Breaking News

Breaking News

4.22 ಲಕ್ಷ ರೂ ಮೌಲ್ಯದ 8 ಕೆಜಿ ಗಾಂಜಾ ಜಪ್ತಿ

ಹುಬ್ಬಳ್ಳಿ: ನರಸಾಪೂರ- ಹುಬ್ಬಳ್ಳಿ-ಅಮರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ 8 ಕೆಜಿ 459 ಗ್ರಾಂ ತೂಕದ ಗಾಂಜಾವನ್ನು ಇಲ್ಲಿಯ ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೈಲು ಗಾಡಿಯ ಜನರಲ್ ಬೋಗಿಗಳಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ 4ರಲ್ಲಿ ಬ್ಯಾಗ್‌ನಲ್ಲಿದ್ದ ಎರಡೂವರೆ ಕೆಜಿಯ 4 ಬಂಡಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 4.22 ಲಕ್ಷ ರೂ ಮೌಲ್ಯದ 8 ಕೆಜಿ 459 ಗ್ರಾಂ ಗಾಂಜಾ …

Read More »

ಸರ್ಜಾಪುರ: ಹೊತ್ತಿ ಉರಿದ ಬಿಗ್‌ ಬಾಸ್ಕೆಟ್‌ ದಾಸ್ತಾನು ಘಟಕ

ಸರ್ಜಾಪುರ (ಆನೇಕಲ್): ತಾಲೂಕಿನ ಸರ್ಜಾಪುರ ಸಮೀಪದ ಸೋಂಪುರ ಗೇಟ್‌ನಲ್ಲಿ ಸೋಮವಾರ ಬೆಳಗ್ಗೆ ಬಿಗ್ ಬಾಸ್ಕೆಟ್ ಇ-ಕಾಮರ್ಸ್‌ ಸಂಸ್ಥೆಯ ದಾಸ್ತಾನು ಘಟಕ ತಾಸುಗಟ್ಟಲೇ ಬೆಂಕಿ ಹೊತ್ತಿ ಉರಿದಿದೆ. ದಾಸ್ತಾನು ಕೇಂದ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ನೋಡ ನೋಡುತ್ತಿದ್ದಂತೆಯೇ ಇಡೀ ಘಟಕಕ್ಕೆ ವ್ಯಾಪಿಸಿತು. ಕಟ್ಟಡದ ಸುತ್ತಮುತ್ತ ದಟ್ಟವಾದ ಹೊಗೆ ಆವರಿಸಿತ್ತು. ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸಿಬ್ಬಂದಿ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡರು. ಕಟ್ಟಡದಲ್ಲಿ ನಿಲ್ಲಿಸಿದ್ದ ಕಾರು, …

Read More »

ಬಳ್ಳಾರಿ : ಮಟಕಾ ಬುಕ್ಕಿಗಳ ಬಂಧನ

ಬಳ್ಳಾರಿಯ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಮಟಕಾ ಜೂಜಾಟವಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿ, 19 ಲಕ್ಷ ರೂಪಾಯಿ 44 ಸಾವಿರ ರೂಪಾಯಿ ನಗದು, ಮೊಬೈಲ್, ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ರೂಪನಗುಡಿ ನಿವಾಸಿ ಜಿ.ವಿ. ರಾಮಾಂಜಿನೇಯಲು, ಬಳ್ಳಾರಿಯ ಮಿಲ್ಲರ್ಪೇಟೆಯ ನೂರ್ ಅಲಿಯಾಸ್ ನೂರ್ ಮಹ್ಮದ್ ಮತ್ತು ಆಂಧ್ರಪ್ರದೇಶದ ಉರವಕೊಂಡ ತಾಲೂಕಿನ ಕುಡೇರ ಮಂಡಲಂನ ಚೋಳ ಸಮುದ್ರಂ ಗ್ರಾಮ ನಿವಾಸಿ ಜನ್ನೆ.ಎಪಿಎಂಸಿ ಪೊಲೀಸರು ಪ್ರಕರಣ ದಾಖಲಿಸಿ. ತನಿಖೆ ನಡೆಸಿದ್ದಾರೆ.

Read More »

ಕಳವು ಆರೋಪಿ ಬಂಧನ: ಚಿನ್ನಾಭರಣ ಜಪ್ತಿ

ಸವದತ್ತಿ: ತಾಲೂಕಿನ ಯಲ್ಲಮ್ಮ ದೇವಸ್ಥಾನದಲ್ಲಿ ಸುಲಿಗೆ ಮಾಡಲಾದ ಚಿನ್ನಾಭರಣ ಹಾಗೂ ಠಾಣೆಯಲ್ಲಿ ದಾಖಲಿದ್ದ 4 ಮನೆ ಕಳವು ಪ್ರಕರಣಗಳನ್ನು ಬೇಧಿಸಿ, ಒಬ್ಬ ಆರೋಪಿ ಹಾಗೂ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಸವದತ್ತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಯಲ್ಲಮ್ಮನ ಜಾತ್ರೆಗೆ ಜ.4 ರಂದು ಬಂದಿದ್ದ ಬೈಲಹೊಂಗಲ ತಾಲ್ಲೂಕು ಬೆಳವಡಿ ಗ್ರಾಮದ ರೇಣುಕಾ ನಂದಿ ಅವರ ಹತ್ತಿರವಿದ್ದ ₹80 ಸಾವಿರ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಬೆದರಿಸಿ ಕಿತ್ತುಕೊಂಡು ಪರಾರಿಯಾಗಿದ್ದನು.ಸವದತ್ತಿ ಪೊಲೀಸ್ ಠಾಣೆಗೆ …

Read More »

ಮದುಮಗನಿಗೆ ದೈವ ವೇಷ ಹಾಕಿ ಅತಿರೇಕದ ವರ್ತನೆ: ದೂರು ದಾಖಲು

ಮಡಿಕೇರಿ: ಕೊಡಗು ಜಿಲ್ಲೆಯ ನಾಪೊಕ್ಲು ಎಮ್ಮೆಮಾಡು ಗ್ರಾಮದಲ್ಲಿ ತುಳುನಾಡಿನ ದೈವ ಹೋಲುವ ರೀತಿಯಲ್ಲಿ ಮದುಮಗನಿಗೆ ದೈವದ ವೇಷ ಹಾಕಿ ಅತಿರೇಕದ ವರ್ತನೆ ತೋರಿಸಲಾಗಿದ್ದು, ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮದುಮಗನಿಗೆ ದೈವದ ವೇಷ ಹಾಕಿದ ಘಟನೆಯ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿದ್ದು, ದೈವಕ್ಕೆ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಎರಡು ದಿನಗಳ ಹಿಂದೆ ಮದುಮಗನಿಗೆ ದೈವದ ವೇಷ ತೊಡಿಸಿ ಹೀಯಾಳಿಸಿ ಮೆರವಣಿಗೆ ಮಾಡಿಸಲಾಗಿದೆ. ಹಿಂದೂ ಪರ ಸಂಘಟನೆಗಳ ಪ್ರಮುಖರು ಈ ಕುರಿತಾಗಿ …

Read More »

ಪೆರ್ಮುದೆಯ ಮನೆಯಿಂದ 1ಕೆ.ಜಿ. ಚಿನ್ನಾಭರಣ ಕಳವು

ಬಜಪೆ: ಪೆರ್ಮುದೆ ಪೇಟೆಯ ರಾಜ್ಯ ಹೆದ್ದಾರಿ 67ರ ಪಕ್ಕದಲ್ಲಿರುವ ಜಾನ್ವಿನ್‌ ಪಿಂಟೋ ಅವರ ಮನೆ ಕಿಟಿಕಿಯ ಸರಳನ್ನು ಮುರಿದು ಒಳ ಪ್ರವೇಶಿಸಿ ಕಳ್ಳರು ಲಾಕರ್‌ನಲ್ಲಿದ್ದ 1ಕೆ.ಜಿ. ಚಿನ್ನಾಭರಣ ಕಳವು ಮಾಡಿದ ಘಟನೆಗೆ ವರ್ಷ ಪೂರ್ತಿಯಾದರೂ ( ಮಾ.31) ಕಳ್ಳರು, ಸೊತ್ತು ಪತ್ತೆಯಾಗದೆ ಪೊಲೀಸರಿಗೆ ಸವಾಲಾಗಿಯೇ ಉಳಿದಿದೆ.ಪ್ರಕರಣದ ಪತ್ತೆಗಾಗಿ ಸಿಸಿಬಿ, ಎಸಿಪಿ ಹಾಗೂ ಬಜಪೆ ಕ್ರೈಂ ತಂಡಗಳು ರಚನೆಯಾಗಿತ್ತು. ಪರಿಸರದಲ್ಲಿನ ಸಿಸಿ ಕೆಮರಾಗಳಲ್ಲಿ ದಾಖಲಾಗಿರುವ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿ ಕಳವಿಗೆ ಸಂಬಂಧಿಸಿದ …

Read More »

ವಿಷ ಸೇವಿಸಿದ್ದ ನವ ವಿವಾಹಿತ ಸಾವು

ಕಾರ್ಕಳ: ದಕ್ಷಿಣ ಕನ್ನಡ ಜಿಲ್ಲೆ ಕಡಬದ ನೆಲ್ಯಾಡಿ ಗ್ರಾಮದ ಸುದೀಪ್ ರೈ (31) ಎಂಬುವವರು ಕಾರ್ಕಳದ ತನ್ನ ಪತ್ನಿಯ ಮನೆಯಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನೆಲ್ಯಾಡಿಯ ಸುದೀಪ್ ಕಾರ್ಕಳದ ಸೌಮ್ಯ ಶೆಟ್ಟಿಯನ್ನು ಪ್ರೀತಿಸಿ ಇತ್ತೀಚೆಗಷ್ಟೇ ಮದುವೆಯಾಗಿದ್ದು, ಕಾರ್ಕಳ ಬಂಗ್ಲೆಗುಡ್ಡೆ ಕಜೆ ಎಂಬಲ್ಲಿರುವ ಪತ್ನಿ ಮನೆಯಲ್ಲಿ ವಾಸವಿದ್ದರು. ಮೂರು ದಿನಗಳ ಹಿಂದೆ ಸುದೀಪ್ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು, ಪತ್ನಿ, …

Read More »

ಧಾರವಾಡ:ಪೆಟ್ರೋಲ್ ಸಂಗ್ರಹ ಮಾಡಿದ್ದ ಮನೆಗೆ ಬೆಂಕಿ: ಮಹಿಳೆ ಸ್ಥಿತಿ ಗಂಭೀರ

ಪೆಟ್ರೋಲ್ ಸಂಗ್ರಹ ಮಾಡಿದ್ದ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗೃಹಿಣಿ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ‌ ತಡಕೋಡ ಗ್ರಾಮದ ಹರಿಜನಕೇರಿ‌ ಓಣಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಪೂರ್ಣಿಮಾ ಕಲ್ಲಪ್ಪ ಹಾದಿಮನಿ(32) ತೀವ್ರವಾಗಿ ಗಾಯಗೊಂಡಿದ್ದು, ಶೇ.80 ರಷ್ಟು ದೇಹ ಸುಟ್ಟಿರುವ ಕಾರಣ ಸ್ಥಿತಿ ಚಿಂತಾಜನಕವಾಗಿದೆ. ಗ್ರಾಮದಿಂದ ಜಿಲ್ಲಾಸ್ಪತ್ರೆಗೆ ಕರೆ ತಂದು ಪ್ರಾಥಮಿಕ‌ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಗೆ ರವಾನಿಸಲಾಗಿದೆ. ಪೆಟ್ರೋಲ್ ಅಭಾವ ಹಿನ್ನಲೆಯಲ್ಲಿ ಪೆಟ್ರೋಲ್ ಕ್ಯಾನ್ ನಲ್ಲಿ ಸಂಗ್ರಹಿಸಿ, …

Read More »

ಅತ್ತಾವರದ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಜಿಗಿದು ಕೆಎಂಸಿ ವಿದ್ಯಾರ್ಥಿ ಆತ್ಮಹತ್ಯೆ

ಮಂಗಳೂರು: ನಗರದ ಅತ್ತಾವರದಲ್ಲಿರುವ ಕಾಸ ಗ್ರ್ಯಾಂಡ್ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಜಿಗಿದು ವೈದ್ಯಕೀಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಕೆಎಂಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಾರ್ಥಕ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸಾರ್ಥಕ್ ಅತ್ತಾವರದ ಕಾಸ ಗ್ರ್ಯಾಂಡ್ ಕಟ್ಟಡದಲ್ಲಿ ವಾಸವಿದ್ದ ತನ್ನ ಗೆಳೆಯನನ್ನು ಭೇಟಿ ಮಾಡಲು ಬಂದಿದ್ದನು. ಅಪಾರ್ಟ್‌ಮೆಂಟ್ ಪ್ರವೇಶಿಸುವ ಮುನ್ನ …

Read More »

ಅಕ್ರಮವಾಗಿ 8 ಲಕ್ಷ ಮೌಲ್ಯದ ಅನ್ನಭಾಗ್ಯ ಅಕ್ಕಿ ಸಾಗಣೆ; ಲಾರಿ ಜಪ್ತಿ!

ರಾಯಚೂರು: ಅಕ್ರಮವಾಗಿ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ 8 ಲಕ್ಷ ರೂಪಾಯಿ ಮೌಲ್ಯದ ಪಡಿತರ ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ರಾಯಚೂರಿನ ಸಿರವಾರ ತಾಲೂಕಿನ ಹಾಲಾಪುರದಿಂದ ಸಾಗಿಸುತ್ತಿದ್ದಾಗ ರೇಡ್ ಮಾಡಲಾಗಿದೆ. 600 ಚೀಲಗಳು ಪೊಲೀಸ್‌ ವಶಕ್ಕೆ! ಕವಿತಾಳ-ಮಸ್ಕಿ ರಸ್ತೆಯ ಜಂಗಮರ ಹಳ್ಳಿ ಕ್ರಾಸ್ ಬಳಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಲಾರಿಯನ್ನು ಹಿಂಬಾಲಿಸಿದ ವೇಳೆ 600 ಅಕ್ಕಿ ಚೀಲಗಳಿದ್ದ ಲಾರಿಯನ್ನು ಜಪ್ತಿ ಮಾಡಿದ್ದಾರೆ. ಸುಮಾರು 8 ಲಕ್ಷ ರೂ. ಮೌಲ್ಯದ 30 …

Read More »