Breaking News

Breaking News

ಚಿತ್ರೀಕರಣದಲ್ಲಿ ಬ್ಯುಸಿಯಾದ ಪ್ರಶಾಂತ್ : 2 ವರ್ಷ ಸ್ಯಾಂಡಲ್ ವುಡ್ ಗೆ ಬರುವುದು ಡೌಟ್

ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಈಗ ಅತ್ಯಂತ ಬ್ಯುಸಿ ನಿರ್ದೇಶಕ. ಸದ್ಯಕ್ಕೆ ಪ್ರಶಾಂತ್ ತೆಲುಗಿನಲ್ಲಿ ಎರಡು ಸಿನಿಮಾ ಮಾಡುತ್ತಿದ್ದಾರೆ. ಈ ಪೈಕಿ ಸಲಾರ್ ಚಿತ್ರೀಕರಣ ಹಂತದಲ್ಲಿದ್ದು, ಈ ವರ್ಷವೇ ಬಿಡುಗಡೆಯಾಗುವ ಸಾಧ‍್ಯತೆಯಿದೆ. ಇದಲ್ಲದೆ ಜೂ. ಎನ್ ಟಿಆರ್ ಜೊತೆಗೆ ಮೊನ್ನೆಯಷ್ಟೇ ಹೊಸ ಸಿನಿಮಾ ಘೋಷಣೆಯಾಗಿದ್ದು, ಇದು ಮುಂದಿನ ವರ್ಷದಿಂದ ಚಿತ್ರೀಕರಣ ಆರಂಭವಾಗಲಿದೆ. ಹೀಗಾಗಿ ಮುಂದಿನ ಎರಡು ವರ್ಷಗಳಿಗೆ ಪ್ರಶಾಂತ್ …

Read More »

ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದು ಶಾಲೆಗಳು, ಆಸ್ಪತ್ರೆಗಳಿಗೆ ನೀಡಲಾಗುವುದು : ಆದಿತ್ಯನಾಥ್

ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದು ಶಾಲೆಗಳು, ಆಸ್ಪತ್ರೆಗಳಿಗೆ ನೀಡಲಾಗುವುದು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಉತ್ತರ ಪ್ರದೇಶದ ಮಸೀದಿಗಳಲ್ಲಿನ ಕೆಲವು ಧ್ವನಿವರ್ಧಕಗಳ ಧ್ವನಿ ಕಡಿಮೆ ಮಾಡಲಾಗಿದೆ. ಕೆಲವನ್ನು ತೆಗೆದುಹಾಕಲಾಗಿದೆ.ತೆಗೆದುಹಾಕಲಾದ ಧ್ವನಿವರ್ಧಕಗಳನ್ನು ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ದಾನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತ್ತು ನಂತರ ಬಿಜೆಪಿ ಆಡಳಿತದ ಉತ್ತರ ಪ್ರದೇಶ ರಾಜ್ಯದಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ ಎಂದು ಆರ್‌.ಎಸ್‌.ಎಸ್. ಸಂಯೋಜಿತ ವಾರಪತ್ರಿಕೆಗಳಾದ ‘ಪಾಂಚಜನ್ಯ’ …

Read More »

ಮಾಜಿ ಸಿಎಂಗೆ ವಿಶೇಷ ಕೋರ್ಟ್ ಸಮನ್ಸ್ ಜಾರಿ

ಬೆಂಗಳೂರು: ಮೇಕೆದಾಟು ಪಾದಯಾತ್ರೆ ವೇಳೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ವಿಶೇಷ ಕೋರ್ಟ್ ಸೋಮವಾರ ಸಮನ್ಸ್ ಜಾರಿ ಮಾಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ಸಮನ್ಸ್ ಜಾರಿ ಮಾಡಿದ್ದು, 24 ರಂದು ನಡೆಯುವ ವಿಚಾರಣೆಗೆ ಖದ್ದು ಹಾಜರಾಗುವಂತೆ ಸೂಚಿಸಲಾಗಿದೆ.

Read More »

ಈರುಳ್ಳಿ ದರ ಕುಸಿತ : ಕಂಗಲಾದ ರೈತರು

ಚಿತ್ರದುರ್ಗ:  ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಪಾತಾಳಕ್ಕೆ ಕುಸಿದಿದ್ದು ಚಿತ್ರದುರ್ಗದ ಈರುಳ್ಳಿ ಬೆಳೆಗಾರ ಮತ್ತೆ ಸಂಕಷ್ಟಕ್ಕೆ ನೂಕಲ್ಪಟ್ಟಿದ್ದಾನೆ. ಕಳೆದ ಎರಡು ತಿಂಗಳಿನಿಂದ ಕುಸಿತ ಕಂಡ ಈರುಳ್ಳಿ ದರ ಮತ್ತೆ ಚೇತರಿಸಿಲ್ಲ. ಬೆಂಗಳೂರಿನಲ್ಲಿ ವಿವಿಧ ದರ್ಜೆಯ ಈರುಳ್ಳಿ .5ರಿಂದ .12ರವರೆಗೆ ಮಾರಾಟವಾಗುತ್ತಿದ್ದು, ಚಿತ್ರದುರ್ಗದಲ್ಲಿ ಸ್ಥಳೀಯ ವ್ಯಾಪಾರಿಗಳಿಗೆ ಮಾರಿದರೆ ಕೆ.ಜಿ.ಗೆ ಮೂರೂವರೆ ರುಪಾಯಿಯಷ್ಟೇ ಸಿಗುತ್ತಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಉತ್ತಮ ಗುಟಮಟ್ಟದ ಈರುಳ್ಳಿ ಸೋಮವಾರದ ಮಾರುಕಟ್ಟೆಯಲ್ಲಿ 50 ಕೆ.ಜಿ. ಚೀಲ .500ರಿಂದ .600ರವರೆಗೆ ಮಾರಾಟವಾಗಿದೆ. …

Read More »

ಹಲವು ಜಿಲ್ಲೆಗಳಲ್ಲಿ ಇಂದೂ ಭಾರೀ ಮಳೆ ಸಾಧ್ಯತೆ

ಬೆಂಗಳೂರು : ರಾಜ್ಯದ ಕರಾವಳಿ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಕರ್ನಾಟಕ ಕರಾವಳಿ, ಕೊಡಗು, ಹಾಸನ, ಚಿಕ್ಕಮಗಳೂರು, ಮಂಡ್ಯ, ದಾವಣಗೆರೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

Read More »

ಮೇ . 25 ರಂದು ಭಾರತ್ ಬಂದ್

ಮೇ 25 ರಂದು ಭಾರತ್ ಬಂದ್ ನಡೆಯಲಿದೆ. ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟವು ಬುಧವಾರ ಅಂದರೆ ಮೇ 25 ರಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಈ ವೇಳೆ ಹಲವಾರು ವಹಿವಾಟುಗಳು ವ್ಯತ್ಯಯವಾಗುವ ಸಾಧ್ಯತೆ ಇದೆ. ಒಬಿಸಿ ಆಧಾರಿತ ಜನಗಣತಿ ನಡೆಸಬೇಕೆಂದು ಹಲವಾರು ರಾಜಕೀಯ ನಾಯಕರುಗಳು, ಸಂಘಟನೆಗಳು ಒತ್ತಾಯ ಮಾಡಿದ್ದವು. ಆದರೆ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿಲ್ಲ. ಈಗಾಗಲೇ ಜನಗಣತಿಯ ಎಲ್ಲಾ ಸಿದ್ಧತೆ …

Read More »

ಬಸ್ , ಲಾರಿ ಮುಖಾಮುಖಿ ಡಿಕ್ಕಿ‌: 6 ಸಾವು, 26 ಜನರಿಗೆ ಗಾಯ

ಹುಬ್ಬಳ್ಳಿ : ಖಾಸಗಿ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ  ಹುಬ್ಬಳ್ಳಿ ಹೊರವಲಯದ ತಾರಿಹಾಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ‌ ನಡೆದಿದೆ. ಸ್ಥಳದಲ್ಲಿಯೇ ಆರು ಜನರ ಸಾವುನಪ್ಪಿದ್ದು, 26 ಜನರಿಗೆ ಗಾಯವಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ.  ಮಹಾರಾಷ್ಟ್ರ ದ ಕೊಲ್ಹಾಪುರದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ಧಾರವಾಡ ದ ಕಡೆ ಹೊರಟಿದ್ದ ಲಾರಿ ಮುಖಾಮುಖಿಯಾಗಿ ಅಪಘಾತವಾಗಿದೆ. ಮೃತರೆಲ್ಲರೂ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಸೇರಿದವರು‌ ಎಂದು ಗೊತ್ತಾಗಿದೆ. ಗಾಯಾಳುಗಳು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ …

Read More »

ವಿಮಲ್ ತಿನ್ನುವ ವಿಚಾರದಲ್ಲಿ ಜಗಳ : ಕೊಲೆಯಲ್ಲಿ ಅಂತ್ಯ

ಹುಬ್ಬಳ್ಳಿ; ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನಿಗೆ ರೌಡಿ ಶೀಟರ್ ನೊಬ್ಬ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.ಹಳೆ ಹುಬ್ಬಳ್ಳಿಯ ಆನಂದನಗರದ ಪಾನ್ ಶಾಪ್ ಬಳಿ ವಿಮಲ್ ಗುಟ್ಕಾ ತಿನ್ನುವ ವಿಚಾರವಾಗಿ ಮೆಹಬೂಬ್ ಸಾಬ್ ಕಳಸದ (23) ಗೆ ಹಳೆ ಹುಬ್ಬಳ್ಳಿ ರೌಡಿ ಶೀಟರ್ ಗೌಸ್ ಮೋದಿನ್ ತಹಶಿಲ್ದಾರ ಎಂಬಾತ ತನ್ನ ಬಳಿಯೇ ಇದ್ದ ಹರಿತವಾದ ಆಯುಧಿಂದ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಮೆಹಬೂಬ್ ಕಳಸನನ್ನು ಚಿಕಿತ್ಸೆಗೆ ಕಿಮ್ಸ್ …

Read More »

ದಸ್ಸಾಲ್ಸ್ ಸಿಸ್ಟಮ್ಸ್ ಹಾಗೂ ನೆಸ್ಟ್ಲೇ ಸಂಸ್ಥೆಯ ಮುಖ್ಯಸ್ಥರೊಂದಿಗೆ ಕರ್ನಾಟಕದಲ್ಲಿ ಹೂಡಿಕೆಗಳ ಅವಕಾಶಗಳ ಬಗ್ಗೆ ಸಿಎಂ ಚರ್ಚೆ

ದಾವೋಸ್ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ದಸ್ಸಾಲ್ಸ್ ಸಿಸ್ಟಮ್ಸ್ ಹಾಗೂ ನೆಸ್ಟ್ಲೇ ಸಂಸ್ಥೆಯ ಮುಖ್ಯಸ್ಥರೊಂದಿಗೆ ಕರ್ನಾಟಕದಲ್ಲಿ ಹೂಡಿಕೆ ಅವಕಾಶಗಳ ಚರ್ಚಿಸಿದರು. ದಸ್ಸಾಲ್ಸ್ ಸಿಸ್ಟಮ್ಸ್ : ರಾಜ್ಯದಲ್ಲಿ ವಿದ್ಯುತ್ ವಾಹನಗಳು ಮತ್ತು ಕೇಂದ್ರ ಉತ್ಪಾದನಾ ತಾಂತ್ರಿಕ ಸಂಸ್ಥೆಯ ಸಹಯೋಗದಲ್ಲಿ ಆಧುನಿಕ ಉತ್ಪಾದನೆ ಕ್ಷೇತ್ರ , ವಿದ್ಯಾರ್ಥಿಗಳಿಗೆ ಕೈಗಾರಿಕೆ 4.0, ಡಿಜಿಟಲ್ ತಂತ್ರಜ್ಞಾನದ ಬಗ್ಗೆ ತರಬೇತಿ ,ರಾಜ್ಯದ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ …

Read More »

ರಸ್ತೆ ಕಾಮಗಾರಿ ಹಾಳು : ಸ್ಥಳೀಯರಿಂದ ಪ್ರತಿಭಟನೆ

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ, ಹೆಬಸೂರು ಹಾಗೂ ಸುಳ್ಳ ರಸ್ತೆ ಹಾಳಾಗಿದ್ದು ಜನರು ಸಂಚಾರಕ್ಕೆ ಸಾಕಷ್ಟು ಅಡಚಣೆ ಆಗುತ್ತಿದೆ . ಮೊದಲೇ ಈ ರಸ್ತೆ ಹಾಳಾಗಿತ್ತು ಈಗ ಸಾಕಷ್ಟು ಮಳೆ ಸಹ ಅಗಿದೆ. ಈಗಾಗಲೇ ರಸ್ತೆ ದುರಸ್ತಿ ಮಾಡಿದಾಗ ಸಗ ಕಳಪೆ ಆಗಿತ್ತು. ಆದ್ದರಿಂದ ಇಲ್ಲಿನ ರಸ್ತೆ ಪರಿಸ್ಥಿತಿ ಹದಗೆಟ್ಟ ಹೋಗಿದೆ. ಇನ್ನು ಸ್ಥಳೀಯರು ಹಾಗೂ ರೈತರು ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಳಲ್ಲಿ ಮನವಿ ಮಾಡಿದರು ಏನು ಪ್ರಯೋಜನ ಆಗುತಿಲ್ಲ. ರೈತರು …

Read More »