BigTv News
May 15, 2026
Breaking News
ರಾಯಚೂರು: ಕರುಳ ಕುಡಿಯನ್ನು ರಕ್ಷಿಸಬೇಕಾದ ತಂದೆಯೇ ಕಾಮಪಿಶಾಚಿಯಾದ ಘೋರ ಘಟನೆಯೊಂದು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳಿಂದ ತನ್ನ ಅಪ್ರಾಪ್ತ ಮಗಳ ಮೇಲೆ ತಂದೆ ಹಾಗೂ ಆತನ ಸ್ನೇಹಿತ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದು, ಇದೀಗ ಇಬ್ಬರೂ ಕಾಮುಕರು ಪೊಲೀಸರ ಅತಿಥಿಯಾಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ತಂದೆ ಹಾಗೂ ಆತನ ಸ್ನೇಹಿತ ಸೇರಿ ಅಪ್ರಾಪ್ತ ಬಾಲಕಿಯ ಮೇಲೆ ಕಳೆದ ಎರಡು ವರ್ಷಗಳಿಂದ …
Read More »
BigTv News
May 15, 2026
Breaking News
ಮುಳಬಾಗಿಲು: ನಗರದ ನೇತಾಜಿ ಕ್ರೀಡಾಂಗಣದ ಬಳಿ ಸಾಲಾಗಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಗುರುವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ತಗುಲಿ ನಾಲ್ಕು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿದ್ದು, ಮೂರ್ನಾಲ್ಕು ವಾಹನಗಳಿಗೆ ಬೆಂಕಿಯ ಶಾಖ ತಗುಲಿದೆ. ಮುಳಬಾಗಿಲು ನಗರದಿಂದ ಬೇರೆಡೆಗೆ ನಾನಾ ಕೆಲಸ ಕಾರ್ಯಗಳಿಗೆ ಹೋಗುವ ದ್ವಿಚಕ್ರ ವಾಹನ ಸವಾರರು ಕ್ರೀಡಾಂಗಣದ ಒಂದು ಭಾಗದಲ್ಲಿ ನಿಲ್ಲಿಸುತ್ತಿದ್ದರು. ಅದೇ ರೀತಿ ಗುರುವಾರವೂ ಸುಮಾರು 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದ್ದರು. ಆದರೆ ಆಕಸ್ಮಿಕ ಬೆಂಕಿಗೆ …
Read More »
BigTv News
May 15, 2026
Breaking News
ಕಾಸರಗೋಡು: ಕೊಠಡಿಯೊಳಗೆ ಕೂಡಿ ಹಾಕಿ ಬಳಿಕ ಮಾಲೆ ಪಟಾಕಿ ಸ್ಫೋಟಿಸಲಾಗಿದ್ದು, ಇದರಿಂದ ಯುವಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು. ಮಲ್ಲ ಚೋಕೆಮೂಲೆ ನಿವಾಸಿ ಎಂ.ಅಭಿಲಾಷ್(32) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಏ.15ರಂದು ರಾತ್ರಿ 10ರಿಂದ 16ರಂದು ಬೆಳಗ್ಗೆ 8ಗಂಟೆ ಮಧ್ಯೆ ಮನೆ ಕೊಠಡಿಯೊಳಗೆ ಕೋಡಿ ಹಾಕಿ, ಬಳಿಕ ಮಾಲೆ ಪಟಾಕಿಗೆ ಬೆಂಕಿ ಹಚ್ಚಿ ಎಸೆದಿರುವುದಾಗಿ ಅಭಿಲಾಷ್ ನೀಡಿದ ದೂರಿನನ್ವಯ ಸ್ನೇಹಿತನಾದ ಮುಳ್ಳೇರಿಯದ …
Read More »
BigTv News
May 15, 2026
Breaking News
ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತಮಿಳುನಾಡು ಗಡಿ ಭಾಗದಲ್ಲಿ ಭಾರಿ ಪ್ರಮಾಣದ ಬುಲೆಟ್ಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಎಸ್ಎಲ್ಆರ್ ಹಾಗೂ ಮಿಷನ್ ಗನ್ಗಳಿಗೆ ಬಳಸುವ ಒಟ್ಟು 214 ಬುಲೆಟ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಹಿತಿಯ ಪ್ರಕಾರ, ಬಂಗಾರಪೇಟೆ ತಾಲೂಕಿನ ದಾಸರಮಲ್ಲ ಬ್ರಿಡ್ಜ್ ಬಳಿ ಅಪರಿಚಿತರು ಈ ಬುಲೆಟ್ಗಳನ್ನು ಬಿಸಾಡಿ ಹೋಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕಾಮಸಮುದ್ರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದಾಗ 135 ಜೀವಂತ ಗುಂಡುಗಳು ಮತ್ತು 85 ಖಾಲಿ …
Read More »
BigTv News
May 15, 2026
Breaking News
ಹೊಳೆಹೊನ್ನೂರು: ಮನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ನಿತ್ಯ ಬಳಕೆ ವಸ್ತುಗಳು ಸುಟ್ಟುಹೋದ ಘಟನೆ ಇಲ್ಲಿಗೆ ಸಮೀಪದ ತಳ್ಳಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಹಾಲಪ್ಪ ಸಾರು ಕುದಿಯಲು ಒಲೆ ಮೇಲೆ ಇರಿಸಿ ಪಕ್ಕದ ಮನೆಗೆ ಹೋಗಿದ್ದರು. ಮರಳಿ ಬರುವಷ್ಟರಲ್ಲಿ ಆಕಸ್ಮಿಕವಾಗಿ ಅಡುಗೆ ಅನಿಲ ಸೋರಿಕೆ ಆಗಿ ಸಮೀಪದಲ್ಲಿದ್ದ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಮನೆಯಿಡೀ ವ್ಯಾಪಿಸಿತ್ತು. ತತ್ಕ್ಷಣ ಸ್ಥಳೀಯರೊಂದಿಗೆ ಬೆಂಕಿ ನಂದಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗದೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಬೇಕಾಯಿತು. ಘಟನೆಯಲ್ಲಿ …
Read More »
BigTv News
May 15, 2026
Breaking News
ಉಪ್ಪುಂದ: ರಸ್ತೆಗೆ ಜಾಗ ಬಿಟ್ಟು ಕೊಡದಿದ್ದುದಕ್ಕೆ ಜೀವ ಬೆದರಿಕೆ ಹಾಕಿರುವುದಾಗಿ ಬಿಜೂರು ಕಾಡಿನಂತಾರು ನಿವಾಸಿ ಸಂತೋಷ ಪೂಜಾರಿ ನೀಡಿದ ದೂರಿನಂತೆ ರಾಘವೇಂದ್ರ ಗಾಣಿಗ ಎಂಬವರ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತೋಷ ಪೂಜಾರಿ ಬೈಂದೂರು ನ್ಯಾಯಾಲಯದಿಂದ ಬಿಜೂರು ಗ್ರಾಮದ ಕಾಡಿನಂತಾರು ಮುಡಾಯಾನ ಮನೆಯ ಗೇಟಿನ ಎದುರು ಹೋಗುತ್ತಿದ್ದಾಗ ಆರೋಪಿ ರಾಘವೇಂದ್ರ ಗಾಣಿಗ ರಸ್ತೆಗೆ ಜಾಗ ಬಿಟ್ಟು ಕೊಡಬೇಕು, ಇಲ್ಲದಿದ್ದರೆ ಮನೆಯಿಂದ ಹೊರಗಡೆ ಬಂದಾಗ ಕೈ ಕಾಲು ಕಡಿಯುವುದಾಗಿ …
Read More »
BigTv News
May 15, 2026
Breaking News
ಮಂಗಳೂರು: ಮೇರಿಹಿಲ್ ಹೆಲಿಪ್ಯಾಡ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಿಂತು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಯುವಕನನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಮುಕ್ಕಚೇರಿ ನಿವಾಸಿ ಹಿಲರಿಯ ನಗರ ನಿವಾಸಿ ಇರ್ಷಾದ್ ಅಲಿಯಾಸ್ ಇರ್ಷಾ (26) ಬಂಧಿತ ಆರೋಪಿ. ಕಾವೂರು ಠಾಣೆ ಪೊಲೀಸರು ಬುಧವಾರ ಮಧ್ಯಾಹ್ನ ಬಳಿಕ ಗಸ್ತು ಸಂಚಾರದಲ್ಲಿರುವಾಗ ಹೆಲಿಪ್ಯಾಡ್ ನ ಬಳಿ ಮೇರಿಹಿಲ್ ಜಂಕ್ಷನ್ ಕಡೆಗೆ ಹೊಗುವ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಯುವಕನ್ನು ವಿಚಾರಣೆ …
Read More »
BigTv News
May 15, 2026
Breaking News
ಉಡುಪಿ: ಮಣಿಪಾಲದ ಶಾಂತಿನಗರದ ಬಳಿ ರೂಮ್ನಲ್ಲಿ ವಾಸವಾಗಿದ್ದ ಮಹಿಳೆಯ ತಲೆಗೆ ಕಲ್ಲಿನಿಂದ ಹೊಡೆದು ಸರ ಅಪಹರಿಸಿರುವ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯೋಗಿತಾ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂವರು ಸ್ನೇಹಿತೆಯರೊಂದಿಗೆ ಯೋಗಿತಾ ಅವರು ರೂಮ್ನಲ್ಲಿ ವಾಸವಾಗಿದ್ದು, ಉಳಿದ ಮೂವರು ರಾತ್ರಿ ಪಾಳಿಯ ಕೆಲಸಕ್ಕೆ ತೆರಳಿ ಬೆಳಿಗ್ಗೆ ಮರಳಿದಾಗ ಯೋಗಿತಾ ಅವರು ರೂಮ್ನಲ್ಲಿ ನೆಲದ ಮೇಲೆ ಮಲಗಿದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು. ಪಕ್ಕದಲ್ಲೇ ತುಂಡಾದ ಸಿಮೆಂಟ್ ಕಲ್ಲುಗಳು …
Read More »
BigTv News
May 15, 2026
Breaking News
ಶಿವಮೊಗ್ಗ: ವಿಚಾರಣಾಧೀನ ಕೈದಿಗೆ ಜೀನ್ಸ್ ಪ್ಯಾಂಟ್ನ ಪಟ್ಟಿಯಲ್ಲಿ ಗಾಂಜಾ ಸಾಗಿಸಲು ಹೋಗಿ ಇಬ್ಬರು ಸಿಕ್ಕಿಬಿದ್ದಿರುವ ಘಟನೆ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಟಿಪ್ಪು ನಗರದ ನಿವಾಸಿಗಳಾದ ಖಿಜರ್ ಉಲಾ ಮತ್ತು ಇಬ್ರಾಹಿಂ ಜಬೀವುಲ್ಲಾ ಬಂಧಿತ ಆರೋಪಿಗಳು. ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ಇಬ್ರಾಹಿಂ ಎಂಬಾತನನ್ನು ಕಾಣಲು ಟಿಪ್ಪು ನಗರದ ನಿವಾಸಿಗಳಾದ ಖಿಜರ್ ಉಲಾ ಮತ್ತು ಇಬ್ರಾಹಿಂ ಜಬವುಲಾ ಎಂಬುವವರು ಬಂದಿದ್ದರು. ಅವರು ಕೈದಿಗೆ ನೀಡಲು ತಂದಿದ್ದ ಬಟ್ಟೆಬರೆಗಳನ್ನು ಮುಖ್ಯದ್ವಾರದಲ್ಲಿ ತಪಾಸಣೆಗೊಳಪಡಿಸಿದಾಗ, ಒಂದು …
Read More »
BigTv News
May 15, 2026
Breaking News
ಬೆಂಗಳೂರು (ಮೇ.15): ಆನ್ಲೈನ್ ಗೇಮಿಂಗ್ ಹೆಸರಿನಲ್ಲಿ ಗ್ರಾಹಕರಿಗೆ ಭಾರಿ ಮೋಸ ಮಾಡಿದ್ದ ಕಂಪನಿಯಾದ ಗೇಮ್ಸ್ ಕ್ರಾಫ್ಟ್ ಟೆಕ್ನಾಲಜಿಗೆ ಸೇರಿದ್ದ ಬೆಂಗಳೂರು, ದೆಹಲಿಯ 17 ಸ್ಥಳಗಳ ಮೇಲೆ ಹಾಗೂ ನಿರ್ದೇಶಕರ ನಿವಾಸ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, 526 ಕೋಟಿ ರು.ಮೌಲ್ಯದ ಚರಾಸ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಕಂಪನಿಯ ಮೂವರನ್ನು ಬಂಧಿಸಿ 3.5 ಕೋಟಿ ರು. ಮೌಲ್ಯದ 2.5 ಕೆ.ಜಿ ಚಿನ್ನ ಮತ್ತು ವಜ್ರದ ಆಭರಣ …
Read More »