Breaking News

Breaking News

ಪ್ರಧಾನಿ ಮೋದಿ ಫೋಟೋ ತಿರುಚಿ ಅವಹೇಳನ: ಬಿಜೆಪಿಯಿಂದ ದೂರು ದಾಖಲು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ತಿರುಚಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಜೆಪಿಯ ಸಾಮಾಜಿಕ ಜಾಲತಾಣ ಸಂಚಾಲಕ ಪ್ರಶಾಂತ್ ಮಾಕನೂರು ನೀಡಿದ ದೂರಿನ ಅನ್ವಯ ಡಾ.ಲಕ್ಷ್ಮಿಕಾಂತ ಸಿಂಹ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಲಕ್ಷ್ಮಿಕಾಂತ ಸಿಂಹ ಎಂಬ ವ್ಯಕ್ತಿಯು ತನ್ನ ಫೇಸ್ ಬುಕ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಹೆಣ್ಣಿನ ಜೊತೆ ಅಶ್ಲೀಲ ರೀತಿ …

Read More »

ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ 2.92 ಲಕ್ಷ ರೂ. ವಂಚನೆ: ದೂರು

ಮಂಗಳೂರು: ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ ಮಹಿಳೆಯೊಬ್ಬರಿಗೆ 2.94 ಲಕ್ಷ ರೂ. ವಂಚಿಸಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರ ಮಹಿಳೆ ಮೇ 22ರಂದು ಬ್ಯಾಂಕೊಂದರ ಪುತ್ತೂರು ಶಾಖೆಯಲ್ಲಿ 2.94 ಲಕ್ಷ ರೂ. ಗೋಲ್ಡ್ ಲೋನ್ ಪಡೆದಿದ್ದರು. ಜೂನ್ ತಿಂಗಳಿನಿಂದ ಪ್ರತೀ ತಿಂಗಳ 6 ಸಾವಿರ ರೂ.ಇಎಂಐ ಪಡೆಯುವ ಬಗ್ಗೆ ಬ್ಯಾಕ್ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಆದರೆ ಮೇ 22ರಂದೇ 6 ಸಾವಿರ ರೂ. ಕಡಿತವಾಗಿದೆ. ಆ ಹಣವನ್ನು ವಾಪಾಸು …

Read More »

ಟೈರ್ ಸ್ಫೋಟಗೊಂಡು ಮೀನಿನ ಲಾರಿ ಪಲ್ಟಿ; ಚಾಲಕ ಅಪಾಯದಿಂದ ಪಾರು

ಮಂಗಳೂರಿನಿಂದ ಮೀನು ಸಾಗಿಸಿಕೊಂಡು ಬರುತ್ತಿದ್ದ ಲಾರಿಯೊಂದು ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ ಘಟನೆ ಮಂಗಳವಾರ ಉಡುಪಿ ಅಂಬಾಗಿಲು ಸಮೀಪ ಸಂಭವಿಸಿದೆ. ಲಾರಿಯ ಹಿಂಬದಿ ಟೈರ್ ಏಕಾಏಕಿ ಸ್ಫೋಟಗೊಂಡಿದ್ದು, ಇದರಿಂದ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆ ಬದಿಗೆ ಉರುಳಿ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.ಅಪಘಾತ ಸಂಭವಿಸಿದ ವೇಳೆ ಲಾರಿಯಲ್ಲಿ ಚಾಲಕ ಒಬ್ಬರೇ ಇದ್ದರು. ಘಟನೆಯಲ್ಲಿ ಲಾರಿಗೆ ಹಾನಿಯಾಗಿದ್ದು, ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. …

Read More »

ವಿದೇಶದಿಂದ ಪಾರ್ಸಲ್‌ನಲ್ಲಿ ಬಂದ 2.32 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ

ಬೆಂಗಳೂರು ನಗರದ ಅಂತರರಾಷ್ಟ್ರೀಯ ಅಂಚೆ ಕಚೇರಿಗೆ ವಿದೇಶದಿಂದ ಬಂದ ಅನುಮಾನಾಸ್ಪದ ಪಾರ್ಸಲ್‌ಗಳ ಮೇಲೆ ಸಿಸಿಬಿ ಮಾದಕ ವಸ್ತು ನಿಗ್ರಹದಳ ಪೊಲೀಸರು ದಾಳಿ ನಡೆಸಿ, 2.32 ಕೋಟಿ ರೂ. ಮೌಲ್ಯದ 3 ಕೆಜಿ 312 ಗ್ರಾಂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಚೆ ಕಚೇರಿಗೆ ನಿಷೇಧಿತ ಮಾದಕ ವಸ್ತುಗಳಿರುವ ಮೂರು ಬಾಕ್ಸ್‌ಗಳು ಬಂದಿರುವ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಅವುಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣ …

Read More »

ಹುಡುಗಿ ವಿಚಾರಕ್ಕೆ ಕಿಡ್ನಾಪ್ – ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ದ ಕಿರಾತಕರ ಬಂಧನ!

ಬೆಂಗಳೂರು: ಯುವತಿಯೊಬ್ಬಳ ವಿಚಾರವಾಗಿ ಉಂಟಾದ ಹಳೇ ವೈಷಮ್ಯ ಹಿನ್ನೆಲೆ ಯುವಕನನ್ನು ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಅಪಹರಿಸಿ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಅಫಾನ್, ಶಾಹಿದ್, ಅರ್ಫಾತ್, ಮೋಸಿನ್ ಮತ್ತು ಅಲಿ ಎಂಬ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿಗಳಾದ ಅಬ್ನಾನ್ ಹಾಗೂ ಅಫ್ರೀದಿ ತಲೆಮರೆಸಿಕೊಂಡಿದ್ದಾರೆ. ಮೊಹಮ್ಮದ್ ರಫೀಕ್ ಹಲ್ಲೆಗೊಳಗಾದ ಯುವಕನಾಗಿದ್ದಾನೆ. ಪೊಲೀಸರ ಮಾಹಿತಿ ಪ್ರಕಾರ, ರಫೀಕ್ ಮತ್ತು ಯುವತಿ …

Read More »

ನಗರದಲ್ಲಿ ಡ್ರಗ್ಸ್ ಮಾರಾಟ – ಕೇರಳ ಮೂಲದ ಪೆಡ್ಲರ್ಸ್ ಅರೆಸ್ಟ್!

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಾದಕ ವಸ್ತುಗಳ ಜಾಲಕ್ಕೆ ಬ್ರೇಕ್ ಹಾಕಲು ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ನಗರದ ಜೀವನ್ ಭೀಮಾ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಜುನೈದ್ ಮತ್ತು ಮೊಹಮ್ಮದ್ ನಬೀದ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.​ಬಂಧಿತರಿಂದ ಒಟ್ಟು 3.35 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ 65 ಸಾವಿರ ರೂ. ಮೌಲ್ಯದ 1 …

Read More »

ವಿದ್ಯಾರ್ಥಿಗಳ ವೇಷದಲ್ಲಿ ಎಂಟ್ರಿ..! ಪಿಜಿಗಳಿಗೆ ನುಗ್ಗಿ ಲ್ಯಾಪ್ಟಾಪ್ ಲೂಟಿ – ಸಿಸಿಟಿವಿಯಲ್ಲಿ ಸೆರೆಯಾದ ಖದೀಮರು ಆಂಧ್ರದಲ್ಲಿ ಅರೆಸ್ಟ್..!

ಹುಬ್ಬಳ್ಳಿಯ ವಿದ್ಯಾರ್ಥಿಗಳೇ ಟಾರ್ಗೆಟ್..! ಹಾಡುಹಗಲೇ ಕಾಲೇಜ್–ಪಿಜಿಗಳಲ್ಲಿ ಕೈಚಳಕ – ವಿದ್ಯಾನಗರ ಪೊಲೀಸರ ಖಡಕ್ ಆಪರೇಷನ್..! ಹುಬ್ಬಳ್ಳಿ ನಗರದ ವಿದ್ಯಾನಗರ ಭಾಗದಲ್ಲಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಸರಣಿ ಲ್ಯಾಪ್ಟಾಪ್ ಕಳ್ಳತನ ನಡೆಸುತ್ತಿದ್ದ ಅಂತರ ಜಿಲ್ಲಾ ಖದೀಮರ ಜಾಲವನ್ನು ವಿದ್ಯಾನಗರ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.. ವಿದ್ಯಾರ್ಥಿಗಳಂತೆ ವೇಷಧರಿಸಿ ಕಾಲೇಜ್ ಹಾಗೂ ಪಿಜಿಗಳಿಗೆ ಎಂಟ್ರಿ ಕೊಡುತ್ತಿದ್ದ ಆರೋಪಿಗಳು, ಯಾರಿಗೂ ಅನುಮಾನ ಬಾರದಂತೆ ಹಾಡುಹಗಲೇ ಕಳ್ಳತನ ನಡೆಸುತ್ತಿದ್ದರು… ಹೌದು… ಬಿವಿಬಿ …

Read More »

ಕ್ರಿಪ್ಟೋ ಕರೆನ್ಸಿಯಲ್ಲಿ ಲಾಭದ ಆಮಿಷ- 3.50 ಲಕ್ಷ ರೂ. ಮೋಸ

ಮಣಿಪಾಲ: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದಲ್ಲಿ ಲಾಭ ತೆಗೆಸಿಕೊಡುವುದಾಗಿ ನಂಬಿಸಿ ಮಂಗಳೂರು ಮೂಲದ ವ್ಯಕ್ತಿಯೋರ್ವರಿಗೆ 3.50 ಲಕ್ಷ ರೂ. ಮೋಸ ಮಾಡಿದ ಘಟನೆಗೆ ಸಂಬಂಧಿಸಿ ಮಣಿಪಾಲದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ಮೂಲದ ಗಣೇಶ್ ಪಿ.ಎಲ್.ಪ್ರಕರಣದಲ್ಲಿ ಮೋಸಕ್ಕೊಳಗಾದವರು. ಆರೋಪಿಗಳಾದ ಅರವಿಂದ ನಾಯಕ್ ಹಾಗೂ ಹರೀಶ್ ಎಂಬವರು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದಲ್ಲಿ ಲಾಭ ತೆಗೆಯಿಸಿಕೊಡುವುದಾಗಿ ಗಣೇಶ್ ಅವರನ್ನು ಮಣಿಪಾಲದಲ್ಲಿ ಭೇಟಿಯಾಗಿ ನಂಬಿಸಿದ್ದರು. ಈ ಹಿನ್ನೆಲೆ 2025ರ ಮಾರ್ಚ್ 23ರಂದು …

Read More »

ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ₹45 ಕೋಟಿ ಹಗರಣ: 6 ಮಂದಿ ಬಂಧನ

ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ₹45 ಕೋಟಿ ನಕಲಿ ಬಿಲ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ವಿಶ್ರಾಂತ ಕುಲಪತಿ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. 2017-18ರ ಅವಧಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಅಕ್ರಮ ಹಣ ವರ್ಗಾವಣೆ ನಡೆಸಿರುವ ಆರೋಪ ಕೇಳಿಬಂದಿದೆ. ಬಂಧಿತರಲ್ಲಿ ವಿಶ್ರಾಂತ ಕುಲಪತಿ ಎಚ್.ಡಿ. ನಾರಾಯಣಸ್ವಾಮಿ, ನಿವೃತ್ತ ಹಣಕಾಸು ನಿಯಂತ್ರಣಾಧಿಕಾರಿ ಕೆ.ಎಲ್. ಸುರೇಶ್, ಎಫ್‌ಡಿಎ ಮೃತ್ಯುಂಜಯ ಹಿರೇಮಠ ಹಾಗೂ ಖಾಸಗಿ …

Read More »

ಬಕ್ರೀದ್‌ಗಾಗಿ ಗೋವುಗಳ ಕೂಡಿಹಾಕಿದ ಆರೋಪ: ಬಳ್ಳಾರಿ ಹಳೇ ಬೈಪಾಸ್‌ನಲ್ಲಿ ಪೊಲೀಸರ ದಾಳಿ; 50ಕ್ಕೂ ಹೆಚ್ಚು ಗೋವುಗಳ ರಕ್ಷಣೆ

ಬಳ್ಳಾರಿಯಲ್ಲಿ ಐವತ್ತಕ್ಕೂ ಹೆಚ್ಚು ಗೋವುಗಳನ್ನು ಒಂದೇ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ ಘಟನೆ ಬೆಳಕಿಗೆ ಬಂದಿದೆ. ಹಳೇ ಬೈಪಾಸ್‌ನ ಗೋಲಬಡಿ ರಸ್ತೆಯಲ್ಲಿರುವ ಕೊಟ್ಟಿಗೆಯಲ್ಲಿ ಗೋವುಗಳನ್ನು ಇರಿಸಲಾಗಿತ್ತು. ಮಾಹಿತಿ ಪಡೆದ ಹಿಂದೂ ಸಂಘಟನೆ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಗೋವುಗಳು ಪತ್ತೆಯಾಗಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಿಂದೂ ಸಂಘಟನೆಗಳ ಮಾಹಿತಿ ಮೇರೆಗೆ ಕೌಲಬಜಾರ್ ಪೊಲೀಸರು ಸ್ಥಳದ ಮೇಲೆ ದಾಳಿ ನಡೆಸಿ ಗೋವುಗಳನ್ನು ವಶಕ್ಕೆ ಪಡೆದಿದ್ದಾರೆ. ಬಕ್ರೀದ್ ಹಿನ್ನೆಲೆ …

Read More »