Breaking News

Breaking News

ಭಟ್ಕಳ | ವೆಂಕಟಾಪುರ ಹೆದ್ದಾರಿಯಲ್ಲಿ ಕಾರು ಅಪಘಾತ : ಇಬ್ಬರು ಯುವಕರು ಮೃತ್ಯು

ವೆಂಕಟಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ. ಅಪಘಾತದ ವೇಳೆ ಭಟ್ಕಳದ ಆಜಾದ್ ನಗರ ನಿವಾಸಿ ಮೊಹಮ್ಮದ್ ಅಶ್ರಫ್ ರುಕ್ನುದ್ದೀನ್ ಶಿಪಾಯಿ ಅವರ ಪುತ್ರ ಬಿಲಾಲ್ (15) ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿದ್ದ ಕಾರು ಚಾಲನೆ ಮಾಡುತ್ತಿದ್ದ ಆಯಾನ್ (20) ಹೆಚ್ಚಿನ ಚಿಕಿತ್ಸೆಗೆ ಉಡುಪಿಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಶಿರಾಲಿಯಿಂದ ಭಟ್ಕಳದತ್ತ ಕಾರಿನಲ್ಲಿ ಬರುತ್ತಿದ್ದ ಯುವಕರು …

Read More »

ಕಾರವಾರ: ರಿಶೇಲ್ ಆತ್ಮಹತ್ಯೆ ಪ್ರಕರಣ ಕದ್ರಾ PSI ಅಮಾನತು

ಕಾರವಾರ: ಕದ್ರಾ ಯುವತಿ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ಕಾರವಾರ ತಾಲೂಕಿನ ಕದ್ರಾ ಪಿಎಸ್‌ಐ ಸುನೀಲ್ ಬಂಡಿವಡ್ಡರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.ರೀನಾ ಹಾಗೂ ಕ್ರೀಸ್ತೋದ್ ಡಿಸೋಜಾ ದಂಪತಿಯ ಪುತ್ರಿ ರಿಶೇಲ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.ಪ್ರಕರಣದ ಪ್ರಾಥಮಿಕ ಹಂತದಲ್ಲೇ ಅಗತ್ಯ ಕ್ರಮ ಕೈಗೊಳ್ಳದೆ, ಆರೋಪಿಯನ್ನು ಬಂಧಿಸಲು ವಿಫಲರಾದ ಆರೋಪದಡಿ ಕದ್ರಾ ಪೊಲೀಸ್ ಠಾಣೆಯ ಪಿಎಸ್‌ಐ …

Read More »

ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳುವ ಟ್ರಂಪ್‌ ಯತ್ನ ಖಂಡಿಸಿ ಪ್ರತಿಭಟನೆ

ಕೋಪೆನ್‌ಹೆಗನ್‌: ಗ್ರೀನ್‌ಲ್ಯಾಂಡ್‌ ಅನ್ನು ವಶಪಡಿಸಿ ಕೊಳ್ಳುವ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಯತ್ನವನ್ನು ವಿರೋಧಿಸಿ ಸಾವಿರಾರು ಜನರು ಡೆನ್ಮಾರ್ಕ್‌ನ ರಾಜಧಾನಿ ಕೋಪೆನ್‌ಹೆಗನ್‌ನಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ಡೆನ್ಮಾರ್ಕ್‌ ಮತ್ತು ಗ್ರೀನ್‌ಲ್ಯಾಂಡ್‌ ಧ್ವಜ ಹಿಡಿದುಕೊಂಡಿದ್ದರಿಂದ ಕೋಪೆನ್‌ಹೆಗನ್‌ನ ರಸ್ತೆಗಳು ಕೆಂಪು ಮತ್ತು ಬಿಳಿ ಸಮುದ್ರದಂತೆ ಕಾಣುತ್ತಿತ್ತು.ಅಮೆರಿಕ ರಾಯಭಾರ ಕಚೇರಿಯವರೆಗೆ ನಡೆದ ಮೆರವಣಿಗೆಯುದ್ದಕ್ಕೂ ‘ಗ್ರೀನ್‌ಲ್ಯಾಂಡ್‌ ನಮ್ಮದು’ ಎಂಬ ಘೋಷಣೆಗಳು ಮೊಳಗಿದವು. ಕೋಪೆನ್‌ಹೆಗನ್‌, ಆರ್‌ಹಸ್‌, ಅಲ್‌ಬೋರ್ಗ್‌, ಒಡೆನ್ಸೆ ಮತ್ತು ಗ್ರೀನ್‌ಲ್ಯಾಂಡ್‌ ರಾಜಧಾನಿ ನೂಕ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ …

Read More »

ಕುಡಿದ ಮತ್ತಿನಲ್ಲಿ ಪಾನಿಪುರಿ ಅಂಗಡಿಗೆ ಕಾರು ನುಗ್ಗಿಸಿದ ಚಾಲಕ!

ಬೆಂಗಳೂರು:- ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿದ ಚಾಲಕನೊಬ್ಬ ಪಾನಿಪುರಿ ಅಂಗಡಿಗೆ ಕಾರು ನುಗ್ಗಿಸಿದ ಘಟನೆ ಬೆಂಗಳೂರು ನಗರದ ಕಾಮಾಕ್ಷಿಪಾಳ್ಯ ಸಂಚಾರ ವಿಭಾಗ ಠಾಣಾ ವ್ಯಾಪ್ತಿಯ ಬಿಇಎಲ್ ಲೇಔಟ್‌ನಲ್ಲಿ ನಡೆದಿದೆ. KA 03 NE 1782 ನೋಂದಣಿ ಸಂಖ್ಯೆಯ ಕಾರು ಕಳೆದ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಪಾವರಿ ಚಾಟ್ಸ್ ಅಂಗಡಿಗೆ ನುಗ್ಗಿದ್ದು, ಅಂಗಡಿಗೆ ಹಾನಿ ಸಂಭವಿಸಿದೆ.ಕಾರು ಗುದ್ದಿದ ಬಳಿಕ ಚಾಟ್ಸ್ ಅಂಗಡಿ ಮಾಲೀಕರಿಗೆ ಅವಾಚ್ಯ ಶಬ್ದ ಬಳಸಿ …

Read More »

ನೀರಿನ ಬಾಟಲ್ ಮಾರಾಟ ವಿಚಾರಕ್ಕೆ ರೈಲಿನಲ್ಲಿ ಯುವಕನ ಮೇಲೆ ಹಲ್ಲೆ!

ಬೆಂಗಳೂರು:- ಹಾಸನ ಮಾರ್ಗದ ರೈಲಿನಲ್ಲಿ ನೀರಿನ ಬಾಟಲ್ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನ ಮೇಲೆ ಅಮಾನವೀಯ ಹಲ್ಲೆ ನಡೆದ ಘಟನೆ ವರದಿಯಾಗಿದೆ. ಗೊಮ್ಮಟೇಶ್ವರ ರೈಲು ನಿಲ್ದಾಣದ ಬಳಿ ನಡೆದ ಈ ಘಟನೆಯಲ್ಲಿ, ಬಾಟಲ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾನೆ ಎಂಬ ಆರೋಪದ ಮೇಲೆ ರೈಲಿನ ಗುತ್ತಿಗೆ ಫುಡ್ ಡೆಲಿವರಿ ಸಿಬ್ಬಂದಿ ಯುವಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಈ ವೇಳೆ ಯುವಕನ ಬಳಿ ಇದ್ದ ಎಲ್ಲಾ ನೀರಿನ ಬಾಟಲಿಗಳನ್ನು ಹೊರಗೆ …

Read More »

25 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಅಬಕಾರಿ ಡಿಸಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ

ಬೆಂಗಳೂರು: ಲಂಚದ ಹಣಕ್ಕೆ ಕೈಯೊಡ್ಡಿದಾಗಲೇ ಅಬಕಾರಿ ಡಿಸಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ. ಜಗದೀಶ್ ನಾಯಕ್ ಲೋಕಾಯುಕ್ತ ಬಲೆಗೆ ಬಿದ್ದು ಬಂಧಿತರಾಗಿರುವ ಅಬಕಾರಿ ಡಿಸಿ. 25 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅಬಕಾರಿ ಡಿಸಿ ಜಗದೀಶ್ ಅವರನ್ನು ಬಂಧಿಸಿದ್ದಾರೆಮೈಕ್ರೋ ಬ್ರಿವೇರಿ, ಸಿಎಲ್ 7 ಲೈಸನ್ಸ್ ಗೆ 75 ಲಕ್ಷ ರೂಪಾಯಿ ಲಂಚದ ಬೇಡಿಕೆ …

Read More »

ರಸ್ತೆ ಅಪಘಾತ; ಮಾಜಿ ಸಚಿವ ರಾಜೂ ಗೌಡ ಪಾರು

ಯಾದಗಿರಿ: ಮಾಜಿ ಸಚಿವ ರಾಜೂ ಗೌಡ ಅವರು ಪ್ರಯಾಣಿಸುತ್ತಿದ್ದ ಕಾರು ನಗರದ ಗಂಜ್ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಅಪಘಾತಕ್ಕಿಡಾಗಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.ವಿಶಾಖಪಟ್ಟಣ ದಿಂದ ಸೆಲೆಬ್ರಟಿ ಕ್ರಿಕೆಟ್ ಲೀಗ್ ಪಂದ್ಯ ಮುಗಿಸಿ ಹಿಂತಿರುವಾಗ ಅಪಘಾತ ಸಂಭವಿಸಿದೆ.ಟ್ರಕ್ಕೊಂದು ರಾಜು ಗೌಡರ ಕಾರಿಗೆ ಹಿಂದಿನಿಂದ ಗುದ್ದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ರಾಜೂ ಗೌಡ ಅವರಿಗೆ ಸ್ವಲ್ಪ ತರಚಿದ ಗಾಯಗಳಾಗಿವೆ. ಪ್ರಥಮ ಚಿಕಿತ್ಸೆ ಪಡೆದು …

Read More »

ಅಕ್ರಮವಾಗಿ ಸಂಗ್ರಹಿಸಿದ್ದ 101 ಚೀಲ ಪಡಿತರ ರಾಗಿ ವಶ

ಮಧುಗಿರಿ: ಪಟ್ಟಣದ ಬೆಂಕಿಪುರದ 8ನೇ ವಾರ್ಡ್‌ನ ಆಂಜನೇಯ ದೇವಸ್ಥಾನದ ಪಕ್ಕದಲ್ಲಿನ ಕಟ್ಟಡದ ಮೇಲೆ ಬುಧವಾರ ದಾಳಿ ನಡೆಸಿದ ತಹಶೀಲ್ದಾರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು 101 ಚೀಲ ಪಡಿತರ ರಾಗಿ ವಶಪಡಿಸಿಕೊಂಡು ದೂರು ದಾಖಲಿಸಿದ್ದಾರೆ.ಪಡಿತರ ರಾಗಿ ಖರೀದಿಸಿ ಅಕ್ರಮವಾಗಿ ಸಂಗ್ರಹಿಸಿರುವ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಪರಿಶೀಲಿಸಿದ್ದಾರೆ.ಸ್ಥಳದಲ್ಲಿದ್ದ ಟೆಂಪೊ ಚಾಲಕನಿಂದ ಮಾಹಿತಿ ಪಡೆದ ತಹಶೀಲ್ದಾರ್ ಶ್ರೀನಿವಾಸ್, ಆಹಾರ ಶಿರಸ್ತೇದಾರ್ ಶೈಲಜಾ ಮತ್ತು ಆಹಾರ ನಿರೀಕ್ಷಕ ನಸ್ರುದ್ದೀನ್ ಅವರು ರಾಕೇಶ್ ಹಾಗೂ …

Read More »

ಪೊಲೀಸರ ವಿಶೇಷ ಕಾರ್ಯಾಚರಣೆ: 22,500 ರೂ. ದಂಡ ಸಂಗ್ರಹ

ಉಡುಪಿ: ಜಿಲ್ಲೆಯಲ್ಲಿ ಅಕ್ರಮವಾಗಿ ಕಲ್ಲು, ಮಣ್ಣು, ಜಲ್ಲಿ ಮತ್ತು ಮರಳು ಸಾಗಿಸುವ ವಾಹನ ಗಳ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.ಜ. 14ರಂದು ಮಧ್ಯಾಹ್ನ 2ರಿಂದ ಸಂಜೆ 7 ಗಂಟೆವರೆಗೆ ನಡೆದ ಕಾರ್ಯಾಚರಣೆಯಲ್ಲಿ 832 ವಾಹನ ಗಳನ್ನು ಪರಿಶೀಲಿಸಿ, 182 ಕ್ಕೆ ನೋಟಿಸ್‌ ನೀಡಲಾಗಿದೆ. ಓವರ್‌ಲೋಡ್‌ ಹಾಗೂ ಇತರ ಅಪರಾಧಗಳಿಗೆ 66 ವಾಹನಗಳಿಂದ 22,500 ರೂ. ದಂಡ ವಸೂಲಿ ಮಾಡಲಾಗಿದೆ. ಬ್ರಹ್ಮಾವರ ಠಾಣೆ ವ್ಯಾಪ್ತಿಯಲ್ಲಿ ಒಂದು ವಾಹನದ ಮೇಲೆ ಪ್ರಕರಣ …

Read More »

ಕಾಸರಗೋಡು: ಶಂಕಾಸ್ಪದ ರೀತಿ ವೃದ್ಧೆಯ ಶವ ಪತ್ತೆ

ಕಾಸರಗೋಡು: ಕುಂಬಡಾಜೆ ಮವ್ವಾರು ಅಜಿಲ ಎಂಬಲ್ಲಿನ ಮನೆಯೊಂದರಲ್ಲಿ ಪುಷ್ಪಲತಾ ವಿ.ಶೆಟ್ಟಿ (72) ಎಂಬುವರ ‌ಶವ ಶಂಕಾಸ್ಪದವಾಗಿ ಗುರುವಾರ ಪತ್ತೆಯಾಗಿದೆ.ಮುಖದಲ್ಲಿ ಗಾಯಗಳು ಕಂಡುಬಂದಿವೆ. ಅವರು ದಿ.ವೆಂಕಪ್ಪ ಶೆಟ್ಟಿ ಎಂಬುವರ ಪತ್ನಿ. ಮನೆಯಲ್ಲಿ ಒಬ್ಬರೇ ಇದ್ದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿ ಎಂದು ತನಿಖೆ ನಡೆಸುತ್ತಿರುವ ಬದಿಯಡ್ಕ ಪೊಲೀಸರು ತಿಳಿಸಿದ್ದಾರೆ.ಶ್ವಾನದಳ ತಪಾಸಣೆ ನಡೆಸಿದೆ. ಮನೆಯ ಹಿಂಬಾಗಿಲು ತೆರೆದುಕೊಂಡಿತ್ತು. ಪುಷ್ಪಲತಾ ಅವರ ಕೊರಳಲ್ಲಿದ್ದ ಕರಿಮಣಿ ನಾಪತ್ತೆಯಾಗಿದ್ದು, ಕಪಾಟಿನಲ್ಲಿಸಿದ್ದ ಚಿನ್ನಾಭರಣಗಳು ಹಾಗೆಯೇ …

Read More »