admin
January 27, 2022
Breaking News, ಬೆಂಗಳೂರು
ಬೆಂಗಳೂರು : ಪ್ರಸಕ್ತ ವರ್ಷದ ವಿಧಾನ ಮಂಡಲದ ಉಭಯ ಸದನಗಳ ಜಂಟಿ ಅಧಿವೇಶನವನ್ನು ಫೆಬ್ರವರಿ 14 ರಿಂದ 25 ರ ವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು,ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ನಡೆಸಲಾಗುವುದು . ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ,ಜಂಟಿ ಅಧಿವೇಶನವನ್ನು ಫೆ. 14 ರಿಂದ 25 …
Read More »
admin
January 27, 2022
Breaking News
ನಮ್ಮ ಇಬ್ರಾಹಿಂ ಬಹಳ ಸೀನಿಯರ್ ಲೀಡರ್, ಸಿದ್ದರಾಮಯ್ಯನವರ ಕಾಲದಲ್ಲಿ ಸಿಟ್ಟಿಂಗ್ ಎಂಎಲ್‌ಎ ತೆಗೆದು ಟಿಕೆಟ್ ಕೊಡಿಸಿದ್ದರು, ಸೋತ ಮೇಲೂ ಕ್ಯಾಬಿನೆಟ್ ಸ್ಟೇಟಸ್ ಕೊಟ್ಟಿದ್ದರು. ಎರಡು ಬಾರಿ ಎಂಎಲ್‌ಸಿ ಮಾಡಿದ್ದಾರೆ. ಆದರು ಕೂಡ ಈ ಬಾರಿ ನ್ನೆ ಸ್ವಲ್ಪ ಮುನಿಸಿಕೊಂಡು ಬೈಎಲೆಕ್ಷನ್‌ಗೆ ಬರಲಿಲ್ಲ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು. ಸಿಎಂ ಇಬ್ರಾಹಿಂ ಕಾಂಗ್ರೆಸ್ ತೊರೆಯುವ ಬಗ್ಗೆ ಮಾತನಾಡಿದ ಅವರು, ಎಲ್ಲಾ ಪಕ್ಷದಲ್ಲಿ ಮುನಿಸು ಇದ್ದೆ ಇರುತ್ತೆ. ಅವರು …
Read More »
admin
January 27, 2022
Breaking News
ಹುಣಸೂರು: ರಾಯಚೂರಿನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ಸೇವೆಯಿಂದ ವಜಾಗೊಳಿಸುವ ಜೊತೆಗೆ ದೇಶ ದ್ರೋಹದ ಪ್ರಕರಣ ದಾಖಲಿಸಬೇಕು. ಗ್ರೇಡ್- 2 ತಹಸೀಲ್ದಾರ್ ನರಸಿಂಹಯ್ಯರಿಗೆ ಮನವಿ ಸಲ್ಲಿಸುವ ಮೂಲಕ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ನಗರದ ಸಂವಿಧಾನ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು ಈ ವೇಳೆ ಮಾತನಾಡಿದ ದ.ಸಂ.ಸ ಯ ರತ್ನಪುರಿ ಪುಟ್ಟಸ್ವಾಮಿ, ರಾಮಕೃಷ್ಣ, ಡೇವಿಡ್, ವಕೀಲ ಪುಟ್ಟರಾಜು ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಧೀಶರೇ ಅಂಬೇಡ್ಕರ್ ಪೋಟೋ ತೆರವುಗೊಳಿಸಿದರೆ ಮಾತ್ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದು, …
Read More »
admin
January 27, 2022
Breaking News, ಬೆಂಗಳೂರು
ಬೆಂಗಳೂರು: ಓಮಿಕ್ರಾನ್ ವೈರಸ್ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ದೇಶದಲ್ಲೇ ಮೊದಲ ಓಮಿಕ್ರಾನ್ ವೈರಸ್ ಪತ್ತೆಯಾದಂತ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ, ಇಂದು ಮತ್ತೆ 185 ಮಂದಿಗೆ ಓಮಿಕ್ರಾನ್ ದೃಢಪಟ್ಟಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಬೆಂಗಳೂರಿನಲ್ಲಿ ಇಂದು ಹೊಸದಾಗಿ 185 ಜನರಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 1,115ಕ್ಕೆ ಏರಿಕೆಯಾಗಿರೋದಾಗಿ ತಿಳಿಸಿದ್ದಾರೆ.
Read More »
admin
January 27, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಇಟ್ಟರೇ ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದು ಹೇಳಿಕೆ ನೀಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ವೃತ್ತಿಯಿಂದ ವಜಾ ಮಾಡಿ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕೆಂದು ಆಗ್ರಹಿಸಿ, ಸಮತಾ ಸೈನಿಕ ದಳ ವತಿಯಿಂದ ನಗರದ ತಹಶೀಲ್ದಾರರ ಮುಖಾಂತರ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
Read More »
admin
January 27, 2022
Breaking News, ಧಾರವಾಡ
ಧಾರವಾಡ : ಮನೆಯಲ್ಲಿ ಯಾರು ಇಲ್ಲದನ್ನು ನೋಡಿಕೊಂಡ ಕಳ್ಳರು, ಹಾಡು ಹಗಲೇ ಮನೆಯೊಂದಕ್ಕೆ ನುಗ್ಗಿ ಮನೆಯಲ್ಲಿದ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಕೊಂಡು ಪರಾರಿಯಾಗಿರು ಘಟನೆ ಧಾರವಾಡದ ಚಾಲುಕ್ಯ ನಗರದಲ್ಲಿ ನಡೆದಿದೆ. ನಗರದ ಶೆಟ್ಟರ್ ಕಾಲನಿಯ ಚಾಲುಕ್ಯ ನಗರದಲ್ಲಿ ಕಳ್ಳರು ವಿನಾಯಕ ಪಾಟೀಲರವರ ಮನೆಯಲ್ಲಿ ಚಾಲಾಕಿ ಕಳ್ಳರು ತಮ್ಮ ಕೈಚಳ ತೋರಿಸಿದ್ದಾರೆ. ಮುಂಜಾನೆಯ ಮನೆಯ ಸದಸ್ಯರೆಲ್ಲರು ಹೊರಗಡೆ ಕಾರ್ಯ ನಿಮಿತ್ಯ ತೆರಳಿದ್ದರು. ಮಧ್ಯಾಹ್ನದ ನಂತರ ಮನೆಗೆ ಮರಳಿದ್ದಾಗ, ಮನೆಯ ಮುಖ್ಯ …
Read More »
admin
January 27, 2022
Breaking News, ಬೆಂಗಳೂರು
ಬೆಂಗಳೂರು: ಬಜೆಟ್ ಮಂಡನೆ ಸಂಬಂಧ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಫೆಬ್ರವರಿ 14ರಿಂದ ಆರಂಭಿಸಲಾಗುತ್ತದೆ. ಮಾರ್ಚ್ ಮೊದಲವಾರ ರಾಜ್ಯ ಬಜೆಟ್ ಮಂಡಿಸಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೊರೋನಾ ನಿಯಂತ್ರಣಕ್ಕಾಗಿ ತಜ್ಞರು ಹಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ನಿಯಂತ್ರಣ ಕ್ರಮಗಳನ್ನು ಮುಂದುವರೆಸೋದಾ ಅಥವಾ ರದ್ದು ಪಡಿಸೋದಾ ಎನ್ನುವ ಬಗ್ಗೆ ವರದಿಯನ್ನು ನೀಡುವಂತೆ ತಜ್ಞರಿಗೆ ಸೂಚಿಸಲಾಗಿದೆ. ಅವರು ವರದಿಯನ್ನು ಸಲ್ಲಿಸಿದ ಬಳಿಕ, 3-4 ದಿನಗಳಲ್ಲಿ …
Read More »
admin
January 27, 2022
Breaking News, ರಾಮನಗರ
ರಾಮನಗರ: ಗಂಡನ ಕಿರುಕುಳ ತಾಳಲಾರದೆ ತನ್ನ ತವರು ಮನೆಯಲ್ಲೇ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ ಮಂಜುನಾಥನಗರ ಬಡಾವಣೆಯಲ್ಲಿ ನಡೆದಿದೆ.ಪತಿಯು ತೊಂದರೆ ಕೊಡುತ್ತಿದ್ದರು ಈ ಕಾರಣ ಎಂಬ ಆರೋಪ ಕೇಳಿಬಂದಿದೆ. ಗರ್ಭಿಣಿ ಆಗಿರುವ ಜಾನ್ಹವಿ (23) ಆತ್ಮಹತ್ಯೆಗೆ ಶರಣಾದ ಮುಗ್ಧ ಹೆಣ್ಣು ಮಗಳು. ಕಳೆದ 9 ತಿಂಗಳ ಹಿಂದೆ ಕರ್ಣ ಎಂಬುವನ ಜೊತೆ ವಿವಾಹವಾಗಿತ್ತು. ಕರ್ಣ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದವನಾಗಿದ್ದು, ಕಳೆದ ಹಲವು ತಿಂಗಳಿಂದ ತಮ್ಮ ಮಗಳಿಗೆ …
Read More »
admin
January 27, 2022
Breaking News, ಮಂಡ್ಯ
ಮಂಡ್ಯ: ಗಣರಾಜ್ಯೋತ್ಸವ ದಿನ ಅಂಗವಾಗಿಮೂರು ವರ್ಷದ ಹಿಂದೆ ನಡೆದ ಪುಲ್ವಾಮ ದಾಳಿಯಲ್ಲಿ ವೀರಮರಣವನ್ನಪ್ಪಿದ ಜಿಲ್ಲೆಯ ಯೋಧ ಗುರುವಿಗೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಬಳಿಯ ಮದ್ದೂರು- ಮಳವಳ್ಳಿ ರಸ್ತೆಯಲ್ಲಿ ಸಮಾಧಿ ನಿರ್ಮಾಣ ಮಾಡಲಾಗಿದ್ದು, ಪತ್ನಿ ಕಲಾವತಿ ರಾಷ್ಟ್ರಧ್ವಜವನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ. ಪತಿಯ ಸಮಾಧಿಗೆ ಪೂಜೆ ಸಲ್ಲಿಸಿ ಮಾತನಾಡಿದ ಪತ್ನಿ ಕಲಾವತಿ ಅವರು, ನನ್ನ ಪತಿ ಹುತಾತ್ಮ ರಾಗಿ ಫೆಬ್ರವರಿ 14ಕ್ಕೆ 3ವರ್ಷ ತುಂಬುತ್ತಿದೆ. ಇದೇ ವೇಳೆ ಸಮಾಧಿಯನ್ನು ಉದ್ಘಾಟಿಸುವುದಾಗಿ ಶಾಸಕರಾದ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. …
Read More »
admin
January 27, 2022
Breaking News, ಯಾದಗಿರಿ
ಯಾದಗಿರಿ: ಅಪ್ಪು ಇಲ್ಲದಿದ್ದರು ನಿತ್ಯವು ಪುನೀತ್ ಸ್ಮರಣೆ ಮಾಡುದೆ ಇರುವ ಅಭಿಮಾನಿಗಳೇ ಇಲ್ಲ. ಹೀಗಾಗಿ ,ಅಪ್ಪು ಮೇಲಿರುವ ಅಭಿಮಾನದಿಂದ ಪುನೀತ್ ರಾಜಕುಮಾರ ಅವರ ಅಭಿಮಾನಿಗಳು ಪುತ್ಥಳಿ ಪ್ರತಿಷ್ಠಾಪನೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಮೊದಲನೇ ಅಪ್ಪು ಮೂರ್ತಿಯನ್ನು ಯಾದಗಿರಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಎಂ. ಗ್ರಾಮದ ಅಪ್ಪು ಅಭಿಮಾನಿ ಸ್ನೇಹಿತರು ಕೂಡಿ ಗ್ರಾಮದಲ್ಲಿ ಪುನೀತ್ ಅವರ 6 ಅಡಿ ಉದ್ದವಿರುವ ಅಪ್ಪು ಮೂರ್ತಿ ಪ್ರತಿಷ್ಠಾಪನೆ …
Read More »