BigTv News
March 30, 2026
Breaking News
ಮೈಸೂರು : ಸ್ನೇಹಿತನ ಬರ್ತಡೆಗೆ ಕೇಕ್ ತರಲು ಹೋದ ಯುವಕ ಹಿಟ್ ಅಂಡ್ ರನ್‌ಗೆ ಬಲಿಯಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಮುಖ್ಯರಸ್ತೆಯಲ್ಲಿ ನಡೆದಿದೆ. ಕುಶಾಲನಗರ ನಿವಾಸಿ ಅನಿಲ್ (32) ಮೃತ ಯುವಕ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಸ್ನೇಹಿತನ ಹುಟ್ಟುಹಬ್ಬಕ್ಕೆ ಕೇಕ್ ತರಲು ಕುಶಾಲನಗರದಿಂದ ಬೈಲುಕುಪ್ಪೆಗೆ ಬರುವ ವೇಳೆ ಅಪರಿಚಿತ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಬಳಿಕ ಆಟೋ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ …
Read More »
BigTv News
March 30, 2026
Breaking News, Crime, ಕರ್ನಾಟಕ, ಬೆಂಗಳೂರು
ಬಾಡಿ ವಾರ್ನ್ ಕ್ಯಾಮೆರಾ ಆಫ್ ಮಾಡಿ ಹಣ ವಸೂಲಿ ಯತ್ನ: 3 ಟ್ರಾಫಿಕ್ ಪೊಲೀಸರು ಸಸ್ಪೆಂಡ್ — ಇನ್ನು ಕೆಲ ಠಾಣೆಗಳಲ್ಲಿ ಯಾಕೆ ಇದೇ ಧಂಧೆ ಮುಂದುವರಿಕೆ..? ಕ್ಯಾಮೆರಾ ಆಫ್, ಕಲೆಕ್ಷನ್ ಆನ್! ಮೂವರು ಪೊಲೀಸರ ಸಸ್ಪೆಂಡ್ ಬಳಿಕವೂ ಕೆಲ ಠಾಣೆಗಳಲ್ಲಿ ನಿಯಮಕ್ಕೆ ಕಿಮ್ಮತ್ ಇಲ್ವಾ..? ಬಾಡಿ ಕ್ಯಾಮೆರಾ ಆಫ್ ಮಾಡಿ ಅಕ್ರಮ ವಸೂಲಿ: ಕ್ರಮ ಕೈಗೊಂಡರೂ ಎಲ್ಲೆಡೆ ನಿಯಮ ಜಾರಿ ಆಗ್ತಿದೆಯಾ..? ಸಸ್ಪೆಂಡ್ ನಂತರವೂ ಬದಲಾವಣೆ ಇಲ್ಲವಾ..? ಕೆಲ …
Read More »
BigTv News
March 30, 2026
Breaking News
ಮೈಸೂರು: ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಏಳು ತಿಂಗಳ ಗಂಡು ಮಗು ದಾಸವಾಳದ ಹೂವು ತಿಂದು ಮೃತಪಟ್ಟ ಘಟನೆ ನಡೆದಿದೆ. ಗ್ರಾಮದ ಸುದರ್ಶನ್-ನವ್ಯ ದಂಪತಿಯ ಪುತ್ರ ಆರೂವರೆ ತಿಂಗಳ ಚಿನ್ಮಯ್ ಗೌಡ ಮೃತಪಟ್ಟ ಮಗು. ಮೊನ್ನೆ ಮನೆಯ ಹೊಸಲಿಗೆ ಪೂಜೆ ಮಾಡಿ ದಾಸವಾಳದ ಹೂ ಇಡಲಾಗಿತ್ತು. ಅಣ್ಣನೊಂದಿಗೆ ಆಟವಾಡುತ್ತಿದ್ದ ಮಗು ಚಿನ್ಮಯ್ ದಾಸವಾಳದ ಹೂವಿನ ಹಸಿರು ತೊಟ್ಟಿನ ಭಾಗವನ್ನು ಕಿತ್ತು ತಿಂದಿದೆ. ಇದನ್ನು ಗಮನಿಸಿದ ಅಣ್ಣ, ಮಗುವಿನ ಬಾಯಿಂದ …
Read More »
BigTv News
March 30, 2026
Breaking News
ಹಾಸನ ಸಿಲಿಂಡರ್ ಬದಲಿಸುವ ವೇಳೆ ಅನಿಲ ಸೋರಿಕೆಯಾಗಿ ಸ್ಫೋಟಗೊಂಡಿದ್ದು, ನಾಲ್ವರಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆ.ಅಬ್ಬೂರು ಗ್ರಾಮದಲ್ಲಿ ನಡೆದಿದೆ. ಸಿಲಿಂಡರ್ನಲ್ಲಿದ್ದ ಗ್ಯಾಸ್ ಖಾಲಿಯಾದ ಹಿನ್ನೆಲೆಯಲ್ಲಿ ಬದಲಾವಣೆ ಮುಂದಾಗಿದ್ದಾರೆ. ಗ್ಯಾಸ್ ತುಂಬಿದ್ದ ಸಿಲಿಂಡರ್ಗೆ ರೆಗ್ಯುಲೇಟರ್ ಅಳವಡಿಸುವಾಗ ಅಡುಗೆ ಅನಿಲ ಸೋರಿಕೆಯಾಗಿ ಏಕಾಏಕಿ ಸ್ಫೋಟವಾಗಿದೆ. ಮಹಿಳೆ, ಪುತ್ರ ಸೇರಿದಂತೆ ಮನೆಯಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸುಂದರೇಶ್ ಮನೆಯಲ್ಲಿ ಘಟನೆ ನಡೆದಿದ್ದು, ಲಕ್ಷಾಂತರ …
Read More »
BigTv News
March 30, 2026
Breaking News
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಾಗೆಹಳ್ಳ ಗ್ರಾಮದಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಖಾಸಗಿ ಬಸ್ವೊಂದು ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಪರಿಣಾಮ ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಗೆ ಬರುತ್ತಿದ್ದ ‘ಶ್ರೀ ರೇಣುಕಾಂಬ’ ಹೆಸರಿನ ಖಾಸಗಿ ಬಸ್ ಕಾಗೆಹಳ್ಳ ಗ್ರಾಮದ ಸಮೀಪವಿರುವ ಹಳ್ಳಕ್ಕೆ ಬಿದ್ದಿದೆ. ಬಸ್ ಚಲಿಸುತ್ತಿದ್ದ ವೇಳೆಯೇ ಈ ಅವಘಡ ಸಂಭವಿಸಿದ್ದು, ಹಳ್ಳಕ್ಕೆ ಬಿದ್ದ ರಭಸಕ್ಕೆ …
Read More »
Shaikh BigTv
March 30, 2026
Breaking News, Crime, ಕರ್ನಾಟಕ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಲಂಚದ ಕೇಸ್ ಕ್ಲೋಸ್ ಡೀಲ್: 6 ಲಕ್ಷಕ್ಕೆ ಡಿಸಿ ಲೋಕಾಯುಕ್ತ ಬಲೆಗೆ..! ವಿಚಾರಣೆ ಹೆಸರಿನಲ್ಲಿ ವಸೂಲಿ: ಹುಬ್ಬಳ್ಳಿ ವಾಣಿಜ್ಯ ತೆರಿಗೆ ಡಿಸಿ ಸಿಕ್ಕಿಬಿದ್ದ..! ಭ್ರಷ್ಟಾಚಾರಕ್ಕೆ ಬಿಗಿ ಪೆಟ್ಟು: 6 ಲಕ್ಷ ಲಂಚಕ್ಕೆ ಡಿಸಿ ಸಿಕ್ಕಿಬಿದ್ದ! ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಬಲೆ: ಹಣ ತೆಗೆದುಕೊಳ್ಳುವಾಗಲೇ ಬಂಧನ..! ಹುಬ್ಬಳ್ಳಿ: ಭ್ರಷ್ಟಾಚಾರಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದ್ದು, ವಾಣಿಜ್ಯ ತೆರಿಗೆ ಇಲಾಖೆಯ ಡೆಪ್ಯುಟಿ ಕಮಿಷನರ್ ಭರತ್ ಕುಮಾರ್ ಹೆಗ್ಗಡೆ ಅವರು ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ. …
Read More »
BigTv News
March 30, 2026
Breaking News
ನಗರದ ಸಮೀಪ ಹಲಸಹಳ್ಳಿ ಗೇಟ್ ಸಮೀಪ ಹೊಸಕೋಟೆ ಮತ್ತು ಕೋಲಾರ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶನಿವಾರ ಮಧ್ಯರಾತ್ರಿ ಲಾರಿ, ಕಂಟೇನರ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಕಾರು ಹೊತ್ತಿ ಉರಿದ್ದಿದು ಮೂವರಿಗೆ ಸುಟ್ಟ ಗಾಯಗಳಾಗಿವೆ. ಕಾರಿನಲ್ಲಿದ್ದ ಕೋಲಾರದ ಶಯನ್, ಶ್ರೀನಿವಾಸ್ ಮತ್ತು ಮಹಮದ್ ಸಾಹೇಬ್ ಗಾಯಗೊಂಡಿದ್ದಾರೆ. ಎಲ್ಲರೂ ಬೆಂಗಳೂರಿನ ಅವಲಹಳ್ಳಿ ಸಮೀಪ ಕಿತ್ತಗಾನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದರು. ಹೆದ್ದಾರಿಯಲ್ಲಿ ಯೂ-ಟರ್ನ್ ತೆಗೆದುಕೊಳ್ಳುತ್ತಿದ್ದ ಕಂಟೇನರ್‌ಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. …
Read More »
BigTv News
March 30, 2026
Breaking News
ಧಾರವಾಡ : ಜೈಲಿಗೆ ಹೋದರು ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡಿದ್ದಾನೆ. ಧಾರವಾಡ ಸೆಂಟ್ರಲ್ ಜೈಲಿನಿಂದಲೇ ಯುವಕ ವಿಡಿಯೋ ಕಾಲ್ ಮಾಡಿದ್ದಾನೆ. ಹೌದು ಧಾರವಾಡ ಸೆಂಟ್ರಲ್ ಜಲದಿಂದ ಅನ್ಯಕೋಮಿನ ಯುವಕನೊಬ್ಬ ಹಿಂದೂ ಅಪ್ರಾಪ್ತ ಬಾಲಕಿಗೆ ವಿಡಿಯೋ ಕಾಲ್ ಮಾಡಿ ಹಿಂಸೆ ನೀಡಿರುವ ಆರೋಪ ಕೇಳಿ ಬಂದಿದೆ. ಸದ್ಯ ಪೋಕ್ಸೋ ಕೇಸ್ ನಲ್ಲಿ ಜೈಲಿನಲ್ಲಿರುವ ಆರೋಪಿ ಕೋರ್ಟ್ ನಲ್ಲಿ ನನ್ನ ಪರವಾಗಿ ಮಾತನಾಡುವಂತೆ ತಾಕತ್ತು ಮಾಡಿದ್ದಾನೆ …
Read More »
BigTv News
March 30, 2026
Breaking News
ಹೊಸದಿಲ್ಲಿ: ಲಷ್ಕರ್-ಎ-ತೊಯ್ಬಾ ಉಗ್ರನನ್ನು ದೆಹಲಿ ಗಡಿಯ ಬಳಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತ ಬಾಂಗ್ಲಾದೇಶದಿಂದ ಕಾರ್ಯನಿರ್ವಹಿಸುತ್ತಾ ಭಾರತದಲ್ಲಿ ದಾಳಿಗಳನ್ನು ಆಯೋಜಿಸುತ್ತಿದ್ದ ಎನ್ನಲಾಗಿದೆ. ಆರೋಪಿಯನ್ನು ಶಬ್ಬಿರ್ ಅಹ್ಮದ್ ಲೋನ್ ಎಂದು ಗುರುತಿಸಲಾಗಿದ್ದು, ಕಾಶ್ಮೀರಿ ಎಂದೂ ಕರೆಯಲ್ಪಡುವ ಈತ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಜಿಲ್ಲೆಯ ಕಂಗನ್ ನಿವಾಸಿಯಾಗಿದ್ದಾನೆ. ಭಾರತ ಕೇಂದ್ರಿತ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪ ಈತನ ಮೇಲಿದೆ. ಕೇಂದ್ರೀಯ ಸಂಸ್ಥೆಗಳ ಸಮನ್ವಯದೊಂದಿಗೆ ದೆಹಲಿ ಪೊಲೀಸರ ವಿಶೇಷ …
Read More »
BigTv News
March 30, 2026
Breaking News
ಹುಬ್ಬಳ್ಳಿಯ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ಭರತ್ ಹೆಗಡೆ ಲೋಕಾಯುಕ್ತ ಬಲೆಗೆ ಬಿದ್ದ ಕಮರ್ಷಿಯಲ್ ಟ್ಯಾಕ್ಸ್ ಡಿಸಿ. ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭರತ್ ಹೆಗಡೆಯನ್ನು ಬಂಧಿಸಿದ್ದಾರೆ. 6 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಹಣದ ಸಮೇತ ಭರತ್ ಹೆಗಡೆ ಸಿಕ್ಕಿ ಬಿದ್ದಿದ್ದಾರೆ. ಲಾರಿ ಹಗೂ ಪೆಟ್ರೋಲ್ ಬಂಕ್ ಮಾಲೀಕನಿಗೆ …
Read More »