Breaking News

Breaking News

ಹು-ಧಾ ಕಮಿಷನರೇಟ್‌ಗೆ ಹೊಸ ಶಕ್ತಿ: ಶೃತಿ ಎನ್‌.ಎಸ್ ಡಿಸಿಪಿ ನೇಮಕ!

ಬಿಗ್ ಟಿವಿ ನ್ಯೂಸ್ ಎಫೆಕ್ಟ್: ವರದಿ ಬಳಿಕವೇ ಡಿಸಿಪಿ ನೇಮಕ ಮಾಡಿದ ಸರ್ಕಾರ! ಹುಬ್ಬಳ್ಳಿ: ಹು-ಧಾ ಕಮಿಷನರೇಟ್‌ಗೆ ಹೊಸ ಶಕ್ತಿ – ಶೃತಿ ಎನ್‌.ಎಸ್. ಡಿಸಿಪಿಯಾಗಿ ನೇಮಕ! ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್‌ಗೆ ನೂತನ ಡಿಸಿಪಿಯಾಗಿ ಐಪಿಎಸ್ ಅಧಿಕಾರಿ ಶೃತಿ ಎನ್‌.ಎಸ್. ಅವರನ್ನು ಸರ್ಕಾರ ನೇಮಕ ಮಾಡಿದೆ. ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿದ್ದ ಮಹಾನಿಂಗ ನಂದಗಾವಿ ವರ್ಗಾವಣೆಯಾದ ಹಿನ್ನೆಲೆ ಈ ಹುದ್ದೆ ತೆರವಾಗಿತ್ತು… ಕೆಲವೇ ದಿನಗಳ ಹಿಂದೆ ಈ ಖಾಲಿ …

Read More »

ಗದಗದಲ್ಲಿ ಯುವತಿ ಜೊತೆ ಮದುವೆ ವಿಚಾರಕ್ಕೆ ಗಲಾಟೆ : ಕಲ್ಲು ಎತ್ತಿ ಹಾಕಿ ತಮ್ಮನನ್ನೆ ಬರ್ಬರವಾಗಿ ಕೊಂದ ಅಣ್ಣ!

ಗದಗದಲ್ಲಿ ಭೀಕರವಾದ ಕೊಲೆ ನಡೆದಿದ್ದು, ಯುವತಿಯ ಜೊತೆ ಮದುವೆ ವಿಚಾರಕ್ಕೆ ಅಣ್ಣನೊಬ್ಬ ಸ್ವಂತ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದೆ. ತಲೆಯ ಮೇಲೆ ಕಲ್ಲು ಎತ್ತಿಹಾಕಿ ಫಕೀರಪ್ಪ (19) ಎನ್ನುವ ಯುವಕನ ಕೊಲೆ ಆಗಿದೆ.ಆರೋಪಿ ಸಹೋದರ ಅಶೋಕನನ್ನು ಸದ್ಯ ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಇವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಕ್ಕ ಮೊಲಂಗಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಅಲ್ಲಿಂದ …

Read More »

ಹಳೆಯ ದ್ವೇಷ: ರಾಯಚೂರಿನ ಬುಳ್ಳಾಪುರ ಗ್ರಾಮದಲ್ಲಿ ಯುವಕನ ಕೊಲೆ

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರಾಯಚೂರು ತಾಲ್ಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಯುವಕನನ್ನು ಕೊಲೆ ಮಾಡಿದ ಘಟನೆ ಭಾನುವಾರ ಸಂಜೆ ನಡೆದಿದೆ. ಬುಳ್ಳಾಪುರ ಗ್ರಾಮದ ಪ್ರಾಣೇಶ(23) ಕೊಲೆಯಾದ ಯುವಕ. ದಿನ್ನಿ ಗ್ರಾಮದ ಪ್ರಸಾದ, ಮಲ್ಲೇಶ, ಮಲ್ಲಿಕಾರ್ಜುನ, ಅಮರೇಶ ಕೊಲೆ ಆರೋಪಿಗಳು. ಆರೋಪಿ ಪ್ರಸಾದ ಪತ್ನಿ ಮತ್ತು ಪ್ರಾಣೇಶ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗುತ್ತಿದೆ. ಬುಳ್ಳಾದಲ್ಲಿ ಜಾಗದ ವಿಷಯವಾಗಿ ನ್ಯಾಯ ಪಂಚಾಯಿತಿ ನಡೆಯುತ್ತಿದ್ದ ವೇಳೆ ತಾಯಿಯ ಎದುರಲ್ಲೇ ಕೊಡಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ. …

Read More »

ಬೆಂಗಳೂರಲ್ಲಿ ಭೀಕರ ಮರ್ಡರ್ : ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಕೊಂದು, ಆರೋಪಿ ಪರಾರಿ!

ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು ಯುವತಿಯೋರ್ವಳ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಲಾಗಿದೆ. ಕೊಲೆಯಾದ ಯುವತಿಯನ್ನು ಜೋಯಾ ಎಂದು ತಿಳಿದುಬಂದಿದ್ದು, ಆಕೆಯ ಕತ್ತು ಕೊಯ್ದು ಭೀಕರವಾಗಿ ಹತ್ಯೆಗೈದ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಕೊಲೆ ನಡೆದಿದ್ದು ಸದ್ಯ ಆರೋಪಿ ಪತ್ತೆಗಾಗಿ ಡಿಜೆ ಹಳ್ಳಿ ಠಾಣೆ ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ.

Read More »

ಅಕ್ರಮ ದಾಸ್ತಾನು: ಹುಬ್ಬಳ್ಳಿಯಲ್ಲಿ 25 ವಾಣಿಜ್ಯ ಬಳಕೆಯ ಸಿಲಿಂಡರ್ ವಶಕ್ಕೆ

ಹುಬ್ಬಳ್ಳಿ: ಇಲ್ಲಿನ ಸಿದ್ಧೇಶ್ವರ ಪಾರ್ಕ್‌ನಲ್ಲಿರುವ ಶಿವಸಾಗರ ಹೋಟೆಲ್‌ನಲ್ಲಿ ಅನಧಿಕೃವಾಗಿ ಸಂಗ್ರಹಿಸಿಟ್ಟಿದ್ದ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಸಹಕಾರದೊಂದಿಗೆ ಭಾನುವಾರ ತಡರಾತ್ರಿ ದಾಳಿ ನಡೆಸಿದ ಅಧಿಕಾರಿಗಳು, ಅನಿಲ ತುಂಬಿದ 25 ಸಿಲಿಂಡರ್‌ಗಳನ್ನು ಪತ್ತೆಹಚ್ಚಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಕಾಯ್ದೆಯಡಿ ಹೋಟೆಲ್ ಸಹ ಮಾಲೀಕ ಸತೀಶ ಬಂಡಿ ವಿರುದ್ಧ ಆಹಾರ ನಿರೀಕ್ಷಕ ವಿಜಯಕುಮಾರ ಪತ್ತಾರ ದೂರು ದಾಖಲಿಸಿದ್ದಾರೆ. …

Read More »

ರಾಜ್ಯದ ವಿವಿಧೆಡೆ ಅನಧಿಕೃತವಾಗಿ ಸಂಗ್ರಹಿಸಿಡಲಾಗಿದ್ದ ಸಿಲಿಂಡರ್ ಗಳು ವಶ

ರಾಜ್ಯದ ವಿವಿಧೆಡೆ ಅನಧಿಕೃತವಾಗಿ ಸಂಗ್ರಹಿಸಿಡಲಾಗಿದ್ದ ವಾಣಿಜ್ಯ ಬಳಕೆಯ ಅನಿಲದ ಸಿಲಿಂಡರ್‌ ಗಳನ್ನು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪೊಲೀಸ್‌‍ ಸಹಕಾರದೊಂದಿಗೆ ತಡರಾತ್ರಿ ದಾಳಿ ನಡೆಸಿದ ಅಧಿಕಾರಿಗಳು, ಅನಿಲ ತುಂಬಿದ 25 ಸಿಲಿಂಡರ್‌ಗಳನ್ನು ಪತ್ತೆ ಹಚ್ಚಿ ವಿದ್ಯಾನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಕಾಯ್ದೆಯಡಿ ಹೋಟೆಲ್‌ ಸಹ ಮಾಲೀಕರ ವಿರುದ್ಧ ಆಹಾರ ನಿರೀಕ್ಷಕ ವಿಜಯಕುಮಾರ ಪತ್ತಾರ ದೂರು ನೀಡಿದ್ದಾರೆ. ಗೋ ಗ್ಯಾಸ್‌‍ ಕಂಪನಿಯಿಂದ ಪೂರೈಕೆಯಾಗುವ ಅನಿಲದ …

Read More »

ಡಿಜಿ ಆದೇಶ ಗಾಳಿಗೆ..?ಹುಬ್ಬಳ್ಳಿ ಟ್ರಾಫಿಕ್ ಪೊಲೀಸರ ವಿರುದ್ಧ ಜಿಎಸ್‌ಟಿ” ವಸೂಲಿ ಆರೋಪ..!

ರಸ್ತೆ ಮೇಲೆ ಗಸ್ತು ಬಿಟ್ಟು ಗಲಾಟೆ..? ವಾಹನ ಸವಾರರ ಜೊತೆ ಕಿರಿಕಿರಿ–ಹಣ ಬೇಡಿಕೆ ಆರೋಪಕ್ಕೆ ಹುಬ್ಬಳ್ಳಿ ಪೊಲೀಸ್ ಸಿಲುಕಿತು! ಜನರ ನಂಬಿಕೆಗೆ ಧಕ್ಕೆ!ಟ್ರಾಫಿಕ್ ಪೊಲೀಸರ ವರ್ತನೆಗೆ ಆಕ್ರೋಶ–ಕಠಿಣ ಕ್ರಮಕ್ಕೆ ಒತ್ತಾಯ… ಹುಬ್ಬಳ್ಳಿ ಟ್ರಾಫಿಕ್ ಪೊಲೀಸರ ವಿರುದ್ಧ ಗಂಭೀರ ಆರೋಪ: ಡಿಜಿ ಆದೇಶ ಗಾಳಿಗೆ..? ಹುಬ್ಬಳ್ಳಿ–ಧಾರವಾಡ ನಗರದಲ್ಲಿ ಕೆಲ ಟ್ರಾಫಿಕ್ ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಹೆಚ್ಚಾಗಿದೆ. ಸಂಚಾರ ನಿಯಂತ್ರಣ ಮಾಡಬೇಕಾದ ಪೊಲೀಸರು, ವಾಹನ ಸವಾರರ ಜೊತೆ ಜಗಳ, ಕಿರಿಕಿರಿ …

Read More »

ಕೆಲಸ ಕೊಡಿಸುವುದಾಗಿ ವಂಚನೆ: ಮಾಜಿ ಉಪ ಕುಲಸಚಿವ ಸೇರಿ ಇಬ್ಬರಿಗೆ ಜೈಲು ಶಿಕ್ಷೆ, ದಂಡ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ವಿವಿಯ ಮಾಜಿ ಉಪ ಕುಲಸಚಿವ ಸೇರಿ ಇಬ್ಬರಿಗೆ ಮೈಸೂರಿನ ಒಂದನೇ ಅಧಿಕ ಸಿಜೆಎಂ ನ್ಯಾಯಾಲಯ ಎರಡೂವರೆ ವರ್ಷ ಕಾರಾಗೃಹ ಶಿಕ್ಷೆ ಮತ್ತು ತಲಾ 40,000 ರೂ. ದಂಡ ವಿಧಿಸಿ ಆದೇಶಿಸಿದೆ.ಮೈಸೂರು ನಿವಾಸಿಗಳಾದ ಮುಕ್ತ ವಿವಿಯ ನಿವೃತ್ತ ಉಪ ಕುಲಸಚಿವ ಎಂ. ಕೃಷ್ಣಮೂರ್ತಿ ಮತ್ತು ಮಂಜುನಾಥ್ ಶಿಕ್ಷೆಗೆ ಒಳಗಾದವರು. ಕೃಷ್ಣಮೂರ್ತಿ ಅವರು ಮಂಜುನಾಥನೊಂದಿಗೆ ಸೇರಿಕೊಂಡು ಕರ್ನಾಟಕ ರಾಜ್ಯ …

Read More »

ರಾಯಚೂರಲ್ಲಿ ಘೋರ ದುರಂತ : ಬಸ್ ನಿಲ್ದಾಣದಲ್ಲಿ KKRTC ಬಸ್ ಹರಿದು ಸ್ಥಳದಲ್ಲೇ ಮಹಿಳೆ ಸಾವು

ರಾಯಚೂರು ಜಿಲ್ಲೆಯ ಸಿಂಧನೂರು ಬಸ್ ನಿಲ್ದಾಣದ ಮುಖ್ಯದ್ವಾರದ ಬಳಿ ಕೆಕೆಆರ್ಟಿಸಿ (KKRTC) ಬಸ್ ಹರಿದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೋಮವಾರ ಈ ಘಟನೆ ನಡೆದಿದ್ದು, ಬಸ್ ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮೃತರನ್ನು ದೊಡ್ಡ ಈರಮ್ಮ (38) ಎಂದು ಗುರುತಿಸಲಾಗಿದೆ. ಕೊಪ್ಪಳ ಜಿಲ್ಲೆಯ ಬೆವಿನಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿಂಧನೂರು ಬಸ್ ನಿಲ್ದಾಣದ ಎಂಟ್ರೆನ್ಸ್ ಗೇಟ್ ಬಳಿ ದುರಂತ ಸಂಭವಿಸಿದೆ. ಬಸ್ ಚಾಲಕನ ನಿರ್ಲಕ್ಷ್ಯದ …

Read More »

ಲಂಚಕೋರ ಅಧಿಕಾರಿಗಳಿಗೆ 4 ವರ್ಷ ಜೈಲು ಶಿಕ್ಷೆ

ಕಲಬುರಗಿ: ಹೊರಗುತ್ತಿಗೆ ನೌಕರನ ನೇಮಕಾತಿಗೆ ಶಿಫಾರಸು ಮಾಡಲು ಲಂಚ ಪಡೆದಿದ್ದ ಎಂಎಸ್​ಐಎಲ್​ ಕಚೇರಿಯ ಇಬ್ಬರು ಅಧಿಕಾರಿಗಳಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ೪ ರ‍್ಷ ಜೈಲು ಶಿಕ್ಷೆ ಹಾಗೂ ತಲಾ ೨೦ ಸಾವಿರ ರೂ. ದಂಡ ವಿಧಿಸಿ ಸೋಮವಾರ ತರ‍್ಪು ನೀಡಿದೆ.ಎಂಎಸ್​ಐಎಲ್​ನಲ್ಲಿ ಎ.ಡಿ.ಇ.ಓ ಆಗಿ ನೇಮಕಗೊಳ್ಳಲು ಸಿದ್ದಲಿಂಗ ಎಂಬುವವರು ರ‍್ಜಿ ಸಲ್ಲಿಸಿದ್ದರು. ಅವರ ನೇಮಕಾತಿಗೆ ಶಿಫಾರಸು ಮಾಡಲು ಡಿಎಲ್​ಓ ಚಂದ್ರಶೇಖರ ಸಲಾಕೆ ೧ ಲಕ್ಷ ರೂ. ಬೇಡಿಕೆಯಿಟ್ಟು, …

Read More »