admin
December 10, 2021
Breaking News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಧಾರವಾಡ: ಬೈಕ್ ಒಂದರಲ್ಲಿ ಅಡಗಿ ಕುಳಿತಿದ್ದ ಆಭರಣದ ಹಾವನ್ನು ಉರಗ ತಜ್ಞ ತಿಪ್ಪಣ್ಣ ರಕ್ಷಿಸಿದ್ದಾರೆ.ಧಾರವಾಡದ ಹೊಸಯಲ್ಲಾಪುರದ ಬೈಕ್ ಒಂದರಲ್ಲಿ ಈ ಹಾವು ಅಡಗಿ ಕುಳಿತಿತ್ತು. ಇದನ್ನು ಕಂಡ ಸ್ಥಳೀಯರು ಕೂಡಲೇ ಉರಗ ತಜ್ಞ ತಿಪ್ಪಣ್ಣ ಅವರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ತಿಪ್ಪಣ್ಣ ಆ ಹಾವನ್ನು ಹೊರ ತೆಗೆದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.
Read More »
admin
December 10, 2021
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ನಾಲ್ಕು ವರ್ಷಗಳಿಂದ ತವರು ಮನೆ ಸೇರಿರುವ ಹೆಂಡತಿಯನ್ನು ವಾಪಸ್ ಕಳುಹಿಸಲಿಲ್ಲ ಎಂಬ ಆಕ್ರೋಶದಿಂದ, ಅಳಿಯನೊಬ್ಬ ಅತ್ತೆಗೆ ಬ್ಲೇಡ್ ನಿಂದ ಇರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ನವನಗರದ ನಿವಾಸಿ ಸೋಮವ್ವ ಮಲ್ಲಾಡ ಹಲ್ಲೆಗೀಡಾದವರು. ಪಡದಯ್ಯನ ಹಕ್ಕಲದ ರಮೇಶ ದೊಡ್ಡಮನಿ ಎಂಬ ಅಳಿಯನೇ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. ನಾಲೈದು ವರ್ಷಗಳ ಹಿಂದೆ ಪತಿ ರಮೇಶನೊಂದಿಗೆ ಜಗಳವಾಡಿ ಪತ್ನಿ ತವರು ಸೇರಿದ್ದರು. ಡಿ .7 ರಂದು ಪತ್ನಿ ಜೊತೆ ರಮೇಶ ಜಗಳ …
Read More »
admin
December 10, 2021
Breaking News, ಅಪರಾಧ, ಕರ್ನಾಟಕ, ದೇಶ-ವಿದೇಶ, ಬೆಂಗಳೂರು
ಮುಂಬೈ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರಿಗೆ ಸೈಬರ್ ವಂಚಕರು 1 ಲಕ್ಷ ರೂ. ವಂಚಿಸಿರುವ ಘಟನೆ ಬಾಂದ್ರಾದಲ್ಲಿ ನಡೆದಿದೆ.ಪ್ರಸಿದ್ಧ ಬ್ಯಾಂಕ್‌ನ ಪ್ರತಿನಿಧಿಯೆಂದು ಕಾಂಬ್ಳಿಗೆ ಕರೆ ಮಾಡಿದ್ದಾರೆ. ನಂತರ ಕೆವೈಸಿ ಅಪ್ಡೇಟ್ ಮಾಡಲು ತಿಳಿಸಿದ್ದಾರೆ. ಬಳಿಕ ಅವರ ಬ್ಯಾಂಕ್ ವಿವರಗಳನ್ನೆಲ್ಲಾ ತೆಗೆದುಕೊಂಡು ಅಪ್‌ಲೊಡ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.ಸ್ವಲ್ಪ ಸಮಯದ ನಂತರ ಅವರ ಖಾತೆಯಿಂದ ಒಂದು ಲಕ್ಷ ರೂ.ವನ್ನು ವಂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಕಾಂಬ್ಳಿ ಅಪರಿಚಿತ ವ್ಯಕ್ತಿಯ …
Read More »
BigTv News
December 10, 2021
Breaking News, ಅಸೆಂಬ್ಲಿ ಚುನಾವಣೆಗಳು, ಕರ್ನಾಟಕ, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರು ಮಹಾನಗರ ಪಾಲಿಕೆಯ ಆವರಣದಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಮತಚಲಾಯಿಸಿದ ಶಾಸಕ ಪ್ರಸಾದ ಅಬ್ಬಯ್ಯ ಬೆಳಿಗ್ಗೆಯಿಂದಲೇ ಮತದಾನ ಆರಂಭವಾಗಿದ್ದು, ಜನಪ್ರತಿನಿಧಿಗಳು ಹಾಗೂ ಚುನಾಯಿತ ಸದಸ್ಯರು ಉತ್ಸುಕತೆಯಿಂದ ಮತದಾನ ಮಾಡುವ ಮೂಲಕ ತಮ್ಮ ತಮ್ಮ ನೆಚ್ಚಿನ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ.
Read More »
BigTv News
December 10, 2021
Breaking News, ಕರ್ನಾಟಕ, ದೇಶ-ವಿದೇಶ, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ– ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.ಬಿಪಿನ್ ರಾವತ್ ಘಟನೆ ಅಂತ್ಯಂತ ದುರಂತ.ನಮೆಗಲ್ಲಾ ತುಂಬಾ ದುಖಃ ಆಗಿದೆ. ಖಂಡಿತ ಆ ಬಗ್ಗೆ ತನೀಖೆಯಂತು ಆಗೇ ಆಗುತ್ತೆ.ಈ ಘಟನೆಯ ತನೀಖೆ ಮಾಡೋಕೆ ನಿರ್ಧಾರ ಆಗಿದೆ.ಮುಂದಿನ ದಿನಗಳಲ್ಲಿ ಈ ರೀತಿ ಘಟನೆಯಾಗದಂತೆ ನೋಡಿಕೊಳ್ಳುತ್ತವೆ.ಹುಬ್ಬಳ್ಳಿ ವಿಮಾನ ನಿಲ್ದಾಣ ದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ.
Read More »
BigTv News
December 10, 2021
Breaking News, ಕರ್ನಾಟಕ, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಓಮಿಕ್ರಾನ್ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಯಾವುದೇ ನಿರ್ಬಂಧ ಸದ್ಯಕ್ಕಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಆಗಮಿಸಿದ್ದೇನೆ. ಶಿಗ್ಗಾಂವ ಕ್ಷೇತ್ರದಲ್ಲಿ ಮತದಾನ ಮಾಡಲಿರುವೆ. ಮುಂದೆ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಮಹದಾಯಿ ವಿಚಾರ ನ್ಯಾಯಾಲಯದಲ್ಲಿದೆ. ಹಾಗಾಗಿ ಮಹದಾಯಿ ಕಾಮಗಾರಿ ಆರಂಭಿಸಲು ಏನೂ …
Read More »
BigTv News
December 10, 2021
Breaking News, ಕರ್ನಾಟಕ, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ಇಂದು ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಮತದಾನಕ್ಕೆ ಮಾಡಲು ತಮ್ಮ ತವರು ಕ್ಷೇತ್ರಕ್ಕೆ ತೆರಳಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೂ ಹವಾಮಾನ ವೈಪರೀತ್ಯ ಬಿಸಿ ತಟ್ಟಿತ್ತು. ಬೆಂಗಳೂರಿನಿಂದ ಇಂಡಿಗೋ 6E 7227 ವಿಮಾನ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ವಿಮಾನ ನಿಗದಿತ ಸಮಯವಾದ 7.30ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನ ಲ್ಯಾಂಡಿಂಗ್‌ಗೆ …
Read More »
admin
December 9, 2021
Breaking News, ಕರ್ನಾಟಕ, ಬೀದರ್, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಸಾರ್ವಜನಿಕರ ಬಹುದಿನಗಳ ಬೇಡಿಕೆ ಮೇರೆಗೆ ಹುಬ್ಬಳ್ಳಿಯಿಂದ ಬೀದರ್ ಗೆ ನಾನ್ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಲಾಗಿದೆ ಎಂದು ವಾಕರಸಾಸಂಸ್ಥೆ ಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಇದುವರೆಗೂ ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಬೀದರ್ ಗೆ ನೇರವಾಗಿ ಐಷಾರಾಮಿ ಬಸ್ ಸಂಚಾರ ಇರಲಿಲ್ಲ. ಹುಬ್ಬಳ್ಳಿಯಿಂದ ಬೀದರ್ ಗೆ ಹೋಗುವವರು ಕಲಬುರಗಿ ವರೆಗೆ ಹೋಗಿ ಅಲ್ಲಿಂದ ಮತ್ತೊಂದು ಬಸ್ ಹತ್ತಿ ಬೀದರ್ ಗೆ ತಲುಪಬೇಕಾಗಿತ್ತು. ಬೆಳಗಿನ …
Read More »
admin
December 9, 2021
Breaking News, ಅಸೆಂಬ್ಲಿ ಚುನಾವಣೆಗಳು, ಕರ್ನಾಟಕ, ಬೆಂಗಳೂರು, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ: ಕಳೆದ 20 ದಿನಗಳಿಂದ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರುಇಂದು ಆಯಾ ತಹಶೀಲ್ದಾರ ಕಚೇರಿಲ್ಲಿ ಮಸ್ಟರಿಂಗ್ ಕಾರ್ಯ ನಾಳೆ ಮುಂಜಾನೆ 8 ರಿಂದ ಸಂಜೆ 4 ರ ವರೆಗೆ ನಡೆಯಲಿರೋ ಮತದಾನಧಾರವಾಡ ಕ್ಷೇತ್ರದ ವ್ಯಾಪ್ತಿಯಲ್ಲಿ ಬರಲಿರೊ ಮೂರು ಜಿಲ್ಲೆಗಳು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ನಡೆಯಲಿರೋ ಮತದಾನ ಮತಪೆಟ್ಟಿಗೆಗಳನ್ನು ಪಡೆದುಕೊಂಡು ಮತದಾನ ಕೇಂದ್ರಗಳತ್ತ ಸಾಗಿದ ಸಿಬ್ಬಂದಿಕಚೇರಿಗಳಿಗೆ ತೆರಳುತ್ತಿದ್ದಾರೆ. ಪ್ರತಿ ಬೂತ್‌ಗೆ …
Read More »
admin
December 9, 2021
Breaking News, ಕರ್ನಾಟಕ, ಬೆಂಗಳೂರು, ಶಿಕ್ಷಣ
ಬೆಂಗಳೂರು : ರಾಜ್ಯದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮಧ್ಯ ವಾರ್ಷಿಕ ಪರೀಕ್ಷೆ ಗುರುವಾರದಿಂದ ಆರಂಭವಾಗಿದೆ. ಪರೀಕ್ಷೆ ಆರಂಭವಾದ ಮೊದಲ ದಿನ ಇತಿಹಾಸ ಮತ್ತು ಭೌತಶಾಸ್ತ್ರ ಪರೀಕ್ಷೆ ನಡೆಯಿದೆ. ಅದೇ ರೀತಿ ಪ್ರಥಮ ಪಿಯುಸಿಯ ಮಧ್ಯ ವಾರ್ಷಿಕ ಪರೀಕ್ಷೆ ಸಹ ಡಿಸೆಂಬರ್ 9 ರಿಂದ 23 ವರೆಗೂ ನಡೆಯಲಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯಾ ಜಿಲ್ಲಾ ಉಪ ನಿರ್ದೇಶಕರ ಕಚೇರಿಯಿಂದ ಪ್ರಶ್ನೆ ಪತ್ರಿಕೆಗಳನ್ನು ಸಂಬಂಧ ಪಟ್ಟ ಪ್ರತಿ ಕಾಲೇಜಿಗೂ …
Read More »