BigTv News
June 17, 2026
Breaking News
ಹೊಸಪೇಟೆ: ಎಪಿಎಂಸಿ ಮಾರುಕಟ್ಟೆ ಸಮೀಪದ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆಯನ್ನು ಬಯಲುಗೊಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರು ಮಹಿಳೆಯರನ್ನು ರಕ್ಷಿಸಲಾಗಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಒಡನಾಡಿ ಸಂಸ್ಥೆಗೆ ಬಂದ ದೂರಿನ ಮೇರೆಗೆ ಎಸ್‌ಪಿ ಎಸ್. ಜಾಹ್ನವಿ ಸೂಚನೆಯಂತೆ ಎಎಸ್‌ಪಿ ಜಿ. ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ನಾಲ್ವರು ಗ್ರಾಹಕರನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತ ಬಾಲಕರನ್ನು ಬಳಸಿಕೊಂಡಿರುವ ಆರೋಪವೂ ಕೇಳಿಬಂದಿದ್ದು, …
Read More »
BigTv News
June 17, 2026
Breaking News
ಯಾದಗಿರಿ: ಜಿಲ್ಲೆಯ ಕೆಂಭಾವಿ ಸಮೀಪದ ಆಲ್ಹಾಳ ಗ್ರಾಮದ ಬಳಿ ಕೆಕೆಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಬಸ್ಸಿನಲ್ಲಿ 40 ರಿಂದ 50 ಮಂದಿ ಪ್ರಯಾಣಿಕರಿದ್ದು, ಶಾಲಾ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಪಘಾತದ ಬಳಿಕ ಸ್ಥಳೀಯರು ಧಾವಿಸಿ ಕಿಟಕಿ ಹಾಗೂ ಬಾಗಿಲುಗಳ ಮೂಲಕ ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರು. ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದು, ಚಾಲಕ …
Read More »
BigTv News
June 17, 2026
Breaking News
ಧಾರವಾಡ: ಪಿಎಚ್‌ಡಿ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ದೇವರಾಜನ್ ತಂಗದುರೈ ಅವರನ್ನು ಅಮಾನತುಗೊಳಿಸಲಾಗಿದೆ. ಸಂಶೋಧನಾ ವಿದ್ಯಾರ್ಥಿನಿಯೊಂದಿಗೆ ವೈಯಕ್ತಿಕ ಸಂಬಂಧ ಹೊಂದಿದ್ದಲ್ಲದೆ, ಮತ್ತೊಬ್ಬ ವಿದ್ಯಾರ್ಥಿಗೆ ಆಕೆಯನ್ನು ಮರಳಿ ಕರೆತರುವಂತೆ ಒತ್ತಡ ಹೇರಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಆಡಿಯೋ ದಾಖಲೆಗಳು ಹಾಗೂ ಇತರೆ ಸಾಕ್ಷ್ಯಗಳನ್ನು ವಿದ್ಯಾರ್ಥಿ ಸಂಘಟನೆಗಳು ಸಲ್ಲಿಸಿವೆ. ಆರೋಪಗಳ ಗಂಭೀರತೆಯನ್ನು ಪರಿಗಣಿಸಿ ವಿಶ್ವವಿದ್ಯಾಲಯ ಆಡಳಿತ ತನಿಖೆ ಆರಂಭಿಸಿದ್ದು, …
Read More »
BigTv News
June 17, 2026
Breaking News
ಚನ್ನಗಿರಿ (ದಾವಣಗೆರೆ): ಬೀಡಿ ಸೇದಿ ಹುಲ್ಲಿನ ಮೇಲೆ ಎಸೆದು ಮಲಗಿದ್ದ ವೃದ್ಧರೊಬ್ಬರು ಅದೇ ಬೀಡಿಯಿಂದ ಹೊತ್ತಿದ ಬೆಂಕಿಯಲ್ಲಿ ಸಜೀವ ದಹನವಾದ ಘಟನೆ ಕಳೆದ ಭಾನುವಾರ ತಡರಾತ್ರಿ ಚನ್ನಗಿರಿ ತಾಲೂಕಿನ ಶೃಂಗಾರಬಾಗು ತಾಂಡಾದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ತಾಂಡಾದ ರೇಖ್ಯಾ ನಾಯ್ಕ್ (61) ರಾತ್ರಿ ಊಟ ಮುಗಿಸಿಕೊಂಡು ದನದ ಕೊಟ್ಟಿಗೆಯಲ್ಲಿ ಮಲಗಿದ್ದರು. ಮಲಗುವ ಮುನ್ನ ಬೀಡಿ ಸೇದಿ ಅದನ್ನು ಹುಲ್ಲು ತೆಂಗಿನ ಗರಿಗಳಿದ್ದ ಕೊಟ್ಟಿಗೆ ಬಳಿಯೇ ಎಸೆದು ನಿದ್ರೆಗೆ ಜಾರಿದ್ದರು. ಆದರೆ …
Read More »
BigTv News
June 17, 2026
Breaking News
ಬೆಳಗಾವಿ: ಮೊಬೈಲ್ ನೀಡಲು ನಿರಾಕರಿಸಿದ್ದ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಮಹಿಳೆಗೆ ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದೆ. 2023ರ ಏಪ್ರಿಲ್ 30ರಂದು ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ, ಮದ್ಯದ ಅಮಲಿನಲ್ಲಿದ್ದ ಜಯಶ್ರೀ ಪವನ ಪವಾರ ಮೊಬೈಲ್ ಕೇಳಿದ್ದಕ್ಕೆ ನಾಗರಾಜ ಭೀಮಶಿ ರಾಗಿಪಾಟೀಲ ಮರುಪ್ರಶ್ನೆ ಮಾಡಿದ್ದರು. ಇದರಿಂದ ಉಂಟಾದ ಜಗಳದ …
Read More »
BigTv News
June 17, 2026
Breaking News
ಬೆಂಗಳೂರು: ಯಲಹಂಕ ಸಮೀಪ ಉದ್ಯಮಿಯೊಬ್ಬರ ಬಳಿ 1.09 ಕೋಟಿ ರೂ. ದರೋಡೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಶಿವಶಂಕರ್ ಮೇಲೆ ಏಳು ಮಂದಿ ಸಶಸ್ತ್ರ ದುಷ್ಕರ್ಮಿಗಳು ಹಲ್ಲೆ ನಡೆಸಿ ನಗದು ತುಂಬಿದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ. ಜೂನ್ 15ರ ರಾತ್ರಿ ನಿರ್ಜನ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ದು, ಹಲ್ಲೆಯಿಂದ ಶಿವಶಂಕರ್ ಗಾಯಗೊಂಡಿದ್ದಾರೆ. ಹೊಸ ಉದ್ಯಮಕ್ಕೆ ಹೂಡಿಕೆ ಮಾಡಲು ಅವರು ಈ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರು …
Read More »
Shaikh BigTv
June 17, 2026
Breaking News, Crime, ಕರ್ನಾಟಕ, ಬೆಂಗಳೂರು
ರೌಡಿಗಳಿಗೆ ರಿಲೀಫ್ ಕೊಟ್ಟವರು ಯಾರು..? ತಪ್ಪು ಮಾಹಿತಿ ನೀಡಿದ ಪೊಲೀಸರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ..! ಪೊಲೀಸ್ ಇಲಾಖೆಯ ಯಡವಟ್ಟಿನಿಂದ ನೂರಾರು ರೌಡಿಗಳಿಗೆ ಮುಕ್ತಿ..!ತಪ್ಪಿತಸ್ಥ ಪೊಲೀಸರನ್ನು ಸಸ್ಪೆಂಡ್ ಮಾಡಲು ಒತ್ತಾಯ.. ರೌಡಿಪಟ್ಟಿಯಿಂದ ರೌಡಿಗಳ ಬಿಡುಗಡೆಗೆ ಕಾರಣ ಯಾರು..? ಸುಳ್ಳು ಮಾಹಿತಿ ನೀಡಿದ ಪೊಲೀಸರ ವಿರುದ್ಧ ತನಿಖೆಗೆ ಸಾರ್ವಜನಿಕರ ಆಗ್ರಹ..! ರೌಡಿಪಟ್ಟಿ ನಿರ್ವಹಣೆಯಲ್ಲಿ ನಡೆದಿರುವ ಗಂಭೀರ ಲೋಪಗಳು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ಸರಿಯಾದ ದಾಖಲೆಗಳು ಹಾಗೂ ನಿಖರ ಮಾಹಿತಿಯನ್ನು ನ್ಯಾಯಾಲಯ …
Read More »
BigTv News
June 17, 2026
Breaking News
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರುಕುಂಬಿ ಗ್ರಾಮದ ಬಳಿ ಅಕ್ರಮ ಸಂಬಂಧದ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದ ಸಕ್ಕುಬಾಯಿ ಹಾಗೂ ಸಂತೋಷ್ ಪಟಾಯತ್ ದಂಪತಿ 9 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸಂತೋಷ್‌ಗೆ ವಿಧವೆ ಮಹಿಳೆಯೊಬ್ಬಳೊಂದಿಗೆ ಅಕ್ರಮ ಸಂಬಂಧ ಬೆಳೆದಿದ್ದು, ಪತ್ನಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾನೆ. ದೇವಸ್ಥಾನಕ್ಕೆ ತೆರಳಿದ್ದ ವೇಳೆ ಸಂತೋಷ್ ತಂಪುಪಾನೀಯದಲ್ಲಿ …
Read More »
BigTv News
June 17, 2026
Breaking News
ಚಿಂತಾಮಣಿ: ನಂದಿಗಾನಹಳ್ಳಿಯಲ್ಲಿ ಪಿತ್ರಾರ್ಜಿತ ಆಸ್ತಿ ವಿವಾದಕ್ಕೆ ಮಗನ ಮೇಲೆ ಚಿಕ್ಕಪ್ಪ, ಚಿಕ್ಕಮ್ಮ ಸೇರಿಕೊಂಡು ದೊಣ್ಣೆ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಎನ್.ರಾಜು (40) ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ರಾಜು ಮತ್ತು ಆತನ ಚಿಕ್ಕಪ್ಪ ಹನುಮಂತಪ್ಪ ನಡುವೆ ಸರ್ವೇ ನಂ.131ರಲ್ಲಿರುವ 2 ಎಕರೆ ಪಿತ್ರಾರ್ಜಿತ ಜಮೀನಿನ ವಿಚಾರವಾಗಿ ಹಲವು ದಿನಗಳಿಂದ ವಿವಾದವಿತ್ತು. ಜಮೀನನ್ನು ಹನುಮಂತಪ್ಪ ಯಾರಿಗೂ ತಿಳಿಸದೆ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದ ಎನ್ನಲಾಗಿದೆ. ರಾಜು ಜಮೀನಿನ ಭಾಗ ಕೇಳಿದಾಗಲೆಲ್ಲಾ ಹನುಮಂತಪ್ಪ …
Read More »
BigTv News
June 17, 2026
Breaking News
ಕಾಸರಗೋಡು: ʼಆಪರೇಷನ್ ತೂಫಾನ್’ ಅಂಗವಾಗಿ ಪೊಲೀಸರು ದಾಳಿ ನಡೆಸಿ ಕಾರಿನಲ್ಲಿ ಸಾಗಿಸುತ್ತಿದ್ದ 21,873 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನ ಸಹಿತ ಓರ್ವನನ್ನು ಬಂಧಿಸಲಾದ ಘಟನೆ ಮಧೂರು ಪಟ್ಲದಲ್ಲಿ ನಡೆದಿದೆ. ಮಧೂರು ಪಟ್ಲದ ಕೆ. ಇಬ್ರಾಹಿಂ ಬಾತಿಷಾ (36) ಬಂಧಿತ ಆರೋಪಿ. ನಿಷೇಧಿತ ಪಾನ್ ಮಸಾಲ ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರು ಮತ್ತು ಮಾರಾಟದಿಂದ ಬಂದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ‘ಆಪರೇಷನ್ ತೂಫಾನ್’ ವಿಶೇಷ ಕಾರ್ಯಾಚರಣೆಯ ಅಂಗವಾಗಿ ತಪಾಸಣೆ ನಡೆಸುತ್ತಿದ್ದ ಸಂದರ್ಭ …
Read More »