Breaking News

Breaking News

ಪಡಿತರ ಅಕ್ಕಿ ಅಕ್ರಮ ಸಂಗ್ರಹ: ಬಂಧನ

ಕೊಳ್ಳೇಗಾಲ: ತಾಲ್ಲೂಕಿನ ಸಿಲ್ಕಲ್ ಪುರ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಗ್ರಾಮದ ಮಹದೇವಯ್ಯ (70) ಎಂಬುವರನ್ನು ಪೊಲೀಸರು ಹಾಗೂ ಆಹಾರ ಇಲಾಖೆ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯಿಂದ 766 ಕೆ.ಜಿ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಈತ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪಡಿತರ ಅಕ್ಕಿಯನ್ನು ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಮನೆಯ ಮುಂದೆ ಸಂಗ್ರಹಿಸಿಟ್ಟಿದ. ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ …

Read More »

ಪಶ್ಚಿಮ ಘಟ್ಟದಲ್ಲಿ ಧಗಧಗಿಸುವ ಬೆಂಕಿ: ಹಸಿರನ್ನು ನುಗುತ್ತಿದೆ ಭೀಕರ ಕಾಡ್ಗಿಚ್ಚು

ಕುದುರೇಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಶನಿವಾರ ಸಂಜೆ ಕಾಡ್ಗಿಚ್ಚು ಸಂಭವಿಸಿದ್ದು, ವೇಗವಾಗಿ ಅರಣ್ಯ ಪ್ರದೇಶವನ್ನು ಆವರಿಸಿದೆ. ಸುಲ್ಕೇರಿಮೊಗ್ರು, ಶಿರ್ಲಾಲು ಗ್ರಾಮದ ಮೇಲ್ಭಾಗದ ಅರಣ್ಯ ಪರಿಸರದಲ್ಲಿ ಬೆಂಕಿಯ ಮಾಲೆ ಕಂಡುಬಂದಿದೆ. ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸೇತುವೆಯಿಂದ ಶನಿವಾರ ಸಂಜೆ ಕಂಡು ಬಂದ ದೃಶ್ಯ ಇದಾಗಿದೆ. ಈ ಕುರಿತು ವನ್ಯಜೀವಿ ವಿಭಾಗದ ಆರ್.ಎಫ್.ಒ. ಶರ್ಮಿಷ್ಠಾ ಅವರು ಮಾಹಿತಿ ನೀಡಿದ್ದು, ಬೆಂಕಿಯ ಪ್ರಮಾಣ ತಹಬದಿಗೆ ಬಂದಿದೆ ಎಂದು ತಿಳಿಸಿದ್ದಾರೆ.

Read More »

ರಿಕ್ಷಾಕ್ಕೆ ಕಾರು ಢಿಕ್ಕಿ: ಇಬ್ಬರಿಗೆ ಗಾಯ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಸಮೀಪ ಕಾರು ಮತ್ತು ಆಟೋ ಢಿಕ್ಕಿಯಾಗಿ ಇಬ್ಬರು ಗಾಯಗೊಂಡಿದ್ದಾರೆ. ಕುಂದಾಪುರದಿಂದ ಗಂಗೊಳ್ಳಿ ಕಡೆಗೆ ಸಾಗುತ್ತಿದ್ದ ರಿಕ್ಷಾವನ್ನು ನಾಗರಾಜ್ ದೇವಾಡಿಗ ಚಾಲನೆ ಮಾಡುತ್ತಿದ್ದು, ಅವರೊಂದಿಗೆ ಪತ್ನಿ ಸುಮತಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಹಿಂದಿನಿಂದ ಅಜಾಗರೂಕತೆಯಿಂದ ಬಂದ ಕಾರು ರಿಕ್ಷಾವನ್ನು ಓವರ್‌ಟೇಕ್ ಮಾಡಿ ಪೆಟ್ರೋಲ್ ಬಂಕ್ ಕಡೆಗೆ ಏಕಾಏಕಿ ಎಡಕ್ಕೆ ತಿರುಗಿದ ಪರಿಣಾಮ ಅಪಘಾತವಾಗಿ ರಿಕ್ಷಾ ಪಲ್ಟಿಯಾಗಿದೆ. ರಿಕ್ಷಾ ಚಾಲಕ ನಾಗರಾಜ್ ಹಾಗೂ ಸುಮತಿ ಅವರಿಗೆ …

Read More »

ಕಾರು ಚಾಲಕನಿಗೆ ತಂಡದಿಂದ ಹಲ್ಲೆ, ಕಾರಿಗೆ ಹಾನಿ

ಕೊಲ್ಲೂರು ನಿವಾಸಿ ರಾಕೇಶ್‌ ಶೇಟ್ (30) ಅವರು ಪತ್ನಿ ಹಾಗೂ ಮಗುವಿನೊಂದಿಗೆ ಕಾರಿನಲ್ಲಿ ಕೊಲ್ಲೂರಿನಿಂದ ಕಂಡ್ಲೂರಿಗೆ ಮದುವೆಗೆ ತೆರಳುತ್ತಿದ್ದಾಗ ಚಿತ್ತೂರು ಸರ್ಕಲ್ ಬಳಿಯ ಮುಖ್ಯ ರಸ್ತೆಯಲ್ಲಿ ಇನ್ನೊಂದು ಕಾರಿನ ಚಾಲಕ ದಾರಿ ಬಿಡುವ ವಿಷಯದಲ್ಲಿ ರಾಕೇಶ ಶೇಟ್ ಜತೆಗೆ ಜಗಳವಾಡಿದ್ದಾನೆ. ರಾಕೇಶರ ಕಾರನ್ನು ಅಡ್ಡಗಟ್ಟಿ, ಇತರ ಮೂವರೊಂದಿಗೆ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಲ್ಲದೆ, ಕಾರಿನ ಮುಂಭಾಗದ ಎರಡು ಕನ್ನಡಿ ಹಾಗು ಗ್ಲಾಸನ್ನು ಒಡೆದು ಜಖಂಗೊಳಿಸಲಾಗಿದೆ. ಈ ಬಗ್ಗೆ …

Read More »

ಅಂಗಡಿಗಳಿಗೆ ಆಕಸ್ಮಿಕ ಬೆಂಕಿ: ಹಾನಿ

ಬೀದರ್ ತಾಲ್ಲೂಕಿನ ಮೊಗದಾಳ ಸಮೀಪದ ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ ಎದುರಿನ ಮೂರು ಅಂಗಡಿಗಳಿಗೆ ಶನಿವಾರ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ.ಟೈರ್, ಬ್ಯಾಟರಿ, ಪಂಕ್ಚರ್ ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿತು. ಧಗ ಧಗನೆ ಉರಿಯಲಾರಂಭಿಸಿತು.ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಬೇಮಳಖೇಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Read More »

ಒಂದೇ ಪರವಾನಿಗೆ: ಹೆಚ್ಚಿನ ಕಲ್ಲು ಸಾಗಾಟ; ಕೇಸು

ಪುತ್ತೂರು: ಒಂದೇ ಪರವಾನಿಗೆ ಪಡೆದು ಹೆಚ್ಚಿನ ಟ್ರಿಪ್ ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪುತ್ತೂರು ಪೊಲೀಸರು ಮುರದಲ್ಲಿ ತಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಪುತ್ತೂರು ಸಂಚಾರ ಪೊಲೀಸ್‌ ಠಾಣಾ ಪಿಎಸ್‌ಐ ಸುಹಾಸ್ ಆರ್. ಅವರು ದೂರು ನೀಡಿದ್ದು, ಅವರು ಮೇ 1ರಂದು ಸಂಜೆ ಮುರದಲ್ಲಿ ವಾಹನ ತಪಾಸಣೆಯ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕೆಂಪುಕಲ್ಲು ತುಂಬಿದ ಲಾರಿಯೊಂದು ಆಗಮಿಸಿದೆ. ಈ ವೇಳೆ ಲಾರಿಯನ್ನು ತಡೆದು ವಿಚಾರಿಸಿದಾಗ ಚಾಲಕ ನಾರಾಯಣ ರೈ …

Read More »

ಬೆಂಗಳೂರು : ಪಾರ್ಕಿಂಗ್ ವಿಚಾರಕ್ಕೆ ಕಿರಿಕ್, ಆಟೋ ಚಾಲಕನ ಕೊಲೆ

ಬೆಂಗಳೂರು-ಮನೆ ಬಳಿ ಆಟೋ ನಿಲ್ಲಿಸುವ ವಿಚಾರಕ್ಕೆ ನೆರೆಮನೆಯಾತ ಜಗಳವಾಡಿ ಮರದ ರಿಪೀಸ್‌‍ ಪಟ್ಟಿಯಿಂದ ಹಲ್ಲೆ ನಡೆಸಿ ಆಟೋ ಚಾಲಕನನ್ನು ಕೊಲೆ ಮಾಡಿರುವ ಘಟನೆ ಜೆಜೆ ನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೆಜೆ ನಗರದ 9ನೇ ಮುಖ್ಯ ರಸ್ತೆ ನಿವಾಸಿ ಮುಬಾರಕ್‌(26) ಕೊಲೆಯಾದ ಆಟೋಚಾಲಕ. ಪ್ರತಿನಿತ್ಯ ಮುಬಾರಕ್‌ ಆಟೋ ಬಾಡಿಗೆಗೆ ಹೋಗಿ ರಾತ್ರಿ ವಾಪಸ್‌‍ ಬಂದು ಮನೆ ಬಳಿ ಆಟೋ ನಿಲ್ಲಿಸುತ್ತಾರೆ. ಅದರಂತೆ ಮೊನ್ನೆ ರಾತ್ರಿ 8.30 ರ ಸುಮಾರಿನಲ್ಲಿ …

Read More »

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ವ್ಯಕ್ತಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಶಿವಮೊಗ್ಗ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಆಕೆ ಗರ್ಭಾವತಿ ಆಗಲು ಕಾರಣನಾದ ವ್ಯಕ್ತಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್ ಟಿಎಸ್ ಸಿ-1) 20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿದೆ. ನೊಂದ ಬಾಲಕಿಗೆ 1.80 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ. ಕುಂಸಿ ಠಾಣಾ ವ್ಯಾಪ್ತಿಯ 30 ವರ್ಷದ ವ್ಯಕ್ತಿ ಶಿಕ್ಷಿಗೆ ಒಳಗಾದವ. ಈತ 2022ನೇ ಸಾಲಿನಲ್ಲಿ …

Read More »

ಮನೆಯಲ್ಲಿದ್ದ ಕರಿಮಣಿ ಸರ ಕಳವು: ಪ್ರಕರಣ ದಾಖಲು

ಬ್ರಹ್ಮಾವರ: ಮನೆಯ ಡ್ರಾವರ್‌ನಲ್ಲಿ ಇರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಕರಿಮಣಿ ಸರ ಕಳವಾಗಿರುವ ಘಟನೆ ಕಾಡೂರು ಗ್ರಾಮದ ತಂತ್ರಾಡಿ ಹೊಸ್ಕೆರೆ ಎಂಬಲ್ಲಿ ನಡೆದಿದೆ. ಮುಂಬೈಯಲ್ಲಿ ವ್ಯವಹಾರ ಮಾಡಿಕೊಂಡಿದ್ದ ಹೊಸ್ಕೆರೆ ನಿವಾಸಿ ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ತಾಯಿ ಮತ್ತು ತಂದೆ ಮಾತ್ರ ಇದ್ದು, ತಾಯಿ ಪಾರ್ವತಿ ಎಂಬವರ 4ಲಕ್ಷ ರೂ.ಮೌಲ್ಯದ 38 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಫೆ.16ರಂದು ಮನೆಯ ಕೋಣೆಯ ಡ್ರಾವರ್‌ನಲ್ಲಿ ಇಟ್ಟಿದ್ದರು. ಪಾರ್ವತಿ ಎ.23ರಂದು …

Read More »

ಬಂಟ್ವಾಳ: ಖೋಟಾ ನೋಟು ಚಲಾವಣೆ ಜಾಲ ಪತ್ತೆ; ಇಬ್ಬರು ಅರೆಸ್ಟ್

ಬಂಟ್ವಾಳ: ಬಡಗಕಜೆಕ್ಕಾರು ಗ್ರಾಮದ ಪಾಂಡವರಕಲ್ಲು ಬಳಿಯ ಕೂಮಿನಡ್ಕ ಎಂಬಲ್ಲಿ ಅಕ್ರಮವಾಗಿ ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಸಂಗ್ರಹಿಸಿಟ್ಟಿದ್ದ ಇಬ್ಬರು ಆರೋಪಿಗಳನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಂಧಿತರನ್ನು ಮುಹಮ್ಮದ್ ಸಮೀರ್ (28) ಮತ್ತು ಮಹಮ್ಮದ್ ಇರ್ಫಾನ್ (26) ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಆರೋಪಿ ರಶೀದ್ ಕುಂಡಡ್ಕ ಎಂಬಾತ ಪರಾರಿಯಾಗಿದ್ದಾನೆ. ಮೇ 1ರಂದು ಸ್ವಿಫ್ಟ್ ಕಾರಿನಲ್ಲಿ ಖೋಟಾ ನೋಟುಗಳನ್ನು ಇಟ್ಟುಕೊಂಡಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಹಿನ್ನಲೆ …

Read More »