Breaking News

Breaking News

ಸಾರಿಗೆ ಬಸ್-ಟಂಟಂ ನಡುವೆ ಢಿಕ್ಕಿ: ನಾಲ್ವರಿಗೆ ಗಂಭೀರ ಗಾಯ

ಕಲಬುರಗಿ: ನಗರದ ಹೊರವಲಯದ ಫರತಾಬಾದ್ ಸಮೀಪದ ಕೂಡಿ ದರ್ಗಾ ಬಳಿ ಕೆಕೆಆರ್‌ಟಿಸಿ ಬಸ್ ಮತ್ತು ಟಂಟಂ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಜೇವರ್ಗಿಯಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಕೆಕೆಆರ್‌ಟಿಸಿ ಬಸ್ ಹಾಗೂ ಕಲಬುರಗಿಯಿಂದ ಜೇವರ್ಗಿ ಕಡೆಗೆ ತೆರಳುತ್ತಿದ್ದ ಟಂಟಂ ಗೂಡ್ಸ್ ವಾಹನ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಟಂಟಂ ವಾಹನದಲ್ಲಿದ್ದ ನಾಲ್ವರು …

Read More »

ಊಟ ಮಾಡುತ್ತಿದ್ದವನನ್ನು ಕರೆಸಿ ಕೊಲೆ – ಬೈಕ್ ನಲ್ಲಿ ಶವ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದ ಹಂತಕರು!

ಮಂಡ್ಯ : ಮಳವಳ್ಳಿ ತಾಲ್ಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ 34 ವರ್ಷದ ಮಹೇಶ ಎಂಬ ಯುವಕನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆಗೈಯಲಾಗಿದೆ. ಮಂಗಳವಾರ ರಾತ್ರಿ ತಂಗಿ ಮನೆಯಲ್ಲಿ ಊಟ ಮಾಡುತ್ತಿದ್ದ ಮಹೇಶನನ್ನು ರಾಜೇಶ್ ಎಂಬಾತ ಫೋನ್ ಮಾಡಿ ಮಾರಿ ಗುಡಿ ಬಳಿ ಕರೆಸಿಕೊಂಡು, ನಂತರ ಗ್ರಾಮದ ಹೊರವಲಯದಲ್ಲಿ ಈ ಕೃತ್ಯ ಎಸಗಿದ್ದಾನೆ. ಕೊಲೆಯ ಬಳಿಕ ಆರೋಪಿಗಳು ಶವವನ್ನು ಬೈಕ್ ಮಧ್ಯೆ ಕೂರಿಸಿಕೊಂಡು ಮಳವಳ್ಳಿಯಿಂದ ಕೊಳ್ಳೇಗಾಲ ರಸ್ತೆ ಕಡೆಗೆ …

Read More »

ಅಕ್ರಮ ಮದ್ಯ ಮಾರುತ್ತಿದ್ದ ಇಬ್ಬರ ಬಂಧನ

ಹೊಳೆನರಸೀಪುರ: ತಾಲೂಕಿನ ತಾತನಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ರೋಸಿಹೋಗಿದ್ದ ಮಹಿಳಾ ಸಂಘದ ಸದಸ್ಯೆಯರೇ ಪೊಲೀಸರಿಗೆ ಮಾಹಿತಿ ನೀಡಿ ಮಾರಾಟಗಾರರನ್ನು ಸೋಮವಾರ ರಾತ್ರಿ ಮಾಲು ಸಹಿತ ಇಬ್ಬರನ್ನು ಹಿಡಿದುಕೊಟ್ಟಿದ್ದಾರೆ.ಗ್ರಾಮದ ಗವಿಗೌಡ, ನಾಗಮಣಿ ಬಂಧಿತರು. ಇವರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಮಹಿಳಾ ಸಂಘದ ಸದಸ್ಯೆಯರಾದ ಲಕ್ಷ್ಮಮ್ಮ , ಶಶಿ, ಪ್ರೇಮಾ, ಕಮಲಮ್ಮ, ಹೇಮಾ ಅವರು ಪೊಲೀಸರಿಗೆ ಮಾಹಿತಿ ನೀಡಿ ಆವರು ಅಗಮಿಸುವ ವರೆಗೂ ಆರೋಪಿಗಳನ್ನು ಹಿಡಿದಿಟ್ಟಿದ್ದರು. ಖಚಿತ …

Read More »

ಶಾಲೆಯ ಕೊಠಡಿ, ಶೌಚಾಲಯ ಬಳಿ ಕರೆದೊಯ್ದು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ: ಶಿಕ್ಷಕನಿಗೆ ಧರ್ಮದೇಟು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಶಾಲೆಯೊಂದರ ಶಿಕ್ಷಕ ಶ್ರೀಶೈಲ ಕುಂಬಾರ ವಿರುದ್ಧ 10ನೇ ತರಗತಿ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಕನ್ನಡ ವಿಷಯದಲ್ಲಿ ಪಾಸ್ ಮಾಡುವುದಾಗಿ ಹೇಳಿ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕರೆದು ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಐದಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಾಲೆಗೆ ಬಂದ ಪೋಷಕರು ಶಿಕ್ಷಕನನ್ನು ಪ್ರಶ್ನಿಸಿ ಆಕ್ರೋಶ …

Read More »

ಕೋಲಾರದಲ್ಲಿ ತಡರಾತ್ರಿ ವ್ಯಕ್ತಿ ಕೊಲೆ: ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಕೃತ್ಯ

ಕೋಲಾರ ನಗರದ ನಿಸಾರ್ ನಗರದಲ್ಲಿ ತಡರಾತ್ರಿ ಹಣದ ವಿಚಾರಕ್ಕೆ ಲಾಂಗ್ ನಿಂದ ಹೊಡೆದು ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಬೀಡಿ ಕಾಲೋನಿ ನಿವಾಸಿ ಅಲ್ತಾಫ್(45) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅಲ್ತಾಫ್ ನನ್ನು ಕೊಲೆ ಮಾಡಿದ ಆರೋಪಿ ಇಮ್ರಾನ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.ಅಲ್ತಾಫ್ ಬಳಿ ಆರೋಪಿ ಇಮ್ರಾನ್ ಬಡ್ಡಿಗೆ ಸಾಲ ಪಡೆದುಕೊಂಡಿದ್ದ. ಹಣ ವಾಪಸ್ ನೀಡುವಂತೆ ಪದೇ ಪದೇ ಕೇಳಿದ್ದಕ್ಕೆ ತಡರಾತ್ರಿ ಲಾಂಗ್ ನಿಂದ ಹೊಡೆದು ಅಲ್ತಾಫ್ ನನ್ನು ಕೊಲೆ …

Read More »

ರಸ್ತೆ ಅಪಘಾತದಲ್ಲಿ ಅರ್ಧದೇಹ ಸಿಕ್ಕಿದೆ, ಗುರುತು ಸಿಕ್ಕಿಲ್ಲ! ಪೊಲೀಸರಿಗೆ ತಲೆನೋವಾದ ಪ್ರಕರಣ!

ಬೆಂಗಳೂರು: ನೈಸ್‌ ರಸ್ತೆ ಅಪಘಾತದಲ್ಲಿ ಸಿಕ್ಕ ವ್ಯಕ್ತಿಯ ಅರ್ಧ ದೇಹ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಈ ಸಂಬಂಧ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣವನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಜಾಲಾಡುತ್ತಿದ್ದಾರೆ. ಮೇ 4ರಂದು ನೈಸ್‌ ರಸ್ತೆಯಲ್ಲಿ ಅಪಘಾತವಾಗಿದೆ ಎಂದು ಸಾರ್ವಜನಿಕರಿಂದ ಕರೆ ಬಂದಿತ್ತು. ವಿಷಯ ತಿಳಿದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿಯೊಬ್ಬರ ಅಪ್ಪಚ್ಚಿಯಾಗಿದ್ದ ಅರ್ಧ ದೇಹ …

Read More »

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗೆ ಅಶ್ಲೀಲ ನಿಂದನೆ: ದೂರು ದಾಖಲು

ಶಿವಮೊಗ್ಗ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಏಕವಚನದಲ್ಲಿ ನಿಂದಿಸಿದ ಆರೋಪದ ಮೇಲೆ ಎಂ.ಎನ್. ಗಣೇಶ್ ಎಂಬ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆರ್.ಎಸ್.ಎಸ್. ಕುರಿತಾಗಿ ಸಾರ್ವಜನಿಕವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೀಡಿದ ಹೇಳಿಕೆಯ ಸಂದರ್ಭದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿತ್ತು. ಈ ಕುರಿತಾಗಿ ಎಂ.ಎಸ್. ಗಣೇಶ್ ಎಂಬ ವ್ಯಕ್ತಿ …

Read More »

ಪ್ರೇಯಸಿ ಕೊಂದು ವಕೀಲರಿಗೆ ಕರೆ ಮಾಡಿದ ವಾಟರ್‌ ಟ್ಯಾಂಕರ್‌ ಚಾಲಕ!

ಬೆಂಗಳೂರುದಲ್ಲಿ ಸಹಜೀವನ ನಡೆಸುತ್ತಿದ್ದ ಯುವತಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿದ ಆರೋಪದ ಮೇಲೆ ಶರತ್ ವಿರುದ್ಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ಮೂಲದ 20 ವರ್ಷದ ಅನುಷಾ ಮೃತಪಟ್ಟ ಯುವತಿ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಅನುಷಾ ಮತ್ತು ಶರತ್ ಕಳೆದ ಆರು ತಿಂಗಳಿನಿಂದ ಮಲ್ಲೇಶ್ವರದ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿ, ಅದು ವಿಕೋಪಕ್ಕೆ ತಿರುಗಿದ ವೇಳೆ ಶರತ್ …

Read More »

ಪಾಕ್ ಬೆಂಬಲಿತ ಕಳ್ಳ ಸಾಗಣೆದಾರ ಜಾಲ ಬಯಲು, 7 ಮಂದಿ ಸೆರೆ

ನವದೆಹಲಿ: ದೆಹಲಿ, ಎನ್‌ಸಿಆರ್ ಪ್ರಾಂತ್ಯದಲ್ಲಿ ಸಕ್ರಿಯವಾಗಿದ್ದ, ಪಾಕ್ ಭಯೋತ್ಪಾದಕರ ಬೆಂಬಲಿತ ಕಳ್ಳಸಾಗಣೆದಾರರ ಗುಂಪೊಂದನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅನಾಸ್ ತ್ಯಾಗಿ (28), ಮೋಹಿತ್ ಅಲಿಯಾಸ್ ಯೋಗಿ (26), ದೀಪಕ್ ಅಲಿಯಾಸ್ ಅಗ್ರೋಲಾ (38), ಆರಿಫ್ ಅಲಿಯಾಸ್ ಪ್ರಧಾನ್ (30), ಕರಣ್‌ವೀರ್‌ ಸಿಂಗ್ (26), ಜತನ್ (29), ಸಬೀರ್ (30) ಬಂಧಿತರು. ಇವರೆಲ್ಲರೂ ಪಾಕಿಸ್ತಾನದ ಭೂಗತ ದೊರೆಯಾಗಿದ್ದು ಈಗ ಭಯೋತ್ಪಾದಕನಾಗಿರುವ ಶಹಜಾದ್ ಭಟ್ಟಿ, ಆತನ ಸಹಚರ ಅಜ್ಮಲ್ ಗುಜ್ಜಾರ್ ಅವರಿಗಾಗಿ ಕೆಲಸ …

Read More »

ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 10.83 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಕೋಟ: ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐರೋಡಿ ಗ್ರಾಮದ ಎಸ್ ವರ್ಷಾ(23) ಎಂಬವರಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ ಅಭಿಷೇಕ್ ಎಂಬಾತ, 2025ರ ಅ.31ರಿಂದ 2026ರ ಮೇ 28ರವರೆಗೆ ವರ್ಷಾ ಅವರಿಂದ ಒಟ್ಟು 10,83,000ರೂ. ಪಡೆದುಕೊಂಡಿದ್ದನು. ಬಳಿಕ ಆರೋಪಿ ಸರಕಾರಿ ಕೆಲಸವನ್ನು ಕೊಡಿಸದೇ ಪಡೆದುಕೊಂಡ ಹಣವನ್ನು ವಾಪಾಸ್ಸು ನೀಡದೆ ಮೋಸ ಮಾಡಿದ್ದಾನೆ. ಹಣ ವಾಪಾಸು ಕೇಳಿದಕ್ಕೆ …

Read More »