Breaking News

ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದು ನಗರಕ್ಕೆ ಬಂದಿದ್ದ ರಸ್ತೆ ಟೀ ಮಾರುತ್ತಿದ್ದ ವ್ಯಕ್ತಿಯನ್ನು ಅಪಹರಿಸಿದ್ದ ಪ್ರಕರಣಎಂಟು ಜನ ಆರೋಪಿಗಳ ಬಂಧನ….

ಬೆಂಗಳೂರು: ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದು ನಗರಕ್ಕೆ ಬಂದಿದ್ದ ರಸ್ತೆ ಟೀ ಮಾರುತ್ತಿದ್ದ ವ್ಯಕ್ತಿಯನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎಂಟು ಜನ ಆರೋಪಿಗಳನ್ನು ಹನುಮಂತನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶ್ರೀನಗರದ ನಿವಾಸಿಯಾಗಿರುವ 32 ವರ್ಷದ ತಿಲಕ್ ಮಣಿಕಂಠ ಎಂಬಾತನನ್ನು ಅಪಹರಿಸಿ ಹದಿನೈದು ಲಕ್ಷ ರೂ. ಸುಲಿಗೆ ಮಾಡಿದ್ದ ಕಾರ್ತಿಕ್, ರಾಹುಲ್ ಎಂಬಾತ ಸೇರಿದಂತೆ 8 ಜನರನ್ನು ಬಂಧಿಸಲಾಗಿದೆ.

ನಗರದಲ್ಲಿ ಟೀ ವ್ಯಾಪಾರ ಮಾಡುತ್ತಿದ್ದ ತಿಲಕ್, ಗೋವಾಕ್ಕೆ ತೆರಳಿ ಅಲ್ಲಿ ಕ್ಯಾಸಿನೊ ಆಡಬೇಕು ಎಂದು ಮಹಾದಾಸೆ ಹೊಂದಿದ್ದ. ಜತೆಗೆ ಕ್ಯಾಸಿನೊ ಜೂಜಿನ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದ. ಇದರಂತೆ 4 ಲಕ್ಷ ಹಣ ಹೊಂದಿಸಿಕೊಂಡು ಸ್ನೇಹಿತರೊಂದಿಗೆ ಕಳೆದ ಜುಲೈ 30 ರಂದು ಬೆಂಗಳೂರಿನಿಂದ ಪಣಜಿಗೆ ವಿಮಾನದ ಮೂಲಕ ಹೋಗಿದ್ದ.

Share News

About BigTv News

Check Also

ಖಾಕಿ ಕಾರ್ಯಾಚರಣೆಗೆ ಜಯ..! PSI ಗುಡದರಿ ತನಿಖೆಯಲ್ಲಿ ಗಾಂಜಾ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ..!!

ಗಾಂಜಾ ಮಾರಾಟಗಾರರಿಗೆ ಕೋರ್ಟ್‌ನಿಂದ ಖಡಕ್ ಏಟು..! PSI ಗುಡದರಿ ತನಿಖೆಗೆ ನ್ಯಾಯಾಲಯದ ಮುದ್ರೆ..!! ಗಾಂಜಾ ದಂಧೆಕೋರರಿಗೆ ಜೈಲೇ ಗತಿ..! 3 …

Leave a Reply

Your email address will not be published. Required fields are marked *