Breaking News

Breaking News

ವೃದ್ದೆಯ ಚಿನ್ನದ ಸರ ಎಗರಿಸಿದ ಖದೀಮ

ತುಮಕೂರು: ಕಳ್ಳನೊಬ್ಬ ಗ್ರಾಹಕನ ಸೋಗಿನಲ್ಲಿ ಬಂದು ಚಿಲ್ಲರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೃದ್ದೆಯ ಚಿನ್ನದ ಸರವನ್ನು ಎಗರಿಸಿಕೊಂಡು ಹೋಗಿರುವ ಘಟನೆ ತುಮಕೂರಿನ ಕ್ಯಾತ್ಸಂದ್ರದ ಮೈದಾಳ ರಸ್ತೆಯಲ್ಲಿ ನಡೆದಿದೆ. ಕಳ್ಳತನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಫೆಬ್ರವರಿ 15 ರಂದು ಬೆಳಗ್ಗಿನ ಜಾವ ನಡೆದಿದೆ. ಚಿಲ್ಲರೆ ಅಂಗಡಿ ನಡೆಸುತಿದ್ದ ಪಾರ್ವತಮ್ಮ ಅವರ ಚಿನ್ನದ ಸರವನ್ನು ಕಿತ್ತುಕೊಂಡು ಖದೀಮ ಸ್ಥಳದಿಂದ ಪರಾರಿಯಾಗಿದ್ದಾನೆ. ಪಾರ್ವತಮ್ಮ ಬೆಳಗ್ಗೆ 6:30ಕ್ಕೆ ಅಂಗಡಿ ಬಾಗಿಲು ತೆರೆದಿದ್ದರು. ಆಗ ಸ್ಥಳದಲ್ಲಿ …

Read More »

ವಿವಿಧ ಮಾದಕ ವಸ್ತುಗಳ ಮಾರಾಟ: ವಿದೇಶಿ ಡ್ರಗ್ ಪೆಡ್ಲರ್ ಬಂಧನ

ಬೆಂಗಳೂರು: ಹಲವಾರು ರೀತಿಯ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್‌ನನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಸೆನೆಗಲ್ ಮೂಲದ ಬ್ಯಾರಿ ಯಾಯ ಅಲಿಯಾಸ್ ಒಕೊಲಿ ಬಂಧಿತನಾಗಿದ್ದು, ಆರೋಪಿಯಿಂದ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.ಬಂಧಿತನಿಂದ 29 ಎಲ್‌ಎಸ್‌ಡಿ ಮಾತ್ರೆಗಳು, 27 ಎಲ್‌ಎಸ್‌ಡಿ ಸ್ಟ್ರಿಪ್ಸ್, 546 ಗ್ರಾಂ ಎಂಡಿಎಂಎ, 152 ಗ್ರಾಂ ಹೈಡ್ರೋ ಗಾಂಜಾ ಹಾಗೂ 131 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ ಎಂದು …

Read More »

ಮೈಸೂರಿನಲ್ಲಿ ಡ್ರಗ್ಸ್‌ ಮಾರಾಟ: ಬೆಂಗಳೂರಿನ ಇಬ್ಬರು ಪೆಡ್ಲರ್ ಗಳ ಸೆರೆ

ನಗರದಲ್ಲಿ ಮಾದಕ ವಸ್ತು ಮಾರಾಟ ಮತ್ತು ಸಾಗಾಟದ ಮೇಲೆ ಪೊಲೀಸರು ಕಾರ್ಯಾಚರಣೆ ಮುಂದು ವರಿಸಿದ್ದು, ಬೆಂಗಳೂರು ಮೂಲದ ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಿರುವ ನಗರ ಸಿಸಿಬಿ ಪೊಲೀಸರು 5.10 ಲಕ್ಷ ರೂ.ಮೌಲ್ಯದ ಮಾದಕವಸ್ತು ವಶಪಡೆಸಿಕೊಂಡಿದ್ದಾರೆ. ಬೆಂಗಳೂರಿನ ನಂದಿನಿ ಲೇಔಟ್‌ ನಿವಾಸಿಗಳಾದ ಆರ್‌.ಪ್ರಮೋದ್‌ (27) ಹಾಗೂ ಎಂ.ವಿಕಾಸ್‌ (23) ಬಂಧಿತರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಎಂಡಿಎಂಎ ಹಾಗೂ ಗಾಂಜಾವನ್ನು ಬೆಂಗಳೂರು ಕಡೆಯಿಂದ ಮೈಸೂರು ನಗರಕ್ಕೆ ಪೂರೈಕೆ ಮಾಡುತ್ತಿದ್ದ ಜಾಲದ ಮೇಲೆ ಮಂಗಳ ವಾರ ಪೊಲೀಸರು …

Read More »

ಬೈಕ್​​ನಲ್ಲಿ ಹೋಗುತ್ತಾ ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆರೆದ ಸವಾರ

ನವದೆಹಲಿ: ಯುವಕನೊಬ್ಬ ಬೈಕ್​​ನಲ್ಲಿ ಹೋಗುತ್ತಾ ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆರೆದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ. ರೀಲ್ಸ್​ಗಾಗಿ ಅಪಾಯಕಾರಿ ಸಾಹಸ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಸ್ ಚಲಿಸುತ್ತಿರುತ್ತದೆ ಆಗ ಬಲಗಡೆಯಿಂದ ಬಂದ ಬೈಕ್ ಸವಾರ ಚಾಲಕ ಕುಳಿತಿರುವಲ್ಲಿ ಇರುವ ಬಾಗಿಲನ್ನು ಅಚಾನಕ್ಕಾಗಿ ತೆರೆಯುತ್ತಾನೆ. ಕೂಡಲೇ ಚಾಲಕ ಬಾಗಿಲು ಹಾಕಿಕೊಳ್ಳುತ್ತಾರೆ. ಒಂದೊಮ್ಮೆ ಡ್ರೈವರ್ ಪ್ಯಾನಿಕ್ ಆಗಿದ್ದರೆ ಅಪಘಾತವಾಗುವ ಸಂಭವವಿತ್ತು. ಬೈಕ್​​ಗೆ ನಂಬರ್ ಪ್ಲೇಟ್ ಕೂಡಾ ಇರಲಿಲ್ಲ. …

Read More »

ಗುಜರಾತ್‌ನ 6 ಕೋರ್ಟ್‌ಗಳಿಗೆ ಹುಸಿ ಬಾಂಬ್‌ ಬೆದರಿಕೆ!

ಅಹಮದಬಾದ್‌: ಗುಜರಾತ್‌ನ 6 ನ್ಯಾಯಾಲಯಗಳಿಗೆ ಮಂಗಳವಾರ ಇ-ಮೇಲ್‌ಗಳ ಮೂಲಕ ಬಾಂಬ್ ಬೆದರಿಕೆಗಳು ಬಂದಿತ್ತು. ತಕ್ಷಣವೇ ಪೊಲೀಸರ ತಪಾಸಣೆ ನಡೆಸಿದರು. ಆದರೆ, ಅವರು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬುದು ದೃಢಪಟ್ಟಿದೆ. ಆದರೆ, ಬಾಂಬ್ ಬೆದರಿಕೆಯಿಂದ ಆತಂಕ ವಾತಾವರಣ ನಿರ್ಮಾಣವಾಗಿತ್ತು. ಅಹಮದಾಬಾದ್, ವಡೋದರಾ, ವಲ್ಸಾದ್, ರಾಜ್‌ಕೋಟ್, ಗಾಂಧಿನಗರ ಮತ್ತು ಮೆಹ್ಸಾನಾ ನ್ಯಾಯಾಲಯಗಳಿಗೆ ಬೆದರಿಕೆ ಇಮೇಲ್‌ಗಳು ಬಂದಿವೆ. ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ), ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (ಬಿಡಿಡಿಎಸ್), ಶ್ವಾನ …

Read More »

ನೌಕಾಪಡೆ ಹಡಗುಗಳ ರಹಸ್ಯ ಮಾಹಿತಿ ಸೋರಿಕೆ: ಮತ್ತೊಬ್ಬ ಅರೆಸ್ಟ್

ಉಡುಪಿ: ನೌಕಾಪಡೆ ಹಡಗುಗಳ ರಹಸ್ಯ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಆರೋಪಿಯನ್ನು ಮಲ್ಪೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭಾರತೀಯ ನೌಕಾಪಡೆ ಹಡಗುಗಳ ರಹಸ್ಯ ಮಾಹಿತಿಯನ್ನು ವಿದೇಶಕ್ಕೆ ರವಾನಿಸುತ್ತಿದ್ದ ಪಶ್ಚಿಮ ಬಂಗಾಳದ ಆಲಿಫ್ ಇಸ್ಲಾಂ(21) ಎಂಬಾತನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೇರಳದ ಇಡುಕ್ಕಿ ಜಿಲ್ಲೆಯ ಮನ್ನಾರ್ ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆಬ್ರವರಿ 21ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ …

Read More »

ಪಂಜಾಬ್‌ನ ಲೂಧಿಯಾನದಲ್ಲಿ ಮಹಿಳೆ ಮೇಲೆ ಆಯಸಿಡ್‌ ದಾಳಿ

ಪಂಜಾಬ್‌ನ ಲೂಧಿಯಾನದ ದುರ್ಗಿ ಕಾಲೋನಿಯಲ್ಲಿ ಬೈಕಿನಲ್ಲಿ ಬಂದಾತ ಕಾರ್ಮಿಕ ಮಹಿಳೆಯ ಮೇಲೆ ಆಯಸಿಡ್‌ ಎರಚಿದ್ದರಿಂದ ಮಹಿಳೆ ಗಾಯಗೊಂಡಿದ್ದಾರೆ. ಮಹಿಳೆ ಉತ್ತರ ಪ್ರದೇಶ ಮೂಲದವರಾಗಿದ್ದು ಮೂವರು ಮಕ್ಕಳ ತಾಯಿ. ಬೈಕಿನಲ್ಲಿ ಬಂದ ದಾಳಿಕೋರ ಮಹಿಳೆಯನ್ನು ಹತ್ತಿರ ಕರೆದು ಮಾತನಾಡಿಸಿದ್ದು ಈ ವೇಳೆ ಆಯಸಿಡ್‌ ಎರಚಿದ್ದಾನೆ.ಆಕೆಯ ಮುಖ ಮತ್ತು ಕಣ್ಣಿನ ಹುಬ್ಬು ಸುಟ್ಟು ಹೋಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಯಸಿಡ್‌ ದಾಳಿಕೋರ ಹೆಲ್ಮೆಟ್‌ ಧರಿಸಿದ್ದು ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಯ ಪತ್ತೆಗೆ ಸಿಸಿಟಿವಿ ದೃಶ್ಯಾವಳಿ …

Read More »

ವಜಾಗೊಳಿಸಿದ್ದ ಹೊರಗುತ್ತಿಗೆ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

ಜಮಖಂಡಿ: ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಸಿಬ್ಬಂದಿಯಲ್ಲಿ ನಾಲ್ವರನ್ನು ವಜಾಗೊಳಿಸಿದ ಹಿನ್ನೆಲೆ ಅವರು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದ್ದು, ಪೊಲೀಸರು, ಜನತೆ ತಕ್ಷಣ ಅವರನ್ನು ತಡೆದು, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಸ್ವಸ್ಥಗೊಂಡ ಸಿಬ್ಬಂದಿ ಯಮುನಾ ಗೋರ್ಪಡೆ, ಸುನಂದಾ ಮಠಪತಿ, ವಿಜಯ ಗೋರ್ಪಡೆ, ಹನುಮಂತ ಕಾಂಬಳೆ ಗುಣಮುಖರಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಏಜೆನ್ಸಿ …

Read More »

ಜಮೀನು ವ್ಯಾಜ್ಯ – ಸಾರಿಗೆ ಬಸ್ ಚಾಲಕನನ್ನು ಕೊಲೆ ಮಾಡಿ ಸುಟ್ಟು ಹಾಕಿದ ದುರುಳರು.!

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ರಾಜನಹಳ್ಳಿ ಸಮೀಪ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ದೇಹವನ್ನು ಸುಟ್ಟು ಹಾಕಿರುವ ದಾರುಣ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಆರ್.ಬಿ.ವೀರಣ್ಣ (58) ಎಂದು ಗುರುತಿಸಲಾಗಿದ್ದು, ಅವರು ಕೆಎಸ್‌ಆರ್‌ಟಿಸಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ವೀರಣ್ಣ ಅವರ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಪೂರ್ವನಿಯೋಜಿತ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಜಮೀನು ವಿವಾದವೇ ಈ ಕೊಲೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ವೀರಣ್ಣ …

Read More »

ನೌಕಾಪಡೆಯ ಹಡಗುಗಳ ಗೋಪ್ಯ ಮಾಹಿತಿ ಸೋರಿಕೆ: ಮತ್ತೊಬ್ಬನ ಬಂಧನ

ಉಡುಪಿ: ನೌಕಾಪಡೆಯ ಹಡಗುಗಳ ರಹಸ್ಯ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಐದನೇ ಆರೋಪಿ ಪಶ್ಚಿಮ ಬಂಗಾಳದ ಜಾಲ್‌ ಫೈಗುರಿ ಜಿಲ್ಲೆಯ, ಪ್ರಸ್ತುತ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನೆಲೆಸಿದ್ದ ಆಲಿಫ್ ಇಸ್ಲಾಮ್ (21) ಎಂಬಾತನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಬಂಧಿತ ಬಾಂಗ್ಲಾದೇಶದ ಪ್ರಜೆಯಾಗಿರಬಹುದು ಎಂಬ ಶಂಕೆ ಇದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ತಿಳಿಸಿದ್ದಾರೆ. ಆರೋಪಿಗಳು ಹಡಗುಗಳಿಗೆ ಸಂಬಂಧಿತ ಗೋಪ್ಯ ಮಾಹಿತಿಯನ್ನು …

Read More »