Breaking News

Breaking News

ಪ್ರವೀಣ್‌ ನೆಟ್ಟಾರು ಪತ್ನಿಗೆ ಗುತ್ತಿಗೆ ನೌಕರಿ ಆದೇಶ ಹೊರಡಿಕೆ

ಬೆಂಗಳೂರು: ಜುಲೈ 26ರಂದು ಕೊಲೆಗೀಡಾದ ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್‌ ನೆಟ್ಟಾರು ಅವರ ಪತ್ನಿ ನೂತನಕುಮಾರಿ ಎಂ. ಅವರಿಗೆ ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ‘ಸಿ’ ದರ್ಜೆಯ ಗುತ್ತಿಗೆ ನೌಕರಿ ನೀಡಿ  ಆದೇಶ ಹೊರಡಿಸಲಾಗಿದೆ. ಪ್ರವೀಣ್‌ ಪತ್ನಿಗೆ ತಮ್ಮ ಸಚಿವಾಲಯದಲ್ಲಿ ನೌಕರಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆಪ್ಟೆಂಬರ್‌ 10 ರಂದು ದೊಡ್ಡಬಳ್ಳಾಪುರದಲ್ಲಿ ನಡೆದಿದ್ದ ಜನಸ್ಪಂದನಾ ಸಮಾವೇಶದಲ್ಲಿ ಘೋಷಿಸಿದ್ದರು. ಅದರಂತೆಯೇ, ನೂತನಕುಮಾರಿ ಅವರಿಗೆ ಉದ್ಯೋಗ …

Read More »

ಪೇ ಸಿಎಂ ಪೋಸ್ಟರ್ : ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್  ನಡೆಸಿದ್ದ ಪೇ ಸಿಎಂ ಅಭಿಯಾನದ ಭಾಗವಾಗಿ ಬೆಂಗಳೂರಿನ ಹಲವು ಕಡೆ ಪೇ ಸಿಎಂ ಪೋಸ್ಟರ್ ಅಂಟಿಸಿದ್ದ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ಅಪರಾಧ ವಿಭಾಗದ ಸಿಸಿಬಿ ಪೊಲೀಸರು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಪದಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದಂತಹ ‘ಪೇ ಸಿಎಂ ಪೋಸ್ಟರ್ ಪ್ರಕರಣ’ ವನ್ನು ಸಿಸಿಬಿಗೆ ವರ್ಗಾಯಿಸಿ ಬೆಂಗಳೂರು ನಗರ ಕಮೀಷನರ್ ಪ್ರತಾಪ್ ರೆಡ್ಡಿ ಆದೇಶ …

Read More »

ಪೋಕ್ಸೋ ಕೇಸ್ : ಮುರುಘಾ ಶ್ರೀಗಳಿಗೆ ಬಿಗ್ ಶಾಕ್

ಚಿತ್ರದುರ್ಗ: ಪೋಕ್ಸೋ ಕೇಸ್ ನಲ್ಲಿ  ನ್ಯಾಯಾಂಗ ಬಂಧನದಲ್ಲಿರುವಂತ ಮುರುಘಾ ಶ್ರೀಗಳಿಗೆ  ಈಗಾಗಲೇ ಕೋರ್ಟ್ ಜಾಮೀನು ನಿರಾಕರಿಸಿತ್ತು. ಅವರ ನ್ಯಾಯಾಂಗ ಬಂಧನ ಮುಂದುವರೆಸಿ ಆದೇಶಿಸಿ ಶಾಕ್ ನೀಡಿತ್ತು. ಈ ಬೆನ್ನಲ್ಲೇ ಇಂದಿನ ಸಭೆಯಲ್ಲಿ ಮುರುಘಾ ಶರಣರನ್ನು ಮಠದ ಪೀಠಾಧ್ಯಕ್ಷ ಸ್ಥಾನದಿಂದ ತೆಗೆದು, ಹೊಸ ಪೀಠಾಧ್ಯಕ್ಷರ ಆಯ್ಕೆ ಮಾಡೋದಕ್ಕೆ ನಿರ್ಧಾರ ಕೈಗೊಂಡು ಮತ್ತೊಂದು ಬಿಗ್ ಶಾಕ್ ನೀಡಲಾಗಿದೆ. ಇಂದು ಮುರುಘಾ ಮಠದ  ಡಾ.ಶಿವಮೂರ್ತಿ ಶಿವಶರಣರು ಪೋಸ್ಕೋ ಪ್ರಕರಣದಲ್ಲಿ ಜೈಲು ಪಾಲು ಆಗಿರುವಂತ ಬೆನ್ನಲ್ಲೇ, …

Read More »

ದೀಪಕ್ ಪಟದಾರೆ ಪತ್ನಿ ನೇಣಿಗೆ ಶರಣು.

ಗ್ರಾ.ಪಂ ಸದಸ್ಯ ದೀಪಕ್ ಪಠದಾರಿ ಹತ್ಯೆ ಪ್ರಕರಣ.ಪತಿಯ ಸಾವಿನ ನ್ಯಾಯ ಕೇಳಿ ಅಲೆದಾಡುತ್ತಿದ್ದ ದೀಪಕ್ ಪತ್ನಿ ಆತ್ಮಹತ್ಯೆ. ಸದ್ಯ ದೀಪಕ್ ಹತ್ಯೆ ಕೇಸ್ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಪತಿ ಸಾವಿಗೆ ನ್ಯಾಯಕ್ಕಾಗಿ ಅಲೆದಾಡುತ್ತಿದ್ದ ಪುಷ್ಪಾ ಮನನೊಂದು ಆತ್ಮಹತ್ಯೆ. ನವನಗರದ ಸಂಬಂದಿ ಮನೆಯಲ್ಲಿ ನೇಣಿಗೆ ಕೊರಳೊಡ್ಡಿರುವ ಪುಷ್ಪ. ನವನಗರ ಪೊಲೀಸರು ಸ್ಥಳಕ್ಕೆ ದೌಡು. ಹಲವು ಅನುಮಾನಕ್ಕೆ ಕಾರಣವಾದ ಆತ್ಮಹತ್ಯೆ. ಹುಬ್ಬಳ್ಳಿ ತಾಲೂಕಿನ ರಾಯನಾಳ ಬಳಿ ದೀಪಕ್ ಹತ್ಯೆಯಾಗಿತ್ತು.ಜುಲೈ 4 ರಂದು …

Read More »

ಹಾಡುಹಗಲೇ ಮತ್ತೆ ಸಿಡಿಯಿತು ರಕ್ತ…

ಹುಬ್ಬಳ್ಳಿ: ಹೌದು ಹುಬ್ಬಳ್ಳಿಯಲ್ಲಿ ಒಂದ್ ಇಲ್ಲಾ ಒಂದು ಕ್ಷುಲ್ಲಕ ಕಾರಣಕ್ಕೆ ಚಾಕು ತಲವಾರಗಳಿಂದ ಹಲ್ಲೆ ಮಾಡುವುದು ಸರ್ವೇ ಸಾಮಾನ್ಯ ವಾಗಿದೆ. ಪೊಲೀಸರು ಎಷ್ಟೆ ಬಿಗಿ ಮಾಡಿದರು ಈ ಪುಡಿ ರೌಡಿಗಳು ತಮ್ಮ ಬಾಲಾ ಬಿಚ್ಚುತ್ತಲೆ ಇದ್ದಾರೆ. ಮೊಹಮ್ಮದ್ ಶಪಿ ಹಾಡು ಹಗಲೇ ಇಬ್ಬರ ನಡುವೆ ಹಣದ ವಿಷಯಕ್ಕೆ ಪರಸ್ಪರ ಹೊಡೆದಾಡಿಕೊಂಡ ಘಟನೆ ಕಸಬಾಪೇಟೆ ಠಾಣಾ ವ್ಯಾಪ್ತಿಯ ಕರ್ಜಗಿ ಓಣಿ ಯಲ್ಲಿ ನಡೆದಿದೆ. ಇರ್ಫಾನ್ ಬೇಪಾರಿ ಹಾಗೂ ಮೊಹಮ್ಮದ್ ಶಪಿ ಅನ್ನೋರ …

Read More »

ಪೇ ಸಿಎಂ ಬೆನ್ನಲ್ಲೇ ಪೇ ಮೇಯರ್: ಸಾಮಾಜಿಕ ಜಾಲತಾಣದಲ್ಲಿ ವೈರಲ್.

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಬೆಂಗಳೂರು ಮಾದರಿಯಲ್ಲಿ ಪೇ ಮೇಯರ್ ಅಭಿಯಾನ ಆರಂಭವಾಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹೌದು..ಪೇ ಸಿಎಂ ಚರ್ಚೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಪೇ ಮೇಯರ್ ಅಭಿಯಾನದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೇಯರ್ ಈರೇಶ್ ಅಂಚಟಗೇರಿ ವಿರುದ್ದ ಪೇ ಮೇಯರ್ ಅಭಿಯಾನ ಸದ್ದು ಮಾಡಿದೆ. ಕೈ ನಾಯಕರಿಂದ ಪೇ ಮೇಯರ್ ಅಭಿಯಾನ ಆರಂಭವಾಗಿದ್ದು, ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮದ ಹೆಸರಲ್ಲಿ ಸುಮಾರು 1.5 ಕೋಟಿ ದುಂದು …

Read More »

ತಾರತಮ್ಯ ಮಾಡದೇ ರೈತರಿಗೆ ಪರಿಹಾರ ನೀಡಬೇಕು ; ಕೋನರಡ್ಡಿ

ನವಲಗುಂದ : ನವಲಗುಂದ ವಿಧಾನ ಸಭಾ ಕ್ಷೇತ್ರದ ನವಲಗುಂದ , ಹುಬ್ಬಳ್ಳಿ ಹಾಗೂ ಅಣ್ಣಿಗೇರಿ ತಾಲ್ಲೂಕುಗಳಲ್ಲಿ ಸಾಕಷ್ಟು ಮಳೆಯಾಗಿ ಬೆಳೆ ಹಾನಿಯಾಗಿದೆ . ಕೇಂದ್ರ ಅಧ್ಯಯನ ತಂಡ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಪರಿಹಾರವನ್ನು ನೀಡುತ್ತಿದ್ದಾರೆ ಅದು ಕೂಡ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು ನವಲಗುಂದ ಪಟ್ಟಣದ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಅವರ ಕಚೇರಿಯಲ್ಲಿ ಮಾತನಾಡಿ , ಕೆಲವು ರೈತರಿಗೆ ಎಕರೆಗೆ ಹದಿಮೂರು …

Read More »

ಸಾಲಬಾಧೆ ಬಾರದ ಬೆಳೆ ಹಾನಿ , ಮನನೊಂದ ರೈತ ಆತ್ಮಹತ್ಯೆ

ಕುಂದಗೋಳ : ಸಾಲ ಬಾಧೆ ಹಾಗೂ ಇತ್ತೀಚೆಗೆ ಸುರಿದ ಅತಿವೃಷ್ಟಿಯಿಂದ ಬೆಳೆಹಾನಿಯಾಗಿ ತೀವ್ರವಾಗಿ ಮನನೊಂದಿದ್ದ ಕುಂದಗೋಳ ತಾಲೂಕು ಕೊಡ್ಲಿವಾಡ ಗ್ರಾಮದ ರೈತ ಹನುಮಪ್ಪ ಯಲ್ಲಪ್ಪ ಬಾಲೆಹೊಸೂರ ( 65 ) ಕ್ರಿಮಿನಾಶಕ ಸೇವಿಸಿಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಮೃತ ರೈತ ಬರದ್ವಾಡ ಕೆನರಾ ಬ್ಯಾಂಕ್ ಶಾಖೆಯಲ್ಲಿ 1 ಲಕ್ಷ 50 ಸಾವಿರ ರೂ.ಸಾಲ ಹೊಂದಿದ್ದರು . ಸಾಲ ಮರುಪಾವತಿಗೆ ಬ್ಯಾಂಕ್ ಒತ್ತಡ ಹೇರಿತ್ತು . ಸ್ವಂತದ 2 ಎಕರೆ 13 ಗುಂಟೆ …

Read More »

ಹುಬ್ಬಳ್ಳಿ ಮಹಾನಗರ ಚಿಕನ್ ವ್ಯಾಪಾರಸ್ಥರ ಸಂಘದ ಎರಡನೇ ವಾರ್ಷಿಕೋತ್ಸವದ ಸಂಭ್ರಮ!

ಹುಬ್ಬಳ್ಳಿ:- ಹುಬ್ಬಳ್ಳಿ ಮಹಾನಗರ ಚಿಕನ್ ವ್ಯಾಪಾರಸ್ಥರ ಸಂಘ ಹಾಗೂ ಹುಬ್ಬಳ್ಳಿ ಪೌಲ್ಟ್ರಿ ಡೀಲರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಎರಡನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಆರ್ ಎನ್ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಪ್ರಸಾದ್ ಅಬ್ಬಯ್ಯ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ,ಮಹಾನಗರ ಪಾಲಿಕೆ ಆಯುಕ್ತ.ಡಾ.ಗೋಪಾಲಕೃಷ್ಣ, ಚಿಟಗುಪ್ಪಿ ವೈದ್ಯಾಧಿಕಾರಿ ಶ್ರೀಧರ್ ದಂಡಪ್ಪನ್ನವರ, ಎಮ್ ಡಿ ಜಾಫರ್ ಶಾದೀಕ್,ಆರೀಪ್ ಬಾವಾ,ಅಬ್ದುಲ್ ರೆಹಮಾನ್ ಮುಲ್ಲಾ,ಮಹಾನಗರ ಚಿಕನ್ ಸಂಘದ ಅಧ್ಯಕ್ಷ ಅಲ್ತಾಪ ಬೇಪಾರಿ,ನಾಗರಾಜ ಪಟ್ಡಣ,ಎಮ್‌ಡಿ ಅಲಿ ಕಮಡೊಳ್ಳಿ …

Read More »

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೇ ಹೆಚ್ಚು ಮಳೆ ಬರುತ್ತದೆ : ಆರ್. ಅಶೋಕ್

ಬಳ್ಳಾರಿ : ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೇ ಹೆಚ್ಚು ಮಳೆ ಬರುತ್ತದೆ. ಇದರಿಂದಾಗಿ ತಮಿಳುನಾಡಿನಿಂದ ಕಾವೇರಿ ಕಾಟ ಕೂಡ ತಪ್ಪಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಕೂಡ್ಲಿಗಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವಿದ್ದರೇ ಬರಗಾಲವೇ ಬರುವುದಿಲ್ಲ. ಅಷ್ಟೇ ಅಲ್ಲದೇ ಅತಿ ಹೆಚ್ಚು ಮಳೆ ಬರುವುದರಿಂದಾಗಿ ತಮಿಳುನಾಡು ಬೇಡ ಹೇಳುವಷ್ಟು ನೀರು ಬಿಟ್ಟಿದ್ದೇವೆ ಎಂದರು. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ಕಂದಾಯ ದಾಖಲೆ ಮನೆ …

Read More »