Breaking News

Breaking News

ಅಶ್ಲೀಲ ವಿಡಿಯೋ, ಫೋಟೋ ಹರಿಬಿಡುವುದಾಗಿ ಶಿಕ್ಷಕಿಗೆ ಬ್ಲ್ಯಾಕ್ ಮೇಲ್

ಬೆಂಗಳೂರು: ಅಶ್ಲೀಲ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಶಿಕ್ಷಕಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಪುಟ್ಟಪರ್ತಿ ಮೂಲದ ಹರ್ಷದ್(37) ಬಂಧಿತ ಆರೋಪಿ. ಬೆಂಗಳೂರಿನ ಪ್ರತಿಷ್ಠಿತ ಶಾಲೆಯ ಶಿಕ್ಷಕಿಗೆ ಈತ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಆಂಧ್ರಪ್ರದೇಶ ಮೂಲದ ಶಿಕ್ಷಕಿ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ವೀರಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಈಗಾಗಲೇ ಮದುವೆಯಾಗಿ …

Read More »

ಗಾಂಜಾ ಸೇವನೆ: ಐವರ ಬಂಧನ

ಬೆಳಗಾವಿ: ನಗರದ ವಿವಿಧೆಡೆ ಶನಿವಾರ ಗಾಂಜಾ ಸೇವಿಸುತ್ತಿದ್ದ ಐವರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಜ್ಯೋತಿ ನಗರ ಕ್ರಾಸ್ ಹತ್ತಿರ ಶಾಹೂ ನಗರದ ಶಿವನೇರಿ ಗಲ್ಲಿಯ ಅಭಿಷೇಕ ಪಾಟೀಲ, ಮಾರ್ಕಂಡೇಯ ನಗರದ ಹತ್ತಿರ ಕಂಗ್ರಾಳಿ ಕೆ.ಎಚ್‌ನ ವಿಲಾಸ ಬಾಳೇಕುಂದ್ರಿ ಎಂಬುವವರನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಮರ್ಥ ನಗರ ಬಳಿ ಸಮರ್ಥ ನಗರದ ವಿಜಯ ಕವಿಲಕರ, ಕಪಿಲೇಶ್ವರ ನಗರದಲ್ಲಿ ಕಪಿಲೇಶ್ವರ ಕಾಲೊನಿಯ ಉತ್ಕರ್ಷ ವರ್ಮಾ ಹಾಗೂ ಮಹಾದ್ವಾರ ರಸ್ತೆಯಲ್ಲಿ ಕಪಿಲೇಶ್ವರ …

Read More »

ಪಿರಿಯಾಪಟ್ಟಣ: ನವಜಾತ ಹೆಣ್ಣು ಶಿಶು ಮೃತದೇಹ ಪತ್ತೆ

ಪಟ್ಟಣದ ಒಳಕೋಟೆ, ಉಪ್ಪಾರಗೇರಿ ಹತ್ತಿರ ಇರುವ ದೊಡ್ಡಕೆರೆಯ ಸೋಪಾನ ಕಟ್ಟೆಯ ಮೇಲೆ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ 10 ಗಂಟೆ ಸಮಯದಲ್ಲಿ ಸ್ಥಳೀಯ ವ್ಯಕ್ತಿ ರವಿ ಎಂಬುವರು ತಮ್ಮ ಜಮೀನಿನ ಕಡೆ ಹೋಗುತ್ತಿದ್ದ ವೇಳೆ, ಸಾರ್ವಜನಿಕರು ಬಟ್ಟೆ ತೊಳೆಯುವ ಮೆಟ್ಟಿಲುಗಳ ಹತ್ತಿರ ನೀರಿನಲ್ಲಿ ನವಜಾತ ಶಿಶುವಿನ ಮೃತದೇಹ ತೇಲಾಡುತ್ತಿದ್ದನ್ನು ಕಂಡಿದ್ದಾರೆ. ಸುಮಾರು 6-7 ತಿಂಗಳಿನ ಹೆಣ್ಣು ನವಜಾತ ಶಿಶುವಾಗಿದ್ದು, ಅಪರಿಚಿತರು ತಂದು ಕೆರೆಯಲ್ಲಿ ಹಾಕಿ ಹೋಗಿದ್ದಾರೆ. …

Read More »

ಬಿಯರ್‌ ಬಾಕ್ಸ್‌ ತುಂಬಿದ ಲಾರಿ ಪಲ್ಟಿ

ಚನ್ನಗಿರಿ: ಹಾಸನದಿಂದ ಚಿಕ್ಕೋಡಿಗೆ ಪವರ್ ಕೂಲ್ ಬಿಯರ್ ಟಿನ್ ಬಾಕ್ಸ್‌ಗಳನ್ನು ಸಾಗಿಸುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮ ಮತ್ತು ರಾಜಗೊಂಡನಹಳ್ಳಿಯ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ತಿರುವಿನಲ್ಲಿ ಪಲ್ಟಿಯಾಗಿದೆ. ಶನಿವಾರ ಬೆಳಗಿನ ಜಾವ 3 ಗಂಟೆಗೆ ಹೆದ್ದಾರಿ ಪಕ್ಕದಲ್ಲಿದ್ದ ಸೇತುವೆಗೆ ಡಿಕ್ಕಿ ಹೊಡೆದು ಸಮೀಪದ ಅಡಿಕೆ ತೋಟದಲ್ಲಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಲಾರಿಯಲ್ಲಿದ್ದ ಬಿಯರ್ ಟಿನ್ ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿದ್ದವು. ಸ್ಥಳಕ್ಕೆ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ …

Read More »

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಸಮೀಪ ಅಡಿಕೆ ವ್ಯಾಪಾರಿಯೊಬ್ಬರಿಗೆ ಸೇರಿದ ಕಾರಿನ ಗಾಜು ಒಡೆದು 30 ಲಕ್ಷ ರೂ. ದರೋಡೆ ಮಾಡಲಾಗಿದೆ. ಶನಿವಾರ ರಾತ್ರಿ ಘಟನೆ ನಡೆದಿದೆ.ಶಿರಸಿಯ ಅಡಿಕೆ ವ್ಯಾಪಾರಿ ಅಬ್ದುಲ್ ರಹೀಮ್ ಬ್ಯಾಡಗಿಗೆ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರುಮೂತ್ರ ವಿಸರ್ಜನೆಗೆ ಹೋದಾಗ ಕಾರಿನ ಗಾಜು ಒಡೆದು 30 ಲಕ್ಷ ರೂ. ದರೋಡೆ. ಶನಿವಾರ ರಾತ್ರಿ 8.30 ರ ವೇಳೆಗೆ ಹಾವಣಗಿ ಕ್ರಾಸ್ ಸಮೀಪ ಮೂತ್ರ ವಿಸರ್ಜನೆಗೆ ಕಾರು …

Read More »

ಕಾಂಗ್ರೆಸ್ ಕಾರ್ಯಕರ್ತರಿಂದ ಠಾಣೆ ಶವವಿಟ್ಟು ಪ್ರತಿಭಟನೆಗೆ ಯತ್ನ

ಧಾರವಾಡ: ಇಲ್ಲಿನ ಹಾಶ್ಮಿನಗರದಲ್ಲಿ ಶುಕ್ರವಾರ ರಾತ್ರಿ ಹತ್ಯೇಗಿಡಾದ ಯುವ ಕಾಂಗ್ರೆಸ್​ ರಾಜ್ಯ ಪ್ರಧಾನ ಕಾರ್ಯದರ್ಶಿಫೈರೋಜ್​ ಪಠಾಣ್​ ಶವವನ್ನು ಬೆಂಬಲಿಗರು ಶನಿವಾರ ಉಪನಗರ ಠಾಣೆ ಎದುರು ಇಟ್ಟು ಪ್ರತಿಭಟಿಸಲು ಯತ್ನಿಸಿದರು. ಯುವ ಕಾಂಗ್ರೆಸ್​ ರಾಜ್ಯ ಉಪಾಧ್ಯಕ್ಷ ಅಬ್ದುಲ್​ ದೇಸಾಯಿ ನೇತೃತ್ವದಲ್ಲಿ ಬೆಂಬಲಿಗರು ಪ್ರತಿಭಟನೆಗೆ ಯತ್ನಿಸಿದಾಗ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಕೆ.ಸಿ. ಪಾರ್ಕ್​ ಎದುರು ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಮನವೊಲಿಸಿ ಶವವನ್ನು ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾದರು.

Read More »

ಜಿಗಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ನಟೋರಿಯಸ್ ದರೋಡೆಕೋರರು ಅಂದರ್

ಬೆಂಗಳೂರು: ಜಿಗಣಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಕುಖ್ಯಾತ ದರೋಡೆಕೋರರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಒಬ್ಬ ಆರೋಪಿ ದೈಹಿಕವಾಗಿ ಒಂದು ಕಾಲನ್ನು ಕಳೆದುಕೊಂಡಿದ್ದರೂ, ದರೋಡೆ ಮಾಡಿ ಪರಾರಿಯಾಗುವಲ್ಲಿ ನಿಸ್ಸೀಮನಾಗಿದ್ದ.ಈ ಜೋಡಿ ಜಿಗಣಿ ಕೈಗಾರಿಕಾ ಪ್ರದೇಶದ ಸುತ್ತಮುತ್ತಲ ಜನರಲ್ಲಿ ಭೀತಿ ಹುಟ್ಟಿಸಿತ್ತು. ಈ ತಂಡ ಕೇವಲ ಸಾಮಾನ್ಯರನ್ನಷ್ಟೇ ಅಲ್ಲದೆ, ಪ್ರಭಾವಿ ವ್ಯಕ್ತಿಗಳನ್ನೂ ಬಿಟ್ಟಿರಲಿಲ್ಲ. ಇವರು ಇತ್ತೀಚೆಗೆ ಶಾಸಕರೊಬ್ಬರ ಕಾರಿನ ಗಾಜನ್ನು ಪುಡಿಮಾಡಿ, ಅದರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡುವ ಮೂಲಕ …

Read More »

ಮೂವರು ದರೋಡೆಕೋರರ ಬಂಧನ

ಚಿಕ್ಕಬಳ್ಳಾಪುರ: ತಾಲೂಕಿನ ವಿವಿಧೆಡೆ ಕಳವು, ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ನಾಗೇಶ್​, ಜುಬೇರ್​ ಖಾನ್​, ತಿಪಟೂರಿನ ಎಂ.ಪಿ.ಶಶಾಂಕ್​ ಬಂಧಿತರು. ಮತ್ತೊರ್ವ ಆರೋಪಿ ಮರಿಲಿಂಗನಾಯಕನ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳಿಂದ ಒಂದು ಕಾರು, 108 ಗ್ರಾಂ ಚಿನ್ನ, 2.44 ಕೆ.ಜಿ. ಬೆಳ್ಳಿ ಆಭರಣ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಬೆಂಗಳೂರಿನ ವರ್ತೂರು ಪೊಲೀಸ್​ ಠಾಣೆ, ಚಿಕ್ಕಬಳ್ಳಾಪುರ ನಗರಠಾಣೆ, ಚಿಂತಾಮಣಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣ ದಾಖಲಾಗಿವೆ. ಮಾ.23ರಂದು …

Read More »

ಮರ ಅಕ್ರಮ ಸಾಗಣೆ: ಇಬ್ಬರ ಬಂಧನ

ಮೂಡಿಗೆರೆ: ಪಟ್ಟಣದ ಕೊಲ್ಲಿಬೈಲ್ ಗ್ರಾಮದ ಕೆ.ಎಂ. ರಸ್ತೆಯ ಸಿದ್ದಾರ್ಥವನದ ಬಳಿ ಗುರುವಾರ ತಡರಾತ್ರಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, ಲಕ್ಷಾಂತರ ಮೌಲ್ಯದ‌ ಮರವನ್ನು ವಶಕ್ಕೆ ಪಡೆದಿದ್ದಾರೆ.8 ಗಂಟೆಗೆ ಮೂಡಿಗೆರೆಯಿಂದ ಚಿಕ್ಕಮಗಳೂರಿನ‌ ಕಡೆಗೆ ಹಲಸಿನ‌ ಮರವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ರಾತ್ರಿ 8 ಗಂಟೆಯಿಂದಲೂ ಸಿದ್ದಾರ್ಥವನದ ಬಳಿ ನಾಕಾಬಂದಿ ಇರಿಸಿ ವಾಹನಗಳ ತಪಾಸಣೆ …

Read More »

ಮಡಿಕೇರಿಯ ಕಾಫಿ ತೋಟದಲ್ಲಿ ಅನಾಥವಾದ ಹೆಣ್ಣು ಶಿಶು ಪತ್ತೆ!

ಹೆತ್ತವರೇ ಮಗುವನ್ನು ಅನಾಥವಾಗಿ ಕಾಫಿ ತೋಟದಲ್ಲಿ ಬಿಟ್ಟು ಹೋಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇತ್ರಿಯಲ್ಲಿ ನಡೆದಿದೆ. ಕಾಫಿ ತೋಟವೊಂದರಲ್ಲಿ ಅಡಕೆ ಹಾಳೆಯಲ್ಲಿ ಸುತ್ತಿ ಮಲಗಿಸಲಾಗಿದ್ದ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಅದನ್ನು ಸ್ಥಳೀಯರು ಮತ್ತು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿದ್ದಾರೆ. ಬೇತ್ರಿ ಗ್ರಾಮದ ಹೆಮ್ಮಾಡು ವ್ಯಾಪ್ತಿಯ ಕಾಫಿ ತೋಟದಲ್ಲಿ ಶಿಶು ಅಳುವುದನ್ನು ಕೇಳಿದ ಸ್ಥಳೀಯರು ಹೋಗಿ ನೋಡಿದಾಗ, ಅಡಕೆ ಹಾಳೆಯಲ್ಲಿದ್ದ ಮಗು ಜಾರಿತ್ತು. ಬಟ್ಟೆಯಿಲ್ಲದೆ, ಶೀತದಿಂದ …

Read More »