Shaikh BigTv
September 14, 2024
Breaking News, ಧಾರವಾಡ
ನವಲಗುಂದ : ತಾಲೂಕಿನ ಕಾಲವಾಡ ಗ್ರಾಮದ ಕ್ರಾಸ್‌ನಲ್ಲಿ ಬಸ್ ನಿಲುಗಡೆಗಾಗಿ ಆಗ್ರಹಿಸಿ ಕಾಲವಾಡ ಗ್ರಾಮದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಟ್ರ್ಯಾಕ್ಟರ್‌ಗಳಲ್ಲಿ ನವಲಗುಂದಕ್ಕೆ ಬಂದು ತಹಶೀಲ್ದಾರ್ ಕಾರ್ಯಾಲಯದ ಎದುರಿಗೆ ಕೆಲ ಕಾಲ ಪ್ರತಿಭಟನೆ ನಡೆಸಿದರು. ತಾಲೂಕು ಕೇಂದ್ರದಿಂದ 12ಕಿ. ಮೀ ದೂರದಲ್ಲಿರುವ ಕಾಲವಾಡ ಗ್ರಾಮದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆ, ಕಾಲೇಜುಗಳಿಗೆ ತೆರಳಲು ಅನುಕೂಲವಾಗುವಂತೆ ಗ್ರಾಮದಿಂದ 2 ಕಿ.ಮೀ ದೂರದಲ್ಲಿರುವ ಕಾಲವಾಡ ಕ್ರಾಸ್‌ನಲ್ಲಿ ಬಸ್ ನಿಲುಗಡೆ ಮಾಡದಿರುವುದರಿಂದ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಕಾರರು …
Read More »
Shaikh BigTv
September 14, 2024
Breaking News, ಧಾರವಾಡ
ಧಾರವಾಡ: ಪ್ರಸಕ್ತ ವರ್ಷ ಕೂಡ ಈ ರೈತರ ಜಾತ್ರೆ ಸೆಪ್ಟೆಂಬರ್ 21 ರಿಂದ ಆರಂಭಗೊಳ್ಳಲಿದೆ. ಸೆ.21 ರಂದು ಬೀಜ ಮೇಳ ಆರಂಭವಾದರೆ ಸೆ.22ಕ್ಕೆ ಕೃಷಿ ಮೇಳಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಈ ಕೃಷಿ ಮೇಳದ ಉದ್ಘಾಟನೆಗೆ ಆಗಮಿಸಲಿದ್ದಾರೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ಹೇಳಿದರು. ಪ್ರಸಕ್ತ ವರ್ಷ ಈ ಕೃಷಿ ಮೇಳವನ್ನು ಹವಾಮಾನ ವೈಪರಿತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಎಂಬ …
Read More »
Shaikh BigTv
September 14, 2024
Breaking News, ಧಾರವಾಡ
ಧಾರವಾಡ:ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಪ್ರಜೆಯೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ನಾರ್ಕೋಟಿಕ್ ಕಂಟ್ರೋಲ್ ಬ್ಯುರೋ ಅಧಿಕಾರಿಗಳು ಧಾರವಾಡದಲ್ಲಿ ಆತ ಇದ್ದ ಮನೆಯಲ್ಲಿ ಪರಿಶೀಲನೆ ನಡೆಸಿದರು. ನೈಜೀರಿಯಾ ಮೂಲದ ಈ ವ್ಯಕ್ತಿ ಧಾರವಾಡ ಮಾಳಮಡ್ಡಿ ಬಡಾವಣೆಯೊಂದರಲ್ಲಿ ಹಲವು ವರ್ಷಳಿಂದ ವಾಸವಾಗಿದ್ದ. ಅಲ್ಲಿದ್ದುಕೊಂಡೇ ಹೆಣ್ಣು ಮಕ್ಕಳ ಪರ್ಸ್ ಮಾರಾಟ ಮಾಡುವ ನೆಪದಲ್ಲಿ ಕೊಕೆನ್ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆತನ ಮನೆಯಲ್ಲಿ ಕೊಕೆನ್ ತೂಕ ಮಾಡುವ …
Read More »
Shaikh BigTv
September 14, 2024
Breaking News, ಧಾರವಾಡ
ನವಲಗುಂದ: ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ನವಲಗುಂದ ತಾಲೂಕಿನ ಹನಸಿ ಗ್ರಾಮದ ಬಸವರಾಜ ವಡ್ಡರ ಅವರು 80 ಕೆಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿ ಬಂಗಾರದ ಪದಕ ಮುಡಿಗೇರಿಸಿಕೊಂಡಿದ್ದಾರೆ. ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾರತ ದೇಶದ ಪರವಾಗಿ 80 ಕೆಜಿ ವಿಭಾಗದ 30 ವರ್ಷ ವಯಸ್ಸಿನ ಒಳಗಿನ ಕುಸ್ತಿ ಪಂದ್ಯಾವಳಿಯಲ್ಲಿ ಬಂಗಾರದ ಪದಕವನ್ನು ಗೆದ್ದು ದೇಶದ, ನಾಡಿನ ಹಿರೇಮೆ ಜೊತೆಗೆ ರೈತ ಬಂಡಾಯ ನಾಡಿನ ಕೀರ್ತಿ …
Read More »
Shaikh BigTv
September 14, 2024
Breaking News
ಬೆಂಗಳೂರು : ವಾರ್ತಾ ಇಲಾಖೆಯ ಆಯುಕ್ತರಾಗಿ ಸಾಕಷ್ಟು ಜನಪ್ರೀಯ ಕಾರ್ಯವನ್ನು ಮಾಡಿರುವ ಖಡಕ್ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಳರ್ ಅವರು ಗುಪ್ತಚರ ಇಲಾಖೆ ಮುಖ್ಯಸ್ಥರಾಗಿ (ಇಂಟಲಿಜೆನ್ಸ್ ಎಡಿಜಿಪಿ) ಹೇಮಂತ್ ನಿಂಬಾಳ್ಳರ್ ನೇಮಕವಾಗಿದ್ದಾರೆ. ಇನ್ನೂ ವಾರ್ತಾ ಇಲಾಖೆ ಆಯುಕ್ತರಾಗಿದ್ದ ನಿಂಬಾಳ್ಳರ್ ಗುಪ್ತಚರ ಇಲಾಖೆ ಎಡಿಜಿಪಿ ಆಗಿ ನೇಮಕಗೊಂಡಿದ್ದು, ಈ ಹಿಂದೆ ಕೂಡ ಸಾಕಷ್ಟು ಸಮಾಜಮುಖಿ ಕಾರ್ಯದ ಮೂಲಕ ಜನಮಾನಸದಲ್ಲಿ ಮನೆ ಮಾಡಿರುವ ಖಡಕ್ ಆಫೀಸರ್ ಎಂದೆ ಖ್ಯಾತಿ ಪಡೆದಿದ್ದಾರೆ. ಇನ್ನೂ ಕೆವಿ …
Read More »
Shaikh BigTv
September 14, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್‌ಟಾಪ್ ಕಳ್ಳತನ ಪ್ರಕರಣ ಇದೆಲ್ಲ ಮಿಲಾಪಿ ಕುಸ್ತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು. ಕಾರ್ಮಿಕ ಇಲಾಖೆಯ 101 ಲ್ಯಾಪ್ಟಾಪ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮಕ್ಕಳಿಗೆ ಹಂಚಿಕೆ ಮಾಡೋ ಲ್ಯಾಪ್‌ಟಾಪ್ ಎಲ್ಲಿ ಹೋದ್ವು? ಅವರೇ ಭಾಗಿಯಾಗಿರ್ತಾರೆ. ನಂತರ ದೂರು ಕೊಡ್ತಾರೆ. ಇದೆಲ್ಲ ಮಿಲಾಪಿ ಕುಸ್ತಿ ಎಂದರು. ನಿನ್ನೆ ಈ ವಿಚಾರ ದಿಶಾ ಸಭೆಯಲ್ಲೂ ಚರ್ಚೆ ಆಗಿದೆ. ಕಾರ್ಮಿಕ ಸಚಿವರ …
Read More »
Shaikh BigTv
September 14, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಶಾಸಕ ಮುನಿರತ್ನ ಅವರನ್ನ ಪಕ್ಷದಿಂದ ಉಚ್ಛಾಟಿಸಿ ಎಂದು ಕಾಂಗ್ರೆಸ್ ಪಟ್ಟು ಹಿಡಿದ ವಿಚಾರಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಆಕ್ಷೇಪ ವ್ಯಕ್ತಪಡಿಸಿದರು. ಬಿಬಿಎಂಪಿ ಗುತ್ತಿಗೆದಾರನಿಗೆ ಮುನಿರತ್ನ ಬೆದರಿಕೆ ಆರೋಪ ಹಾಗೂ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು, ನೋಡ್ರಿ ಕಾಂಗ್ರೆಸ್ ನವರಿಗೆ ಕೆಲಸ- ಬಗಸಿ ಇಲ್ಲ. ಅವ್ರನ್ನ ಉಚ್ಚಾಟನೆ ಮಾಡಿ ಇವ್ರನ್ನ ಉಚ್ಚಾಟನೆ ಮಾಡಿ ಅಂತ ಹೇಳ್ತಾ ಇದ್ದಾರೆ. ಹಾಗಾದರೆ ರಾಹುಲ್ ಗಾಂಧಿ ದಲಿತರ ಮೀಸಲಾತಿ ತೆಗೆದು ಹಾಕುವ …
Read More »
Shaikh BigTv
September 14, 2024
Breaking News, ಧಾರವಾಡ
ನವಲಗುಂದ: ನಗರದ ಪುರಸಭೆಯಲ್ಲಿ ಇರುವ ಜನನ ಮತ್ತು ಮರಣ ವಿಭಾಗದ ಅಧಿಕಾರಿಗಳ ಕಣ್ಣು ತಪ್ಪಿ ಈ ಕೆಲಸ ನಡೆದಿದೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುರಸಭೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ. ನಮ್ಮ ಪುರಸಭೆ ಸದಸ್ಯರಿಗೆ ಈಗಾಗಲೇ ನಾನು ಸೂಕ್ತ ಮಾಹಿತಿ ಇಲ್ಲದೆ ಸಹಿ ಮಾಡಬಾರದು ಎಂದು ತಾಕೀತು ಮಾಡಿದ್ದೇನೆ ಎಂದರು.
Read More »
Shaikh BigTv
September 14, 2024
Breaking News, ಧಾರವಾಡ
ನವಲಗುಂದ: ಪಟ್ಟಣದ ಪುರಸಭೆ ಅಧಿಕಾರಿಗಳು ಜೀವಂತ ಇದ್ದ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ಕುರಿತು ಜಿಲ್ಲಾಧಿಕಾರಿ ದಿವ್ಯಪ್ರಭು ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಈಗಾಗಲೇ ಪುರಸಭೆ ಮುಖ್ಯಾಧಿಕಾರಿಯೊಂದಿಗೆ ಚರ್ಚೆ ಮಾಡಿದ್ದೇನೆ. ತನಿಖಾ ತಂಡ ರಚಿಸಿ, ಈ ಪ್ರಕರಣದಲ್ಲಿ ಭಾಗಿ ಆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
Read More »
Shaikh BigTv
September 14, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಬಂದಾಗ ದೇಶ ದ್ರೋಹ ಕೃತ್ಯಗಳು ಸರ್ವೇ ಸಾಮಾನ್ಯವಾಗಿದೆ. ಗಣಪತಿ ಪ್ರತಿಷ್ಠಾಪನೆ ಮಾಡಿದವರನ್ನು ಎ-1 ಆರೋಪಿ ಮಾಡಿದ್ದು, ಎಸ್.ಪಿ ಗೆ ಹಾಗೂ ಗೃಹ ಸಚಿವರಿಗೆ ನಾಚಿಕೆ ಮಾನ ಮರ್ಯಾದೆಯೇ ಇಲ್ಲವಾಗಿದ್ದು, ರಾಜ್ಯವನ್ನು ಪಾಕಿಸ್ತಾನ ಮಾಡಿದ್ದೀರಾ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ದೇಶದಲ್ಲಿ ಯುಪಿಎ ಕಾಲದಲ್ಲಿ ಯಾವ ರೀತಿ ಭ್ರಷ್ಟಾಚಾರ ಆಗಿತ್ತೋ ಅದೇ ರೀತಿ ಇಲ್ಲೂ ಸೀರಿಸ್ …
Read More »