Breaking News

Breaking News

ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು ಮತ್ತು ಅದನ್ನು ಖಂಡಿಸುತ್ತೇನೆ : ಜೋಶಿ

ಧಾರವಾಡ : ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು ಮತ್ತು ಅದನ್ನು ಖಂಡಿಸುತ್ತೇನೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕರು, ಎಲ್ಲಿ ಬೇಕಾದರು ಅವರು ಹೋಗಿ ಪರಿಶೀಲನೆ ಮಾಡುವ ಹಕ್ಕು ಅವರಿಗಿದೆಎಂದರು. …

Read More »

ಬೆಂಕಿ ಅವಘಡ ಮೂರು ದನಗಳು ಸುಟ್ಟು ಕರಕಲು

ಧಾರವಾಡ : ತಾಲೂಕಿನ ಕವಲಗೇರಿ ಗ್ರಾಮದ ಬಸಪ್ಪ ಗಂಗೋಜಿ( ಸಂಕಲೀಪುರ )ಎಂಬುವವರಿಗೆ ಸೇರಿದ ದನ ಕಟ್ಟುವ ಶೆಡ್ ಗೆ ಬೆಂಕಿ ತಗುಲಿ ಎರಡು ಎತ್ತುಗಳು ಹಾಗೂ ಒಂದು ಆಕಳು ಸೇರಿ ಮೂರು ದನಗಳು ಸುಟ್ಟು ಕರಕಲು ಆಗಿರುವ ಘಟನೆ ಜರುಗಿದೆ. ಬೆಂಕಿ ಹೇಗೆ ತಗುಲಿತು ಎಂಬುವುದರ ಕುರಿತು ಮಾಹಿತಿ ದೊರೆತಿಲ್ಲ ವಿಷಯ ತಿಳಿದ ತಕ್ಷಣ ಗ್ರಾಮದ ಜನರು ಶೆಡ್ ಬಳಿ ತೆರಳಿ ಬೆಂಕಿ ನಂದಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ …

Read More »

ಮೊದಲು ವೀರಸಾವರ್ಕರ್ ಅವರ ಇತಿಹಾಸವನ್ನ ತಿಳಿದುಕೊಳ್ಳಲಿ : ಶೆಟ್ಟರ್

ಹುಬ್ಬಳ್ಳಿ : ಮಾಜಿ ಸಿಎಂ ಸಿದ್ಧರಾಮಯ್ಯ ವೀರ ಸಾವರ್ಕರ್ ವಿರುದ್ಧ ಹೇಳಿಕೆ ವಿಚಾರ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಿದ್ಧರಾಮಯ್ಯ ಅವರು ಅಲ್ಪ‌ಸಂಖ್ಯಾತರನ್ನ ಓಲೈಸಲು ವೀರ ಸಾವರ್ಕರ್ ಅವರನ್ನ ಬಹಳ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಯಾವುದೋ ಒಂದು ಧರ್ಮದ ಬಗ್ಗೆ ವರ್ಗದ ಬಗ್ಗೆ ಇರುವ ಅತಿಯಾದ ಪ್ರೀತಿಯಿಂದಲೇ ವೀರ ಸಾವರ್ಕರ್ ಬಗ್ಗೆ ಈ ರೀತಿ ಮಾತನಾಡುವುದು ಶುರುವಾಗಿದೆ. ಅವರು ವೀರಸಾವರ್ಕರ್ ಅವರ ಇತಿಹಾಸವನ್ನ ತಿಳಿದುಕೊಳ್ಳಲಿ ಎಂದರು. ವೀರವಸಾವರ್ಕರ್ ಕ್ರಾಂತಿಕಾರಿ ಹೋರಾಟ …

Read More »

ಕಾಲೇಜಿನಲ್ಲಿ ಲೈಂಗಿಕ ದೌರ್ಜನ್ಯ: ಬೃಹತ್ ಪ್ರತಿಭಟನೆ

ಧಾರವಾಡ: ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಖಂಡಿಸಿ ಎಬಿವಿಪಿ ಸಂಘಟನೆ ನೇತೃತ್ವದಲ್ಲಿ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಧಾರವಾಡದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ. ಇಂತಹ ಪ್ರಕರಣಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಜರುಗಿಸಬೇಕು. ಸದ್ಯ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ …

Read More »

ಹಠಾತ್ ಪ್ರವಾಹ : 16 ಜನ ಸಾವು, 36 ಮಂದಿ ನಾಪತ್ತೆ

ಚೀನಾ: ಚೀನಾದ ವಾಯುವ್ಯ ಕ್ವಿಂಘೈ ಪ್ರಾಂತ್ಯದ ಕೌಂಟಿಯೊಂದರಲ್ಲಿ ಹಠಾತ್ ಪ್ರವಾಹ ಸಂಭವಿಸಿದ ಪರಿಣಾಮ 16 ಜನ ಸಾವನ್ನಪ್ಪಿದ್ದು, 36 ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು  ತಿಳಿಸಿದ್ದಾರೆ. ಬುಧವಾರ ರಾತ್ರಿ ದಟೊಂಗ್ ಹುಯಿ ಮತ್ತು ತು ಸ್ವಾಯತ್ತ ಕೌಂಟಿಯಲ್ಲಿ ಹಠಾತ್ ಪ್ರವಾಹ ಸಂಭವಿಸಿದೆ ವರದಿಯಾಗಿದೆ. ಆರು ಗ್ರಾಮಗಳ 1,517 ಮನೆಗಳ ಒಟ್ಟು 6,245 ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ ಎನ್ನಲಾಗಿದೆ.

Read More »

ಬುದ್ಧಿವಾದ ಹೇಳಿದ್ದಕ್ಕೆ ಬಿತ್ತು ಹೆಣ

ಬೆಂಗಳೂರು : ‘ದುಶ್ಚಟ ಮಾಡಿ ಸ್ನೇಹಿತ ರನ್ನು ಹಾಳು ಮಾಡಬೇಡ’ ಎಂದು ಬುದ್ಧಿವಾದ ಹೇಳಿದ್ದಕ್ಕೆ ಅಜೀಂವುಲ್ಲಾ (43) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಈ ಸಂಬಂಧ ರಾಜಗೋಪಾಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಹೆಗ್ಗನಹಳ್ಳಿಯ ಮಾರುತಿನಗರ ನಿವಾಸಿ ಅಜೀಂವುಲ್ಲಾ, ಜಾತ್ರೆಗಳಲ್ಲಿ ರಾಟೆ ಚಕ್ರ (ಜೋಕಾಲಿ) ನಿರ್ವಹಣೆ ಕೆಲಸ ಮಾಡುತ್ತಿದ್ದರು. ಅವರನ್ನು ಬುಧವಾರ ರಾತ್ರಿ ಕೊಲೆ ಮಾಡಲಾಗಿದ್ದು, ಪರಿಚಯಸ್ಥ ಯುವಕನೇ ಕೃತ್ಯ ಎಸಗಿ ಪರಾರಿಯಾಗಿರುವ ಮಾಹಿತಿ ಇದೆ’ ಎಂದು ಪೊಲೀಸ್ …

Read More »

ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ಪ್ರತಿಭಟನೆ

ಹುಣಸೂರು: ಕೊಡಗಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ವಿರುದ್ದ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಎಸೆದಿರುವುದನ್ನು ಖಂಡಿಸಿ ಹುಣಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದರು. ಗುರುವಾರ ಸಂಜೆ ನಗರದ ಬೈಪಾಸ್ ರಸ್ತೆಯ ಮೈಸೂರು-ಮಂಗಳೂರು ಹೆದ್ದಾರಿಯ ಕಲ್ಕುಣಿಕೆ ವೃತ್ತದಲ್ಲಿ ಧರಣಿ ಕುಳಿತ ಕಾರ್ಯಕರ್ತರು ರಾಜ್ಯದ ಬಿಜೆಪಿ ಸರಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಮಂತ್ರಿ ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ದ ಧಿಕ್ಕಾರ ಮೊಳಗಿಸಿ. ರಸ್ತೆಯಲ್ಲಿ …

Read More »

ರಾಯಚೂರು ಜಿಲ್ಲೆ ತೆಲಂಗಾಣಕ್ಕೆ ಸೇರಬೇಕು : ಸಿಎಂ ಕೆ. ಚಂದ್ರಶೇಖರ್ ರಾವ್

ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿ ತನಗೆ ಸೇರಬೇಕೆಂದು ಪಕ್ಕದ ಮಹಾರಾಷ್ಟ್ರ ಪದೇ ಪದೇ ವಿವಾದ ಹೊತ್ತಿಸಿದ್ದು ಇನ್ನೂ ಮಾಸಿಲ್ಲ. ಈ ಮುನ್ನವೇ ರಾಯಚೂರು ಜಿಲ್ಲೆ ತೆಲಂಗಾಣಕ್ಕೆ ಸೇರಬೇಕೆಂದು ಹೇಳುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿವಾದದ ಕಿಡಿ ಹೊತ್ತಿಸಿದ್ದಾರೆ. ಟಿಆರ್‌ಎಸ್ ಸರ್ಕಾರದ ಕಲ್ಯಾಣ ಯೋಜನೆಗಳಿಂದ ಆಕರ್ಷಿತರಾಗಿರುವ ಕರ್ನಾಟಕದ ರಾಯಚೂರು ಜಿಲ್ಲೆಯ ಜನರು ತಮ್ಮ ಪ್ರದೇಶವನ್ನು ತೆಲಂಗಾಣಕ್ಕೆ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ …

Read More »

ಹಾಸ್ಯನಟ ಮತ್ತು ನಟ ರಾಜು ಶ್ರೀವಾತ್ಸವ್ ನಿಧನ

ಹಾಸ್ಯನಟ ಮತ್ತು ನಟ ರಾಜು ಶ್ರೀವಾತ್ಸವ್ ಅವರು ಆಗಸ್ಟ್ 18 ರಂದು ತಮ್ಮ 58ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆಗಸ್ಟ್ 10ರಂದು ಜಿಮ್ ಮಾಡುವಾಗ ರಾಜು ಶ್ರೀವಾಸ್ತವ ಅವ್ರಿಗೆ ಹೃದಯಾಘಾತವಾಗಿದ್ದು, ಅಂದಿನಿಂದ ವೆಂಟಿಲೇಟರ್ ಬೆಂಬಲದಲ್ಲಿದ್ದರು. ಜನಪ್ರಿಯ ಹಾಸ್ಯನಟನನ್ನ ಅಂತಿಮವಾಗಿ ಇಂದು ಹೃದಯ ಮತ್ತು ಮೆದುಳಿಗೆ ಸಂಬಂಧಿಸಿದ ತೊಡಕುಗಳಿಂದ ನಿಧನರಾದರು. ಅವರ ಸಾವಿನ ಸುದ್ದಿಯನ್ನ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವಿಶೇಷ ಕರ್ತವ್ಯ ಅಧಿಕಾರಿ (ಒಎಸ್ಡಿ) ಲೋಕೇಶ್ ಶರ್ಮಾ ಹಂಚಿಕೊಂಡಿದ್ದಾರೆ. ‘ಶಾಂತಿಯಿಂದ …

Read More »

ನಾಳೆ‌ ಲವ್ 360 ಸಿನಿಮಾ ಬಿಡುಗಡೆ

ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ. ಅದರಲ್ಲೂ ಸಿದ್ದ್ ಶ್ರೀರಾಮ್ ಹಾಡಿರುವ “ಜಗವೇ ನೀನು ಗೆಳತಿಯೇ” ಹಾಡಂತೂ ಭಾರಿ ಜನಪ್ರಿಯವಾಗಿದೆ. ಲವ್ 360 ಶೀರ್ಷಿಕೆಯಿಂದಲೇ ಸ್ಯಾಂಡಲ್​ವುಡ್​ನಲ್ಲಿ ಸೌಂಡ್ ಮಾಡುತ್ತಿರುವ ಸಿನಿಮಾ. ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ ಸಿನಿಮಾಗಳ ನಿರ್ದೇಶಕ ಶಶಾಂಕ್ ನಿರ್ದೇಶನದ ಚಿತ್ರ ಲವ್ 360 ಸಿನಿಮಾ‌ ನಾಳೆ 150ಕ್ಕೂ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಈ ಚಿತ್ರದ ಥಿಯೇಟ್ರಿಕಲ್ ಟ್ರೇಲರ್ …

Read More »