Breaking News

Breaking News

ಅಧಿಕಾರ, ಅಹಂಕಾರ ಮತ್ತು ವೈಯಕ್ತಿಕ ವೈಷಮ್ಯ. ಕಪ್ಪು ಮನಸ್ಸಿನ ಟ್ರಾಫಿಕ್ ಪೊಲೀಸರು ಯಾರು..?

ನಂಬಿಕೆ ದ್ರೋಹದ ಖಾಕಿ ಆಟ:ಪೊಲೀಸರಿಂದಲೇ ಪೊಲೀಸನ ಖಾಸಗಿ ವಿಡಿಯೋ..! ಅಧಿಕಾರ, ಅಹಂಕಾರ ಮತ್ತು ವೈಯಕ್ತಿಕ ವೈಷಮ್ಯ. ಕಪ್ಪು ಮನಸ್ಸಿನ ಟ್ರಾಫಿಕ್ ಪೊಲೀಸರು ಯಾರು..? ಒಟ್ಟಿಗೆ ಕೆಲಸ ಮಾಡ್ತಾ, ನಂಬಿಕೆ ಗಳಿಸಿಕೊಂಡು.. ಅದೇ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು.. ಒಬ್ಬ ಪೊಲೀಸ್ ಮತ್ತೊಬ್ಬ ಪೊಲೀಸನ ಖಾಸಗಿ ಕ್ಷಣಗಳನ್ನು… ವಿಡಿಯೋ ಮಾಡಿ ರಿವೆಂಜ್ ಪಾಲಿಟಿಕ್ಸ್ ಗೆ ಇಳಿದಿದ್ದಾನೆ ಎನ್ನಲಾಗುತ್ತಿದೆ… ಮೇಲಾಧಿಕಾರಿಗಳ ಮೆಚ್ಚುಗೆ, ವರ್ಗಾವಣೆ ಭಯ,.. ಅಥವಾ ಹಳೆಯ ವೈಷಮ್ಯದ ಲೆಕ್ಕ ತೀರಿಸಿಕೊಳ್ಳೋ ಹುನ್ನಾರವೇ..? ಖಾಕಿಯೊಳಗೆ …

Read More »

ವೃದ್ಧನನ್ನು ಥಳಿಸಿಕೊಂದ ಆರೋಪ:ಟಿಎಂಸಿ ಕೌನ್ಸಿಲರ್‌ ಪಕ್ಷದಿಂದ ಅಮಾನತು

ಕೋಲ್ಕತಾ: 80 ವರ್ಷದ ವೃದ್ಧನ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣವಾದ ಆರೋಪದ ಮೇಲೆ ಬಂಧಿಸಲ್ಪಟ್ಟ ಉತ್ತರ ಬ್ಯಾರಕ್‌ಪೋರ್ ಪುರಸಭೆಯ ಕೌನ್ಸಿಲರ್ ರವೀಂದ್ರ ನಾಥ್ ಭಟ್ಟಾಚಾರ್ಯ ಅವರನ್ನು ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಸೋಮವಾರ ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿದೆ. ಟಿಎಂಸಿ ಸಂಸದ ಪಾರ್ಥ ಭೌಮಿಕ್, ಪಕ್ಷವು ಈ ವಿಷಯದ ಬಗ್ಗೆ ಶೂನ್ಯ ಸಹಿಷ್ಣುತೆ ನಿಲುವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದು, ಕೌನ್ಸಿಲರನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. …

Read More »

ಗ್ರೂಪ್ ಸಿ ಹುದ್ದೆ ಪರೀಕ್ಷೆ ವೇಳೆ ಮೊಬೈಲ್, ಎಲೆಕ್ಟ್ರಿಕ್ ಡಿವೈಸ್ ಬಳಸಿ ಕಳ್ಳಾಟ ಬಯಲು: 18 ಪರೀಕ್ಷಾರ್ಥಿಗಳ ವಿಚಾರಣೆ

ಬೆಂಗಳೂರು: ಆರ್ಮಿ ಗ್ರೂಪ್ ಸಿ ಹುದ್ದೆ ಪರೀಕ್ಷೆಯ ವೇಳೆ ಕಳ್ಳಾಟ ಆರೋಪ ಹಿನ್ನೆಲೆಯಲ್ಲಿ 18 ಪರೀಕ್ಷಾರ್ಥಿಗಳನ್ನು ಕರೆತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ನಿನ್ನೆ ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ಮೊಬೈಲ್, ಎಲೆಕ್ಟ್ರಿಕ್ ಡಿವೈಸ್ ಬಳಸಿ ನಕಲು ಮಾಡಲಾಗಿತ್ತು. ಮೂರು ಮೊಬೈಲ್ ಮತ್ತು ಎಲೆಕ್ಟ್ರಿಕ್ ಡಿವೈಸ್ ಗಳನ್ನು ಜಪ್ತಿ ಮಾಡಲಾಗಿತ್ತು. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರೀಕ್ಷಾರ್ಥಿಗಳ ವಿಚಾರಣೆ …

Read More »

ಲಿಬಿಯಾ ಕರಾವಳಿಯಲ್ಲಿ ಮುಳುಗಿದ ದೋಣಿ: 53 ಮಂದಿ ವಲಸಿಗರು ನಾಪತ್ತೆ

ಜಿನೀವಾ: ಲಿಬಿಯಾ ಕರಾವಳಿಯಲ್ಲಿ ದೋಣಿಯೊಂದು ಮುಳುಗಿದ್ದು, ಅದರಲ್ಲಿದ್ದ 53 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವಲಸಿಗರ ಸಂಸ್ಥೆ ಸೋಮವಾರ ತಿಳಿಸಿದೆ.ದೋಣಿ ದುರಂತದಲ್ಲಿ ಬದುಕುಳಿದ ಇಬ್ಬರನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದೆ. ಲಿಬಿಯಾದ ಜುವಾರಾ ಬಳಿ ದುರಂತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ವೇಳೆ ನೈಜೀರಿಯಾದ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ‘ದುರಂತದಲ್ಲಿ ಪತಿಯನ್ನು ಕಳೆದುಕೊಂಡೆ’ ಎಂದು ಬದುಕುಳಿದ ಮಹಿಳೆಯೊಬ್ಬರು ತಿಳಿಸಿದರೆ, ಮತ್ತೊಬ್ಬರು ‘ನನ್ನ ಮಕ್ಕಳಿಬ್ಬರು …

Read More »

ಬೀದರ್‌: ಆಕಸ್ಮಿಕ ಬೆಂಕಿಗೆ ಎರಡು ಕಾರುಗಳು ಭಸ್ಮ

ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಎರಡು ಕಾರುಗಳು ಸುಟ್ಟು ಹೋಗಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದಲ್ಲಿ ಸೋಮವಾರ ನಡೆದಿದೆ. ಗ್ರಾಮದ ಕಲ್ಯಾಣ ಮಂಪಟದಲ್ಲಿ ನಿಗದಿಯಾಗಿದ್ದ ಮದುವೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಯಾದಗಿರಿ ಜಿಲ್ಲೆಯ ಶಹಾಪುರದವರಿಗೆ ಸೇರಿದ ಇಬ್ಬರ ಕಾರುಗಳು ಸುಟ್ಟು ಹೋಗಿವೆ.ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಕಾರುಗಳು ಸಂಪೂರ್ಣ ಸುಟ್ಟು ಹೋಗಿವೆ.

Read More »

ಶಿವಮೊಗ್ಗ | ಕಾರಾಗೃಹದೊಳಗೆ ಗಾಂಜಾ ಎಸೆದ ಆರೋಪ; ನಾಲ್ವರ ಬಂಧನ

ಇಲ್ಲಿನ ಸೋಗಾನೆಯ ಕೇಂದ್ರ ಕಾರಾಗೃಹ ಕಟ್ಟಡದ ಒಳಗೆ ಫೆ. 1ರಂದು ಗಾಂಜಾ, ಮೊಬೈಲ್‌ಫೋನ್, ಸಿಗರೇಟ್ ಹಾಗೂ ಲೈಟರ್ ಒಳಗೊಂಡ ಪ್ಯಾಕೆಟ್ ಎಸೆದಿದ್ದ ಆರೋಪದ ಮೇಲೆ ತುಂಗಾ ನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಪರಿಚಿತರು ಗಮ್‌ಟೇಪ್‌ನಿಂದ ಸುತ್ತಿದ್ದ ಪ್ಯಾಕ್ ಎಸೆದಿರುವ ಬಗ್ಗೆ ಕಾರಾಗೃಹದ ಅಧೀಕ್ಷಕ ಎಚ್.ಎ.ಪರಮೇಶ್ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಸಿಪಿಐ ಕೆ.ಟಿ.ಗುರುರಾಜ್ ನೇತೃತ್ವದ ತಂಡ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು. …

Read More »

ಪಂಜಾಬ್ ನಲ್ಲಿ ಬೆಚ್ಚಿ ಬೀಳಿಸೋ ಘಟನೆ : ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಗುಂಡಿಕ್ಕಿ ಕೊಂದು ವಿದ್ಯಾರ್ಥಿಯು ಆತ್ಮಹತ್ಯೆ!

ದೇಶದಲ್ಲಿ ಮತ್ತೊಂದು ಬೆಚ್ಚಿ ಬೆಳಿಸುವ ಘಟನೆ ನಡೆದಿದ್ದು ಕ್ಲಾಸ್ ರೂಮ್ ಗೆ ನುಗ್ಗಿ ಒಬ್ಬ ವಿದ್ಯಾರ್ಥಿನಿ ಮೇಲೆ ವಿದ್ಯಾರ್ಥಿ ಗುಂಡಿನ ದಾಳಿ ಮಾಡಿರುವ ಘಟನೆ ಪಂಜಾಬ್ ನ ತರನ್ ತರಾನ್ ಜಿಲ್ಲೆಯ ಶಾಲೆಯಲ್ಲಿ ಈ ಒಂದು ಭೀಕರ ಘಟನೆ ನಡೆದಿದೆ. ಹೌದು ಶಾಲೆಯಲ್ಲಿ ವಿದ್ಯಾರ್ಥಿನಿ ಬೆಂಚ್ ಮೇಲೆ ಕುಳಿತಿದ್ದಾಗ ಆಕೆಯ ಸಹಪಾಠಿ ಏಕಾಏಕಿ ಬಂದು ವಿದ್ಯಾರ್ಥಿನಿ ತಲೆಗೆ ಗುಂಡಿಕ್ಕಿ ಕೊಲ್ಲುತ್ತಾನೆ ಬಳಿಕ ವಿದ್ಯಾರ್ಥಿ ತಾನು ಸಹ ತಲೆಗೆ ಗುಂಡಿಟ್ಟುಕೊಂಡು ಆತ್ಮಹತ್ಯೆ …

Read More »

ಕೆನಡಾದಲ್ಲಿ ಕನ್ನಡಿಗನ ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು

ಬೆಂಗಳೂರು:37 ವರ್ಷದ ಚಂದನ್ ಕುಮಾರ್ ಹತ್ಯೆಯಾದ ವ್ಯಕ್ತಿ. ಬೆಂಗಳೂರಿನ ನೆಲಮಂಗಲ ಮೂಲದ ತ್ಯಾಮಗೊಂಡ್ಲುವಿನ ನಿವಾಸಿ. ಕಳೆದ 6 ವರ್ಷಗಳಿಂದ ಚಂದನ್ ಕುಮಾರ್ ಕೆನಡಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ 9 ಗಂಟೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚಂದನ್ ಕುಮಾರ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಹಲವು ಗುಂಡುಗಳು ಚಂದನ್ ದೇಹವನ್ನು ಹೊಕ್ಕಿವೆ. ಘಟನಾ ಸ್ಥಳದಲ್ಲೇ ಚಂದನ್ ಸಾವನ್ನಪ್ಪಿದ್ದಾರೆ. ಚಂದನ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಸಾವನ್ನಪ್ಪಿದ್ದಾಗಿ …

Read More »

ಬೆಂಗಳೂರಲ್ಲಿ ಸರಗಳ್ಳರಿಂದ ಬಿಡಿಸಿಕೊಳ್ಳಲು ಹೋಗಿ ಕುಸಿದು ಬಿದ್ದು ಮಹಿಳೆ ಸಾವು!

ಸರಗಳ್ಳರಿಂದ ಬಿಡಿಸಿಕೊಳ್ಳುವಾಗ ಕುಸಿದು ಬಿದ್ದು ಮಹಿಳೆ ಒಬ್ಬರು ಸಾವನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಮನೆಯ ಮುಂದೆ ಕಸ ಗುಡಿಸುತ್ತಿದ್ದಾಗ ಸರಗಳ್ಳರು ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿಯಾಗುತ್ತಿದ್ದರು. ಕಳ್ಳರು ಸ್ಪ್ರೇ ಸಿಂಪಡಿಸಿದ್ದರಿಂದ ಕುಸಿದು ಬಿದ್ದು ಜ್ಯೋತಿ (45) ಸಾವನ್ನಪ್ಪಿದ್ದರೆ. ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More »

ಗೋಕರ್ಣ| ಪ್ರೀತಿ ನಿರಾಕರಣೆ: ಹಲ್ಲೆ ನಡೆಸಿ, ಕೈ ಕುಯ್ದುಕೊಂಡ ಯುವಕ

ಇಲ್ಲಿಯ ಬೇಲೆಹಿತ್ತಲಿನ ಯುವತಿಯೊಬ್ಬರಿಗೆ ಪ್ರೀತಿಸು ಎಂದು ಪೀಡಿಸಿದ ಯುವಕನೊಬ್ಬ, ಯುವತಿ ನಿರಾಕರಿಸಿದಾಗ ಸಿಟ್ಟಿಗೆದ್ದು ಯುವತಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ತಾನೂ ಕೈ ಕುಯ್ದುಕೊಂಡು ಗಾಯ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.ಚಿತ್ರದುರ್ಗದ ನಿವಾಸಿ, ಹಾಲಿ ಡ್ರೈಫ್ರುಟ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೋಹನ ಕುಮಾರ ಎಂ. (28) ಕೈ ಕುಯ್ದುಕೊಂಡ ಯುವಕ. ತಾನು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿಯೇ ಕೆಲಸ ಮಾಡುತ್ತಿದ್ದ ಯುವತಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಯುವತಿ ಕೆಲಸಕ್ಕೆ ಹೋಗುವದನ್ನೇ …

Read More »