Breaking News

Breaking News

ಪ್ಯಾಲೆಸ್ತೀನ್ ಗೆ ಭಾರತದ ಬೆಂಬಲ ನಿರಂತರ ಎಂದ ಪ್ರಧಾನಿ ಮೋದಿ

ನ್ಯೂಯಾರ್ಕ್​​​​: ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್ ನ ಲೊಟ್ಟೆ ನ್ಯೂಯಾರ್ಕ್ ಪ್ಯಾಲೇಸ್ ಹೋಟೆಲ್‌ನಲ್ಲಿ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಅಮೆರಿಕದ ವಲಸಿಗರಿಗೆ ಗಾಜಾದಲ್ಲಾದ ಪರಿಸ್ಥಿತಿಯ ಬಗ್ಗೆ ಮೋದಿ ಅವರು ಕಳವಳ ವ್ಯಕ್ತಪಡಿಸಿದರು. ಹಾಗೆಯೇ ಪ್ಯಾಲೇಸ್ಟಿನಿಯನ್ ಜನರಿಗೆ ಭಾರತದ ಬೆಂಬಲ ಯಾವಾಗಲೂ ಇರುತ್ತದೆ ಎಂದು ಹೇಳಿದರು. ಗಾಜಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ಪ್ರಧಾನಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಪ್ಯಾಲೆಸ್ತೀನ್ ಜನರಿಗೆ ಭಾರತದ ನಿರಂತರ …

Read More »

ತುಂಗಭದ್ರ ಜಲಾಶಯಕ್ಕೆ ನೂತನ ಕ್ರಸ್ಟ್ ಗೇಟ್ ಗಳ ಅಳವಡಿಕೆ: ಡಿಸಿಎಂ ಡಿಕೆಶಿ

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರೆಸ್ಟ್ ಗೇಟ್ ಗಳನ್ನು ಒಂದು ವರ್ಷದೊಳಗೆ ಅಳವಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಹೇಳಿದರು. ತುಂಗಭದ್ರಾ ಜಲಾಶಯ ಬಾಗಿನ ಸಮರ್ಪಣೆ ನಂತರ ಮುನಿರಾಬಾದ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶ, ತೆಲಂಗಾಣ ಮತ್ತು ತುಂಗಭದ್ರಾ ಬೋರ್ಡ್ ಬಳಿ ಚರ್ಚೆ ನಡೆಸಿ ನೂತನ ಗೇಟ್ ಅಳವಡಿಕೆ ಮಾಡಲಾಗುವುದು. ಇದರ ಮೂಲಕ ನಮ್ಮ ರೈತರ ರಕ್ಷಣೆ …

Read More »

ರೈತರಿಗಾಗಿ ಕ್ಯೂಆರ್‌ಕೋಡ್‌ ಅಭಿವೃದ್ಧಿಪಡಿಸಿದ ರಾಯಚೂರು ಕೃಷಿ ವಿವಿ

ರಾಯಚೂರು: ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಕಾಲೇಜಿನ ಕೀಟಶಾಸ್ತ್ರ ವಿಭಾಗದ ಕೃಷಿ ಘಟಕವು ರೇಷ್ಮೆ ಬೆಳೆಗಾರರು ಸುಲಭವಾಗಿ ಹೊಸ ತಂತ್ರಜ್ಞಾನದ ಮೂಲಕ ಮಾಹಿತಿ ಪಡೆದುಕೊಳ್ಳುವಂತಾಗಲು ಕ್ಯೂಆರ್‌ಕೋಡ್‌ ಅಭಿವೃದ್ಧಿ ಪಡಿಸಿದೆ. ರೇಷ್ಮೆ ಹುಳುವಿನ ಜೀವನ ಚಕ್ರ, ಅವುಗಳ ಸೋಂಕು ರೋಗ, ಬ್ಯಾಕ್ಟೇರಿಯಾದಿಂದ ಬರುವ ರೋಗ, ಬೂದಿರೋಗ ಹಾಗೂ ಚುಕ್ಕೆ ರೋಗಗಳ ಅಧ್ಯಯನ ಮಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕ್ಯೂಆರ್‌ಕೋಡ್‌ ಸಿದ್ಧಪಡಿಸಿ ಮಾಹಿತಿ …

Read More »

ಪ್ರಧಾನಿ, ಸಿಎಂ ಮಾಜಿ ಆಗಬಹುದು, ಕಾರ್ಯಕರ್ತರೆಂದು ಮಾಜಿಯಾಗಲ್ಲ: ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ

ಲಕ್ಷ್ಮೇಶ್ವರ: ಪಕ್ಷದ ಮೂಲಕ ದೇಶದ ಅತ್ಯುನ್ನತ ಹುದ್ದೆಯನ್ನ ಏರಬಹುದು. ಆ ಹುದ್ದೆಗಳು ಮಾಜಿಯಾಗುತ್ತವೆ. ಆದರೆ, ಕಾರ್ಯಕರ್ತರು ಎಂದು ಮಾಜಿ ಆಗುವುದಿಲ್ಲ ಎಂಬ ಸತ್ಯ ಪ್ರತಿಯೊಬ್ಬ ಕಾರ್ಯಕರ್ತನಿಗೂ ಅರ್ಥವಾಗಿರಬೇಕು ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು. ಗದಗ ಜಿಲ್ಲೆಯ ಶಿರಹಟ್ಟಿ ಮಂಡಲ ವ್ಯಾಪ್ತಿಯ ಲಕ್ಷ್ಮೇಶ್ವರ ತಾಲೂಕಿನ ಬಿಜೆಪಿ ಸದಸ್ಯತ್ವ ಅಭಿಯಾನ-2024 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ನಾನು ಮಾಜಿ ಮಂತ್ರಿಯಾಗಿ ಇಲ್ಲಿಗೆ ಬಂದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಬಂದಿದ್ದೇನೆ. ಪಕ್ಷದ …

Read More »

ಕೃಷಿ ಬೆಳೆಗಳಿಗೆ ವಿದ್ಯುತ್ ಪೂರೈಕೆ ನಿರ್ವಹಣೆಗೆ ಎಐ ತಂತ್ರಜ್ಞಾನ ಬಳಕೆ: ಇಂಧನ ಸಚಿವ ಕೆ ಜೆ ಜಾರ್ಚ್

ಬೆಂಗಳೂರು: ಕೃಷಿ ಬೆಳೆಗಳಿಗೆ ವಿದ್ಯುತ್ ಪೂರೈಕೆ ನಿರ್ವಹಣೆಗಾಗಿ ಎಐ ತಂತ್ರಜ್ಞಾನ ಬಳಕೆ ಮಾಡಲು ಇಂಧನ ಇಲಾಖೆ ಮುಂದಾಗಿದೆ. ಇಂಧನ ಸಚಿವ ಕೆ. ಜೆ ಜಾರ್ಚ್ ಮಾಹಿತಿ ನೀಡಿದ್ದು, ಕೃಷಿ ಬೆಳೆಗಳಿಗೆ ವಿದ್ಯುತ್ ಪೂರೈಕೆ ನಿರ್ವಹಣೆಗೆ ಎಐ ತಂತ್ರಜ್ಞಾನ ಬಳಕೆ ಮಾಡಲು ಇಂಧನ ಇಲಾಖೆ ಮುಂದಾಗಿದೆ. ಕೃಷಿ ಬೆಳೆಗಳಿಗೆ ಅಗತ್ಯತೆ ಪ್ರದೇಶವಾರು ಅನುಗುಣವಾಗಿ ವಿದ್ಯುತ್ ಪೂರೈಕೆ ನಿರ್ವಹಣೆಗೆ ಕೃತಕ ಬುದ್ದಿ ಮತ್ತೆ ತಂತ್ರಜ್ಞಾನ ಬಳಸಲು ಹಿಂದಿನ ಇಲಾಖೆ ಮುಂದಾಗಿದ್ದು, ಈಗಾಗಲೇ ಪ್ರಾಯೋಗಿಕವಾಗಿ …

Read More »

ಮೆಕ್ಕೆಜೋಳಕ್ಕೆ ಮೊದಲನೇ ಬಾರಿಗೆ ಬಂಪರ್ ಬೆಲೆ: ರೈತರ ಮೊಗದಲ್ಲಿ ಸಂತಸ

ಕೊಪ್ಪಳ : ಮೊದಲನೇ ಬಾರಿಗೆ ಮೆಕ್ಕೆಜೋಳಕ್ಕೆ ಬಂಪರ್ ಬೆಲೆ ಬಂದಿದ್ದು, ರೈತರ ಮುಖದಲ್ಲಿ ಸಂತಸವನ್ನು ತಂದಿದೆ. ಕೋಳಿಯ ಆಹಾರ ಸೇರಿದಂತೆ ಕೆಲವು ಉದ್ಯಮಗಳಿಗೆ ಮಾತ್ರವೇ ಸೀಮಿತವಾಗಿದ್ದ ಮೆಕ್ಕೆಜೋಳದಿಂದ ಈಗ ಎಥೆನಾಲ್ ಉತ್ಪಾದನೆಯನ್ನು ಮಾಡಲಾಗುತ್ತಿದ್ದು, ಇದರ ಪರಿಣಾಮವಾಗಿ ಮೆಕ್ಕೆಜೋಳಕ್ಕೆ ಬೇಡಿಕೆ ಹೆಚ್ಚಳವಾಗಿದೆ. ಒಂದು ಕ್ವಿಂಟಲ್‌ ಮೆಕ್ಕೆಜೋಳವು ಕೊಪ್ಪಳ ಮಾರುಕಟ್ಟೆಯಲ್ಲಿ 2,950 ರೂಪಾಯಿಗೆ ಮಾರಾಟವಾಗಿದ್ದು, ಈ ಹಿಂದೆ ಇದ್ದ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ. ಮೆಕ್ಕೆಜೋಳಕ್ಕೆ ಬೆಂಬಲದ ಬೆಲೆಯನ್ನು ನೀಡುವಂತೆ ರೈತರು ಒತ್ತಾಯಿಸುತ್ತಿದ್ದರು. ಪ್ರಸ್ತುತ …

Read More »

2 ಎ ಮೀಸಲಾತಿ: ಅ.15 ರಂದು ಸಿಎಂ ಲಿಂಗಾಯತ ಮುಖಂಡರೊಂದಿಗೆ ಸಭೆ

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ಮುಖಂಡರೊಂದಿಗೆ ಅಕ್ಟೋಬರ್ 15ರಂದು ಸಭೆ ನಡೆಸಿ, ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಳಂಬವಾಗುತ್ತಿರುವ ಕುರಿತು ಚರ್ಚಿಸಲು ಬೆಳಗಾವಿಯಲ್ಲಿ ಲಿಂಗಾಯತ ವಕೀಲರ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಮಾತನಾಡಿದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, , ಸರ್ಕಾರದಲ್ಲಿ ಯಾರಿದ್ದಾರೆಂದು ನೋಡಿಕೊಂಡು ನಾವು ಪ್ರತಿಭಟನೆ ಮಾಡುವುದಿಲ್ಲ. ರಾಜಕೀಯ ಹೋರಾಟವನ್ನು ನಿಮ್ಮ ಮನೆಯಲ್ಲಿ …

Read More »

ಅರಮನೆಯ ಪ್ರತಿಮೆಗಳಿಗೆ ತೊಂದರೆ, ಪಾರಿವಾಳಗಳಿಗೆ ಕಾಳು ಹಾಕಬೇಡಿ: ಸಂಸದ ಯದುವೀರ ಒಡೆಯರ್‌

ಮೈಸೂರು: ಮದುವೆ ಮತ್ತು ಮೋಜಿಗಾಗಿ ಫೋಟೋ ತೆಗೆಸಿಕೊಳ್ಳುವವರಿಗೆ, ಪ್ರವಾಸಿಗರಿಗೆ ಮುದ ನೀಡುತ್ತಿದ್ದ ಮೈಸೂರು ಅರಮನೆಯ ಉತ್ತರ ದ್ವಾರದಲ್ಲಿನ ಪಾರಿವಾಳಗಳಿಗೆ ಸೋಮವಾರದಿಂದ ಕಾಳು ಹಾಕುವ ಪದ್ಧತಿ ನಿಲ್ಲಿಸಲಾಗಿದೆ. ಪಾರಿವಾಳಗಳು ನಗರದ ಪಾರಂಪರಿಕ ಕಟ್ಟಡಗಳಲ್ಲಿ ಗೂಡು ಕಟ್ಟಿ ಅಲ್ಲಿಯೇ ಹಿಕ್ಕೆ ಹಾಕುವುದರಿಂದ ಕಟ್ಟಡಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಡೆದ ನಾಗರಿಕರ ಸಭೆ, ಸಂವಾದದ ಯಶಸ್ವಿಯಾಗಿ ಹಲವು ದಿನಗಳಿಂದ ಪರ ವಿರೋಧಕ್ಕೆ ಎಡೆಮಾಡಿಕೊಟ್ಟಿದ್ದ ಸಮಸ್ಯೆಯನ್ನು ಮಾತುಕತೆಯ …

Read More »

ಮನೆ ಮನೆಗೆ ತೆರಳಿ ಸದಸ್ಯತಾ ಅಭಿಯಾನ

ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿ ಸದಸ್ಯತಾ ಅಭಿಯಾನ ಮಹಾಸಂಪರ್ಕದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ವಾರ್ಡ್ ನಂ. 39 ರ ಶಕ್ತಿ ಕಾಲೋನಿಯಲ್ಲಿ ಮನೆ ಮನೆಗೆ ತೆರಳಿ ಸದಸ್ಯತಾ ಅಭಿಯಾನವನ್ನು ನಡೆಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸಿದ್ದು ಮೊಗಲಿಶೆಟ್ಟರ, ರಘು ಧಾರವಾಡಕರ, ಎಚ್. ಎಸ್. ಕಿರಣ, ಶ್ರೀಮತಿ ಅರ್ಚನಾ ಕೆ, ಲೋಕೇಶ, ಮುರಳಿ ಗಲಗಲಿ ಹಾಗೂ ಸ್ಥಳೀಯ ಗುರುಹಿರಿಯಯರು ಉಪಸ್ಥಿತರಿದ್ದರು.

Read More »

ಹೆಸರು ಖರೀದಿ ಕೇಂದ್ರದ ಉದ್ಘಾಟಿಸಿದ ಕೋನರೆಡ್ಡಿ

ಅಣ್ಣಿಗೇರಿ: ತಾಲೂಕಿನ ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ, ರೈತರು ಇದರ ಸದೋಪಯೋಗ ಪಡಿಸಿಕೊಳ್ಳಲು ಶಾಸಕ ಎನ್‌. ಎಚ್. ಕೋನರೆಡ್ಡಿ ತಿಳಿಸಿದರು. ಈ ಸಂದರ್ಭದಲ್ಲಿ ಕೆ. ಸಿ. ಸಿ. ಬ್ಯಾಂಕ್ ನ ಮಾಜಿ ಅಧ್ಯಕ್ಷ ಶ್ರೀ ಬಾಪೂಗೌಡ್ರ ಪಾಟೀಲ, ಸಹಕಾರಿ ದುರೀಣರದ ಬಸವಗೌಡ್ರ ಕುರಹಟ್ಟಿ, ವಿ. ಎಸ್. ಸೊಸೈಟಿಯ ಚೇರಮನ್ನರಾದ ನಿಜಗುಣೆಪ್ಪ ಅಕ್ಕಿ, ಉಪಸ್ಥಿತರಿದ್ದರು.

Read More »