Breaking News

Breaking News

ರತ್ನಾ ಮಾಮನಿಗೆ  ಬಿಜೆಪಿ ಟಿಕೆಟ್‌ ಭರವಸೆ  : ಸಿಎಂ

ರಾಮದುರ್ಗ (ಬೆಳಗಾವಿ): ಇತ್ತೀಚೆಗೆ ನಿಧನರಾದ ವಿಧಾನಸಭೆ ಉಪಸಭಾಧ್ಯಕ್ಷ, ಸವದತ್ತಿ ಶಾಸಕ ಆನಂದ ಮಾಮನಿ ಅವರ ಪತ್ನಿ ರತ್ನಾ ಅವರಿಗೆ ಬಿಜೆಪಿ ಟಿಕೆಟ್‌ ನೀಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ತಾಲ್ಲೂಕಿನ ದೊಡ್ಡಮಂಗಡಿಯಲ್ಲಿ ಬಸವೇಶ್ವರರ ಪುತ್ಥಳಿ ಅನಾವರಣ ಮಾಡಿದ ಬಳಿಕ ರತ್ನಾ ಮಾಮನಿ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ‘ನಿಮ್ಮ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿದ್ದೇನೆ ಎಂದರು.

Read More »

ಡಿಸೆಂಬರ್‌ 6ಕ್ಕೆ ಬೆಳಗಾವಿಗೆ ಹೋಗಿಯೇ ತೀರುತ್ತೇವೆ

ಬೆಳಗಾವಿ: ‘ಡಿಸೆಂಬರ್‌ 6ಕ್ಕೆ ಬೆಳಗಾವಿಗೆ ಹೋಗಿಯೇ ತೀರುತ್ತೇವೆ. ಕರ್ನಾಟಕದ ಮುಖ್ಯಮಂತ್ರಿ ಹೇಳಿಕೆಗೆ ಪ್ರತ್ಯುತ್ತರ ನೀಡಲೆಂದೇ ಹೋಗುತ್ತೇವೆ. ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಶಂಭುರಾಜ್ ದೇಸಾಯಿ ಸವಾಲು ಹಾಕಿದ್ದಾರೆ. ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಕಾಂತ ಪಾಟೀಲ, ‘ಗಡಿ ವಿವಾದದ ಕಾರಣ ತ್ವೇಷಮಯ ವಾತಾವರಣವಿದೆ. ಈಗ ಬರಬೇಡಿ ಎಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರಸರ್ಕಾರಕ್ಕೆ ಪತ್ರ ರವಾನಿಸಿದ್ದಾರೆ. ನಾನು ಯಾರಿಗೂ ಹೆದರುವವನಲ್ಲ. …

Read More »

ವಾಣಿಜ್ಯ ಇಲಾಖೆಯ 18 ಅಧಿಕಾರಿಗಳ ಏಕಕಾಲಕ್ಕೆ ಸೇವೆಯಿಂದ ಅಮಾನತು

ಬೆಂಗಳೂರು: ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಇಲಾಖೆಯ ಜಂಟಿ ಆಯುಕ್ತರು, ಮೂವರು ಸಹಾಯಕ ಆಯುಕ್ತರು ಸೇರಿದಂತೆ 18 ಅಧಿಕಾರಿಗಳನ್ನು ಏಕಕಾಲಕ್ಕೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಅತಿಹೆಚ್ಚು ವರಮಾನ ತರುವ ವಾಣಿಜ್ಯ ಇಲಾಖೆಯ ಅಧಿಕಾರಿಗಳನ್ನು ಏಕಕಾಲಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಮಾನತು ಮಾಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಸವಿತಾ-ಜಂಟಿ ಆಯುಕ್ತರು, ಮೈಸೂರು, ಶ್ರೀರಂಗಪ್ಪ, ಸಹಾಯಕ ಆಯುಕ್ತ (ಎಸಿ), …

Read More »


ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀಕಂಠಯ್ಯ ನಿಧನ

ಮೈಸೂರು: ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀಕಂಠಯ್ಯನವರು (96) ಶುಕ್ರವಾರ ನಿಧನರಾಗಿದ್ದಾರೆ. ವಿಷಯ ತಿಳಿದ ಕೂಡಲೇ ನಂಜನಗೂಡು ನಗರದ ರಾಷ್ಟ್ರಪತಿ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಸ್ವಾತಂತ್ರ್ಯ ಹೋರಾಟಗಾರ ಶ್ರೀಕಂಠಯ್ಯ ನಿಧನಬಳಿಕ ಮಾತನಾಡಿ ಧ್ರುವನಾರಾಯಣ್, ಶ್ರೀಕಂಠಯ್ಯನವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. 96 ವರ್ಷಗಳಲ್ಲಿ ಅವರು ಜನಪರವಾಗಿದ್ದರು. ಗಾಂಧೀಜಿ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡವರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಪುಣ್ಯ …

Read More »

ಮುರುಘಾ ಶ್ರೀಗಳಿಗೆ ಮತ್ತೊಂದು ಶಾಕ್

ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಮಠದ ಹಾಲಿ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರನ್ನು ಪದಚ್ಯುತಿಗೊಳಿಸಿ, ಹೊಸ ಪೂರ್ಣಕಾಲೀನ ಪೀಠಾಧ್ಯಕ್ಷರನ್ನು ಸರ್ಕಾರವೇ ಆಯ್ಕೆ ಮಾಡುವ ಕುರಿತು ಚರ್ಚಿಸಲು ವೀರಶೈವ ಸಮುದಾಯದಿಂದ ಇಂದು ಸಭೆ ಕರೆಯಲಾಗಿದೆ. ಡಾ. ಶಿವಮೂರ್ತಿ ಶಿವಶರಣರು ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲು ಆಗಿರುವಂತ ಬೆನ್ನಲ್ಲೇ, ಮಠದ ಪೀಠಾಧ್ಯಕ್ಷರ ಆಯ್ಕೆ ಕುರಿತಂತೆ ಮಾಜಿ ಸಚಿವ ಏಕಾಂತಯ್ಯ ನೇತೃತ್ವದಲ್ಲಿ ಮುಖಂಡರ ಸಭೆಯನ್ನು ಚಿತ್ರದುರ್ಗದ ಎಸ್.ನಿಜಲಿಂಗಪ್ಪ ಸ್ಮಾರಕ ಆವರಣದಲ್ಲಿ …

Read More »

ಹೊಸ ವರ್ಷಕ್ಕೆ ಮೊದಲೇ ರಾಜ್ಯದ ಜನತೆಗೆ ಸಿಹಿ ಸುದ್ದಿ

ಬೆಂಗಳೂರು: ಹೊಸ ವರ್ಷಕ್ಕೆ ಮೊದಲೇ ರಾಜ್ಯದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ವಿದ್ಯುತ್ ದರ ಇಳಿಕೆಗೆ ಚಿಂತನೆ ನಡೆದಿದೆ.ಗೃಹ ಬಳಕೆ ಸೇರಿದಂತೆ ಎಲ್ಲಾ ಬಗೆಯ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ವಿದ್ಯುತ್ ದರ ಕಡಿತ ಮಾಡಲು ಚಿಂತನೆ ನಡೆದಿದೆ. ಬಳಕೆದಾರರ ಶುಲ್ಕವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದ್ದು, ಪ್ರತಿ ಯೂನಿಟ್ ಗೆ 70 ಪೈಸೆಯಿಂದ ಎರಡು ರೂಪಾಯಿವರೆಗೆ ಇಳಿಕೆಯಾಗಬಹುದು ಎಂದು ಹೇಳಲಾಗಿದೆ. ಗ್ರಾಮೀಣ ವಿದ್ಯುತ್ ಬಳಕೆದಾರರಿಗೆ ರಿಯಾಯಿತಿ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ …

Read More »

ಮೂವರು ಚಾಲಾಕಿ ಬೈಕ್ ಕಳ್ಳರು ಅಂದರ್

ಹುಬ್ಬಳ್ಳಿ: ಕೇಶ್ವಾಪೂರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ರೈಲ್ವೆ ಯೂನಿಯನ್ ಆಫೀಸ್ ಹತ್ತಿರ ಲಾಕ್ ಮಾಡಿ ನಿಲ್ಲಿಸಿದ ಮೋಟರ ಸೈಕಲಗಳು ಮೇಲಿಂದ ಮೇಲೆ ಕಳ್ಳತನವಾಗುತ್ತಿದ್ದ ಬಗ್ಗೆ ಪ್ರಕರಣಗಳು ಕೇಶ್ವಾಪೂರ ಠಾಣೆಯಲ್ಲಿ ದಾಖಲಾಗಿದ್ದವು. ಪ್ರಕರಣದ ಜಾಡು ಹಿಡಿದು ಹೊರಟ ಕೇಶ್ವಾಪೂರ ಪೊಲೀಸರು ಮೂವರು ಬೈಕ್ ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ. ಹೌದು.. ಕೇಶ್ವಾಪೂರ ಠಾಣೆ ಪೊಲೀಸ್ ಇನ್ಸೆಕ್ಟರ್ ಜಗದೀಶ ಹಂಚನಾಳ ನೇತೃತ್ವದ ತಂಡ ಮೂವರು ಆರೋಪಿತರನ್ನು ಹಿಡಿದು ವಿಚಾರಿಸಿದಾಗ ಆರೋಪಿತರು ಒಟ್ಟು 09 …

Read More »

ವಿದ್ಯಾರ್ಥಿಗೆ ಹಾರ್ಟ್ ಅಟ್ಯಾಕ್”; ಚಿಕ್ಕವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಮಕ್ತುಂ

! ಕಲಘಟಗಿ :ಪಟ್ಟಣದ ಸರಕಾರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಇಂದು ಮುಂಜಾನೆ ವಿದ್ಯಾರ್ಥಿ ಕ್ಲಾಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿದ್ಯಾರ್ಥಿ ಮುಕ್ತುಂ ಮಹ್ಮದರಫಿ ಮನಿಯಾರ ಎಂದು ತಿಳಿದುಬಂದಿದ್ದು ನಾಲ್ಕನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ ವಿದ್ಯಾರ್ಥಿ ಕಲಘಟಗಿ ನಿವಾಸಿಯಾಗಿದ್ದು ಬಾಲಕನಿಗೆ ಮುಂಚೆಯೇ ಹೃದಯದಲ್ಲಿ ತೊಂದರೆ ಇರುವುದು ತಿಳಿದು ಬಂದಿದೆ.ಇಂದು ಮುಂಜಾನೆ ಎಂದಿನಂತೆ ಶಾಲೆಗೆ ಬಂದಿದ್ದು ಕ್ಲಾಸಿನಲ್ಲಿ ಕುಸಿದು ಬಿದ್ದಿದ್ದಾನೆ ನಂತರ ಶಿಕ್ಷಕರು ಕೂಡಲೆ ಅವನನ್ನು ಸ್ಥಳೀಯ ಸರಕಾರಿ …

Read More »

ಬೈಕ್‌ನಿಂದ‌ ಇಳಿಯುವಾಗ ಪ್ರಶ್ನೆ ಮಾಡಿದ ವ್ಯಕ್ತಿಯನ್ನೇ ಕೊಂದ ಕೀಚಕರು

ಧಾರವಾಡ : ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ್ ಗ್ರಾಮದಲ್ಲಿ ಘಟನೆ ನಡೆದಿದೆ. ಧಾರವಾಡ ಸಾಮಾನ್ಯವಾಗಿ ನಾವು ನೀವು ಇತ್ತಿಚಿನ ದಿನಗಳಲ್ಲಿ ಕೊಲೆಗಳು ಚಿಕ್ಕ‌ ಚಿಕ್ಕ ವಿಷಯಕ್ಕೆ ಕೊಲೆ ಆಗುತ್ತಿವೆ ಎಂಬುದನ್ನ ನೋಡಿದ್ದೇವೆ ಖಂಡಿದ್ದೇವೆ. ಸಿಗರೇಟ್ ವಿಚಾರವಾಗಿ, ಅನೇಕ ವಿಚಾರವಾಗಿ, ಕೇವಲ ಹತ್ತು ರೂಪಾಯಿ ಕೊಡುವುದರ ವಿಚಾರವಾಗಿ ಹಲ್ಲೆ ಮಾಡಿ‌ ಕೊಲೆಗಳು ಆಗಿವೆ. ಆದರೆ ವಿದ್ಯಾಕಾಶಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ್ ಗ್ರಾಮದಲ್ಲಿ ಕೇವಲ ಬೈಕ್ ನಿಂದ ಇಳಿಯುವಾಗ ನೋಡಿಕೊಂಡು …

Read More »

ಏಜೆನ್ಸಿಗಳಿಗೆ ಮತದಾರರ ಸಮೀಕ್ಷೆ ಮಾಡಲು ಅನುಮತಿ ನೀಡಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

ಹುಬ್ಬಳ್ಳಿ: ನಿನ್ನೆಯಷ್ಟೇ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮತದಾರರ ಮಾಹಿತಿ ಸಂಗ್ರಹದ ಕುರಿತು ಎಫ್‌ಐಆರ್ ದಾಖಲಾಗಿದೆ. ಏಜೆನ್ಸಿಯವರು ಮತದಾರ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ ಎಂದು ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಹೇಳಿದರು. ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೆಲವು ಮುಖಂಡರು ಮಾಹಿತಿ ಸಂಗ್ರಹದಿಂದ ಮತದಾರರ ಹೆಸರು …

Read More »