Breaking News

Breaking News

ಹಳೆ ಹುಬ್ಬಳ್ಳಿ ಸುಭಾಷ್ ನಗರದಲ್ಲಿ ಅನ್ನೋನ್ ಬಾಡಿ ಪತ್ತೆ..! ಗುರುತು ಸಿಕ್ಕಿಲ್ಲ – ಸಾರ್ವಜನಿಕರ ಸಹಕಾರಕ್ಕೆ ಪೊಲೀಸರ ಮನವಿ..

ಈ ವ್ಯಕ್ತಿ ಯಾರು..? ಸುಭಾಷ್ ನಗರದಲ್ಲಿ ಪತ್ತೆಯಾದ ಅಪರಿಚಿತ ಮೃತದೇಹ – ಮಾಹಿತಿ ಇದ್ದರೆ ಹಳೆ ಹುಬ್ಬಳ್ಳಿ ಪೊಲೀಸರಿಗೆ ತಿಳಿಸಿ. ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ ನಗರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.. ಮೃತ ವ್ಯಕ್ತಿಯನ್ನು ಯಾರಾದರೂ ನೋಡಿದ್ದರೆ ಅಥವಾ ಅವರ ಪರಿಚಯ ಇರುವವರು ಇದ್ದರೆ, ತಕ್ಷಣ ಹಳೆ ಹುಬ್ಬಳ್ಳಿ …

Read More »

ಸಾಲ ಕೇಳಲು ಬಂದ ವೃದ್ಧೆ ಕೊಲೆ, ಇಬ್ಬರು ಆರೋಪಿಗಳ ಬಂಧನ

ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದ 75 ವರ್ಷದ ರೆಡ್ಡಮ್ಮ ಅವರನ್ನು ಸಾಲದ ಹಣ ಹಿಂದಿರುಗಿಸುವುದಾಗಿ ಕರೆಸಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳು ಮೃತದೇಹವನ್ನು ಚಿಂತಾಮಣಿ ತಾಲ್ಲೂಕಿನ ಕೆಂಚಾರಪಲ್ಲಿ ಅರಣ್ಯ ಪ್ರದೇಶದಲ್ಲಿ ಬಿಸಾಡಿದ್ದರು. ಮೇ 26ರಂದು ಸಾಲದ ಹಣ ವಾಪಸ್ ಪಡೆಯಲು ತೆರಳಿದ್ದ ರೆಡ್ಡಮ್ಮ ಮನೆಗೆ ಮರಳದ ಹಿನ್ನೆಲೆಯಲ್ಲಿ ಅವರ ಪುತ್ರ ಜೂನ್ 1ರಂದು ರಾಯಲ್ಪಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ವೇಳೆ ಸಾಲ ಪಡೆದಿದ್ದವರ ಮೇಲೆಯೇ …

Read More »

ಕಾಸರಗೋಡು| ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ; ಮಹಿಳೆಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

ಕೇರಳದ ಕಣ್ಣೂರು ಜಿಲ್ಲೆಯ ಪುಳಿಪ್ಪರಂಬದಲ್ಲಿ 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ 25 ವರ್ಷದ ಸ್ನೇಹ ಮೆರ್ಲಿನ್ ವಿರುದ್ಧ ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿ ಬಾಲಕಿಯ ತಾಯಿಯ ಸ್ನೇಹಿತೆಯಾಗಿದ್ದು, ಮನೆಗೆ ಭೇಟಿ ನೀಡಿದ್ದ ವೇಳೆ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾಲಕಿ ಮನೆಯಲ್ಲಿ ಮಲಗಿದ್ದ ಸಂದರ್ಭ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎನ್ನಲಾಗಿದೆ. ಘಟನೆಯ ಬಳಿಕ ಭಯ ಮತ್ತು ಮಾನಸಿಕ …

Read More »

ರೌಡಿಶೀಟರ್ ಹತ್ಯೆ ಮಾಡಿದ್ದ ಐವರು ಪೊಲೀಸರಿಗೆ ಶರಣು

ಶಿವಮೊಗ್ಗ ನಗರದ ಗಾಂಧಿಬಜಾರ್‌ನ ಕರಿದೇವರ ಕೇರಿಯಲ್ಲಿ ನಡೆದ ರೌಡಿಶೀಟರ್ ನರಸಿಂಹ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳು ಕೋಟೆ ಠಾಣೆ ಪೊಲೀಸರಿಗೆ ಶರಣಾಗಿದ್ದಾರೆ. ಅಂಬು ಅಲಿಯಾಸ್ ಅನಿಲ್, ಮಧು, ರವಿ, ಕತ್ತೆ ಕಾರ್ತಿಕ್ ಹಾಗೂ ಶಬರೀಶ್ ಶರಣಾದ ಆರೋಪಿಗಳಾಗಿದ್ದು, ಅವರನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಜಿ. ಕಾರಿಯಪ್ಪ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಶುಕ್ರವಾರ ಸಂಜೆ …

Read More »

ನಕ್ಸಲ್ ಫಂಡಿಂಗ್ ಆರೋಪ: 7 ಜನರ ವಿರುದ್ಧ ಎಫ್‌ಐಆರ್

ಭಾರತದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ವಿದೇಶದಿಂದ ಅಕ್ರಮ ಹಣಕಾಸು ನೆರವು ನೀಡಿದ ಆರೋಪದಡಿ ಅಮೆರಿಕಾ ಮೂಲದ ಸಂಸ್ಥೆ ಸೇರಿದಂತೆ ಕರ್ನಾಟಕದ ನಾಲ್ವರು ಸೇರಿ ಏಳು ಜನರ ವಿರುದ್ಧ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇಡಿ ನೀಡಿದ ದೂರಿನ ಮೇರೆಗೆ ಯುಎಪಿಎ ಹಾಗೂ ಬಿಎನ್‌ಎಸ್ ಕಾಯ್ದೆಯಡಿ ಒಳಸಂಚು, ವಂಚನೆ ಮತ್ತು ಸುಳ್ಳು ದಾಖಲೆ ಸೃಷ್ಟಿಸಿದ ಆರೋಪಗಳನ್ನು ದಾಖಲಿಸಲಾಗಿದೆ. ತನಿಖೆಯಲ್ಲಿ 95 ಕೋಟಿ ರೂಪಾಯಿಗೂ ಅಧಿಕ ವಿದೇಶಿ ಹಣದ ಅಕ್ರಮ ಬಳಕೆ …

Read More »

ಪೊಲೀಸರು ಬೆನ್ನಟ್ಟುತ್ತಿದ್ದಾರೆಂದು ಟ್ರಕ್ ನಿಂದ ಹಸುಗಳನ್ನು ರಸ್ತೆಗೆ ಎಸೆದ ಗೋಕಳ್ಳರು:

ಹರಿಯಾಣದ ಗುರುಗ್ರಾಮ್‌ನಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಹಾಗೂ ಗೋರಕ್ಷಕರು ಸುಮಾರು 35 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿದ ರೋಚಕ ಘಟನೆ ನಡೆದಿದೆ. ಪೊಲೀಸರನ್ನು ತಪ್ಪಿಸಿಕೊಳ್ಳಲು ಆರೋಪಿಗಳು ಚಲಿಸುತ್ತಿದ್ದ ವಾಹನದಿಂದಲೇ ಜೀವಂತ ಹಸುಗಳನ್ನು ರಸ್ತೆಗೆ ಎಸೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಹೈ-ಸ್ಪೀಡ್ ಚೇಸಿಂಗ್ ವೇಳೆ ಆರೋಪಿಗಳು ಬೆನ್ನಟ್ಟುತ್ತಿದ್ದವರ ಮೇಲೆ ಗುಂಡಿನ ದಾಳಿಯನ್ನೂ ನಡೆಸಿದ್ದಾರೆ. ರಸ್ತೆಗೆ ಎಸೆಯಲ್ಪಟ್ಟ ಹಸುಗಳಿಗೆ ಗಂಭೀರ ಗಾಯಗಳಾಗಿದ್ದು, ವಾಹನವನ್ನು ತಡೆಯಲು ಪೊಲೀಸರು ನಿರಂತರ …

Read More »

ಗಾಂಜಾ ಸೇವಿಸಿ ದುರ್ವರ್ತನೆ ತೋರಿದ ಮೂವರ ಸೆರೆ

ಚಿಂತಾಮಣಿಯಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮೂವರು ಯುವಕರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ವೆಂಕಟಗಿರಿಕೋಟೆ ಬಡಾವಣೆ ನಿವಾಸಿ ಸಲ್ಮಾನ್ ಪಾಷ (26), ಎನ್. ಜಿಶಾನ್ (23) ಹಾಗೂ ಶಾಂತಿನಗರ ನಿವಾಸಿ ಮೊಹಮದ್ ಅಲಿ ಅರ್ಬಾಜ್ (22) ಬಂಧಿತರು. ಬುಧವಾರ ನಗರದ ವಿವಿಧ ಪ್ರದೇಶಗಳಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಸೇವಿಸಿರುವುದು ಬೆಳಕಿಗೆ ಬಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಹಾಗೂ ದುರ್ವರ್ತನೆ ತೋರಿದ …

Read More »

ಮುಳುಗಡೆ ಸಂತ್ರಸ್ತ ರೈತನಿಂದ ಪ್ರಾಧಿಕಾರದ ನೌಕರನಿಗೆ ಚಪ್ಪಲಿ ಏಟು!

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಮುಳುಗಡೆ ಸಂತ್ರಸ್ತ ರೈತ ಬಸಪ್ಪ ಹಾಗೂ ಪ್ರಥಮ ದರ್ಜೆ ನೌಕರ (ಎಫ್‌ಡಿಎ) ಅಂಕದ ನಡುವೆ ಪರಿಹಾರ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ. ಪರಿಹಾರ ನೀಡುವಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ರೈತ ಹಲವು ದಿನಗಳಿಂದ ಕಚೇರಿಗೆ ಅಲೆದಾಡುತ್ತಿದ್ದರು ಎನ್ನಲಾಗಿದೆ. ಇಂದು ಕಚೇರಿಯಲ್ಲಿ ನಡೆದ ಮಾತಿನ ಚಕಮಕಿ ಜಗಳಕ್ಕೆ ತಿರುಗಿದ್ದು, ಇಬ್ಬರೂ ಪರಸ್ಪರ ತಳ್ಳಾಟ ನಡೆಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ರೈತ ಬಸಪ್ಪ ತಾನು …

Read More »

ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಮಹಿಳೆ, ಸಾಕು ನಾಯಿಯ ಮೃತದೇಹ ಪತ್ತೆ!

ಶಿವಮೊಗ್ಗ ಜಿಲ್ಲೆಯ ರವೀಂದ್ರ ನಗರದಲ್ಲಿ ಮನಕಲಕುವ ಘಟನೆ ನಡೆದಿದ್ದು, ಮನೆಯೊಂದರಲ್ಲಿ 57 ವರ್ಷದ ಪ್ರಭಾವತಿ ಹಾಗೂ ಅವರ ಸಾಕು ನಾಯಿಯ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಹಲವು ದಿನಗಳ ಹಿಂದೆಯೇ ಮಹಿಳೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಆಕೆಯ ಸಾವಿನ ಬಳಿಕ ಮನೆಯೊಳಗೇ ಇದ್ದ ನಾಯಿ ಕೂಡ ಆಹಾರ ಮತ್ತು ಆರೈಕೆ ಸಿಗದೆ ಸಾವನ್ನಪ್ಪಿರುವ ಸಾಧ್ಯತೆ ವ್ಯಕ್ತವಾಗಿದೆ. ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ …

Read More »

ಬಾಗಲಕೋಟೆಯಲ್ಲಿ ಬಸ್-ಲಾರಿ ಅಪಘಾತ: ಇಬ್ಬರ ಸಾವು

ಬಾಗಲಕೋಟೆ: ಜಿಲ್ಲೆಯ ಸುನಗ ಕ್ರಾಸ್ ಬಳಿ ಬಸ್, ಲಾರಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಲಾರಿ ಡಿಕ್ಕಿಯಾದ ರಭಸಕ್ಕೆ ಬಸ್‌ನ ಹಿಂಭಾಗದ ಅರ್ಧ ಭಾಗ ಕಿತ್ತುಹೋಗಿದೆ. ಬಸ್‌ನಲ್ಲಿದ್ದ ವಾಣಿ ದೇಸಾಯಿ (26), ಶಿವಕುಮಾರ್ ಕಡ್ಲಿವಾಡ (25) ಮೃತಪಟ್ಟಿದ್ದಾರೆ. ವಾಣಿ ದೇಸಾಯಿ ಬಾಗಲಕೋಟೆ ತಾಲ್ಲೂಕಿನ ಸೀಮಿಕೇರಿ ಗ್ರಾಮದ ನಿವಾಸಿ. ಶಿವಕುಮಾರ ಕಡ್ಲಿವಾಡ ಗದಗ ಜಿಲ್ಲೆಯ ನರಗುಂದ ಮೂಲದವರು. ಬಸ್ ವಿಜಯಪುರ ಕಡೆ ಹೊರಟಿದ್ದರೆ, ಲಾರಿ ವಿಜಯಪುರ ಕಡೆಯಿಂದ ಬಾಗಲಕೋಟೆ ಕಡೆ ಬರುತ್ತಿತ್ತು. ಬೀಳಗಿ …

Read More »