BigTv News
June 30, 2026
Breaking News
ಬೆಳಗಾವಿ: ವಿವಾಹಿತ ಮಹಿಳೆಯೊಂದಿಗೆ ಯುವಕ ಪರಾರಿಯಾಗಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗುಂಪೊಂದು ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ಯುವಕನ ಮನೆ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದೆ. ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ, ಪೀಠೋಪಕರಣಗಳನ್ನು ಪುಡಿಗೈದಿರುವ ಆರೋಪ ಕೇಳಿಬಂದಿದೆ. ದಾಳಿಕೋರರು ಮನೆಯ ಪಕ್ಕದಲ್ಲಿದ್ದ ಕುರಿಗಳನ್ನು ಕದ್ದು ತೆಗೆದುಕೊಂಡು ಹೋಗಿ ಪಾರ್ಟಿ ಮಾಡಿರುವುದಾಗಿ ಸಂತ್ರಸ್ತ ಕುಟುಂಬ ಆರೋಪಿಸಿದೆ. ಯುವಕ ಕಳೆದ ಎರಡು ವರ್ಷಗಳಿಂದ ಮನೆಗೆ ಬಂದಿರಲಿಲ್ಲ ಹಾಗೂ ಈ ಸಂಬಂಧದ ಬಗ್ಗೆ …
Read More »
BigTv News
June 30, 2026
Breaking News
ಬೆಂಗಳೂರು: ನಗರದ ವಿವಿಧೆಡೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಪೊಲೀಸರು 17 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ, ₹25.23 ಕೋಟಿ ಮೌಲ್ಯದ ಎಂಡಿಎಂಎ, ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತರಲ್ಲಿ ಮೂವರು ನೈಜೀರಿಯಾ ಪ್ರಜೆಗಳು ಸೇರಿದ್ದು, ಅವರಿಂದಲೇ ₹23 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿದೆ. ಡ್ರಗ್ಸ್‌ಗಳನ್ನು ವಿದ್ಯಾರ್ಥಿಗಳು ಹಾಗೂ ಟೆಕಿಗಳಿಗೆ ಮಾರಾಟ ಮಾಡುತ್ತಿದ್ದರು. ಪ್ರಮುಖ ಡ್ರಗ್ ಪೂರೈಕೆದಾರರ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತ …
Read More »
BigTv News
June 29, 2026
Breaking News
ರಾಮನಗರ ತಾಲೂಕಿನ ಸಂಗಬಸವನದೊಡ್ಡಿ ಗ್ರಾಮದ ಸುಶೀಲಮ್ಮ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಮೈಮೇಲಿದ್ದ ಚಿನ್ನಾಭರಣ ದೋಚಿದ ಆರೋಪದ ಮೇಲೆ ಅದೇ ಗ್ರಾಮದ ಗಿರಿಜಾ (36) ಮತ್ತು ಮಹೇಶ್ (42) ಅವರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಸುಶೀಲಮ್ಮ ನೀಡಿದ್ದ ₹20 ಸಾವಿರ ಸಾಲದ ವಿಚಾರವೇ ಕೊಲೆಗೆ ಕಾರಣ ಎನ್ನಲಾಗಿದೆ. ಜೂನ್ 15ರಂದು ಮನೆಯಿಂದ ಹೊರಟಿದ್ದ ಸುಶೀಲಮ್ಮ ನಾಪತ್ತೆಯಾಗಿದ್ದು, ಬಳಿಕ ಜೂನ್ 21ರಂದು ರೈಲ್ವೆ ಹಳಿಯ ಬಳಿ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ …
Read More »
BigTv News
June 29, 2026
Breaking News
ಬೆಂಗಳೂರು ಅಮೃತಹಳ್ಳಿ ಠಾಣೆಯ ಪಿಎಸ್‌ಐ ಪ್ರವೀಣ್ ವಿರುದ್ಧ ಅಪ್ರಾಪ್ತ ಬಾಲಕರ ಮೇಲೆ ದೌರ್ಜನ್ಯ ಎಸಗಿದ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣ ಸಂಬಂಧ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣದ ವಿಚಾರಣೆ ನೆಪದಲ್ಲಿ ಬಾಲಕರನ್ನು ಖಾಸಗಿ ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸಿರುವ ಆರೋಪವಿದೆ. ವಿಚಾರಣೆ ವೇಳೆ ಅಸಭ್ಯ ಹಾಗೂ ಅಮಾನವೀಯ ಕೃತ್ಯ ಎಸಗಿರುವುದಲ್ಲದೆ, ಅದರ ವಿಡಿಯೋವನ್ನು ಸ್ವತಃ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ ಎನ್ನಲಾಗಿದೆ. ಈ ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ …
Read More »
BigTv News
June 29, 2026
Breaking News
ಮೈಸೂರಿನಲ್ಲಿ ವ್ಯಕ್ತಿಯೊಬ್ಬರ ಸಾವನ್ನು ಹೃದಯಾಘಾತ ಎಂದು ಬಿಂಬಿಸಲು ಯತ್ನಿಸಿದ್ದ ಪ್ರಕರಣ ಕೊಲೆ ಎಂಬುದು ಬೆಳಕಿಗೆ ಬಂದಿದೆ. ಮೃತ ನಿತ್ಯಾನಂದ ಅವರ ಕುತ್ತಿಗೆಯಲ್ಲಿ ಗಾಯದ ಗುರುತು ಕಂಡು ಅನುಮಾನಗೊಂಡ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ ಬಳಿಕ ಸತ್ಯ ಬಹಿರಂಗವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಪತ್ನಿ ಸುಶೀಲ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಮಕ್ಕಳಿಲ್ಲದಿರುವುದು, ಕೌಟುಂಬಿಕ ಕಲಹ ಹಾಗೂ ಹಣಕಾಸು-ಆಸ್ತಿ ವಿಚಾರಕ್ಕೆ ಆಗಾಗ ಜಗಳವಾಗುತ್ತಿತ್ತು. ಮದ್ಯದ ಅಮಲಿನಲ್ಲಿ ಮಲಗಿದ್ದ ವೇಳೆ ಹಗ್ಗದಿಂದ ಕುತ್ತಿಗೆ ಬಿಗಿದು …
Read More »
BigTv News
June 29, 2026
Breaking News
ರಟ್ಟಿಹಳ್ಳಿ: ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಆಟೋರಿಕ್ಷಾ ಮೇಲೆ ದಾಳಿ ನಡೆಸಿದ ಪೊಲೀಸರು 56 ಕೆ.ಜಿ. ಗೋಮಾಂಸ ಹಾಗೂ 20 ಕೆ.ಜಿ. ಗೋವಿನ ಗೊಬ್ಬನ್ನು ವಶಪಡಿಸಿಕೊಂಡ ಘಟನೆ ಇಲ್ಲಿಯ ಭಗತ್ಸಿಂಗ್ ವೃತ್ತದಲ್ಲಿ ನಡೆದಿದೆ.ಹರಿಹರ ತಾಲೂಕಿನ ಭರಮಪುರಿ ಗಾಂಧಿನಗರದ ನಿವಾಸಿ ಎಸ್. ಮಹ್ಮದ್ಖೈಪ್ ಶಬ್ಬೀರ್ (24) ಹಾಗೂ ಮಾಸೂರ ಗ್ರಾಮದ ಇರ್ಫಾನ್ ಬಾಬುಲಾಲ್ಸಾಬ ಮೇಡ್ಲೇರಿ ಎಂಬುವರು ಆಟೋರಿಕ್ಷಾದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ …
Read More »
BigTv News
June 29, 2026
Breaking News
ಸವಣೂರ: ಕಸಾಯಿಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನ ಹಿಡಿದ ಪೊಲೀಸರು 5 ಗೋವಿಗಳನ್ನು ರಕ್ಷಣೆ ಮಾಡಿರುವ ಘಟನೆ ಪಟ್ಟಣದ ಮಾವೂರ ರಸ್ತೆಯಲ್ಲಿ ನಡೆದಿದೆ. ಬ್ಯಾಡಗಿ ಪಟ್ಟಣದ ಶಿವಪುರ ಬಡಾವಣೆಯ ಮಹ್ಮದ್‌ಅಲಿ ಮುಸ್ತಫಾ ಬೆಳಗಾಂವ (33) ಹಾಗೂ ಮಹಬೂಬಸಾಬ ಬಾಬಾಜಾನಸಾಬ ಬೆಳಗಾಂವ (45) ಎಂಬುವರು ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅಶೋಕ ಲೈಲ್ಯಾಂಡ್ ವಾಹನ ವಶಕ್ಕೆ ಪಡೆದು 5 ಆಕಳುಗಳನ್ನು …
Read More »
BigTv News
June 29, 2026
Breaking News, Crime, ತಮಿಳುನಾಡು
ಆಸ್ಪತ್ರೆ ಭಯಕ್ಕೆ ಬಲಿಯಾದ ಜೀವ: ಯೂಟ್ಯೂಬ್ ಹೆರಿಗೆ ಪ್ರಯೋಗ ದುರಂತದಲ್ಲಿ ಮಹಿಳೆ ಸಾವು..! ತಮಿಳುನಾಡಿನ Tamil Nadu ರಾಜ್ಯದ ತಿರುಪುರ್ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಭಯದಿಂದ 32 ವರ್ಷದ ಮಹಿಳೆಯೊಬ್ಬರು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಮನೆಯಲ್ಲೇ ಹೆರಿಗೆ ಮಾಡಿಕೊಳ್ಳಲು ಯತ್ನಿಸಿದ್ದು, ಬಳಿಕ ಉಂಟಾದ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ… ಮೃತ ಮಹಿಳೆಯನ್ನು ಕೆ. ಶಶಿಕಲಾ ಎಂದು ಗುರುತಿಸಲಾಗಿದೆ. ಜೂನ್ 24ರ ಮುಂಜಾನೆ ಹೆರಿಗೆ ನೋವು …
Read More »
BigTv News
June 29, 2026
Breaking News
ಚಾಮರಾಜನಗರ: ಟೈಯರ್ ಸ್ಪೋಟಗೊಂಡು ಸಾರಿಗೆ ಬಸ್ ಪಲ್ಟಿಯಾಗಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯ ಬೈಪಾಸ್ ಬಳಿ ನಡೆದಿದೆ. ಅಪಘಾತದಲ್ಲಿ ಕೊಳ್ಳೇಗಾಲದ ಪುಟ್ಟನಂಜಮ್ಮ(60), ಕುದೇರು ನಿವಾಸಿ ಮಹೇಶ್(50) ಮೃತಪಟ್ಟವರು ಎಂದು ಗುರುತಿಸಲಾಗಿದೆ. 50ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದು, ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ 10ಕ್ಕೂ ಹೆಚ್ಚು ಮಂದಿಯನ್ನು ಮೈಸೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ …
Read More »
BigTv News
June 29, 2026
Breaking News
ಬೆಳಗಾವಿಯ ಬಸವನ ಗಲ್ಲಿಯ ಸಮರ್ಥ ನಗರ ಅಪಾರ್ಟ್‌ಮೆಂಟ್‌ಗೆ ಹಗಲು ಹೊತ್ತಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿ ಒಣ ಹಾಕಿದ್ದ ಬಟ್ಟೆಗಳನ್ನು ಕಳವು ಮಾಡಲು ಯತ್ನಿಸಿದ ಘಟನೆ ನಡೆದಿದೆ. ಈ ಕೃತ್ಯ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೂನ್ 25ರಂದು ಮಧ್ಯಾಹ್ನ 2.10ರ ಸುಮಾರಿಗೆ ಎರಡನೇ ಮಹಡಿಗೆ ತೆರಳಿದ ಶಂಕಿತ ವ್ಯಕ್ತಿ ಒಣಗುತ್ತಿದ್ದ ಬಟ್ಟೆಗಳನ್ನು ತೆಗೆಯಲು ಮುಂದಾಗಿದ್ದಾನೆ. ಆದರೆ ಯಾರೋ ಬರುತ್ತಿರುವುದನ್ನು ಗಮನಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ನಿವಾಸಿ ಹಾಗೂ ಸಾಮಾಜಿಕ …
Read More »