Breaking News

Breaking News

ಆನ್‍ಲೈನ್ ಬೆಟ್ಟಿಂಗ್ | 1,906 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಈಡಿ ಅಧಿಕಾರಿಗಳು

ಬೆಂಗಳೂರು ಮೂಲದ ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ₹1,906 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಈಡಿ) ಆನ್‌ಲೈನ್ ಬೆಟ್ಟಿಂಗ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಪ್ತಿ ಮಾಡಿದೆ. ತನಿಖೆಯ ಪ್ರಕಾರ, ವಿವಿಧ ರಮ್ಮಿ ಅಪ್ಲಿಕೇಷನ್‌ಗಳ ಮೂಲಕ ಸುಮಾರು 3 ಕೋಟಿ ಗ್ರಾಹಕರನ್ನು ಸೆಳೆದು, ಸ್ವಯಂಚಾಲಿತ ಪ್ರೋಗ್ರಾಂಗಳ ಸಹಾಯದಿಂದ ಆಟಗಾರರಿಗೆ ನಷ್ಟವಾಗುವಂತೆ ಮಾಡಿ ಅಕ್ರಮ ಲಾಭ ಗಳಿಸಲಾಗುತ್ತಿತ್ತು. ಆಟಗಾರರನ್ನು ಸೆಳೆಯಲು ₹1,035 ಕೋಟಿ ಜಾಹೀರಾತಿಗೆ ಖರ್ಚು ಮಾಡಲಾಗಿತ್ತು. …

Read More »

ಹೂವಿನಹಡಗಲಿ: ದುಷ್ಕರ್ಮಿಯಿಂದ ಎಸ್ ಬಿಐ ಎಟಿಎಂನಲ್ಲಿ ದಾಂಧಲೆ

ಹೂವಿನಹಡಗಲಿ: ಪಟ್ಟಣದ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ (SBI) ಎಟಿಎಂ ದುಷ್ಕರ್ಮಿಯೊಬ್ಬ ಧ್ವಂಸ ಮಾಡಿರುವ ಘಟನೆ ಶನಿವಾರ ನಸುಕಿನ ವೇಳೆ ನಡೆದಿದೆ. 2 ಗಂಟೆಯ ನಂತರ ಘಟನೆ ನಡೆದಿದ್ದು, ದುಷ್ಕರ್ಮಿಯು ಎಟಿಎಂ ಗ್ಲಾಸ್ ಒಡೆದಿರುವುದು ಮಾತ್ರವಲ್ಲದೆ, ಪಾಸ್ ಬುಕ್ ಪ್ರಿಂಟ್ ಮಾಡುವ ಯಂತ್ರವನ್ನು ಧ್ವಂಸ ಮಾಡಿದ್ದಾನೆ. ಬಾಗಿಲ ಬಳಿ ಸಿಬಂದಿ ವರ್ತನೆ ಕುರಿತು ಅಸಮಾಧಾನ ವ್ಯಕ್ತಪಡಿಸುವ ಪತ್ರ ಸಹ ಹಾಕಿ ಹೋಗಿದ್ದಾನೆ. ಎಟಿಎಂ ಯಂತ್ರಕ್ಕೆ ಯಾವುದೇ ಹಾನಿ ಮಾಡಿಲ್ಲ ಎಂದು …

Read More »

ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗುಂಡಿನ ದಾಳಿ : ಆರ್‌ಎಎಫ್‌ನಿಂದ ತನಿಖೆ ಆರಂಭ

ನವದೆಹಲಿ: ಜುಲೈ 20ರಂದು ನಡೆದ ‘ಸಂಸತ್ ಚಲೋ’ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗನ್ ಬಳಸಿದ ಹಾಗೂ ಅತಿಯಾದ ಬಲಪ್ರಯೋಗ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ತನಿಖೆ ಆರಂಭಿಸಿದೆ. ಈ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದ ಸಂದರ್ಭದಲ್ಲಿ ಪೆಲ್ಲೆಟ್ ಗನ್ ಬಳಸಲಾಗಿದೆ ಎಂದು ಆರೋಪಿಸಲಾಗಿದ್ದರೂ, ದೆಹಲಿ ಪೊಲೀಸರು ಪೆಲ್ಲೆಟ್ ಗನ್ ಅಥವಾ ರಬ್ಬರ್ …

Read More »

ಚಿಂತಾಮಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 1 ಕೆಜಿಗೂ ಹೆಚ್ಚು ಗಾಂಜಾ ಸಹಿತ ಇಬ್ಬರು ಆರೋಪಿಗಳು ವಶಕ್ಕೆ

ಚಿಂತಾಮಣಿ ನಗರದ ಎನ್‌ಎನ್‌ಟಿ ವೃತ್ತದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಚಿಂತಾಮಣಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶ್ರೀನಿವಾಸ್ (19) ಹಾಗೂ ಬೆಂಗಳೂರು ಮೂಲದ ರೋಜಾ (40) ಎಂದು ಗುರುತಿಸಲಾಗಿದೆ. ಗಸ್ತಿನಲ್ಲಿದ್ದ ಪೊಲೀಸರಿಗೆ ಬೆಳಿಗ್ಗೆ ಸುಮಾರು 11:30ರ ವೇಳೆಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಎನ್‌ಎನ್‌ಟಿ ರಸ್ತೆಯಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಆರೋಪಿಗಳು ಬ್ಯಾಗ್‌ನಲ್ಲಿ ಗಾಂಜಾ ಇಟ್ಟು ಗ್ರಾಹಕರಿಗೆ ಮಾರಾಟ ಮಾಡಲು …

Read More »

ಮಡಿಕೇರಿ: ತಮ್ಮದೇ ಕಚೇರಿ ಸಿಬ್ಬಂದಿಯಿಂದ ಲಂಚ ಪಡೆದ ಇಬ್ಬರ ಬಂಧನ

ಕೊಡಗು ಜಿಲ್ಲೆಯ ಮಡಿಕೇರಿಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇರೆಗೆ ಕಚೇರಿ ಮ್ಯಾನೇಜರ್ ವೈದ್ಯನಾಥ್ ಹಾಗೂ ಎಸ್‌ಡಿಎ ಸೋಮಣ್ಣ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಅಮಾನತುಗೊಂಡಿದ್ದ ಗ್ರೂಪ್ ‘ಡಿ’ ನೌಕರ ಶರತ್‌ಗೆ ನಿಯಮಾನುಸಾರ ಅರ್ಧ ಸಂಬಳ ಬಿಡುಗಡೆ ಮಾಡಲು ವೈದ್ಯನಾಥ್ ₹5 ಸಾವಿರ ಹಾಗೂ ಸೋಮಣ್ಣ ₹3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಇಬ್ಬರೂ ಈಗಾಗಲೇ ₹5 ಸಾವಿರ ಲಂಚ ಪಡೆದಿದ್ದರೆಂದು …

Read More »

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ 47 ಅಧಿಕಾರಿಗಳನ್ನು ವಜಾ

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಆಡಳಿತಾತ್ಮಕ ಸುಧಾರಣೆಗಳನ್ನು ಆರಂಭಿಸಿದೆ. ಈ ಕ್ರಮದ ಭಾಗವಾಗಿ ಸಂಸ್ಥೆಯ 47 ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹುದ್ದೆಯಿಂದ ವಜಾಗೊಳಿಸಲಾಗಿದ್ದು, ಕೆಲವರ ವಿರುದ್ಧ ಶಿಸ್ತು ಕ್ರಮವೂ ಕೈಗೊಳ್ಳಲಾಗುತ್ತಿದೆ. ನೀಟ್, ಜೆಇಇ ಮೇನ್ ಹಾಗೂ ಸಿಯುಇಟಿ ಸೇರಿದಂತೆ ರಾಷ್ಟ್ರೀಯ ಮಟ್ಟದ ಪ್ರಮುಖ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಎನ್‌ಟಿಎಯ ಆಡಳಿತ ವ್ಯವಸ್ಥೆಯನ್ನು ಪುನರ್‌ರಚಿಸಲಾಗುತ್ತಿದೆ. ಜೊತೆಗೆ, ಪರೀಕ್ಷಾ ಪ್ರಕ್ರಿಯೆಯಲ್ಲಿನ ಹೊರಗುತ್ತಿಗೆ …

Read More »

ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ; ಬೆಲ್ಟ್, ಕಲ್ಲುಗಳಿಂದ ಬಡಿದಾಡಿಕೊಂಡ ಎರಡು ಗ್ರಾಮದ ಯುವಕರು!

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಜಕ್ಕಬಾಳ ಗ್ರಾಮದಲ್ಲಿ ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ವಿಚಾರ ಎರಡು ಗ್ರಾಮಗಳ ಯುವಕರ ನಡುವಿನ ಹಿಂಸಾತ್ಮಕ ಗಲಾಟೆಗೆ ಕಾರಣವಾಗಿದೆ. ಜಕ್ಕಬಾಳ ಮತ್ತು ಬಸರಗಿ ಗ್ರಾಮದ ಯುವಕರ ನಡುವೆ ಮೊದಲು ಮಾತಿನ ಚಕಮಕಿ ನಡೆದಿದ್ದು, ಬಸ್ ಜಕ್ಕಬಾಳ ತಲುಪುತ್ತಿದ್ದಂತೆ ಗಲಾಟೆ ತೀವ್ರಗೊಂಡಿದೆ. ಬಸ್ ಅನ್ನು ಮಧ್ಯರಸ್ತೆಯಲ್ಲಿ ನಿಲ್ಲಿಸಿ, ಎರಡೂ ಗುಂಪಿನ ಯುವಕರು ಬೆಲ್ಟ್, ಕಲ್ಲು ಹಾಗೂ ಕಟ್ಟಿಗೆಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ …

Read More »

ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಲೇಡಿ ಆಫೀಸರ್

ಗದಗ: ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫಿಕಾ ಹಳ್ಳೂರು ಹಾಗೂ ಕಾರು ಚಾಲಕ ಮೌಲಾನಾರನ್ನು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ಬಾಲ ಮಂದಿರದಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಅರ್ಜಿ ಸಲ್ಲಿಸಿದ್ದ ವ್ಯಕ್ತಿಯಿಂದ ಆರಂಭದಲ್ಲಿ 30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಬಳಿಕ 15 ಸಾವಿರಕ್ಕೆ ಒಪ್ಪಂದ …

Read More »

ಟ್ಯಾಂಕರ್ ಚಾಲಕನನ್ನು ಬೆನ್ನಟ್ಟಿ ಕಲ್ಲಿನಿಂದ ಜಜ್ಜಿ ಹಲ್ಲೆ-

ಬೆಂಗಳೂರುದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ರೋಡ್ ರೇಜ್ ಪ್ರಕರಣ ನಡೆದಿದ್ದು, ನೀರಿನ ಟ್ಯಾಂಕರ್ ಚಾಲಕನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ರಸ್ತೆ ಬದಿಯಲ್ಲಿದ್ದ ಮರದ ಹಲಗೆಯ ಮೇಲೆ ಟ್ಯಾಂಕರ್ ಹರಿದಿದ್ದನ್ನು ಪ್ರಶ್ನಿಸಿ ಆರಂಭವಾದ ವಾಗ್ವಾದ ಬಳಿಕ ಆರೋಪಿಗಳು ಸುಮಾರು 4 ಕಿಲೋಮೀಟರ್‌ಗಳಷ್ಟು ಟ್ಯಾಂಕರ್ ಅನ್ನು ಬೆನ್ನಟ್ಟಿದ್ದಾರೆ. ಬೇಗೂರು ಸಮೀಪ ಟ್ಯಾಂಕರ್ ತಡೆದು ಕಲ್ಲು ತೂರಾಟ ನಡೆಸಿದ ಆರೋಪಿಗಳು ವಾಹನದ ಗಾಜು ಪುಡಿಗೈದು, ಚಾಲಕ …

Read More »

BMTC’ ಬಸ್ ನಲ್ಲಿ ಯುವತಿಯ ಮೈ ಮುಟ್ಟಿ ಅಸಭ್ಯ ವರ್ತನೆ : ಕಾಮುಕನಿಗೆ ಬಿತ್ತು ಧರ್ಮದೇಟು!

ಬೆಂಗಳೂರುದಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ ಮೈಮುಟ್ಟಿ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಹೆಬ್ಬಾಳದಿಂದ ಮಾನ್ಯತಾ ಟೆಕ್ ಪಾರ್ಕ್‌ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಯುವತಿ ತಕ್ಷಣ ಬಸ್ ಚಾಲಕರಿಗೆ ಮಾಹಿತಿ ನೀಡಿದ್ದು, ಚಾಲಕರು ಬಸ್ ಅನ್ನು ರಸ್ತೆ ಬದಿ ನಿಲ್ಲಿಸಿ ಆರೋಪಿಯನ್ನು ಪ್ರಶ್ನಿಸಿದ್ದಾರೆ. ಬಳಿಕ ಯುವತಿ ಕೂಡ ಆರೋಪಿಗೆ ತಕ್ಕ ಪ್ರತಿರೋಧ ನೀಡಿದ್ದಾಳೆ. ಆರೋಪಿಯು ಇದೇ ರೀತಿಯ ಕೃತ್ಯವನ್ನು ಪದೇಪದೇ ಮಾಡುತ್ತಿದ್ದ ಎನ್ನಲಾಗಿದೆ. …

Read More »