Breaking News

Breaking News

ಐಪಿಎಲ್ ಬೇಟಿಂಗ್ : ಅವಳಿನಗರದ ಪೋಲಿಸರು ಭಾಗಿ…?

ಹುಬ್ಬಳ್ಳಿ : ಐಪಿಎಲ್ ಕ್ರಿಕೆಟ್ ಪ್ರಾರಂಭವಾದ ದಿನದಿಂದಲೇ ಅವಳಿ ನಗರದಲ್ಲಿ ಬೇಟಿಂಗ್ ಹಾವಳಿಗೆ ಎನ್ನೂ ಕಮ್ಮಿಇಲ್ಲಾ. ಅದರಲ್ಲಿ ಪೋಲಿಸರೂ ಭಾಗಿಯಾಗಿರುವುದು ವಿಪರ್ಯಾಸ. ನಾಕೋಡ ಚರ್ಚೆ ಬಳಿ ಆಶ್ರಮ ಹತ್ತಿರ ನಿವಾಸಿ ಮೂರು ದಿನಗಳ ಹಿಂದೆಬೇಟಿಂಗ್ ಆಡುತ್ತೀದ್ದನ್ನು ಗಮನಿಸಿದ ಪೋಲಿಸ್ ಪಾಪ ಪಾ.. ಎಂಬುವವರು ತಮ್ಮ ಠಾಣೆಯ ವ್ಯಾಪ್ತಿಗೆ ವಿರದ ಸ್ಥಳಕ್ಕೆ ಲಗ್ಗೆ ಹಾಕಿ 15 ಸಾವಿರ ರೂ. ಗಳನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮತ್ತೊಬ್ಬ ಬುಕ್ಕಿಯ ಕಡೆಯಿಂದಲೂ ಹಣವನ್ನು ದೊಚಿಕೊಂಡಿದ್ದಾರೆ. …

Read More »

ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಕ್ಕೆ : ಗುರಿಕಾರ ಬೆಂಬಲ

ಧಾರವಾಡ: ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಬೇಕು ಎಂದು ಆಗ್ರಹಿಸ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಸದಸ್ಯರು ನಡೆಸುತ್ತಿರುವ ಧರಣಿಗೆ ಕರ್ನಾಟಕ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹಿಂದೆಯೇ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾಡಬೇಕಿತ್ತು. ವಿಳಂಬ ಆಗಿದೆ. ಈಗಲೂ ಕಾಲ ಮಿಂಚಿಲ್ಲ. ಧಾರವಾಡದ ಜನತೆಯ ಅಳಲನ್ನು ಆಲಿಸಿ ಕೂಡಲೇ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಂಜೂರು ಮಾಡಬೇಕು …

Read More »

ಬಿಜೆಪಿ ಸಂಸ್ಥಾಪನ‌ ದಿನ: ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಆಚರಣೆ

ಹುಬ್ಬಳ್ಳಿ :ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನದ ನಿಮಿತ್ತ ಹುಬ್ಬಳ್ಳಿ-ಧಾರವಾಡ ಮಹಾನಗರ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೈಗೊಳ್ಳಲಾಯಿತು. ಈ ಸಂಧರ್ಭದಲ್ಲಿ ಮಾಜಿ ಮಹಾಪೌರ ಹಾಗೂ ಬಿಜೆಪಿ‌ ಮಹಿಳಾ ಘಟಕದ ಮುಖಂಡೆ ರಾಧಾಬಾಯಿ ಸಫಾರೆ, ಪ್ರಭು ನವಲಗುಂದಮಠ, ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Read More »

ನಿವೃತ್ತ ಯೋಧನಿಗೆ ಅದ್ದೂರಿಯಾಗಿ ಸ್ವಾಗತ ಮಾಡಿದ ಗೆಳೆಯರ ಬಳಗ

ಹುಬ್ಬಳ್ಳಿ: ಬಿಎಸ್ಎಫ್ ದಲ್ಲಿ ಸುದೀರ್ಘ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ಮರಳಿ ತಮ್ಮ ಊರಿಗೆ ಆಗಮಿಸಿದ ಯೋಧ ಸುರೇಶ ರಾಮು ದೇವೂರ ಅವರನ್ನು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ರೇಲ್ವೆ ನಿಲ್ದಾಣದಲ್ಲಿ ಮಂಜುನಾಥ ಹೆಬಸೂರ ಗೆಳೆಯರ ಬಳಗ, ಯೋಧನಿಗೆ ಆರತಿ ಎತ್ತಿ, ಅವರಿಗೆ ಭಾರತ ಮಾತೆಯ ಭಾವ ಚಿತ್ರ ನೀಡುವ ಮೂಲಕ ವಿಶೇಷ ಗೌರವ ಸಲ್ಲಿಸಿ ಆತ್ಮೀಯವಾಗಿ ಬರಮಾಡಿಕೊಂಡರು. 1999ರಲ್ಲಿ ಬಿಎಸ್ಎಫ್ ಗೆ ಸೇರ್ಪಡೆಗೊಂಡಿದ್ದ ಸುರೇಶ, ಜಮ್ಮು ಕಾಶ್ಮೀರ, ಪಂಜಾಬ, …

Read More »

ಏ. 10 ರಂದು ಸಿದ್ಧಾರೂಢದಲ್ಲಿ ತೊಟ್ಟಿಲೋತ್ಸವ

ಹುಬ್ಬಳ್ಳಿ : ನಗರದ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳವರ 186 ನೇ ಜನೋತ್ಸವವನ್ನು ಏ .02 ರಿಂದ 10 ರವರೆಗೆ ಆಚರಿಸಲಾಗುತ್ತಿದ್ದೆ. ಈ ಕಾರ್ಯಕ್ರಮದ ಅಂಗವಾಗಿ ದಿ .10 ರಂದು ಮುಂಜಾನೆ 12 ಘಂಟೆಗೆ ಶ್ರೀಗಳವರ ಪಾಲಕಿಯು ವಾದ್ಯಮೇಳ ಗಳೊಂದಿಗೆ ನಗರದಲ್ಲಿ ಸಂಚರಿಸಿ ಸಂಜೆ 5 ಘಂಟೆಗೆ ಆರತಿ ಹಾಗೂ ಕುಂಬ ಹೊತ್ತ ಮಹಿಳೆಯರು ಸ್ವಾಗತಿಸಿಕೊಂಡ ನಂತರ ಶ್ರೀಮಠಕ್ಕೆ ತಲುಪುವುದು ನಂತರ ಶ್ರೀಗಳವರ ತೊಟ್ಟಿಲೋತ್ಸವ ನಡೆಯಲಿದೆ …

Read More »

ವ್ಯಕ್ತಿ ಆತ್ಮಹತ್ಯೆ : ದೂರ ದಾಖಲಿಸಲು ನಿರಾಕರಿಸಿದ ಪೋಲಿಸರು

ಕಲಘಟಗಿ : ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಘಟಗಿಯಲ್ಲಿ ನಡೆದಿದೆ . ತಾಲೂಕಿನ ಗಾಂಧಿ ನಗರ ನಿವಾಸಿ ಹನುಮಂತಪ್ಪ ಮೃತ ವ್ಯಕ್ತಿ ಹನುಮಂತಪ್ಪ ಹಾಗೂ ದುರ್ಗಮ್ಮದಂಪತಿಗೆ ಪಕ್ಕದಲ್ಲಿ ವಾಸವಿರುವ ಶಾಂತವ್ವ ಹಾಗೂ ಆಕೆಯ ಗಂಡ ನಿರಂತರ ಕಿರುಕುಳ ಕೊಡ್ತಿದ್ದರ ಎನ್ನಲಾಗಿದೆ . ಈ ಎರಡೂ ಕುಟುಂಬದ ಜಗಳ ಅನೇಕ ಬಾರಿ ಪೊಲೀಸ್ ಠಾಣೆವರೆಗೂ ಹೋಗಿ ನಂತರ ಹಿರಿಯರ ಮೂಲಕ ಬಗೆಹರಿಸಲಾಗಿತ್ತು . ಆದರೆ ನಿನ್ನೆ ಮತ್ತೆ …

Read More »

ಧಾರವಾಡದಲ್ಲಿ ಜನತಾ ಪಕ್ಷದ ಸ್ಥಾಪನಾ ದಿನ ಆಚರಣೆ

ಧಾರವಾಡ : ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನದ ನಿಮಿತ್ತ , ಧಾರವಾಡದ ಭಾರತೀಯ ಜನತಾ ಪಕ್ಷದ ಕಚೇರಿ ಬಳಿಯ ವಿವೇಕಾನಂದ ಸರ್ಕಲ್‌’ನಲ್ಲಿ ಶ್ರೀ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಶಾಸಕ ಅರವಿಂದ್ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು . ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸಂಜಯ್ ಕಪಟಕರ್ , ಮಂಡಲ ಅಧ್ಯಕ್ಷರಾದ ಬಸವರಾಜ ಗರಗ ಸೇರಿದಂತೆ ಪಕ್ಷದ ಪ್ರಮುಖರು , ಮುಖಂಡರು ಹಾಗೂ ವಿವಿಧ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು .

Read More »

ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವುದಾಗಿ ಪ್ರಸಾದ್ ಅಬ್ಬಯ್ಯ ಭರವಸೆ

ಹುಬ್ಬಳ್ಳಿ : ರಸ್ತೆ ಅಗಲೀಕರಣಕ್ಕಾಗಿ ಕಾರವಾರ ರಸ್ತೆಯ ಶಿವಶಂಕರ ಕಾಲನಿಯಲ್ಲಿ ರಸ್ತೆಗೆ ಹತ್ತಿಕೊಂಡಿದ್ದ ಮನೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತೆರವು ಮಾಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು . ರಸ್ತೆ ಅಗಲೀಕರಣದಿಂದ ಮನೆ ಕಳೆದುಕೊಂಡ ಸಂತ್ರಸ್ತರ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಎಲ್ಲ ನಿರಾಶ್ರಿತರಿಗೆ ಸೂಕ್ತ ಜಾಗ ಗುರುತಿಸಿ ಸ್ವಂತ ಸೂರು ಕಲ್ಪಿಸುವುದಾಗಿ ಶಾಸಕರು ಭರವಸೆ ನೀಡಿದರು .

Read More »

ವಿದ್ಯುತ್ ತಂತಿ ತಗುಲಿ ಕಾಂಗ್ರೆಸ್ ಮುಖಂಡ ಸಾವು

ಕಾಸರಗೋಡು : ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕಾಂಗ್ರೆಸ್ ಮುಖಂಡರೋರ್ವರು ಮೃತಪಟ್ಟ ದಾರುಣ ಘಟನೆ ಬುಧವಾರ ಸಂಜೆ ಕಾಞ೦ಗಾಡ್ನ ಮಣಿಯಾಟ್ ನಲ್ಲಿ ನಡೆದಿದೆ. ಕಾಞ೦ಗಾಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ . ವಿ ಬಾಲಕೃಷ್ಣನ್ ( ೬೪) ಮೃತಪಟ್ಟವರು.ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಕಡಿದು ಬಿದ್ದಿದ್ದ ತಂತಿ ತಗಲಿ ದುರ್ಘಟನೆ ನಡೆದಿದೆ. ಸಂಜೆ ಭಾರೀ ಗಾಳಿಗೆ ವಿದ್ಯುತ್ ತಂತಿ ಕಡಿದು ಬಿದ್ದಿದ್ದು ಈ ರಸ್ತೆಯಾಗಿ ಬರುತ್ತಿದ್ದ ಬಾಲಕೃಷ್ಣ ಅವರ …

Read More »

ನ್ಯೂಯಾರ್ಕ್‌ ನಲ್ಲಿ ಗಣೇಶ ದೇವಸ್ಥಾನ ರಸ್ತೆ

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ನ ಕ್ವೀನ್ಸ್‌ ನಗರದಲ್ಲಿ ಇದೀಗ ಗಣೇಶ ದೇವಸ್ಥಾನ ರಸ್ತೆಯಿದೆ! ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಚಳವಳಿಯ ಪ್ರಸಿದ್ಧ ಹೋರಾಟಗಾರ ಜಾನ್‌ ಬೋವ್ನೆ ನೆನಪಿನಲ್ಲಿ ನಿರ್ಮಿಸಲಾಗಿರುವ ಬೋವೆ° ರಸ್ತೆಗೆ ಇದೀಗ ಗಣೇಶ ದೇವಸ್ಥಾನ ರಸ್ತೆ ಎಂದು ಹೆಸರಿಡಲಾಗಿದೆ.

Read More »