Shaikh BigTv
September 14, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್‌ಟಾಪ್ ಕಳ್ಳತನ ಪ್ರಕರಣ ಇದೆಲ್ಲ ಮಿಲಾಪಿ ಕುಸ್ತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು. ಕಾರ್ಮಿಕ ಇಲಾಖೆಯ 101 ಲ್ಯಾಪ್ಟಾಪ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮಕ್ಕಳಿಗೆ ಹಂಚಿಕೆ ಮಾಡೋ ಲ್ಯಾಪ್‌ಟಾಪ್ ಎಲ್ಲಿ ಹೋದ್ವು? ಅವರೇ ಭಾಗಿಯಾಗಿರ್ತಾರೆ. ನಂತರ ದೂರು ಕೊಡ್ತಾರೆ. ಇದೆಲ್ಲ ಮಿಲಾಪಿ ಕುಸ್ತಿ ಎಂದರು. ನಿನ್ನೆ ಈ ವಿಚಾರ ದಿಶಾ ಸಭೆಯಲ್ಲೂ ಚರ್ಚೆ ಆಗಿದೆ. ಕಾರ್ಮಿಕ ಸಚಿವರ …
Read More »
Shaikh BigTv
September 14, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಶಾಸಕ ಮುನಿರತ್ನ ಅವರನ್ನ ಪಕ್ಷದಿಂದ ಉಚ್ಛಾಟಿಸಿ ಎಂದು ಕಾಂಗ್ರೆಸ್ ಪಟ್ಟು ಹಿಡಿದ ವಿಚಾರಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಆಕ್ಷೇಪ ವ್ಯಕ್ತಪಡಿಸಿದರು. ಬಿಬಿಎಂಪಿ ಗುತ್ತಿಗೆದಾರನಿಗೆ ಮುನಿರತ್ನ ಬೆದರಿಕೆ ಆರೋಪ ಹಾಗೂ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು, ನೋಡ್ರಿ ಕಾಂಗ್ರೆಸ್ ನವರಿಗೆ ಕೆಲಸ- ಬಗಸಿ ಇಲ್ಲ. ಅವ್ರನ್ನ ಉಚ್ಚಾಟನೆ ಮಾಡಿ ಇವ್ರನ್ನ ಉಚ್ಚಾಟನೆ ಮಾಡಿ ಅಂತ ಹೇಳ್ತಾ ಇದ್ದಾರೆ. ಹಾಗಾದರೆ ರಾಹುಲ್ ಗಾಂಧಿ ದಲಿತರ ಮೀಸಲಾತಿ ತೆಗೆದು ಹಾಕುವ …
Read More »
Shaikh BigTv
September 14, 2024
Breaking News, ಧಾರವಾಡ
ನವಲಗುಂದ: ನಗರದ ಪುರಸಭೆಯಲ್ಲಿ ಇರುವ ಜನನ ಮತ್ತು ಮರಣ ವಿಭಾಗದ ಅಧಿಕಾರಿಗಳ ಕಣ್ಣು ತಪ್ಪಿ ಈ ಕೆಲಸ ನಡೆದಿದೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುರಸಭೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ. ನಮ್ಮ ಪುರಸಭೆ ಸದಸ್ಯರಿಗೆ ಈಗಾಗಲೇ ನಾನು ಸೂಕ್ತ ಮಾಹಿತಿ ಇಲ್ಲದೆ ಸಹಿ ಮಾಡಬಾರದು ಎಂದು ತಾಕೀತು ಮಾಡಿದ್ದೇನೆ ಎಂದರು.
Read More »
Shaikh BigTv
September 14, 2024
Breaking News, ಧಾರವಾಡ
ನವಲಗುಂದ: ಪಟ್ಟಣದ ಪುರಸಭೆ ಅಧಿಕಾರಿಗಳು ಜೀವಂತ ಇದ್ದ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ಕುರಿತು ಜಿಲ್ಲಾಧಿಕಾರಿ ದಿವ್ಯಪ್ರಭು ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಈಗಾಗಲೇ ಪುರಸಭೆ ಮುಖ್ಯಾಧಿಕಾರಿಯೊಂದಿಗೆ ಚರ್ಚೆ ಮಾಡಿದ್ದೇನೆ. ತನಿಖಾ ತಂಡ ರಚಿಸಿ, ಈ ಪ್ರಕರಣದಲ್ಲಿ ಭಾಗಿ ಆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
Read More »
Shaikh BigTv
September 14, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಬಂದಾಗ ದೇಶ ದ್ರೋಹ ಕೃತ್ಯಗಳು ಸರ್ವೇ ಸಾಮಾನ್ಯವಾಗಿದೆ. ಗಣಪತಿ ಪ್ರತಿಷ್ಠಾಪನೆ ಮಾಡಿದವರನ್ನು ಎ-1 ಆರೋಪಿ ಮಾಡಿದ್ದು, ಎಸ್.ಪಿ ಗೆ ಹಾಗೂ ಗೃಹ ಸಚಿವರಿಗೆ ನಾಚಿಕೆ ಮಾನ ಮರ್ಯಾದೆಯೇ ಇಲ್ಲವಾಗಿದ್ದು, ರಾಜ್ಯವನ್ನು ಪಾಕಿಸ್ತಾನ ಮಾಡಿದ್ದೀರಾ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ದೇಶದಲ್ಲಿ ಯುಪಿಎ ಕಾಲದಲ್ಲಿ ಯಾವ ರೀತಿ ಭ್ರಷ್ಟಾಚಾರ ಆಗಿತ್ತೋ ಅದೇ ರೀತಿ ಇಲ್ಲೂ ಸೀರಿಸ್ …
Read More »
BigTv News
September 14, 2024
Breaking News
ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಯ ಉಸಿರು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ, ದೇಶದ ಈ ಸುಂದರ ನಾಡನ್ನು ಹಾಳುಮಾಡಿದ ವಂಶ ರಾಜಕಾರಣಿಗಳ ವಿರುದ್ಧ ತಮ್ಮ ಸರ್ಕಾರ ಹೊಸ ನಾಯಕತ್ವವನ್ನು ಬಿಂಬಿಸುತ್ತಿದೆ ಎಂದು ಹೇಳಿದ್ದಾರೆ. ಜಮ್ಮುಕಾಶ್ಮೀರ ವಿಧಾನಸಭೆ ಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ದೋಡಾ ಜಿಲ್ಲೆಯಲ್ಲಿ ಇಂದು ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಾವು ಮತ್ತು ನೀವು ಒಟ್ಟಾಗಿ ಜಮ್ಮು ಕಾಶ್ಮೀರವನ್ನು …
Read More »
BigTv News
September 14, 2024
Breaking News
ನವದೆಹಲಿ: ವಿಶ್ವದ ಅತಿದೊಡ್ಡ ಖಾದ್ಯ ತೈಲ ಆಮದುದಾರ ದೇಶ ಎನಿಸಿಕೊಂಡಿರುವ ಭಾರತ ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಮೂಲ ಆಮದು ತೆರಿಗೆಯನ್ನು ಶೇ. 20ರಷ್ಟು ಹೆಚ್ಚಿಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಸ್ಥಳೀಯ ರೈತರನ್ನು ಬೆಂಬಲಿಸಲು ಈ ಕ್ರಮ ಕೈಗೊಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಕ್ರಮದಿಂದ ಆಮದು ಮಾಡಿಕೊಳ್ಳುವ ಅಡುಗೆ ಎಣ್ಣೆ ಬೆಲೆ ಹೆಚ್ಚಿ ಬೇಡಿಕೆ ಕಡಿಮೆಯಾಗುತ್ತದೆ. ಕ್ರಮೇಣ ತಾಳೆ ಎಣ್ಣೆ, ಸೋಯಾಬೀನ್ …
Read More »
BigTv News
September 14, 2024
Breaking News, ಧಾರವಾಡ
ಧಾರವಾಡ: ದೇಶದ ಟಾಪ್ ಟೆನ್ ಕೃಷಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳವನ್ನು ಇದೇ ಸೆಪ್ಟೆಂಬರ್ 21ರಿಂದ 24 ರವರೆಗೆ ನಡೆಸಲಾಗುತ್ತಿದೆ ಎಂದು ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ್ ಹೇಳಿದರು. ಕೆವಿವಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ವಿಷಯದ ಮೇಲೆ ಕೃಷಿ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ …
Read More »
BigTv News
September 14, 2024
Breaking News, ತುಮಕೂರು
ತುಮಕೂರು: ನಂದಿನಿ ಹಾಲಿನ ಮಾರಾಟ ದರವನ್ನು ಲೀಟರ್‌ಗೆ ₹5 ಹೆಚ್ಚಳ ಮಾಡುವ ಪ್ರಸ್ತಾಪವಿದ್ದು, ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಶನಿವಾರ ತಿಳಿಸಿದರು. ಹಾಲಿನ ದರ ಹೆಚ್ಚಳ ಮಾಡಿದ ಸಂಪೂರ್ಣ ಹಣವನ್ನು ರೈತರಿಗೆ ವರ್ಗಾಯಿಸಲಾಗುವುದು, ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಚರ್ಚಿಸಿದ್ದು, ಬೆಲೆ ಹೆಚ್ಚಳ ಮಾಡಲು ಸಮ್ಮತಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ದೇಶದ ಯಾವುದೇ ರಾಜ್ಯದಲ್ಲೂ ಇಷ್ಟೊಂದು ಕಡಿಮೆ ಬೆಲೆ …
Read More »
BigTv News
September 14, 2024
Breaking News, ಅಮೆರಿಕ
ಅಮೇರಿಕ: ಯುಎಸ್ ಸೈನ್ಯದೊಂದಿಗೆ ಭಾರತೀಯ ಸೇನೆ ಯುದ್ಧಾಭ್ಯಾಸ ನಡೆಸುತ್ತಿದ್ದು, ಮೈನವಿರೇಳಿಸುವ ಈ ಜಂಟಿ ಸಮರಾಭ್ಯಾಸದ ದೃಶ್ಯಗಳನ್ನು ಭಾರತೀಯ ಸೇನೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇನ್ನು ಈ ಜಂಟಿ ಯುದ್ದಾಭ್ಯಾಸದಿಂದ ಎರಡು ಸೈನ್ಯಗಳ ನಡುವಿನ ಬಾಂಧವ್ಯ ಬಲಪಡಿಸುತ್ತದೆ. ಭಾರತ ಯುಎಸ್‌ಎ ಜಂಟಿ ಮಿಲಿಟರಿ ವ್ಯಾಯಾಮದ 20 ನೇ ಆವೃತ್ತಿಯ ಯುದ್ಧ ಅಭ್ಯಾಸವು ರಾಜಸ್ಥಾನದ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿರುವ ವಿದೇಶಿ ತರಬೇತಿ ನೋಡ್‌ನಲ್ಲಿ ಪ್ರಾರಂಭಗೊಂಡಿದೆ. ಈ ಯುದ್ಧ ಅಭ್ಯಾಸವು ಸೆಪ್ಟೆಂಬರ್ …
Read More »