Breaking News

Breaking News

ರಾಜ್ಯಕ್ಕೆ ಕೇಂದ್ರ ಗೃಹಸಚಿವ ಭೇಟಿ : ರಾಜಕೀಯದಲ್ಲಿ ಮಹತ್ವದ ತಿರುವು

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮೇ 3ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದು, ಸರ್ಕಾರಿ ಕಾರ್ಯಕ್ರಮಗಳ ಜೊತೆಗೆ ರಾಜ್ಯ ಬಿಜೆಪಿ ಕಚೇರಿಗೂ ಭೇಟಿ ನೀಡಿ ಪಕ್ಷದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಅಮಿತ್ ಶಾ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಬಹುದೆಂಬ ವಿಚಾರ ಮುನ್ನೆಲೆಗೆ ಬಂದಿದ್ದು, ಹೀಗಾಗಿ ಸಚಿವಾಕಾಂಕ್ಷಿಗಳ ರಾಜಕೀಯ ಚಟುವಟಿಕೆ ಗರಿಗೆದರಿದೆ.

Read More »

PSI ನೇಮಕ ಹಗರಣ : ಉಪವಾಸ ಸತ್ಯಾಗ್ರಹಕ್ಕೆ ಅಭ್ಯರ್ಥಿಗಳು ಪಟ್ಟು

ಬೆಂಗಳೂರು: ರಾಜ್ಯ ಸರ್ಕಾರದ ನಿದ್ದೆಕೆಡಿಸಿರುವ PSI ನೇಮಕ ಹಗರಣ ದಿನದಿಂದ ದಿನಕ್ಕೆ ಒಂದ ತಿರುವು ಪಡೆದುಕೊಳ್ಳುತ್ತಿದ್ದು, ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಿ ಮತ್ತೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಡುವೆ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ದ ಅಭ್ಯರ್ಥಿಗಳ ಸೇರಿದಂತೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದು, ಸರ್ಕಾರದ ಕ್ರಮವನ್ನು ಖಂಡಿಸುತ್ತಿದ್ದಾರೆ. ಸರ್ಕಾರ ಯಾರದ್ದೂ ತಪ್ಪನ್ನು ನಮಗೆ ಶಿಕ್ಷೆ ನೀಡಲು ಮುಂದಾಗಿರುವುದು ನಮಗೆ ಬೇಸರ ತಂದಿದ್ದೆ, ಈ ನಿಟ್ಟಿನಲ್ಲಿ ಕಾನೂನು ಸಮರಕ್ಕೆ …

Read More »

PSI ನೇಮಕಾತಿ ರದ್ದು : ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಎಚ್ ಡಿ‌ ಕೆ

ಹುಬ್ಬಳ್ಳಿ : PSI ನೇಮಕಾತಿ ರದ್ದು ಮಾಡಿದ ಹಿನ್ನಲೆ ರಾಜ್ಯ ಸರ್ಕಾರದ ವಿರುದ್ಧ ಎಚ್ ಡಿ‌ ಕೆ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಗಳಿಗೆ ಕರೆ ಮಾಡಿ ಮಾತನಾಡುತ್ತೇನೆ . ತನಿಖೆ ಪೂರ್ಣಗೊಳ್ಳುವ ಮುನ್ನವೇ ಸರ್ಕಾರ ನಿರ್ಧಾರ ಮಾಡಿದ್ದು ಸರಿಯಲ್ಲ. ತಪ್ಪಿತಸ್ಥರನ್ನ ಶಿಕ್ಷಿಸಿ, ಬಡಮಕ್ಕಳಿಗೆ ಅನ್ಯಾಯ ಮಾಡಬೇಡಿ. ಯಾರು ಹಣ ಕೊಟ್ಟ, ಪರೀಕ್ಷಾ ಅಕ್ರಮದ ಭಾಗಿಯಾಗಿದ್ದಾರೆ ಅಂತರವನ್ನು ಶಿಕ್ಷಿಸಿ ಎಂದರು.

Read More »

PSI ನೇಮಕಾತಿ ರದ್ದು : ಯಾವುದೇ ದಾರಿ ಇಲ್ಲ, ನಾವು ವಿಷ ಕುಡಿಯಬೇಕು ಅಷ್ಟೇ, ಅಭ್ಯರ್ಥಿಗಳ ಅಳಿಲು

ಹುಬ್ಬಳ್ಳಿ : ಪಿ ಎಸ್ ಐ ಪರೀಕ್ಷೆ ರದ್ದು ಕುರಿತು ಅಭ್ಯರ್ಥಿಗಳು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವನ್ನು ಹೊರಹಾಕಿದ್ದಾರೆ. ಮಾಧ್ಯಮರೊಂದಿಗೆ ಮಾತನಾಡಿದ ಅಭ್ಯರ್ಥಿಗಳು, ಪರೀಕ್ಷೆ ಬರೆದು ನೇಮಕಾತಿ ಹೊಂದಿದವರ ಸಿ ಐ ಡಿ ತನಿಖೆ ಎದುರಿಸಿದ್ರು ರದ್ದು ಮಾಡಿದ್ದು ಖಂಡನೀಯವಾಗಿದೆ. ನಮಗೆ ಯಾವುದೇ ದಾರಿ ಇಲ್ಲ, ನಾವು ವಿಷ ಕುಡಿಯಬೇಕು ಅಷ್ಟೇ ಎಂದ ಅಭ್ಯರ್ಥಿಗಳು ತಮ್ಮ ನೋವುನ್ನು ಹೇಳಿದ್ದಾರೆ. ಸರ್ಕಾರ ಸಿಐಡಿ ತನಿಖೆ ಎದುರಿಸಿ ಅಂತ ಹೇಳಿತ್ತು ಅದರಲ್ಲಿ …

Read More »

ಪಿಎಸ್ಐ ಮರು ಪರೀಕ್ಷೆ : ಕುಮಾರಸ್ವಾಮಿಯನ್ನು ಭೇಟಿಯಾಗಿ ಕಣ್ಣೀರಿಟ್ಟ ಅಭ್ಯರ್ಥಿಗಳು

ಹುಬ್ಬಳ್ಳಿ : ಪಿಎಸ್ಐ ಮರು ಪರೀಕ್ಷೆಗೆ ಸರ್ಕಾರ ಆದೇಶ ಮಾಡಿದ ಹಿನ್ನೆಲೆ ನಗರದ ಖಾಸಗಿ ಹೋಟೆಲ್ ನಲ್ಲಿ ಹೆಚ್.ಡಿ.ಕುಮಾರಸ್ವಾಮಿಯನ್ನ ಭೇಟಿಯಾಗಿ ಅಭ್ಯರ್ಥಿಗಳು ತಮ್ಮ ಅಳಿಲುನ್ನು ತೊಡಗಿಕೊಂಡಿದ್ದಾರೆ. ಅಭ್ಯರ್ಥಿಗಳು ಕುಮಾರಸ್ವಾಮಿ ಎದುರು ಕಣ್ಣೀರು ಹಾಕಿದ್ದಾರೆ. ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಶಿಕ್ಷೆ ಎಂದು ಪ್ರಶ್ನೆ ಮರು ಪರೀಕ್ಷೆ ಬೇಡ, ತನಿಖೆಯನ್ನು ಒಂದು ಸಲ ಅಲ್ಲ ಹತ್ತು ಸಲ ಮಾಡಿಸಲಿ.ಪ್ರಾಮಾಣಿಕರಿಗೆ ಅನ್ಯಾಯ ಮಾಡೋದು ಬೇಡ ನಮ್ಮನ್ನ ರಕ್ಷಿಸಿ ಎಂದು ಅಭ್ಯರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.

Read More »

ಗೋಶಾಲೆಗಳಿಗೆ ನೆರವು ಯೋಜನೆಗೆ ಅರ್ಜಿ‌ಆಹ್ವಾನ

ಧಾರವಾಡ :  ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆಯಿಂದ 2022-23 ನೇ ಸಾಲಿನಲ್ಲಿ ಪಿಂಜಾರಾಪೋಳ ಮತ್ತು ಇತರೆ ಗೋಶಾಲೆಗಳಿಗೆ ನೆರವು ಯೋಜನೆ ಅಡಿಯಲ್ಲಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ . ಅರ್ಹ ಆಸಕ್ತರು ಮೇ 10 ರೊಳಗಾಗಿ ಅರ್ಜಿ ಸಲ್ಲಿಸಬಹುದು . ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಛೇರಿ , ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ ಧಾರವಾಡ ದೂರವಾಣಿ ಸಂಖ್ಯೆ 0836-2447672 ಅಥವಾ 9900675607 ಸಂಪರ್ಕಿಸಬಹುದು ಎಂದು ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Read More »

ಜನರ ಸಮಸ್ಯೆಗೆ ಸ್ಪಂದಿಸಿದ ಸಚಿವ

ನವಲಗುಂದ :  ಇಂದು ಸಚಿವ ಎಸ್ಪಿ ಮುನೇನಕೊಪ್ಪ ಅವರ ಗೃಹ ಕಛೇರಿಯಲ್ಲಿ ನವಲಗುಂದ ಕ್ಷೇತ್ರದ ವಿವಿಧ ಪ್ರದೇಶದಲ್ಲಿ ಆಗಮಿಸಿದ ರೈತರ ಹಾಗೂ ಸಾರ್ವಜನಿಕರ ತಮ್ಮ ಸಮಸ್ಯೆಗಳ ಅಹವಾಲುಗಳನ್ನು ಸಚಿವರಿಗೆ ಸಲ್ಲಿಸಿದರು . ಅಹವಾಲು ಸ್ವೀಕರಿಸಿದ ಸಚಿವರು ರೈತರ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳನ್ನು ಬಗ್ಗೆಹರಿಸುವುದಾಗಿ ಭರವಸೆ ನೀಡಿದರು .

Read More »

ವರುಣುನ ಆರ್ಭಟ : ಮನೆಗೆ ನುಗ್ಗಿದ ನೀರು

ಅಣ್ಣಿಗೇರಿ : ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ವೆಂಕಟೇಶ್ವರ ನಗರದಲ್ಲಿರುವ ಮನೆಗಳಿಗೆ ನೀರು ನುಗ್ಗಿ ನದಿಯಂತೆ ಹರಿಯುತ್ತಿದೆ .ಇದರಿಂದಾಗಿ ನಿವಾಸಿಗಳಿಗೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಸಾಯಂಕಾಲ ಪ್ರಾರಂಭವಾದ ಮಳೆ ಸುಮಾರು ಒಂದು ಗಂಟೆಗಳ ಕಾಲ ಹೆಚ್ಚುಮಳೆ ಸುರಿದಿರುತ್ತದೆ . ಇನ್ನೂ ಮಳೆಯಿಂದಾಗಿ ಗಟಾರು ತುಂಬಿಕೊಂಡು ಗಟರ್ ನ ನೀರು ಸಹ ಕೆಲವೊಂದಿಷ್ಟು ಮನೆಗಳ ಒಳಗೆ ನುಗ್ಗಿರುತ್ತದೆ . ಅತಿಯಾದ ಮಳೆ ಗಾಳಿಗೆ ಪಟ್ಟಣದ ಕೆಲವೊಂದಿಷ್ಟು ಮನೆಗಳಿಗೆ ಹಾನಿ ಆಗಿವೆ .

Read More »

ಹುಬ್ಬಳ್ಳಿ ಗಲಭೆ : ಆರೋಪಿ ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿ :  ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಿಂದ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಆರೋಪಿಯೋಬ್ಬ ಪೊಲೀಸ್ ಠಾಣೆಯಲ್ಲೇ ಟರ್ಪೆಂಟೇಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ .  ಕಳೆದ ಎರಡು ದಿನಗಳ ಹಿಂದೆ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಆರೋಪಿ ಹೀಗೆ ಮಾಡಿಕೊಂಡಿದ್ದನೆಂದು ಹೇಳಲಾಗುತ್ತಿದೆ .  ಚಿಕಿತ್ಸೆಗಾಗಿ ಆತನನ್ನ ಕಿಮ್ಸ್‌ಗೆ ದಾಖಲು ಮಾಡಲಾಗಿದೆ . ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ರಾತ್ರಿ ಸಮಯದಲ್ಲಿ ಆರೋಪಿ ಟರ್ಪೆಂಟೇಲ್ ಕೇಳಿದ್ದಾನೆ.ಯಾವುದೋ ಗಾಯಕ್ಕೆ …

Read More »

ಅಂಜುಮನ್ ಇಸ್ಲಾಂ ಸಂಸ್ಥೆಯಿಂದ ಕುಮಾರಸ್ವಾಮಿಗೆ ಸನ್ಮಾನ

ಹುಬ್ಬಳ್ಳಿ: ಜೆಡಿಎಸ್ ಪಕ್ಷ ಕೈಗೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ನಿನ್ನೆ ಆಗಮಿಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಂಜುಮನ್ ಇಸ್ಲಾಂ ಸಂಸ್ಥೆ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಲಾಗಿದೆ . ಅಂಜುಮನ್ ಇಸ್ಲಾಂ ಸಂಸ್ಥೆಯ ಮುಖ್ಯಸ್ಥರಾದ ಯೂಸುಫ್ ಸವಣೂರು , ಅಲ್ತಾಫ್ ನವಾಜ್ ಕಿತ್ತೂರ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು . ಅಲ್ಲದೇ ಹುಬ್ಬಳ್ಳಿಯ ಗಲಭೆಯ ಕುರಿತಾಗಿ ಸಮಾಲೋಚನೆ ನಡೆಸಿದರು .

Read More »