Breaking News

Breaking News

ಶಿವಾಚಾರ್ಯ ಸ್ವಾಮೀಜಿ Arrest: ಲೈಂಗಿಕ ದೌರ್ಜನ್ಯ ಪ್ರಕರಣ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಹುಣಸಮಾರನಹಳ್ಳಿ ಮಠದ ದಯಾನಂದ ಅಲಿಯಾಸ್ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣದ ಸಮೀಪವಿರುವ ಹುಣಸಮಾರನಹಳ್ಳಿ ಮಠವು 1,500ಕ್ಕೂ ಅಧಿಕ ಎಕರೆ ಜಮೀನು ಹೊಂದಿದೆ ಎನ್ನಲಾಗಿದ್ದು, 2017ರಲ್ಲಿಯೂ ಸ್ವಾಮೀಜಿ ವಿರುದ್ಧ ಇಂತಹ ಆರೋಪಗಳು ಕೇಳಿಬಂದಿದ್ದವು. ಸದ್ಯ ಪೊಲೀಸರು ಪ್ರಕರಣದ ಕುರಿತು ವಿಚಾರಣೆ ಮುಂದುವರಿಸಿದ್ದು, ಆರೋಪಗಳ …

Read More »

ಅಕ್ರಮ ಮದ್ಯ ಸಾಗಾಟ ಪತ್ತೆ – ಟ್ಯಾಂಕರ್ ಸಮೇತ 24 ಸಾವಿರ ಲೀಟರ್ ಮದ್ಯ ವಶಕ್ಕೆ!

ಬೆಳಗಾವಿ: ಜಿಲ್ಲೆಯ ಎಂ.ಕೆ. ಹುಬ್ಬಳ್ಳಿ ಸಮೀಪ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಪರವಾನಗಿ ಇಲ್ಲದೆ ಸಾಗಿಸುತ್ತಿದ್ದ 24 ಸಾವಿರ ಲೀಟರ್ ಮದ್ಯವನ್ನು ಟ್ಯಾಂಕರ್ ಸಮೇತ ವಶಪಡಿಸಿಕೊಂಡಿದ್ದಾರೆ. ಹೊಳಿಹೊಸೂರು ಗ್ರಾಮದಿಂದ ಎಂ.ಕೆ. ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ರಾಜ್ಯ ಹೆದ್ದಾರಿಯಲ್ಲಿ ಮಧ್ಯರಾತ್ರಿ 12.25ರ ಸುಮಾರಿಗೆ ಗಸ್ತಿನಲ್ಲಿದ್ದ ಅಧಿಕಾರಿಗಳು ಅನುಮಾನಾಸ್ಪದ ಟ್ಯಾಂಕರ್ ತಡೆದು ತಪಾಸಣೆ ನಡೆಸಿದಾಗ ಅಕ್ರಮ ಮದ್ಯ ಪತ್ತೆಯಾಗಿದೆ. ಮದ್ಯ ಹಾಗೂ ಟ್ಯಾಂಕರ್‌ನ ಒಟ್ಟು ಮೌಲ್ಯ ₹32.40 ಲಕ್ಷ ಎಂದು ಅಂದಾಜಿಸಲಾಗಿದೆ. ಈ …

Read More »

ಚಿಕ್ಕಮಗಳೂರು: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯಾಚಾರ! ಬೆಂಗಳೂರಲ್ಲಿ ಸತೀಶ್ ಪಾತ್ರಿ ಬಂಧನ

ಚಿಕ್ಕಮಗಳೂರು, ಅ.12: ದೆವ್ವ ಬಿಡಿಸುವ ನೆಪದಲ್ಲಿ ಹಾಸನ ಮೂಲದ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸತೀಶ್ ಪಾತ್ರಿ ಎಂಬಾತನನ್ನು ಪೊಲೀಸರು ಬೆಂಗಳೂರಿನ ಜೆ.ಪಿ. ನಗರದಲ್ಲಿ ಬಂಧಿಸಿದ್ದಾರೆ. ಆರೋಪಿ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದನು. ಕೊಪ್ಪ ಮತ್ತು ಎನ್.ಆರ್. ಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತ ಬಾಲಕಿಗೆ ಭೂತ ಬಿಡಿಸುವ ನೆಪದಲ್ಲಿ ಬಲವಂತವಾಗಿ ಕೋಳಿ ರಕ್ತ ಕುಡಿಸಿದ ಆರೋಪವೂ ಸತೀಶ್ ಮೇಲಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು …

Read More »

ಪಶು ಆಹಾರದಲ್ಲಿ ಎಂ.ಸ್ಯಾಂಡ್​ ಮಿಶ್ರಣ? ಹಣಕ್ಕಾಗಿ ಮೂಕ ಜೀವಗಳಿಗೆ ಮಣ್ಣು ತಿನ್ನಿಸಿದ್ರಾ ಅಧಿಕಾರಿಗಳು?

ಕೋಲಾರ: ಕೆಎಂಎಫ್ ಪೂರೈಸುತ್ತಿರುವ ಪಶು ಆಹಾರದಲ್ಲಿ ಮರಳು ಮಿಶ್ರಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಆಹಾರ ಸೇವಿಸಿದ ಹಸುಗಳು ಭೇದಿಯಿಂದ ಬಳಲುತ್ತಿದ್ದು, ಕೆಲವು ಹಸುಗಳು ಮೃತಪಟ್ಟಿರುವ ಬಗ್ಗೆಯೂ ದೂರುಗಳು ಬಂದಿವೆ. ಮುಳಬಾಗಲು ತಾಲೂಕಿನಲ್ಲಿ ಈ ಸಮಸ್ಯೆ ಕಂಡುಬಂದಿದ್ದು, ಪಶು ಆಹಾರದ ಮೂಟೆಗಳಲ್ಲಿ 4ರಿಂದ 5 ಕೆಜಿ ಮರಳು ಮಿಶ್ರಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಶಾಸಕ ಸಮೃದ್ಧಿ ಮಂಜುನಾಥ್ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ …

Read More »

ತೃತೀಯ ಲಿಂಗಿಗಳಿಂದ ಆಘಾತಕಾರಿ ಕೃತ್ಯ: ಯುವಕನನ್ನು ಅಪಹರಿಸಿ ಲಿಂಗ ಪರಿವರ್ತನೆ

ಬಳ್ಳಾರಿ: ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯುತ್ ಕಡಿತದ ವೇಳೆ ಮೊಬೈಲ್ ಟಾರ್ಚ್ ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ವರದಿಗೆ ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಅಕ್ಟೋಬರ್ 6ರಂದು ಆಸ್ಪತ್ರೆಯ ಪಿ.ಎನ್.ಸಿ ವಿಭಾಗದಲ್ಲಿ ಸುಮಾರು 20 ನಿಮಿಷ ವಿದ್ಯುತ್ ವ್ಯತ್ಯಯ ಉಂಟಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಯ ಸಿಸಿಟಿವಿ ಪರಿಶೀಲಿಸಿದಾಗ, ರೋಗಿಯೊಬ್ಬರ ಸಂಬಂಧಿಕರು ಬ್ಯಾಟರಿ ಸ್ವಿಚ್ ಆಫ್ ಮಾಡಿದ್ದರಿಂದ ಈ ಸಮಸ್ಯೆ ಉಂಟಾಗಿರುವುದು ತಿಳಿದುಬಂದಿದೆ. ಈ …

Read More »

ಆನ್‌ಲೈನ್‌ ಗೇಮ್‌ನ ಗೀಳಿಗೆ ಸಾಫ್ಟ್‌ವೇರ್‌ ಎಂಜಿನಿಯರ್‌ ಆತ್ಮಹತ್ಯೆ

ಮಧುಗಿರಿ: ಆನ್‌ಲೈನ್ ಗೇಮ್‌ ಹಾಗೂ ಜೂಜಿನ ಚಟಕ್ಕೆ ಬಿದ್ದಿದ್ದ 34 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ವಾಗೀಶ್, ಸಾಲಬಾಧೆ ತಾಳಲಾರದೆ ಶನಿವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾಗೀಶ್ ಎರಡು ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ಮಾಡುತ್ತಿದ್ದ ಕೆಲಸ ತೊರೆದಿದ್ದರು. ಬಳಿಕ ಆನ್‌ಲೈನ್ ಜೂಜಿನಲ್ಲಿ ತೊಡಗಿಸಿಕೊಂಡು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಕುಟುಂಬದವರು ಹಲವು ಬಾರಿ ಬುದ್ಧಿವಾದ ಹೇಳಿದರೂ ಕೇಳದೆ ಸಾಲದ ಸುಳಿಯಲ್ಲಿ ಸಿಲುಕಿದ್ದರು ಎಂದು ಮಧುಗಿರಿ ಪೊಲೀಸರು ತಿಳಿಸಿದ್ದಾರೆ.

Read More »

ಮದುವೆಗೂ ಮುನ್ನ ಭಾವೀ ಪತ್ನಿಯೊಂದಿಗೆ ಸಂಪರ್ಕ – ಗರ್ಭಿಣಿ ಮಾಡಿದಾತನ ಮೇಲೆ ಪೋಕ್ಸೋ ಕೇಸ್!

ದಾವಣಗೆರೆ: ಮದುವೆ ನಿಶ್ಚಯವಾಗಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ದಾವಣಗೆರೆ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಎರಡು ಕುಟುಂಬಗಳ ಒಪ್ಪಿಗೆಯಂತೆ ಬಾಲಕಿ ಮತ್ತು ಯುವಕನ ಮದುವೆ ನಿಶ್ಚಯವಾಗಿತ್ತು. ಆದರೆ, ಬಾಲಕಿ ಅಪ್ರಾಪ್ತೆಯಾಗಿದ್ದು, ಪ್ರಾಪ್ತವಯಸ್ಕಳಾಗಲು ಇನ್ನೂ 15 ತಿಂಗಳು ಬಾಕಿ ಇತ್ತು ಎನ್ನಲಾಗಿದೆ. ಬಾಲಕಿಯ …

Read More »

ಬೆಂಗಳೂರಲ್ಲಿ ಕೇವಲ 600 ರೂಪಾಯಿಗೆ, ಗಾರೆ ಕೆಲಸ ಮಾಡ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ : ಹಂತಕ ಅರೆಸ್ಟ್!

ಬೆಂಗಳೂರು: ಕೇವಲ ₹600 ಮೌಲ್ಯದ ಮೊಬೈಲ್ ವಿಚಾರಕ್ಕೆ ಗಾರೆ ಕೆಲಸ ಮಾಡುತ್ತಿದ್ದ ಮಂಜು ಅಲಿಯಾಸ್ ಕೋಳಿ ಮಂಜು ಎಂಬಾತನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ವಿದ್ಯಾಪೀಠ ಸರ್ಕಲ್ ಬಳಿ ನಡೆದಿದೆ. ಕೊಲೆ ಆರೋಪದ ಮೇಲೆ ಪಳನಿ ಎಂಬಾತನನ್ನು ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜು ಬಳಿ ಪಳನಿ ತನ್ನ ಮೊಬೈಲ್‌ ಫೋನ್‌ ಅಡಮಾನ ಇಟ್ಟಿದ್ದ ಎನ್ನಲಾಗಿದೆ. ಮದ್ಯ ಸೇವನೆಗಾಗಿ ಮೊಬೈಲ್ ಅಡಮಾನ ಇಟ್ಟಿದ್ದ ಪಳನಿ, ಹಣ ಅಥವಾ ಮೊಬೈಲ್ …

Read More »

ಮದುವೆಗೆ ಮೊದಲೇ ಗರ್ಭಿಣಿಯಾದ ಭಾವಿ ಪತ್ನಿ: ವರನ ವಿರುದ್ಧ ಪೋಕ್ಸೋ ಕೇಸ್ ದಾಖಲು

ದಾವಣಗೆರೆ: ಮದುವೆ ನಿಶ್ಚಯವಾಗಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭಿಣಿಯಾಗಿರುವುದು ವೈದ್ಯಕೀಯ ತಪಾಸಣೆಯಿಂದ ತಿಳಿದುಬಂದಿದೆ. ಎರಡು ಕುಟುಂಬಗಳ ಒಪ್ಪಿಗೆಯಂತೆ ಮದುವೆ ನಿಶ್ಚಯವಾಗಿದ್ದು, ಬಾಲಕಿ ಪ್ರಾಪ್ತವಯಸ್ಕಳಾಗಲು ಇನ್ನೂ 15 ತಿಂಗಳು ಬಾಕಿ ಇತ್ತು ಎನ್ನಲಾಗಿದೆ. ಈ ನಡುವೆ ಯುವಕ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಆರೋಪಿಸಿ ಬಾಲಕಿಯ ತಾಯಿ ಪೊಲೀಸರಿಗೆ …

Read More »

ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್ ಬೆಂಕಿ: ಕಮೀಷ್ನರ್ ಕಚೇರಿ ಮುಂದೆಯೇ ಧಗ ಧಗನೆ ಹೊತ್ತಿ ಉರಿದ ಕಾರು

ಬೆಂಗಳೂರು: ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗದಲ್ಲಿ ಚಲಿಸುತ್ತಿದ್ದ ಟೊಯೊಟಾ ಟೈಸರ್ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಜಕ್ಕೂರಿನಿಂದ ಬರುತ್ತಿದ್ದ ಕಾರನ್ನು ಮಾಲೀಕ ಶಬ್ಬೀರ್ ಚಲಾಯಿಸುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅವರು ತಕ್ಷಣ ಕಾರಿನಿಂದ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮೀಪದ ಸ್ಪರ್ಶ್ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸ್ಥಳೀಯರು ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ನಡುರಸ್ತೆಯಲ್ಲಿ ಕಾರು ಹೊತ್ತಿ ಉರಿದ ಪರಿಣಾಮ ಕೆಲಕಾಲ ಸಂಚಾರ …

Read More »