ್ರಾಮಗಳಾದ ಹಲಸಿ ತುಗಾಂವ, ಕೊಂಗಳಿ, ವಾಂಜರಖೇಡ, ಮೆಹಕರ, ಬೋಳೆಗಾಂವ ನಾರದಾ ಸಂಗಮ, ಅಟ್ಟರಗಾ, ಸಾಯಗಾಂವ, ಹುಲಸೂರ ಜಮೀನುಗಳಲ್ಲಿ ತೊಗರಿ ಬೆಳೆಗಳ ಮಧ್ಯೆ ನಿಂತ ನೀರು ನೆಟೆ ರೋಗಕ್ಕೆ ಆಹ್ವಾನ ನೀಡುತ್ತಿದೆ. ತೊಗರಿ ಗಿಡಗಳಿಗೆ ಅಲ್ಲಲ್ಲಿ …

Read More »

ವಿವಿಧ ಬೇಡಿಕೆ ಆಗ್ರಹಿಸಿ ಗ್ರಾಮ ಆಡಳಿ ಅಧಿಕಾರಿಗಳು ಪ್ರತಿಭಟನೆ

ಅಣ್ಣಿಗೇರಿ: ವಿವಿಧ ಬೇಡಿಕೆ ಆಗ್ರಹಿಸಿ ಗ್ರಾಮ ಆಡಳಿ ಅಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರವನ್ನು ಪಟ್ಟಣದ ತಹಶೀಲ್ದಾರ ಆಫೀಸ್ ಬಳಿ ಧರಣಿ ನಡೆಸಿ, ತಹಶೀಲ್ದಾ‌ರ್ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಕೈಗೆ ಕಪ್ಪು ಬಟ್ಟಿ ಧರಿಸಿ ಸರ್ಕಾರದ ವಿರುದ್ಧ ಗ್ರಾಮ ಅಧಿಕಾರಿಗಳು ಹೋರಾಟ ನಡೆಸಿದರು ಮೂಲಭೂತ ಸೌಕರ್ಯಗಳಿಲ್ಲ ಸರಿಯಾದ ಆಫೀಸ್ ಇಲ್ಲ ಹಾಗೂ ಕುರ್ಚಿ,ಟೇಬಲ್ ಮೊಬೈಲ್ ವ್ಯವಸ್ಥೆ ಇಲ್ಲ ಪ್ರಿಂಟರ ಮತ್ತು ಸ್ಕ್ಯಾನರ ವ್ಯವಸ್ಥೆ ಇಲ್ಲ ಹಲವಾರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

Read More »

ಹುಬ್ಬಳ್ಳಿ – ಧಾರವಾಡ ಮಾಜಿ ಪೊಲೀಸ್ ಆಯುಕ್ತ ಬಿ.ಜಿ. ಕೊಕಟನೂರ ನಿಧನ

ಹುಬ್ಬಳ್ಳಿ: ನಿವೃತ್ತ ಐಜಿಪಿ ಹಾಗೂ ಹುಬ್ಬಳ್ಳಿ – ಧಾರವಾಡ ಮಾಜಿ ಪೊಲೀಸ್ ಆಯುಕ್ತ ಬಿ.ಜಿ. ಕೊಕಟನೂರ (79) ಸೆಪ್ಟೆಂಬರ್ 26ರಂದು ಸಾಯಂಕಾಲ ಧಾರವಾಡದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸ್ವಗ್ರಾಮ ಹಿಡಕಲ್ ನಲ್ಲಿ ಅಂತ್ಯ ಸಂಸ್ಕಾರ ನಾಳೆ ಸೆಪ್ಟೆಂಬರ್ 27ರಂದು ಮಧ್ಯಾಹ್ನ ನಡೆಯಲಿದೆ. 1998-99ರ ಸಾಲಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತರಾಗಿ ದಕ್ಷ …

Read More »

ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ಪ್ರಕಟ

ಧಾರವಾಡ : ರಾಜ್ಯ ಸರಕಾರದ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಅತ್ಯುತ್ತಮ ರೀತಿಯಲ್ಲಿ ತಲುಪಿಸಿರುವ ಮತ್ತು ಚಿತ್ರದುರ್ಗ ಹಾಗೂ ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಾಗಿ ಉತ್ತಮವಾದ ಜನಸ್ನೇಹಿ, ನಾಗರಿಕಸ್ನೇಹಿ ಆಡಳಿತ ನೀಡಿರುವ ದಿವ್ಯ ಪ್ರಭು ಜಿ.ಆರ್.ಜೆ ಅವರಿಗೆ ರಾಜ್ಯ ಸರಕಾರದ ಕಂದಾಯ ಇಲಾಖೆಯಿಂದ 2023-24 ನೇ ಸಾಲಿಗೆ ಉತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ಪ್ರಕಟವಾಗಿದೆ. ರಾಕೇಶ ತಂಗಡಗಿ ಅತ್ಯುತ್ತಮ ಗ್ರಾಮ ಆಡಳಿತ ಅಧಿಕಾರಿ: ಧಾರವಾಡ ತಹಶಿಲ್ದಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ …

Read More »

ಪರಮ್ ರುದ್ರ ಸೂಪರ್ ಕಂಪ್ಯೂಟರ್ ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ನವದೆಹಲಿ : ಸೂಪರ್ ಕಂಪ್ಯೂಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಬದ್ಧತೆಗೆ ಅನುಗುಣವಾಗಿ, ಪಿಎಂ ಮೋದಿ ಗುರುವಾರ ರಾಷ್ಟ್ರೀಯ ಸೂಪರ್ ಕಂಪ್ಯೂಟರ್ ಮಿಷನ್ ಅಡಿಯಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಸುಮಾರು 130 ಕೋಟಿ ರೂ.ಗಳ ಮೌಲ್ಯದ ಮೂರು ಪರಮ್ ರುದ್ರ ಸೂಪರ್ ಕಂಪ್ಯೂಟರ್ ಗಳನ್ನು ಬಿಡುಗಡೆ ಮಾಡಿದರು. ಈ ಸೂಪರ್ ಕಂಪ್ಯೂಟರ್ ಗಳನ್ನು ಪುಣೆ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ವೈಜ್ಞಾನಿಕ ಸಂಶೋಧನೆಗೆ ಅನುಕೂಲವಾಗುವಂತೆ ನಿಯೋಜಿಸಲಾಗಿದೆ. ಪುಣೆಯ ಜೈಂಟ್ ಮೀಟರ್ ರೇಡಿಯೋ …

Read More »

5,800 ಎಕರೆ ಪ್ರದೇಶದಲ್ಲಿ ಕ್ವಿನ್ ಸಿಟಿ ಯೋಜನೆ ನಿರ್ಮಾಣ: ಸಚಿವ ಎಂ ಬಿ ಪಾಟೀಲ್

ಬೆಂಗಳೂರು: ಕ್ವಿನ್ ಸಿಟಿ ಇದೊಂದು ವೈಶಿಷ್ಟ್ಯ ಪೂರ್ಣ ಯೋಜನೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕ್ವಿನ್ ಸಿಟಿ (ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರ) ಯೋಜನೆ ಉದ್ಘಾಟನೆ ಬಳಿಕ ಅವರು ಮಾತನಾಡಿದರು. ಒಟ್ಟು 5,800 ಎಕರೆಯಲ್ಲಿ ಕ್ವಿನ್ ಸಿಟಿಯನ್ನು ಅಭಿವೃದ್ಧಿಪಡಿಸುವ ಉದ್ದೇಶವಿದ್ದು, ಮೊದಲ ಹಂತದಲ್ಲಿ 2,000 ಎಕರೆಯಲ್ಲಿ ಇದನ್ನು ಸಾಕಾರಗೊಳಿಸಲಾಗುವುದು. 5 ಲಕ್ಷ ಜನವಸತಿಯ ಗುರಿಯುಳ್ಳ ವಿನೂತನ ನಗರದ ಪರಿಧಿಯಲ್ಲಿ …

Read More »