Breaking News

Breaking News

ಕೇಂದ್ರ ಸಚಿವ ಹಾಗೂ ಸಂಸದ ಪ್ರಲ್ಹಾದ ಜೋಶಿ ಅಧ್ಯಕ್ಷತೆಯಲ್ಲಿ 13ರಂದು ಎಸ್.ದಿಶಾ ಸಮಿತಿ ಸಭೆ

ಧಾರವಾಡ : ದಿಶಾ ಸಮಿತಿ ಅಧ್ಯಕ್ಷರು, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ಹಾಗೂ ಧಾರವಾಡ ಲೋಕಸಭಾ ಸದಸ್ಯ ಪ್ರಲ್ಹಾದ ಜೋಶಿ ಅವರನ್ನು ಸೆಪ್ಟೆಂಬರ್ 13, 2024 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಆಯೋಜಿಸಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪ ಟಿ ಕೋರಿದ್ದಾರೆ. …

Read More »

ಜೈವಿಕ ತಂತ್ರಜ್ಞಾನ ನೀತಿ ಪ್ರಕಟ: ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ

ಬೆಂಗಳೂರು: ರಾಜ್ಯವನ್ನು ಜಾಗತಿಕ ಜೈವಿಕ ತಂತ್ರಜ್ಞಾನ ಉತ್ಪಾದನಾ ಕೇಂದ್ರವನ್ನಾಗಿಸುವ ಗುರಿ ಹೊಂದಲಾಗಿದ್ದು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ 2024 -29 ನೇ ಸಾಲಿನ ಜೈವಿಕ ತಂತ್ರಜ್ಞಾನ ನೀತಿಯನ್ನು ಪ್ರಕಟಿಸಿದೆ. ಇದರೊಂದಿಗೆ 2029ರ ವೇಳೆಗೆ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ 30,000 ಉದ್ಯೋಗ ಸೃಷ್ಟಿ, 20,000 ಜನರಿಗೆ ವಿಶೇಷ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಲಾಗಿದೆ ರಾಜ್ಯದ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ನವೋದ್ಯಮ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ …

Read More »

ಪಜ್ರಾಪ್ರಭುತ್ವ ಎಲ್ಲರೂ ಸೇರಿ ಸಂಭ್ರಮಿಸೋಣ: ಸಚಿವ ಸಂತೋಷ ಲಾಡಲ

ಧಾರವಾಡ : ರಾಜ್ಯ ಸರಕಾರವು ಸೆಪ್ಟೆಂಬರ್ 15 ರ ಪ್ರಜಾಪ್ರಭುತ್ವದಿವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದು, ಎಲ್ಲರೂ ಸೇರಿ ಸಂಭ್ರಮಿಸೋಣ. ಪ್ರತಿ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಪ್ರಜಾಪ್ರಭುತ್ವದಿನದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು. ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಅಧಿಕಾರಿಗಳ ಮತ್ತು ವಿವಿಧ ಸರ್ಕಾರೇತರ …

Read More »

ಶಿಕ್ಷಕ ಸಮೂಹ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಘಟ್ಟದಲ್ಲಿದೆ: ಸಚಿವ ಸಂತೋಷ ಲಾಡ್

ಧಾರವಾಡ : ಇಂದಿನ ಶೈಕ್ಷಣಿಕ ಪ್ರಗತಿ, ಗುಣಮಟ್ಟವನ್ನು ಪರಿಶೀಲಿಸಿದಾಗ, ಇಡೀ ಶಿಕ್ಷಕ ಸಮೂಹ ತಮ್ಮ ಆದರ್ಶತನ ಮತ್ತು ಕಾಯಕ ವೃತ್ತಿ ಮೌಲ್ಯಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಘಟ್ಟದಲ್ಲಿದೆ. ರಾಜಕಾರಣಿಗಳ ಹಿಂಬಾಲಕರಾಗದೇ, ಅನಗತ್ಯ ತುಷ್ಟೀಕರಣ, ಓಲೈಕೆಗಳನ್ನು ಮಾಡದೇ, ಪೂಜ್ಯನೀಯ ಗುರು ಸ್ಥಾನದಲ್ಲಿರುವ ಶಿಕ್ಷಕರು ಬಸವಣ್ಣ, ಅಂಬೇಡ್ಕರ, ರಾಧಾಕೃಷ್ಣನ್ ಅವರು ಹೇಳಿದ ನೀತಿ ಮಾರ್ಗದಲ್ಲಿ ನಡೆದು ಶೈಕ್ಷಣಿಕ ಬದಲಾವಣೆ, ಆತ್ಮ ಸಂಸ್ಕಾರ ನೀಡುವ ಶಿಕ್ಷಣ ನೀಡುವಂತೆ ಆಗಬೇಕೆಂದು ಕಾರ್ಮಿಕ ಇಲಾಖೆ ಹಾಗೂ …

Read More »

ಭಾರತದ ಅಗ್ನಿ 4 ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷೆ ಯಶಸ್ವಿ

ನವದೆಹಲಿ : ಒಡಿಶಾ ಕರಾವಳಿಯ ಚಂಡೀಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಭಾರತ ಶುಕ್ರವಾರ ಅಗ್ನಿ 4 ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಪರೀಕ್ಷೆಯಲ್ಲಿ ಅಗ್ನಿ ಕ್ಷಿಪಣಿ ನಿಗದಿತ ಮಾನದಂಡಗಳನ್ನು ಪೂರೈಸಿದೆ ಇದು ವಾಡಿಕೆಯ ತರಬೇತಿ ಉಡಾವಣೆಯಾಗಿದೆ ಎಂದು ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಹೇಳಿದೆ. ಇದರಲ್ಲಿ ಎಲ್ಲಾ ಕಾರ್ಯಾಚರಣೆಯ ನಿಯತಾಂಕಗಳನ್ನು ಮರು ಪರಿಶೀಲಿಸಲಾಗಿದೆ. ಭಾರತವು ಈ ಪರೀಕ್ಷೆಯ ಮೂಲಕ ತನ್ನ ವಿಶ್ವಾಸಾರ್ಹ ಕನಿಷ್ಠ ನಿರೋಧಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುತ್ತದೆ …

Read More »

ಜೈ ಭೀಮ್ ಬ್ರಿಗೇಡ್ ವತಿಯಿಂದ ಸಂವಿಧಾನ ಓದು ಅಭಿಯಾನ ಪುಸ್ತಕ ಯಶಸ್ವಿ

ಹುಬ್ಬಳ್ಳಿ: ಡಾ. ಬಿ ಆರ್ ಅಂಬೇಡ್ಕರ್ ಅವರ ರಚನೆ ಮಾಡಿರುವ ಭಾರತ ಸಂವಿಧಾನ ಓದು ಅಭಿಯಾನ ಪುಸ್ತಕ ಪೂರೈಸುವ ಕಾರ್ಯಕ್ರಮವನ್ನು ಧಾರವಾಡ ಜಿಲ್ಲೆಯಾದ್ಯಂತ ಜೈ ಭೀಮ್ ಬ್ರಿಗೇಡ್‌ ಸಂಘಟನೆಯಿಂದ ಹಮ್ಮಿಕೊಂಡಿದ್ದು, ಈಗ ಸಂವಿಧಾನ ಓದು ಅಭಿಯಾನ ಯಶಸ್ವಿಗೊಂಡಿದೆ. ಜೈ ಭೀಮ್ ಬ್ರಿಗೇಡ್‌ ಸಂಘಟನೆಯ ಸಂಸ್ಥಾಪಕ ಬಿ. ಶಿವಕುಮಾ‌ರ್ ಅವರ ನೇತೃತ್ವದಲ್ಲಿ, ಸಂವಿಧಾನ ಓದು ಅಭಿಯಾನ ಪುಸ್ತಕಗಳನ್ನು ಸುಮಾರು ಮೂರು ವರ್ಷಗಳಿಂದ ನೂರಾರು ಪುಸ್ತಕಗಳನ್ನು ಪೂರೈಸುತ್ತ ಬಂದಿದ್ದಾರೆ.

Read More »

ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಶಿಕ್ಷಕರ ದಿನ ಆಚರಣೆ

ಹುಬ್ಬಳ್ಳಿ: ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿಂದು ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ ಮಹಾದೇವಪ್ಪನವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿಗಳಾದ (BEO) ಉಮೇಶ ಬೊಮ್ಮಕ್ಕನವರ, ಚುಳಕಿ, ಹೂಡಾ ಅಧ್ಯಕ್ಷರಾದ ಶಾಕಿರ ಸಣದಿ, ಹು-ಧಾ ಪೂಜಾ ಮಹಾಪೌರರಾದ ರಾಮಣ್ಣ ಬಡಿಗೇರ, ಪಾಲಿಕೆ ಸದಸ್ಯರಾದ ಎಂ ವೈ ನರಗುಂದ, ಬಿಜೆಪಿ ಮುಖಂಡರಾದ ಕಲಂದರ ಮುಲ್ಲಾ, ವೈ, ಎಚ್, ಬಣವಿ, ಶ್ರೀ …

Read More »

ಮಹದಾಯಿ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ ಜೋಶಿ

ಹುಬ್ಬಳ್ಳಿ: ರಾಜ್ಯ ಸರ್ಕಾರ ಕಳಸಾ ಬಗ್ಗೆ ಇದುವರೆಗೂ ಪ್ರಪೋಸಲ್ ಕಳಿಸಿಯೇ ಇಲ್ಲಾ. ಬಂದಾಗೆಲ್ಲ ಮಹದಾಯಿ ವಿಚಾರವನ್ನು ಮಾತನಾಡಿಲ್ಲ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಮಹದಾಯಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವನ್ಯಜೀವಿ ಮಂಡಳಿಯವರು ಈ ವಿಷಯದಲ್ಲಿ ಪ್ರತಿಕ್ರಿಯೆ ಕೊಡಬೇಕಿತ್ತು. ರಾಜ್ಯ ಸರ್ಕಾರ ಕಳಸಾ ಬಗ್ಗೆ ಇದುವರೆಗೂ ಪ್ರಪೋಸಲ್ ಕಳಿಸಿಯೇ ಇಲ್ಲಾ. ಬಂಡೂರಾ ಬಗ್ಗೆ ಒಂದು ಪ್ರಪೋಸಲ್ ಇದೆ. ಉಳಿದೆಲ್ಲ ಸಂಗತಿಯನ್ನು ನಾವು ಬಿಜೆಪಿ ಅವರು ಮಾಡಿದ್ದೇವೆ …

Read More »

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಡಿಪ್ಲೊಮಾ ಅತ್ಯಗತ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ : ಮಹತ್ವದ ತೀರ್ಪಿನಲ್ಲಿ, ಭಾರತದ ಸರ್ವೋಚ್ಚ ನ್ಯಾಯಾಲಯವು ಶಿಕ್ಷಣದಲ್ಲಿ ಪದವಿ (ಬಿ.ಎಡ್) ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾನ್ಯವಾದ ಅರ್ಹತೆ ಅಲ್ಲ, ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಡಿಪ್ಲೊಮಾ ಅತ್ಯಗತ್ಯ ಅರ್ಹತೆ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ದೇವೇಶ್ ಶರ್ಮಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಹಿಂದಿನ ತೀರ್ಪನ್ನು ಉಳಿಸಿಕೊಂಡು ತೀರ್ಪು ನೀಡಿದೆ …

Read More »

ಮಹದಾಯಿ ಯೋಜನೆಗೆ ಭಾರೀ ಹಿನ್ನಡೆ ಆಗಿದೆ : ಸಚಿವ ಎಚ್ ಕೆ ಪಾಟೀಲ್

ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿಯಲ್ಲಿ ವನ್ಯ ಮಂಡಳಿ ತಿರಸ್ಕಾರ ವಿಚಾರ, ಸಚಿವ ಸಂಪುಟದಲ್ಲಿ ಈ ಕುರಿತು ಸುದೀರ್ಘವಾದ ಚರ್ಚೆ ಆಗಿದೆ. ಮಹದಾಯಿ ಯೋಜನೆಗೆ ಭಾರೀ ಹಿನ್ನಡೆ ಆಗಿದೆ. ಕೇಂದ್ರ ಸರ್ಕಾರದ ವನ್ಯಜೀವಿ ಮಂಡಳಿ ಮುಂದೆ ಸಹ ಹಾಕಲಾಗಿದೆ. ಕರ್ನಾಟಕಕ್ಕೆ ಮಾಡಿದ ದೊಡ್ಡ ಅನ್ಯಾಯ ಇದು. ಅರಣ್ಯ ಇಲಾಖೆಯವರು ಈಗಾಗಲೇ ಅನುಮತಿ ಕೊಡಲು ಸಿದ್ಧರಿದ್ದರು. ಆದರೆ, ಕೇಂದ್ರ ಸರ್ಕಾರದವರು 10 ವರ್ಷಗಳಿಂದ ಕಾಟ ಕೊಡ್ತಾ ಬಂದಿದ್ದಾರೆಂದು ಹುಬ್ಬಳ್ಳಿಯಲ್ಲಿ ಕಾನೂನು ಸಚಿವ ಎಚ್ …

Read More »