Breaking News

Breaking News

ಖಬರಸ್ತಾನ ಕಬಳಿಕೆ: ಅಧಿಕಾರಿಗಳ ಅಮಾನತು

ಬಳ್ಳಾರಿ: ನಗರದ ಬೆಂಗಳೂರು ರಸ್ತೆಯಲ್ಲಿರುವ ಖಬರಸ್ತಾನ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪಾಲಿಕೆಯು ತನ್ನ ಅಧಿಕಾರಿಗಳನ್ನು ಅಮಾನತು ಮಾಡಿದೆ. ಪಾಲಿಕೆ ವಿಷಯ ನಿರ್ವಾಹಕ ಶ್ರೀಕಾಂತ್‌, ಕಂದಾಯ ನಿರೀಕ್ಷರಾದ ಮನೋಹರ್‌, ನರೇಶ್‌ ಕುಮಾರ್‌, ಸಹಾಯಕ ಕಂದಾಯ ಅಧಿಕಾರಿ ವೆಂಕಟೇಶ್ವರಲು, ಕಂದಾಯ ಅಧಿಕಾರಿ ನಾರಾಯಣ, ಮುಖ್ಯ ಕಚೇರಿಯ ಡೇಟಾ ಎಂಟ್ರಿ ಆಪರೇಟರ್ ಸ್ನೇಹಾ ಅಮಾನತುಗೊಂಡವರು. ಇವರ ವಿರುದ್ಧ ಬ್ರೂಸ್‌ಪೇಟೆ ಠಾಣೆಯಲ್ಲಿ ಎಫ್‌ಐಆರ್‌ ಕೂಡ ದಾಖಲಾಗಿತ್ತು.

Read More »

ಬಾಗಲಕೋಟೆ ಗಲಭೆ ಪ್ರಕರಣ: ‘ಗೂಂಡಾಗಳನ್ನು ಬಂಧಿಸಿ ಗಡಿಪಾರು ಮಾಡಿ’

ಬಸವನಬಾಗೇವಾಡಿ: ಬಾಗಲಕೋಟೆಯಲ್ಲಿ ಈಚೆಗೆ ಶಿವಾಜಿ ಜಯಂತಿ ಮೆರವಣಿಗೆಯ ಮೇಲೆ ಕಲ್ಲು ತೂರಿ, ಗಲಭೆ ಸೃಷ್ಟಿಸಿದವರನ್ನು ಬಂಧಿಸಿ, ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಿದ ಬೃಹತ್ ಪ್ರತಿಭಟನಾ ಮೆರವಣಿಗೆಯೂ ಪಟ್ಟಣದ ಅಂಬಾಭವಾನಿ ದೇವಸ್ಥಾದಿಂದ ಪ್ರಾರಂಭವಾಗಿ ಗೌರಿ ಗುಡಿ, …

Read More »

ಪೋಕ್ಸೋ ಪ್ರಕರಣ ರದ್ದು ಕೋರಿ ಕೋರ್ಟ್ ಮೆಟ್ಟಿಲೇರಿದ ಮಲ್ಲಿಕಾರ್ಜುನ ಮುತ್ಯಾ

ಕಲಬುರ್ಗಿ: ಬಾಲಕಿಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದ ಕಾರಣ ಪೋಕ್ಸೋ ಕೇಸ್ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿತ್ತು. ಈ ಪ್ರಕರಣ ರದ್ದುಗೊಳಿಸುವಂತೆ ಕಲಬುರ್ಗಿಯ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮಲ್ಲಿಕಾರ್ಜುನ ಮುತ್ಯಾ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಸೋಷಿಯಲ್ ಮೀಡಿಯಾದಲ್ಲಿ ಬಾಲಕಿಯೊಂದಿಗೆ ಮಲ್ಲಿಕಾರ್ಜುನ ಮುತ್ಯಾ ಅವರು ಅನುಚಿತವಾಗಿ ವರ್ತಿಸಿದ್ದ ವೀಡಿಯೋ ವೈರಲ್ ಬಗ್ಗೆ ದೂರು ದಾಖಲಿಸಿತ್ತು.ಈ ಸಂಬಂಧ ಯಾದಗಿರಿ ಎಸ್ಪಿ ಅವರಿಗೆ ಬರೆಯಲಾಗಿದ್ದಂತ ಪತ್ರದಡಿ, ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಯಾದಗಿರಿಯ …

Read More »

ಬೇರೆ ಹುಡುಗಿ ಜೊತೆ ಸಂಪರ್ಕದಲ್ಲಿದ್ದಾನೆ ಅಂತ ಜಿಮ್‌ ಟ್ರೈನರ್‌ಗೆ ಚಾಕುವಿನಿಂದ ಇರಿದ ಪ್ರೇಯಸಿ

ರಾಮನಗರ: ತನ್ನ ಲವರ್ ಬಾಯ್ ಬೇರೆ ಹುಡುಗಿ ಜೊತೆಗೆ ಸಂಪರ್ಕದಲ್ಲಿ ಇರೋದನ್ನು ಸಹಿಸದಂತ ಪ್ರಿಯತಮೆಯೊಬ್ಬಳು ಜಿಮ್ ಟ್ರೈನರ್ ಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವಂತ ಘಟನೆ ರಾಮನಗರದಲ್ಲಿ ನಡೆದಿದೆ. ರಾಮಗರದ ಸಿಲ್ಕ್ ಫಾರ್ಮ್ ಕ್ವಾಟ್ರಸ್ ಬಳಿಯಲ್ಲಿ ಪ್ರಿಯಕರ ಬೇರೆ ಹುಡುಗಿ ಜೊತೆಗೆ ಸಂಪರ್ಕದಲ್ಲಿ ಇದ್ದದ್ದರಿಂದ ಕೋಪಗೊಂಡು ಪ್ರೇಯರಿ ಸುಧಾ ಎಂಬುವರು, ಪ್ರಿಯಕರ, ಜಿಮ್ ಟ್ರೈನರ್ ವೇಣುಗೋಪಾಲ್ ಎಂಬಾತನಿಗೆ ಚಾಕುವಿನಿಂದ ಇರಿದಿದ್ದಾರೆ. ಸುಧಾ ಹಾಗೂ ವೇಣುಗೋಪಾಲ್ 5-6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೇ ವೇಣುಗೋಪಾಲ್ …

Read More »

ಯೋಗೇಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ನಿಂದ ಜಾಮೀನು ಮಂಜೂರು!

ಬೆಂಗಳೂರು : ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಇದೀಗ ಕಾಂಗ್ರೆಸ್ ಶಾಸಕ ವಿನಯ್ ಕುಲಕರಣಿಗೆ ಬಿಗ್ ರಿಲೀಫ್ ಸಿಕ್ಕಿದೆ. ಹೌದು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಕೂಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಜೈಲು ಪಾಲಾಗಿದ್ದರು. ಇದೀಗ ಶಾಸಕ ವಿನಯ್ ಕುಲಕರಣಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆ ಮೂಲಕ …

Read More »

ಶೌಚಾಲಯದಲ್ಲಿ ಯುವತಿ ವಿಡಿಯೋ ಮಾಡಲು ಯತ್ನ: ಮೊಬೈಲ್ ಬೀಳಿಸಿಕೊಂಡು ಆರೋಪಿ ಪರಾರಿ

ಬೆಂಗಳೂರು: ಕಾಮುಕನೊಬ್ಬ ಶೌಚಾಲಯಕ್ಕೆ ತೆರಳಿದ್ದ ಯುವತಿಯ ವಿಡಿಯೋ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಿಷ್ಠಿತ ಕೆಫೆಯೊಂದರಲ್ಲಿ ಗುರುವಾರ ನಡೆದಿದೆ. ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಕೆಫೆಗೆ ಹೋಗಿದ್ದ ಯುವತಿ ರಾತ್ರಿ 8.30 ರ ಸುಮಾರಿಗೆ ಶೌಚಾಲಯಕ್ಕೆ ತೆರಳಿದ್ದ ವೇಳೆ ಪಕ್ಕದಲ್ಲಿರುವ ಪುರುಷರ ಶೌಚಾಲಯದಿಂದ ಆರೋಪಿಯೊಬ್ಬ ಕೈ ಮೇಲಕ್ಕೆ ಎತ್ತಿ ಮೊಬೈಲ್ ಮೂಲಕ ಯುವತಿಯ ವಿಡಿಯೋ ಮಾಡಲು ಯತ್ನಿಸಿದ್ದಾನೆ. ಇದನ್ನು ನೋಡಿದ ಯುವತಿ ಜೋರಾಗಿ ಕೂಗಾಡಿದ್ದಾಳೆ. ಗಾಬರಿಯಾದ …

Read More »

ಹುಬ್ಬಳ್ಳಿ: ರೆಕ್ಸಿನ್ ಮತ್ತು ಫೋಮ್ ಗೋಡೌನ್‌ಗೆ ಭೀಕರ ಬೆಂಕಿ…

ಹುಬ್ಬಳ್ಳಿ ನಗರದಲ್ಲಿ ಕುಶನ್ ತಯಾರಿಕೆಗೆ ಬಳಸುವ ರೆಕ್ಸಿನ್ ಹಾಗೂ ಫೋಮ್ ಮಾರಾಟ ಮಳಿಗೆ ಮತ್ತು ಗೋಡೌನ್‌ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಘಟನೆ ಹುಬ್ಬಳ್ಳಿ. ನೆಹರೂ ಮೈದಾನದ ಸಮೀಪದಲ್ಲಿರುವ Vishal Enterprises ಮಳಿಗೆ ಮತ್ತು ಗೋಡೌನ್‌ನಲ್ಲಿ ನಡೆದಿದೆ. ಗೋಡೌನ್‌ನಲ್ಲಿ ಕೆಲಸ ನಡೆಯುತ್ತಿದ್ದ ವೇಳೆ ಬೆಂಕಿ.. ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಫೋಮ್ ಹಾಗೂ ರೆಕ್ಸಿನ್ ವಸ್ತುಗಳಿಗೆ ವ್ಯಾಪಿಸಿದೆ. ಗೋಡೌನ್‌ನಲ್ಲಿ ಶೇಖರಿಸಿಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಫೋಮ್ ಮತ್ತು ಇತರೆ ವಸ್ತುಗಳು ಬೆಂಕಿಗೆ …

Read More »

ಭಟ್ಕಳ | ಗಾಂಜಾ ಸೇವನೆ: ಇಬ್ಬರ ಬಂಧನ

ಭಟ್ಕಳ: ತಾಲ್ಲೂಕಿನ ಹೆಬಳೆಯ ಪಿರ್ದೋಸ ನಗರ ಮೈದಾನದಲ್ಲಿ ಗುರುವಾರ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಹೆಬಳೆ ಬದ್ರಿಯಾ ಕಾಲೊನಿ ನಿವಾಸಿ ಅಬ್ದುಲ್ ಮಜೀದ ಮೊಹಮ್ಮದ ಇಸ್ಮಾಯಿಲ್ (32) ಹಾಗೂ ಜಾಲಿ ತಗ್ಗರಗೋಡ ನಿವಾಸಿ ಮೊಹಮ್ಮದ್ ಜಾಕೀರ ಅಬ್ದುಲ್ ರಜಾಕ್ (28) ಬಂಧಿತ ಯುವಕರು. ವೈದ್ಯಕೀಯ ತಪಾಸಣೆ ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ: ಮೂವರು ಸಾವು

ಚಿತ್ರದುರ್ಗ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಸಮೀಪ ನಡೆದಿದೆ.ಗುಬ್ಬಿ ತಾಲೂಕಿನ ಹೊಸಕೆರೆ ಗ್ರಾಮದ ನರಸಿಂಹಮೂರ್ತಿ(38), ಗಂಗಾಧರ(35), ಲೋಹಿತ್(40) ಮೃತಪಟ್ಟವರು ಎಂದು ಹೇಳಲಾಗಿದೆ. ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಚಾಲಕನ ಬದಿ ಕುಳಿತಿದ್ದವರ ತಲೆ ಕಟ್ ಆಗಿದೆ. ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಮಕೂರು …

Read More »

ಅಸೂಯೆ: 3 ವರ್ಷದ ಬಾಲಕಿಯ ಕತ್ತು ಸೀಳಿ ಕೊಂದ ಮಲತಾಯಿ

ಲಖನೌ: ಗಂಡ ನನಗಿಂತ ಹೆಚ್ಚು ಮಗಳನ್ನೇ ಪ್ರೀತಿಸುತ್ತಾನೆ ಎಂದು ಭಾವಿಸಿದ ಮಲತಾಯಿ, ಮೂರು ವರ್ಷ ಬಾಲಕಿಯ ಕತ್ತು ಸೀಳಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಘೋರಖ್‌ಪುರದಲ್ಲಿ ನಡೆದಿದೆ. ಬುಧವಾರ ರಾತ್ರಿ ಬಾಲಕಿಯ ಕತ್ತು ಸೀಳಿ ಕೊಲ್ಲಲಾಗಿದೆ. ಹತ್ಯೆ ಮಾಡಿದ ಮಹಿಳೆಯನ್ನು ಬಿಜರಹ ಜಿಲ್ಲೆಯ ಪೂಜಾ ವರ್ಮಾ ಎಂದು ಗುರುತಿಸಲಾಗಿದೆ. ಹತ್ಯೆ ಬಳಿಕ ಪರಾರಿಗೆ ಯತ್ನಿಸಿದ್ದ ಹೆಂಡತಿಯನ್ನು ಗಂಡ ತ್ರಿವೇಣಿ ಮೌರ್ಯ ಹಿಡಿದಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ತ್ರಿವೇಣಿ ಅವರ ಮೊದಲ …

Read More »