Breaking News

Breaking News

ರಾಮನಗರ: ಕುಖ್ಯಾತ ಕಳ್ಳಿ ಪೊಲೀಸ್‌ ಕಸ್ಟಡಿಯಿಂದ ಪರಾರಿ

ಪೊಲೀಸ್‌ ವಶದಲ್ಲಿದ್ದ ಕುಖ್ಯಾತ ಮಹಿಳಾ ಆರೋಪಿ ರಾತ್ರಿ ವೇಳೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿರುವ ಘಟನೆ ಇಲ್ಲಿನ ಜಿಲ್ಲಾಸ್ಪತ್ರೆಯ ಸಖಿ ಕೇಂದ್ರದಲ್ಲಿ ನಡೆದಿದೆ. ತಮಿಳು ನಾಡಿನ ಹೊಸೂರು ಮೂಲದ ಮಾಲಾ (40) ಪರಾರಿಯಾಗಿರುವ ಕಳ್ಳಿ. ಮಾಗಡಿ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರನ್ನು ನಂಬಿಸಿ 350 ಗ್ರಾಂ ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಕೆಯನ್ನು ಬಂಧಿಸಿದ್ದ ಪೊಲೀಸರು, ಜಿಲ್ಲಾ ಆಸ್ಪತ್ರೆಯಲ್ಲಿದ್ದ ಸಖಿ ಕೇಂದ್ರದಲ್ಲಿ ಇರಿಸಿ ವಿಚಾರಣೆ ನಡೆಸುತ್ತಿದ್ದರು. ಗುರುವಾರ ರಾತ್ರಿ 12.30ರ …

Read More »

ಚಿತ್ರದುರ್ಗ ಜಿಲ್ಲಾಧಿಕಾರಿ ಸಹಿ ನಕಲು: 6 ಮಂದಿ ಬಂಧನ

ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿಗಳ ಡಿಜಿಟಲ್‌ ಸಹಿ (ಡಿಎಸ್‌ಸಿ) ನಕಲು ಮಾಡಿ, ಜಿಲ್ಲಾ ಖಜಾನೆಗೆ ₹ 15 ಲಕ್ಷ ಮೌಲ್ಯದ ಬಿಲ್‌ ಸಲ್ಲಿಸಿದ್ದ ನಗರಾಭಿವೃದ್ಧಿ ಕೋಶದ 6 ನೌಕರರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಸೈಯದ್‌ ಸಾಧಿಕ್‌, ವಿಜಯ್‌ ಕುಮಾರ್‌, ವಿನಯ್‌ ಶರ್ಮಾ, ಬಸವರಾಜ್‌, ಮೆಹಬೂಬ್‌ ಭಾಷಾ, ವೆಂಕಟೇಶ್‌ ಬಂಧಿತರು. ನಗರಾಭಿವೃದ್ಧಿ ಕೋಶದ ನಿರ್ದೇಶಕಿ ರೇಷ್ಮಾ ಹಾನಗಲ್‌ ನೀಡಿನ ದೂರಿನ ಮೇರೆಗೆ ಶುಕ್ರವಾರ 6 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಡಿವೈಎಸ್‌ಪಿ ಅರುಣ …

Read More »

ಸಿಲಿಂಡರ್ ಅಭಾವದ ನಡುವೆ ಅಕ್ರಮ ದಾಸ್ತಾನು, ಬೆಂಗಳೂರಲ್ಲಿ ನಾಲ್ಕು ಪ್ರಕರಣ ದಾಖಲು

ರಾಜ್ಯ ಸೇರಿದಂತೆ ರಾಜಧಾನಿ ಬೆಂಗಳೂರಿನಲ್ಲಿ ಅಡುಗೆ ಅನಿಲದ ತೀವ್ರ ಅಭಾವ ಎದುರಾಗಿದೆ. ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮವಾಗಿ ಎಲ್‌ಪಿಜಿ ಪೂರೈಕೆ ಕುಸಿದಿದ್ದು, ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಆದ್ರೆ ಸಿಲಿಂಡರ್‌ಗಳ ತೀವ್ರ ಕೊರತೆಯನ್ನು ಬಂಡವಾಳವಾಗಿಸಿಕೊಂಡಿರುವ ಕೆಲವರು ಅಕ್ರಮವಾಗಿ ಗ್ಯಾಸ್ ದಾಸ್ತಾನು ಮಾಡುತ್ತಿದ್ದು, ಪೊಲೀಸರು ನಗರದ ಪೀಣ್ಯ, ಕೆಂಗೇರಿ ಸೇರಿದಂತೆ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಈ ಬಿಕ್ಕಟ್ಟಿನಿಂದಾಗಿ ಹೋಟೆಲ್ ಉದ್ಯಮವು ಸಂಕಷ್ಟಕ್ಕೆ ಸಿಲುಕಿದ್ದು, ಅನಿಲ ಸಿಗದೆ ಹಲವು ಆಹಾರ ಮಂದಿರಗಳು …

Read More »

ಲಾರಿಗೆ ಕಾರು ಡಿಕ್ಕಿ: ಬೆಂಗಳೂರಿನ ಮೂವರು ರಿಸರ್ವ್ ಪೊಲೀಸ್ ಅಧಿಕಾರಿಗಳ ಸಾವು..

ಮೃತ ಪೊಲೀಸ್ ಅಧಿಕಾರಿಗಳ ಫೋಟೋ ಬಿಡುಗಡೆ ಮಾಡಿದ ಪೊಲೀಸ್ ಇಲಾಖೆ.. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಮೂವರು ಪೊಲೀಸ್ ಸಿಬ್ಬಂದಿಗಳು ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ನಡೆದಿದೆ. ಬೆಂಗಳೂರಿನಿಂದ ಬಳ್ಳಾರಿಗೆ ಸ್ನೇಹಿತನ ಮದುವೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ವೇಗವಾಗಿ ಸಾಗುತ್ತಿದ್ದ ಕಾರು ಮುಂದೆ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. …

Read More »

ಹುಣಸೂರು: ಹಣದೊಂದಿಗೆ ಪರಾರಿಯಾಗಿದ್ದ ಬ್ಯಾಂಕ್ ಸಿಬ್ಬಂದಿ ಬಂಧನ

‘ಗ್ರಾಹಕರಿಂದ ಸಾಲ ವಸೂಲಿ ಮಾಡಿ ಬ್ಯಾಂಕ್‌ಗೆ ಸಂದಾಯ ಮಾಡದೆ ತಲೆ ಮರೆಸಿಕೊಂಡಿದ್ದ ಬ್ಯಾಂಕ್‌ ಸಿಬ್ಬಂದಿಯನ್ನು ಶನಿವಾರ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ನಗರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ತಾಜ್ ಉದ್ದಿನ್ ತಿಳಿಸಿದ್ದಾರೆ. ನಗರದ ಖಾಸಗಿ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲ್ಲೂಕಿನ ಗೌರಿಪುರ ಗ್ರಾಮದ ನಿವಾಸಿ ಸುವಾಸ್ ಬಂಧಿತ ಆರೋಪಿ. ಬ್ಯಾಂಕ್‌ನಲ್ಲಿ ಸಾಲ ಪಡೆದ ಗ್ರಾಹಕರಿಂದ ಸಾಲ ವಸೂಲಿ ಮಾಡಿ ಖಾತೆಗೆ ಸಂದಾಯ ಮಾಡುವ ಕೆಲಸಕ್ಕೆ ನಿಯೋಜನೆಗೊಂಡಿದ್ದ …

Read More »

ಯುವಕನಿಗೆ ಚೂರಿ ಇರಿತ

ಸುಳ್ಯ: ಬಾರ್ ಬಳಿ ಯುವಕನಿಗೆ ಚೂರಿ ಇರಿದ ಘಟನೆ ಸುಳ್ಯದಲ್ಲಿ ಶನಿವಾರ ಸಂಭವಿಸಿದೆ. ಸುಳ್ಯ ಬೀರಮಂಗಲದ ಹರೀಶ್ ಚೂರಿ ಇರಿತದಿಂದ ಗಾಯಗೊಂಡ ಯುವಕ. ಹರೀಶ್ ಹಾಗೂ ಇತರರು ಬಾರ್ ಬಳಿ ಇದ್ದ ವೇಳೆ ಚೂರಿ ಇರಿಯಲಾಗಿದೆ ಎನ್ನಲಾಗಿದೆ. ಹರೀಶ್ ಜತೆಗಿದ್ದ ಇನ್ನೋರ್ವ ವ್ಯಕ್ತಿಗೂ ಗಾಯವಾಗಿದೆ. ಘಟನೆಯಲ್ಲಿ ಇಬ್ಬರೂ ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿದ್ದು, ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ …

Read More »

ಗೆಳೆಯನ ಜನ್ಮದಿನಕ್ಕೆ ಮದ್ಯಸೇವನೆಗೆ ವಿದ್ಯಾರ್ಥಿಗಳಿಂದ ಹಣ ದೋಚಿದ್ದ ಐವರ ಸೆರೆ

ದೊಡ್ಡಬಳ್ಳಾಪುರ: ಸ್ನೇಹಿತನ ಹುಟ್ಟು ಹಬ್ಬ ಆಚರಣೆಯಲ್ಲಿ ಮದ್ಯ ಸೇವನೆಗೆ ಹಣ ಇಲ್ಲದೆ ತಾಲ್ಲೂಕಿನ ನಾಗದೇನಹಳ್ಳಿ ಸಮೀಪದ ಗೀತಂ ವಿಶ್ವವಿದ್ಯಾಯದ ವಿದ್ಯಾರ್ಥಿಗಳನ್ನು ಮಾರ್ಚ್‌ 11 ರಂದು ರಾತ್ರಿ ಅಡ್ಡಗಟ್ಟಿ ಹಲ್ಲೆ ನಡೆಸಿ ಮೊಬೈಲ್‌ ಕಸಿದುಕೊಂಡು ಹಾಗೂ ಪೋನ್‌ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಪರಾರಿಯಾಗಿದ್ದ ಐವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಾಲ್ಲೂಕಿನ ಸೊಣ್ಣಪ್ಪನಹಳ್ಳಿ ಗ್ರಾಮದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಆನಂದಕುಮಾರ್(25), ಚಾಲಕ ತಿಲಕ್ (19) ಗಾರೆ ಕೆಲಸಗಾರ …

Read More »

ಮನಿ ಡಬ್ಲಿಂಗ್ ಕೇಸ್ ನಲ್ಲಿ, ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ : ಚಿತ್ರದುರ್ಗ ನಗರ ಸಭೆ ಮಾಜಿ ಸದಸ್ಯ ಅರೆಸ್ಟ್!

ಚಿತ್ರದುರ್ಗ : ಮನಿ ಡಬ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ನಗರ ಸಭೆ ಮಾಜಿ ಸದಸ್ಯ ಚಂದ್ರಶೇಖರನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿ ಅರೆಸ್ಟ್ ಮಾಡಲಾಗಿದೆ. ಮನೆ ಡಬ್ಲಿಂಗ್ ಪ್ರಕರಣದಲ್ಲಿ ಚಂದ್ರಶೇಖರ್ ಆರೋಪಿಯಾಗಿದ್ದಾನೆ. ಮಾರ್ಚ್ 4ರಂದು ಚಂದ್ರಶೇಖರ್ ಮನೆ ಶೋಧ ನಡೆಸಿದ ಪೊಲೀಸರು, ಪೊಲೀಸರ ಶೋಧದ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಿದ್ದ. ನಿನ್ನೆ ಚಂದ್ರಶೇಖರ್ನನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೋಲೀಸರು ಅರೆಸ್ಟ್ ಮಾಡಿದ್ದಾರೆ.

Read More »

ರೀಲ್ಸ್ ವೇಳೆ ಯಡವಟ್ಟು.. ಕಟ್ಟಡದಿಂದ ಬಿದ್ದು ಬಾಲಕ ದುರ್ಮರಣ..!

ಬೆಂಗಳೂರಿನಲ್ಲಿ ಘಟನೆ ನಡೆದಿದ್ದು, ಮೃತ ವಿದ್ಯಾರ್ಥಿಯನ್ನು ನಿಶಾಂತ್ ಎಚ್ ಎಂದು ಗುರುತಿಸಲಾಗಿದೆ. 10ನೇ ತರಗತಿ ಓದುತ್ತಿದ್ದ ಆತ ಇತ್ತೀಚೆಗೆ ತನ್ನ CBSE ಪರೀಕ್ಷೆಗಳನ್ನು ಬರೆದಿದ್ದನು. ಪರೀಕ್ಷೆಗಳು ಮುಗಿದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಹೊರಗೆ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ನಿಶಾಂತ್ ಶುಕ್ರವಾರ ಸಂಜೆ ಸುಮಾರು 4.30ರ ವೇಳೆಗೆ ಉಲ್ಲಾಳದ ಮನೆಯಿಂದ ಹೊರಟಿದ್ದನು. ಮೂವರು ಸ್ನೇಹಿತರ ಜತೆ ಸೇರಿ ರೀಲ್ಸ್ ಚಿತ್ರೀಕರಿಸಲು ಡಿ-ಗ್ರೂಪ್ ಲೇಔಟ್‌ನಲ್ಲಿರುವ ಕಟ್ಟಡದ ಬಳಿ ತೆರಳಿದ್ದನು. ರೀಲ್ಸ್ ಚಿತ್ರೀಕರಣದ …

Read More »

ಇಂಡಿ | ಮರಳಿಬಾರದ ಕೊಟ್ಟ ಹಣ: ವ್ಯಕ್ತಿ ಆತ್ಮಹತ್ಯೆ

ಕೈಗಡವಾಗಿ ಗೆಳೆಯರಿಗೆ ನೀಡಿದ ಹಣ ಮರಳಿ ಬಾರದ ಕಾರಣ ವ್ಯಕ್ತಿಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಶನಿವಾರ ನಡೆದಿದೆ. ಕುಪೇಂದ್ರ ಮಳಸಿದ್ದಪ್ಪ ಮದರಿ (52) ಮೃತರು. ತಾಲ್ಲೂಕಿನ ನಾದ ಗ್ರಾಮದ ಆನಂದ ನ್ಯಾಮಗೌಡ ಅವರ ಒಡೆತನದ ನಾದ ಶುಗರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದರು ಎಂದು ಹೇಳಲಾಗಿದೆ. ಈ ಕುರಿತು ಮೃತರ ಪತ್ನಿ ಕಲಾವತಿ ಕುಪೇಂದ್ರ ಮದರಿ ಹೊರ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

Read More »