Breaking News

Breaking News

ಮಾರುತಿ ಮಂದಿರದ 50 ನೇ ವರ್ಷದ ಸುವರ್ಣ ಮಹೋತ್ಸವ ಉದ್ಘಾಟನೆ

ಹುಬ್ಬಳ್ಳಿ: ಇಲ್ಲಿಯ ಗಂಗಾಧರ ನಗರದ ಸುಪ್ರಸಿದ್ಧ ಶ್ರೀ ಮಾರುತಿ ಮಂದಿರದ 50 ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗಂಗಾಧರ್ ನಗರದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಕೋಟ್ಯಂತರ ರೂ . ಅನುದಾನ ನೀಡಿ ಸಾಕಷ್ಟು ಅಭಿವೃದ್ಧಿಪಡಿಸಿದ್ದು , ಈ ಭಾಗದ ಕಡು ಬಡ ಕುಟುಂಬದವರ ಕಲ್ಯಾಣ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಡಲು 5 ಕೋ.ರೂ.ಅನುದಾನದಲ್ಲಿ ಸುಸಜ್ಜಿತ ಸಮುದಾಯ ಭವನ ಸಹ ನಿರ್ಮಿಸುತ್ತಿದ್ದು , ಶೀಘ್ರದಲ್ಲೇ ಭವನದ …

Read More »

ಡಾ. ಸಿದ್ದಲಿಂಗ ಸ್ವಾಮೀಜಿ ಅವರ ಜನ್ಮದಿನಭಾವೈಕ್ಯ ದಿನ’ವನ್ನಾಗಿ ಆಚರಣೆ : ಸಿಎಂ

ಗದಗ: ‘ತೋಂಟದಾರ್ಯ ಮಠದ ಲಿಂಗೈಕ್ಯ ಡಾ. ಸಿದ್ದಲಿಂಗ ಸ್ವಾಮೀಜಿ ಅವರ ಜನ್ಮದಿನವಾದ ಫೆ.21 ಅನ್ನು ಭಾವೈಕ್ಯ ದಿನ’ವನ್ನಾಗಿ ಆಚರಿಸಲು ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ತೋಂಟದಾರ್ಯ ಮಠದಲ್ಲಿ ನಿರ್ಮಾಣಗೊಂಡಿರುವ ತ್ರಿವಿಧ ದಾಸೋಹಿ ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ ಐಕ್ಯಮಂಟಪವನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ‘ಶ್ರೀಗಳ ಐಕ್ಯಮಂಟಪ‌ವನ್ನು ಲೋಕಾರ್ಪಣೆ‌ ಮಾಡುವ ಅವಕಾಶ, ಹಿಂದೆ ಶ್ರೀಗಳ ಒಡನಾಟ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ. ತೋಂಟದಾರ್ಯ …

Read More »

ಸಂತೋಷ್‌ ಪಾಟೀಲ ಸಾವಿಗೂ ಕಾಂಗ್ರೆಸ್‌, ಬಿಜೆಪಿ ನಾಯಕರ ಲಿಂಕ್ : ಯತ್ನಾಳ್ ಆರೋಪ

ವಿಜಯಪುರ: ‘ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆಯ ಹಿಂದೆ ಕಾಂಗ್ರೆಸ್ ಜೊತೆ ಬಿಜೆಪಿ ನಾಯಕರ ಕೈವಾಡವೂ ಇದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಹಾಗೂ ಬಿಜೆಪಿಯ ತಲಾ ಒಬ್ಬರು ನಾಯಕರು ಇಂಥ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ.ಸಿಡಿ ಮಾಡುವುದು, ಎಡಿಟ್ ಮಾಡುವುದೇ ಇವರ ಕಾಯಕ. ಈ ನಾಯಕರು ಮಹಾನ್ ಕಳ್ಳರು’ ಎಂದರು.

Read More »

ಜನತಾ ಜಲಧಾರೆ-ಗಂಗಾ ರಥಯಾತ್ರೆಗೆ ಚಾಲನೆ

ಬೆಂಗಳೂರು: ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ಸಂಕಲ್ಪ ಮಾಡಿ ಜಾತ್ಯತೀತ ಜನತಾ ದಳ ಹಮ್ಮಿಕೊಂಡಿರುವ ಜನತಾ ಜಲಧಾರೆ-ಗಂಗಾ ರಥಯಾತ್ರೆಗೆ ಶನಿವಾರ ಚಾಲನೆ ಸಿಗಲಿದೆ. ಬೆಳಗ್ಗೆ 11ಕ್ಕೆ ರಾಜ್ಯದ 15 ಜೀವ ನದಿಗಳ ಪುಣ್ಯಜಲವನ್ನು ಕಲಶಕ್ಕೆ ತುಂಬಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ. ಈಗಾಗಲೆ ಹದಿನೈದು ಗಂಗಾ ರಥಗಳು ನಿಗದಿತ ಸ್ಥಳಗಳನ್ನು ತಲುಪಿದ್ದು, ಆಯಾ ಜಿಲ್ಲೆಗಳ ಪಕ್ಷದ ಅಧ್ಯಕ್ಷರು, ಶಾಸಕರು, ಕಾರ್ಯಕರ್ತರು ಅವುಗಳನ್ನು ಬರ ಮಾಡಿಕೊಂಡಿದ್ದಾರೆ.

Read More »

ಡಾ|| ಶ್ರೀಧರ ಹೊಸಮನಿ ಅವರಿಗೆ ಸಾಧನ ಕೇರಿಯ ಸಾಧಕ ರತ್ನ ಪ್ರಶಸ್ತಿ

ಹುಬ್ಬಳ್ಳಿ: ಅಕ್ಷರ ದೀಪ ಫೌಂಡೇಶನ್ ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಯುಗಾದಿ ಸಂಭ್ರಮ ಹಾಗೂ ವರಕವಿ ದರಾ ಬೇಂದ್ರೆ ನುಡಿ ನಮನ ಸಮಾರಂಭ ಅಂಗವಾಗಿ ಡಾ|| ಶ್ರೀಧರ ಹೊಸಮನಿ ಖ್ಯಾತ ಯೋಗ ಪಟು ಹಾಗೂ ಇಂಟರ್ ನ್ಯಾಶನಲ್ ಯೋಗ ಪಟು ಕುಸುಗಲ್ ಗ್ರಾಮ್ ವೈಭವನಗರ ಇವರ ಯೋಗ ಸಾಧನೆಗಳನ್ನು ನೋಡಿ ಇಂದು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ಡಾ|| ಶ್ರೀಧರ …

Read More »

ತನಿಖೆ ನಂತರ ಕಾಂಗ್ರೆಸ್ ಪಕ್ಷದ ಬಣ್ಣ ಬಯಲು : ಅರುಣ್ ಸಿಂಗ್ ಕಿಡಿ

ಹುಬ್ಬಳ್ಳಿ: 40% ಕಮೀಷನ್ ಆರೋಪದ ಹಿಂದೇ ಯಾರಿದ್ದಾರೆ ಎಂಬುವುದು ಗೊತ್ತಿದೆ. ಇದೆಲ್ಲ ಕಾಂಗ್ರೆಸ್ ಷಡ್ಯಂತ್ರ. ತನಿಖೆಯ ನಂತರ ಎಲ್ಲವೂ ಹೊರಬರಲಿದೆ. ಕಾಂಗ್ರೆಸ್ ನಾಯಕರು ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಮಿಷನ್‌ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹೊಸಪೇಟೆಯಲ್ಲಿ ರಾಜ್ಯ ಕಾರ್ಯಕಾರಿಣಿ ನಡೆಯುತ್ತಿದೆ. ಮೊದಲ ಬಾರಿಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸುತ್ತಿದ್ದಾರೆ. …

Read More »

ನೇಣು ಬಿಗಿದುಕೊಂಡು ವೃದ್ದ ಆತ್ಮಹತ್ಯೆ:ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಹುಬ್ಬಳ್ಳಿ: ಮೂಲವ್ಯಾಧಿಯಿಂದ ಬೇಸತ್ತು ವೃದ್ಧನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಾವನೂರ ಗ್ರಾಮದಲ್ಲಿ ಗುರುವಾರ ನಡೆದಿದೆ. ಗ್ರಾಮದ ದೊಡ್ಡಫಕೀರಪ್ಪ ಚಿಂತಗಾಲ (65) ಎಂಬುವವರೇ ಆತ್ಮಹತ್ಯೆಗೆ ಶರಣಾದವನು. ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಮೂಲವ್ಯಾಧಿಯಿಂದ ಗುಣಮುಖರಾಗಿರಲಿಲ್ಲ. ಇದರಿಂದ ಮನನೊಂದು ಗ್ರಾಮದ ಸ್ಮಶಾನದಲ್ಲಿ ಬೇವಿನಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕೆಜಿಎಫ್ ಚಾಪ್ಟರ್ – 2ಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ

ಹುಬ್ಬಳ್ಳಿ: ವಿಶ್ವದಾದ್ಯಂತ ಬಾರಿ ನಿರೀಕ್ಷೆ ಮೂಡಿಸಿರುವ ಕೆಜಿಎಫ್ ಚಾಪ್ಟರ್ – 2 ಚಿತ್ರ ಬಿಡುಗಡೆಗೊಂಡಿದ್ದು, ಪ್ರೇಕ್ಷಕರು ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಅದರಂತೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಚಿತ್ರಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದ್ದು, ಎರಡನೇ ದಿನವಾದ ಇಂದು ಕೂಡಾ ಕೆಜಿಎಫ್ ಚಾಪ್ಟರ್-2 ಹೌಸಪುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಕೆಜಿಎಫ್ ಚಾಪ್ಟರ್- 1 ಗೆ ದೊಡ್ಡಮಟ್ಟದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿದ್ದು. ಅದರಂತೆ ಕೆಜಿಎಫ್ ಚಾಪ್ಟರ್-2 ಗೆ ಸಖತ್ ರೆಸ್ಪಾನ್ಸ್ ದೊರೆತಿದೆ. ಪ್ರಶಾಂತ ನೀಲ್ …

Read More »

ಹಿರಿಯ ಪತ್ರಕರ್ತ ಡಾ.ಶಿವರಾಮ ಅಸುಂಡಿಯವರ ಕೃತಿಗಳ ಬಿಡುಗಡೆ

ಹುಬ್ಬಳ್ಳಿ: ಪ್ರಗತಿ ಗ್ರಾಫಿಕ್ಸ್ ಬೆಂಗಳೂರು ಪ್ರಕಟಿಸಿದ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಡಾ.ಶಿವರಾಮ್ ಅಸುಂಡಿಯವರ ಕೋಣನ ಮುಂದೆ ಕಿನ್ನರಿ ಮತ್ತೆರಡು ನಾಟಕ ಹಾಗೂ ಚಿತ್ರಂ ಭಳಾರೆ ವಿಚಿತ್ರಂ ಕೃತಿಗಳನ್ನು ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ ಬಿಡುಗಡೆಗೊಳಿಸಿದರು. ಹುಬ್ಬಳ್ಳಿಯ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಬಳಿಕ ಮಾತನಾಡಿದ ಅವರು, ಪತ್ರಿಕೋದ್ಯಮದ ಬ್ಯೂಸಿ ಬದುಕಿನಲ್ಲಿ ಇಂತಹದೊಂದು ಕಾರ್ಯಕ್ಕೆ ಕೈ ಹಾಕಿ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ …

Read More »

ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಕೆ

ಕುಂದಗೋಳ: ತಾಲೂಕಿನ ಅಲ್ಲಾಪೂರ ಗ್ರಾಮದ ಎರಡು ಅಂಗನವಾಡಿ ಕೇಂದ್ರದಲ್ಲಿ ಇಂದು 131 ನೇ ಅಂಬೇಡ್ಕರ್‌ ಜಯಂತಿ ಅಂಗವಾಗಿ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ರೆಡ್ಡಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು . ಈ ಸಂದರ್ಭದಲ್ಲಿ ಒಂದನೇ ಅಂಗನವಾಡಿ ಕೇಂದ್ರಕ್ಕೆ ಚೇರ್ ಟೇಬಲ್ ಇನ್ನು ಹಲವಾರು ವಸ್ತುಗಳನ್ನು ಸಹಾಯ ಹಸ್ತ ನೀಡಿದ ಗ್ರಾಮದ ದಾನಿಗಳಿಗೆ ಒಂದನೇ ಅಂಗನವಾಡಿ ಕಾರ್ಯಕರ್ತೆ ಯಿಂದ ಸಸಿ ನೀಡುವ ಮೂಲಕ ಗೌರವಿಸಿದರು ಈ ಸಂದರ್ಭದಲ್ಲಿ …

Read More »