Shaikh BigTv
September 5, 2024
Breaking News, ಧಾರವಾಡ
ನವಲಗುಂದ: ಕಳೆದ 15ತಿಂಗಳಿಂದ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟಣೆ ವಿಳಂಬದಿಂದಾಗಿ ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿ ಇಲ್ಲದೇ ಪುರಸಭೆ ಇಷ್ಟು ದಿನ ಉಪವಿಭಾಗಾಧಿಕಾರಿಗಳ ಹಿಡಿತದಲ್ಲಿ ಇತ್ತು. ಆದರೆ ಜಿಲ್ಲಾಡಳಿತ ಚುನಾವಣೆ ದಿನಾಂಕ ಘೋಷಣೆ ಮಾಡಿದ ಹಿನ್ನಲೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೀಸಲಾತಿಯಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಒಟ್ಟು 23ಚುನಾಯಿತ ಪ್ರತಿನಿಧಿಗಳ ಪೈಕಿ ಕಾಂಗ್ರೆಸ್ 16 …
Read More »
BigTv News
September 5, 2024
Breaking News, ಮೈಸೂರು
ಮೈಸೂರು: ವಿಶ್ವ ವಿಖ್ಯಾತ ದಸರಾ ಅದ್ದೂರಿ ಆಚರಣೆಗೆ ರಚಿಸಿರುವ 19 ಉಪಸಮಿತಿಗಳ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌ಸಿ ಮಹದೇವಪ್ಪ ತಿಳಿಸಿದರು. ಅರಮನೆ ಸಭಾಂಗಣದಲ್ಲಿ ಹಮಿ ಕೊಂಡಿದ್ದ ದಸರಾ ಉಪಸಮಿತಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಎಲ್ಲಾ ಸಮಿತಿಯ ಅಧಿಕಾರಿಗಳು ಸೂಕ್ತ ತಯಾರಿ ಮಾಡಿಕೊಂಡು ಅಚ್ಚುಕಟ್ಟಾಗಿ ದಸರಾ ಆಚರಣೆ ಮಾಡಬೇಕು ಎಂದು ಸೂಚಿಸಿದರು. ಸ್ತಬ್ಧ ಚಿತ್ರಗಳು ನಮ ಸಂಸ್ಕೃತಿಯನ್ನು ಬಿಂಬಿಸುವಂತೆ ಹಾಗೂ ಜನರಿಗೆ ಸಾಮಾಜಿಕ ಸಂದೇಶ ಸಾರುವಂತೆ …
Read More »
BigTv News
September 5, 2024
Breaking News
ನವದೆಹಲಿ: ಆಂತರಿಕ ಪ್ರತಿಭಟನೆ, ಸರ್ಕಾರ ಬದಲಾವಣೆಯಿಂದ ಆರ್ಥಿಕ ಕುಸಿತದಿಂದ ತತ್ತರಿಸಿ ಹೋಗಿದ್ದ ಬಾಂಗ್ಲಾದೇಶದ ನೆರವಿಗೂ ಕೊನೆಗೂ ಭಾರತ ಧಾವಿಸಿದ್ದು, ಉಭಯ ದೇಶಗಳ ನಡುವೆ ಸ್ಥಗಿತಗೊಂಡಿದ್ದ ವ್ಯಾಪಾರ ವಹಿವಾಟು ಪುನಾರಂಭಗೊಂಡಿದೆ. ಹಿಂಸಾಚಾರದಿಂದಾಗಿ 47 ದಿನಗಳ ಅನಿಶ್ಚಿತತೆಯ ನಂತರ, ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬೆನಾಪೋಲ್ ಬಂದಿರನ ಮೂಲಕ ವ್ಯಾಪಾರ ಪುನರಾರಂಭವಾಗಿದ್ದು, ಸರಬರಾಜು ಕೊರತೆ, ಹೆಚ್ಚಿನ ಹಣದುಬ್ಬರ ಮತ್ತು ಜೀವನೋಪಾಯ ನಷ್ಟದಿಂದಾಗಿ ತತ್ತರಿಸಿ ಹೋಗಿದ್ದ ಬಾಂಗ್ಲಾದೇಶದ ವ್ಯಾಪಾರಿಗಳು ಭಾರತದ ಈ ಕ್ರಮವನ್ನು ಸ್ವಾಗತಿಸಿದ್ದಾರೆ …
Read More »
BigTv News
September 5, 2024
Breaking News, ಮಂಡ್ಯ
ಶ್ರೀರಂಗಪಟ್ಟಣ: ಮನೆಯೊಂದರ ಗೋಡೆ ಕುಸಿದು ಮಹಿಳೆ ಮೃತಪಟ್ಟಿರುವ ಘಟನೆ ತಾಲ್ಲೂಕಿನ ನೆಲಮನೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಎನ್.ಸಿ. ರಾಜಕುಮಾರ್ ಅವರ ಪತ್ನಿ ಶಾಂತಮ್ಮ (45) ಮೃತಪಟ್ಟಿದ್ದಾರೆ. ಗ್ರಾಮದ ಬಳಿ ಹರಿಯುವ ವಿಶ್ವೇಶ್ವರಯ್ಯ ವಿತರಣಾ ನಾಲೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಶಾಂತಮ್ಮ ಅವರ ಮೇಲೆ 6 ಅಡಿ ಎತ್ತರದ, 20 ಅಡಿ ಉದ್ದದ ಗೋಡೆ ದಿಢೀರ್ ಕುಸಿದಿದೆ ಶಾಂತಮ್ಮ ಗೋಡೆಯ ಅವಶೇಷಗಳ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಬು ಎಂಬುವರ ಮನೆಯ ಗೋಡೆ …
Read More »
BigTv News
September 5, 2024
Breaking News, ತುಮಕೂರು
ತಿಪಟೂರು: ತಾಲ್ಲೂಕಿನ ಹಾಲ್ಕುರಿಕೆ, ಮಂಜುನಾಥಪುರ ಸುತ್ತಮುತ್ತಲಿನ ಪ್ರದೇಶದಲ್ಲಿನ ಶುಂಠಿ ಜಮೀನಿನಲ್ಲಿ ಜೀತದಾಳುಗಳಂತೆ, ಬಲವಂತವಾಗಿ ದುಡಿಯುತ್ತಿದ್ದ 36 ಕಾರ್ಮಿಕರನ್ನು ಪೊಲೀಸರು ಬುಧವಾರ ರಾತ್ರಿ ರಕ್ಷಿಸಿದ್ದಾರೆ. ಈ ಭಾಗದ ಕೆಲ ಪ್ರಭಾವಿಗಳು ರೈತರಿಂದ ನೂರಾರು ಎಕರೆ ಜಮೀನು ಗುತ್ತಿಗೆ ಪಡೆದು ಶುಂಠಿ ಬೆಳೆದಿದ್ದರು. ಮೈಸೂರು, ಚಾಮರಾಜನಗರ, ಕೊಳ್ಳೇಗಾಲ, ಬಳ್ಳಾರಿ, ವಿಜಯಪುರ ಸೇರಿ ವಿವಿಧ ಜಿಲ್ಲೆಗಳ ಕಾರ್ಮಿಕರಿಗೆ ಹೆಚ್ಚಿನ ಕೂಲಿ ಆಸೆ ತೋರಿಸಿ ಜಮೀನಿನಲ್ಲಿ ಕೆಲಸ ಮಾಡಲು ಕರೆ ತಂದಿದ್ದರು. ಅಗತ್ಯ ಸೌಲಭ್ಯ, ಕೂಲಿ …
Read More »
BigTv News
September 5, 2024
Breaking News
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿಯೂ ಲೈಂಗಿಕ ಕಿರುಕುಳ ಪ್ರಕರಣಗಳು ನಡೆದಿದ್ದು, ಚಿತ್ರರಂಗದ ಮಹಿಳೆಯರ ರಕ್ಷಣೆಗಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವಂತೆ ಫೈರ್ ಸಂಸ್ಥೆ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ನಟ ಚೇತನ್ ನೇತೃತ್ವದಲ್ಲಿ ಫೈರ್ ಸಂಸ್ಥೆಯ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೇರಳದಲ್ಲಿ ಹೇಮಾ ಸಮಿತಿಯಂತೆ ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ರಚಿಸುವಂತೆ ಮನವಿ ಮಾಡಿದರು. 150ಕ್ಕೂ ಹೆಚ್ಚು ನಟ ನಟಿಯರು, ತಂತ್ರಜ್ಞರು, ನಿರ್ದೇಶಕರು, ಸಾಹಿತಿಗಳ …
Read More »
BigTv News
September 5, 2024
Breaking News
ವಾಷಿಂಗ್ಟನ್: ಉತ್ತರ ಜಾರ್ಜಿಯಾದ ಪ್ರೌಢಶಾಲೆಯಲ್ಲಿ ನಡೆದ ಗುಂಡಿನ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ, ಒಂಬತ್ತು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಶಂಕಿತನನ್ನು 14 ವರ್ಷದ ಕೋಲ್ಟ್ ಗ್ರೇ ಎಂದು ಗುರುತಿಸಲಾಗಿದೆ. ಬಲಿಯಾದವರನ್ನು ಮೇಸನ್ ಶೆರ್ಮರ್‌ಹಾರ್ನ್ (14), ಕ್ರಿಶ್ಚಿಯನ್ ಅಂಗುಲೋ (14), ಮತ್ತು ಶಿಕ್ಷಕರಾದ ರಿಚರ್ಡ್ ಆಸ್ಪಿನ್‌ವಾಲ್ (39), ಮತ್ತು ಕ್ರಿಸ್ಟಿನಾ ಇರಿಮಿ (53), ಎಂದು ಗುರುತಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ಎಲ್ಲಾ ಒಂಬತ್ತು ಜನರಿಗೆ ಗಾಯಗಳಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಆಪಾದಿತ …
Read More »
Shaikh BigTv
September 5, 2024
Breaking News, ಧಾರವಾಡ
ಧಾರವಾಡ: ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅದರಂತೆ ರಾಜ್ಯ ಸರಕಾರವು ಅತ್ಯಂತ ವಿಶಿಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಆಚರಿಸಲು ನಿರ್ದೇಶಿಸಿದ್ದು, ಅಂದು ಬೀದರ್‍ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ತೇಗೂರ ಗ್ರಾಮದಿಂದ ಮಾವಿನಕೋಪ್ಪ ಗ್ರಾಮವರೆಗೆ ಸುಮಾರು 55 ಸಾವಿರ ಜನರಿಂದ ಮಾನವ ಸರಪಳಿ ನಿರ್ಮಿಸಲಾಗುತ್ತದೆ. ಈ ಕುರಿತು ಅಧಿಕಾರಿಗಳು ಪೂರ್ವ ಸಿದ್ದತೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ …
Read More »
Shaikh BigTv
September 5, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ರೇಣುಕಾ ನಗರದ ಬಾಲಮಾರುತಿ ದೇವಸ್ಥಾನದಲ್ಲಿ ಇಂದು ಮೇಯತ್ ರಾಮಣಗಣ ಬಡಗೇರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯತಾ ಅಭಿಯಾನವನ್ನು ಭೂತ್ ಮಟ್ಟದಲ್ಲಿ ಪ್ರಾರಂಭಿಸಲು ಸಭೆ ನಡೆಸಿದರು. ಈ ವೇಳೆಯಲ್ಲಿ ಸದಸ್ಯತಾ ಅಭಿಯಾನದ ಮಂಡಲ ಸಂಚಾಲಕರು ಹನುಮಂತ. ಹರಿವಾಣ ಅಶೋಕ ವಾಲೀಕಾರ ವಾರ್ಡ್ ಅಧ್ಯಕ್ಷರು ರಾಚಯ್ಯ. ಮಠಪತಿ ಹಾಗೂ ಭೂತ್ ಅಧ್ಯಕ್ಷರುಗಳು ಹಾಗೂ ಸದಸ್ಯರು ಇದ್ದರು.
Read More »
Shaikh BigTv
September 5, 2024
Breaking News, ಧಾರವಾಡ
ಧಾರವಾಡ:: ಸೆಪ್ಟೆಂಬರ್ 30 ರ ವರೆಗೆ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ವತಿಯಿಂದ ರಾಷ್ಟ್ರವ್ಯಾಪಿ ‘ನೈತಿಕತೆಯೇ ಸ್ವಾತಂತ್ರ್ಯದ ಭರವಸೆ’ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸದಸ್ಯರಾದ ಸಾಜಿದುನಿಯಾ ಲಾಲಮಿಯಾ ಹೇಳಿದರು. ಧಾರವಾಡ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಕಾಲೀನ ಸಮಾಜದಲ್ಲಿ ಹಲವಾರು ಸವಾಲುಗಳು ನೈತಿಕತೆ ಮತ್ತು ಸ್ವಾತಂತ್ರ್ಯದ ನಡುವಿನ ಸಾಮರಸ್ಯಕ್ಕೆ ಬೆದರಿಕೆಯಾಗಿ ಪರಿಣಮಿಸಿದೆ ಎಂದರು.
Read More »