Shaikh BigTv
March 7, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ನಿಯತಿಯಾಗಿ ಸಂಬಳ ಪಡೆದು ಕರ್ತವ್ಯ ಮಾಡಬೇಕಾದವರು ಲಂಚಕ್ಕೆ ಕೈ ಚಾಚಿದರೆ, ಅಂತಿಮವಾಗಿ ಇದೇ ಗತಿ! ಸರ್ಕಾರದ ಸಂಬಳ ಇದ್ದೂ ಲಂಚದ ಆಸೆ — ಕೊನೆಗೆ ಲೋಕಾಯುಕ್ತ ಬಲೆಗೆ ಇದೇ ಅಂತ್ಯ! ಪ್ರಾಮಾಣಿಕತೆ ಬಿಟ್ಟು ಲಂಚದ ದಾರಿ ಹಿಡಿದರೆ ಅಂತಿಮ ಫಲಿತಾಂಶ ಇದೇ. ಧಾರವಾಡ: ಲಂಚ ಸ್ವೀಕರಿಸುವಾಗಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಿಳಾ ಹೆಲ್ತ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ.ವಲಯ ಕಚೇರಿ–1ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಲ್ತ್ ಇನ್ಸ್ಪೆಕ್ಟರ್ …
Read More »
BigTv News
March 7, 2026
Breaking News
ಬೆಳಗಾವಿ ಜಿಲ್ಲೆಯ ಕಾಗವಾಡ ಪೊಲೀಸರಿಂದ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾಗವಾಡ ಪೊಲೀಸ್ ಠಾಣೆಯ ವ್ಯಾಪ್ತಿಯ ಮೋಳೆ ಗ್ರಾಮದ ಭೀಮ ನಗರದ ಸಾರ್ವಜನಿಕ ಸ್ಥಳದಲ್ಲಿ ಸಾರಿಕಾ ಪರಶುರಾಮ ಕಾಂಬಳೆ ಎಂಬ ಮಹಿಳೆ ಅನಧೀಕೃವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾಗವಾಡ ಪೊಲೀಸರು ದಾಳಿ ನಡೆಸಿ ಅಕ್ರಮ ಸಾರಾಯಿ ಹಾಗೂ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಡಿಕೆ ಡಬಲ್ ಕಿಕ್ …
Read More »
BigTv News
March 7, 2026
Breaking News
ಮಂಗಳೂರು: ಕೊಟ್ಟಾರ ಚೌಕಿ ಬಳಿ ರಸ್ತೆ ಬದಿಯಲ್ಲಿ ಗಾಂಜಾ ಬೆರೆಸಿದ ಸಿಗರೇಟು ಸೇದುತ್ತಿದ್ದ ಆರೋಪದಡಿ ಕೊಡಿಯಾಲಬೈಲು ನಿವಾಸಿ ರೋಶನ್ ಎಂಬಾತನನ್ನು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಗಸ್ತಿನಲ್ಲಿದ್ದಾಗ ಮಾ.5ರಂದು ರಾತ್ರಿ 7 ಗಂಟೆ ವೇಳೆಗೆ ಸಾರ್ವಜನಿಕ ಸ್ಥಳದಲ್ಲಿ ನಿಂತು ಸಿಗರೇಟು ಸೇದುತ್ತಿದ್ದ ಯುವಕನನ್ನು ವಿಚಾರಿಸಿದ್ದು, ಆತನ ವರ್ತನೆ ಅನುಮಾನಾಸ್ಪದವಾಗಿ ಕಂಡು ಬಂದಿತ್ತು. ಮತ್ತಷ್ಟು ವಿಚಾರಿಸಿದಾಗ ಸಿಗರೇಟಿನ ಒಳಗಡೆ ಮಾದಕ ದ್ರವ್ಯ ತುಂಬಿಸಿ ಸೇದಿರುವುದನ್ನು ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ಪರೀಕ್ಷೆಗೆ ಒಳ …
Read More »
BigTv News
March 7, 2026
Breaking News
ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯವು 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ತಾಲ್ಲೂಕಿನ ಬಿ.ಕೆ.ಕಗ್ರಾಳಿಯ ರುತೇಶ ಅನಿಲ ಬೋಸಲೆ (22) ಶಿಕ್ಷೆಗೆ ಒಳಗಾದವ. 2025ರ ಏಪ್ರಿಲ್ 10ರಂದು ಬಾಲಕಿಗೆ ಲಡ್ಡು ಕೋಡುತ್ತೆನೆ ಬಾ ಎಂದು ಪುಸಲಾಯಿಸಿ ಮನೆಗೆ ಕರೆದುಕೊಂಡು, ಹಗ್ಗದಿಂದ ಕಟ್ಟಿಹಾಕಿ ಹೋಗಿ ಅತ್ಯಾಚಾರ ಎಸಗಿದ್ದ.ಅಲ್ಲದೇ ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇನೆ, ನಿನ್ನಂತೆಯೇ ನಿನ್ನ ಅಕ್ಕನಿಗೇ …
Read More »
BigTv News
March 7, 2026
Breaking News
ಹಾಸನ ತಾಲೂಕಿನ ರಾಯಪುರ ಬಳಿ ಬಾರ್ ಮುಂದೆ ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆದಿದ್ದು, ಪೊಲೀಸ್ ಗಾಯಗೊಂಡಿದ್ದಾರೆ. ರಾಯಪುರದ ಲಕ್ಷ್ಮಿ ವೆಂಕಟೇಶ್ವರ ಬಾರ್ ಸಮೀಪ ಕಾರ್ ನೊಳಗೆ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ವೀರಾಪುರದ ದೊರೆಸ್ವಾಮಿ(42) ಮೃತಪಟ್ಟವರು. ಕಾರ್ ನಲ್ಲಿ ಅವರ ಶವ ಪತ್ತೆಯಾಗಿದ್ದು, ಬಾರ್ ಎದುರು ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಬಾರ್ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದ್ದು, ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. …
Read More »
BigTv News
March 7, 2026
Breaking News
ಸಿಂಧನೂರು: ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಸುಖಾಲಪೇಟೆಯಲ್ಲಿ ಯೂಸುಫ್ ಅಂಬರ್ ಖಾನ್ ಅವರಿಗೆ ಸೇರಿದ ಗೋದಾಮಿಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಗೋದಾಮಿನ ಹಿಂಭಾಗದ ಕಸಕ್ಕೆ ಹಚ್ಚಿದ್ದ ಬೆಂಕಿಯ ಕಿಡಿ ತಗುಲಿದ್ದರಿಂದ ಆರ್‌ಎನ್‌ಆರ್ ಭತ್ತದ 750 ಚೀಲಗಳು ಮತ್ತು ಗೊಬ್ಬರದ ಚೀಲಗಳು ಸುಟ್ಟುಹೋಗಿದ್ದು, ಸುಮಾರು ₹20 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಮಾಲೀಕ ತಿಳಿಸಿದ್ದಾರೆ. ಗೋದಾಮಿನ ಹಿಂಭಾಗದ ಖಾಲಿ ಜಾಗದಲ್ಲಿ ಕಸಕ್ಕೆ ಬೆಂಕಿ ಹಚ್ಚಲಾಗಿತ್ತು. ಗೋದಾಮಿನಲ್ಲಿದ್ದ …
Read More »
BigTv News
March 7, 2026
Breaking News
ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಸಮೀಪದ ನೂಜಿಯಲ್ಲಿ ಶುಕ್ರವಾರ ಸಂಜೆ ದೊಡ್ಡ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸುಡುಮದ್ದು ತಯಾರಿಕಾ ಘಟಕದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸರ್ಕಾರಿ ಜಮೀನಿನಲ್ಲಿ ಸ್ಥಳೀಯ ನಿವಾಸಿಯಾದ ಆರೋಪಿ ಅಬ್ದುಲ್ ಗಫೂರ್ ಎಂಬಾತ ಅಕ್ರಮವಾಗಿ ಶೆಡ್ ನಿರ್ಮಿಸಿ, ಯಾವುದೇ ಪರವಾನಗಿ ಪಡೆಯದೇ ಸುಡುಮದ್ದುಗಳನ್ನು ತಯಾರಿಸಿ, ಅಕ್ರಮವಾಗಿ ಸಂಗ್ರಹಿಸಿದ್ದ. ಈ ಸುಡುಮದ್ದುಗಳು ಸ್ಪೋಟಗೊಂಡಿದೆ. ಸ್ಫೋಟದ …
Read More »
BigTv News
March 7, 2026
Breaking News
ಹಾಸನ: ಕಾರಿನೊಳಗೆ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದ್ದು, ಗ್ರಾಮಸ್ಥರು ಕೊಲೆ ಎಂದು ಆರೋಪಿಸಿ ಶವ ಪತ್ತೆಯಾದ ಹಾಸನ-ಹಳೇಬೀಡು ರಸ್ತೆಯ ರಾಯಪುರ ಗ್ರಾಮದ ಸಮೀಪದಲ್ಲಿರುವ ಬಾರ್ ಎದುರು ಶವ ಇಟ್ಟು ಶುಕ್ರವಾರ ಪ್ರತಿಭಟನೆ ನಡೆಸಿದರು. ತಾಲೂಕಿನ ಸಾಲಗಾಮೆ ಹೋಬಳಿ ಸೀಗೆ ವೀರಾಪುರ ಗ್ರಾಮದ ದೊರೆಸ್ವಾಮಿ (42) ಮೃತ. ಬಾರ್ ಎದುರು ನಿಲ್ಲಿಸಿದ್ದ ಕಾರಿನೊಳಗೆ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ವೀರಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ದೊರೆಸ್ವಾಮಿ …
Read More »
BigTv News
March 7, 2026
Breaking News
ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಗಲ್ಲು ಗ್ರಾಮದಲ್ಲಿ ಇತ್ತೀಚೆಗೆ ದಲಿತ ಸಮುದಾಯದ ನಾಲ್ವರಿಗೆ ಜಾತಿ ನಿಂದನೆ ಹಾಗೂ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಾರ್ಚ್ 1ರಂದು ರಾತ್ರಿ 8 ಗಂಟೆ ಸುಮಾರಿನಲ್ಲಿ ಗ್ರಾಮದ ಮದ್ಯದಂಗಡಿ ಎದುರು ಈ ಘಟನೆ ನಡೆದಿದೆ. ದೂರುದಾರ ಸೂರ್ಯನಾರಾಯಣ ಹಾಗೂ ಅವರ ಜೊತೆಗಿದ್ದ ಗಾಳೆಪ್ಪ, ಎರ್ರಿಸ್ವಾಮಿ ಮತ್ತು ಮಲ್ಲಪ್ಪ ಎಂಬುವವರು ಮದ್ಯದಂಗಡಿ ಬಳಿ ಇದ್ದಾಗ, ಗ್ರಾಮದ ಎರ್ರಿಸ್ವಾಮಿ, …
Read More »
BigTv News
March 7, 2026
Breaking News
ಹೂವಿನಹಡಗಲಿಯ ಬೀರಬ್ಬಿಯಲ್ಲಿ ಇತ್ತೀಚೆಗೆ ಪ್ಲಾಸ್ಟಿಕ್ ಚೀಲದಲ್ಲಿ ಪೀಸ್ ಪೀಸ್ ಆಗಿ ಸಿಕ್ಕ ವ್ಯಕ್ತಿಯ ಮೃತದೇಹದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಂದೆಯೇ ಈ ಪ್ರಕರಣದಲ್ಲಿ ಆರೋಪಿ ಎಂಬುದು ಗೊತ್ತಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.ಬೀರಬ್ಬಿ ಗ್ರಾಮದ ಬೀರೇಶ (25) ಕೊಲೆಯಾಗಿದ್ದ ಯುವಕ. ಆತನ ತಂದೆ ಲಕ್ಷ್ಮಪ್ಪ (55) ಹತ್ಯೆಗೈದ ಆರೋಪಿಯಾಗಿದ್ದಾನೆ. ಹೆಂಡತಿಯ ಅನೈತಿಕ ಸಂಬಂಧಕ್ಕೆ ಮಗ ಕುಮ್ಮಕ್ಕು ಕೊಡುತ್ತಿದ್ದಾನೆ ಎಂಬ ಕಾರಣಕ್ಕೆ ಆರೋಪಿ ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಸುಮಾರು …
Read More »