BigTv News
May 10, 2022
Breaking News, ಧಾರವಾಡ
ಧಾರವಾಡ : ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಕೊಲೆಯಾಗಿರುವ ಘಟನೆ ತಾಲೂಕಿನ ಕವಲಗೇರಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಘಟನೆ ನಡೆದಿದೆ. ಪ್ರಕಾಶ ದೇಶದ (48) ಕೊಲೆಯಾದ ವ್ಯಕ್ತಿ. ಧಾರವಾಡ ತಾಲೂಕು ಅಮ್ಮಿನಬಾವಿ ಗ್ರಾಮದ ನಿವಾಸಿಯಾಗಿದ್ದರು. ಬೆಳಗ್ಗೆ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದೆ. ಜಮೀನಿಗೆ ರೈತರು ಬಂದಾಗ ಶವ ಕಂಡುಬಂದಿದೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
Read More »
BigTv News
May 10, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಅವಳಿ ನಗರದ ಬಂಟರ ವತಿಯಿಂದ ಸಂಘದ ಗೌರವ ಅಧ್ಯಕ್ಷರಾಗಿದ್ದ ದಿವಂಗತ ಆರ್ ಎನ್ ಶೆಟ್ಟಿ ಅವರ ಪುತ್ಥಳಿ ಅನಾವರಣ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂದು ನಗರದ ಆರ್ ಎನ್ ಶೆಟ್ಟಿ ಮಂಟಪದಲ್ಲಿ ಜರಗಿತು. ವಿಧಾನಸೌಧ ಪೂರ್ವ ವಿಧಾನಸಭಾ ಕ್ಷೇತ್ರದ ಪ್ರಸಾದ್ ಅಬ್ಬಯ್ಯ, ಸೇರಿದಂತೆ ಉಪಸ್ಥಿತರಿದ್ದರು.
Read More »
BigTv News
May 10, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಮುಂಗಾರು ಬೆಳೆ ಬಿತ್ತನೆಗೆ ಗೊಬ್ಬರ ಇಲ್ಲದೆ ತೊಂದರೆ ಅನುಭವಿಸುತ್ತಿರುವ ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದ ರೈತರ ಬದುಕು ಚಿಂತಾಜನಕವಾಗಿದೆ. ಕಳೆದ ಕೆಲ ದಿನಗಳಿಂದ ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಶುರುವಾಗಿದ್ದರ ಪರಿಣಾಮವಾಗಿ ರೈತರು ಮುಂಗಾರಿ ಬಿತ್ತನೆಗೆ ಮುಂದಾಗಿದ್ದು, ಆದರೆ ಅವರಿಗೆ ಬೇಕಾದ ಗೊಬ್ಬರ ಸಿಗದ ಪರಿಣಾಮ ರೈತರು ಕಂಗಾಲಾಗಿದ್ದಾರೆ.ಬೇಕಾದ ಗೊಬ್ಬರ ಗೊಬ್ಬರ ಅಂಗಡಿಗಳಲ್ಲಿ ಸಮರ್ಪಕವಾಗಿ ದೊರಕದ ಪರಿಣಾಮ ರೈತರು ಅರಕಾರದ ವಿರುದ್ಧ ಕಿಡಿಕಾರುತಿದ್ದಾರೆ.
Read More »
BigTv News
May 10, 2022
Breaking News
ಚಾಮರಾಜನಗರ : ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ 19 ವರ್ಷದ ಬಳಿಕ ಸೀಗಮಾ ರಮ್ಮನ ಬಲಿ ಆಚರಣೆ ಉತ್ಸವ ಬಾರಿ ಜನಸ್ತೋಮದ ನಡುವೆ ಜರುಗಿತು. ಗ್ರಾಮದ ಎಲ್ಲಾ ಸಮುದಾಯ ಜನರು ಸೇರಿ ಆಚರಣೆ ಮಾಡುವ ವಿಶೇಷ, ವೈಶಿಷ್ಟ್ಯವುಳ್ಳ ಹಬ್ಬ ಇದಾಗಿದೆ. ಕಳೆದ ತಿಂಗಳ 24 ರಂದು ಈ ಹಬ್ಬಕ್ಕೆ ಚಾಲನೆ ಸಿಕ್ಕಿತ್ತು. ಸೋಮವಾರ ತಡರಾತ್ರಿ ಬಲಿ ಆಚರಣೆಯು ಸಾಂಪ್ರದಾಯಿಕವಾಗಿ ನೆರವೇರಿತು. ಗ್ರಾಮದ ಸೀಗಮಾರಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಖೇಲ್ ಉತ್ಸವ …
Read More »
BigTv News
May 10, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಆಯುರ್ವೇದ ಶಲ್ಯ, ಶಾಲಕ್ಯ ಮತ್ತು ಸ್ತ್ರೀರೋಗ ಮತ್ತು ಪ್ರಸೂತಿ ತಂತ್ರ ವಿಭಾಗಗಳಲ್ಲಿ ಶಸ್ತ್ರಚಿಕಿತ್ಸೆ ಮತ್ತು ಪ್ರಸೂತಿ ತಂತ್ರ ವಿಭಾಗಗಳಲ್ಲಿ ಶಸ್ತ್ರಚಿಕಿತ್ಸೆ ಮತ್ತು ಪಂಚಕರ್ಮ ಚಿಕಿತ್ಸೆಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆರೋಗ್ಯ ಭಾರತಿ ಕರ್ನಾಟಕ ವತಿಯಿಂದ ಮೇ.14&15 ರಂದು ಹುಬ್ಬಳ್ಳಿಯ ಹೆಗ್ಗೇರಿಯಲ್ಲಿನ ಆಯುರ್ವೇದ ಮಹಾವಿದ್ಯಾಲಯದ ವೈದ್ಯ ಗುರು ಹಲಸಿಕರ ವೇದಿಕೆಯಲ್ಲಿ ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಅಧ್ಯಕ್ಷ ಗೋವಿಂದ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, …
Read More »
BigTv News
May 10, 2022
Breaking News, ಧಾರವಾಡ
ಧಾರವಾಡ:– ರೈತರಿಗೆ ಸಮರ್ಪಕ ಗೊಬ್ಬರ ವಿತರಣೆಗಾಗಿ ಹಾಗೂ ಬೀಜ ಗೊಬ್ಬರದ ಜೊತೆಗೆ ಯಾವುದೇ ತರಹದ ಕೀಟನಾಶಕ ಕೈಬಿಡಲು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ( ಎಐಕೆಕೆಎಮ್ ಎಸ್) ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಂಟಿ ಕೃಷಿ ನಿರ್ದೇಶಕರು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಣ ಜಡಗಣ್ಣನವರ,ಜಿಲ್ಲಾ ಅಧ್ಯಕ್ಷೆ ದೀಪಾ ವಿ,ಕಾರ್ಯದರ್ಶಿ ಶರಣು ಗೊನ್ವಾರ್ , ಹನುಮೇಶ್ , ಶಿವಾನಂದ …
Read More »
BigTv News
May 10, 2022
Breaking News
ಕುಂದಗೋಳ: ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿಂದು ತಾಲೂಕು ಆಡಳಿತ ವತಿಯಿಂದ ಶ್ರೀ ಶಂಕರಾಚಾರ್ಯ ಜಯಂತಿಯನ್ನು ಆಚರಿಸಲಾಯಿತು . ತಹಶೀಲ್ದಾರ್ ಅಶೋಕ್ ಸಿಗ್ಗಾವ್ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು . ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯಶಾಮ ಸುಂದರ್ ದೇಸಾಯಿ , ಅಶೋಕ ಪಾಲಂದೆ , ರಾಘವೇಂದ್ರ ಸಪ್ರೆ , ಶೋಭಾ ಪಾಲಂದೆ ಇನ್ನು ಅನೇಕರಿದ್ದರು .
Read More »
BigTv News
May 10, 2022
Breaking News
ಅಣ್ಣಿಗೇರಿ : ರೈಲ್ವೆ ನಿಲ್ದಾಣ ದಲ್ಲಿ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಮತ್ತು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪಭೇಟಿ ನೀಡಿ ಪರಿಶೀಲಿಸಿದರು . ಈ ವೇಳೆಯಲ್ಲಿ ಕೆಲವೊಂದು ಮೂಲಸೌಕರ್ಯದ ಕೊರತೆ ಇದೆ ಎಂಬುದನ್ನು ಸ್ಥಳೀಯರು ಸಚಿವರುಗಳ ಗಮನಕ್ಕೆ ತಂದಿದ್ದು , ಕೂಡಲೇ ಭೇಟಿ ನೀಡಿ ಪರಿಶೀಲಿಸಿದರು . ಇದಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳ ಶೀಘ್ರ ಇತ್ಯಾರ್ಥಕ್ಕೆ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದರು .
Read More »
BigTv News
May 10, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ – ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂಖ್ಯೆ 28 ರ ಗಾಮನಗಟ್ಟೆ ಚೆಕ್ ಡ್ಯಾಮ್ ಕಾಮಗಾರಿಗೆ ಶಾಸಕ ಅರವಿಂದ್ ಬೆಲ್ಲದ್ ಭೂಮಿ ಪೂಜೆ ನೆರವೇರಿಸಿದರು . ಈ ಸಂದರ್ಭದಲ್ಲಿ , ಪಾಲಿಕೆ ಸದಸ್ಯರಾದ ಶ್ರೀ ಚಂದ್ರಶೇಖರ್ ಮುನಗುಂಡಿ , ಶ್ರೀಮತಿ ಜ್ಯೋತಿ ಪಾಟೀಲ್ , ಹಿರಿಯ ಮುಖಂಡರಾದ ಶ್ರೀ ಈಶ್ವರ್ ಮಾಳಣ್ಣನವರ್ , ಶ್ರೀ ಕರಿಯಪ್ಪ ಅವರಾಧಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು .
Read More »
BigTv News
May 10, 2022
Breaking News, ಧಾರವಾಡ
ಧಾರವಾಡ: ಕವಲಗೇರಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದಡಿ ಧಾರವಾಡ ತಾಲೂಕಿನ ಕವಲಗೇರಿ ಚಂದನಮಟ್ಟಿ ಜಿಲ್ಲಾ ಮುಖ್ಯ ರಸ್ತೆ ಕೀ ಮೀ 1.90 ರಿಂದ ಕಿ ಮೀ 4.65 ರ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಅಮೃತ್ ದೇಸಾಯಿ ಭೂಮಿ ಪೂಜೆ ನೆರವೇರಿಸಿದರು . ಈ ವೇಳೆ ಗುರುನಾಥ ಗೌಡ ಗೌಡರ , ಭೀಮಣ್ಣರಾಮದುರ್ಗ , ನಾಗಪ್ಪ ತಿರ್ಲಾಪೂರ , ಅಶೋಕ ನಾವಳ್ಳಿ , ಶಿವು ಬೇಳ್ಳಾರದ , ಬಸಣ್ಣಭೈರಪ್ಪನವರ …
Read More »