Breaking News

Breaking News

ರಾಜ್ಯದ ಈ ಮೂವರು ಬಿಜೆಪಿ ನಾಯಕರನ್ನ ಮುಗಿಸೋ ಪ್ಲಾನ್​! ಚಿಕ್ಕಬಳ್ಳಾಪುರದಲ್ಲಿ ಈ ಶಂಕಿತ ಉಗ್ರ ಅರೆಸ್ಟ್​

ಚಿಕ್ಕಬಳ್ಳಾಪುರ ನಗರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ಬಾಪೂಜಿನಗರದ ಶಬ್ಬೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಟೆಲಿಗ್ರಾಂ ಗ್ರೂಪ್ ಮೂಲಕ ಭಯೋತ್ಪಾದನಾ ಚಟುವಟಿಕೆಗಳ ಕುರಿತು ಚರ್ಚೆ ನಡೆಸುತ್ತಿದ್ದ ಆರೋಪ ಕೇಳಿಬಂದಿದೆ. ಗ್ರೂಪ್‌ನಲ್ಲಿ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ ಯತ್ನಾಳ್, ಸಿ.ಟಿ. ರವಿ ಹಾಗೂ ಪ್ರತಾಪ್ ಸಿಂಹ ಸೇರಿದಂತೆ ಕೆಲವರನ್ನು ಹತ್ಯೆ ಮಾಡುವ ಕುರಿತು ಚರ್ಚೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀಮಂತರನ್ನು ಅಪಹರಿಸಿ ಹಣ ಸಂಗ್ರಹಿಸಿ ವಿಧ್ವಂಸಕ ಕೃತ್ಯಗಳಿಗೆ …

Read More »

ಸಂಪಿಗೆಹಳ್ಳಿ ಕೊಲೆ ಕೇಸ್ ಬೇಧಿಸಿದ ಖಾಕಿ.. ಖಾಲಿ ಸೈಟ್ ಮರ್ಡರ್ ಮಿಸ್ಟರಿ ಏನು ಗೊತ್ತಾ..?

ಬೆಂಗಳೂರು ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಎಂ.ಎಸ್. ನಗರ ಅಗ್ರಹಾರ ಲೇಔಟ್‌ನ ಖಾಲಿ ಸೈಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಶವದ ಮೇಲಿದ್ದ ಬಟ್ಟೆಯ ಟ್ಯಾಗ್ ಹಾಗೂ ಅದರ ಬಿಲ್ ಆಧರಿಸಿ ಮೃತಳ ಗುರುತು ಪತ್ತೆಹಚ್ಚಿ, ಕೊಲೆ ನಡೆದ 20 ದಿನಗಳ ಬಳಿಕ ಪತಿ ಸಾಗರ್ ಚಂದ್ರ ರಾವತ್ (32)ನನ್ನು ಬಂಧಿಸಿದ್ದಾರೆ. ಒಡಿಶಾ ಮೂಲದ ಸಾಗರ್ ಮತ್ತು ಅನುಸೂಯ (28) ಪ್ರೀತಿಸಿ ಮದುವೆಯಾಗಿದ್ದರು. ಆಗಸ್ಟ್ 11ರಂದು …

Read More »

ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ: ಪೋಕ್ಸೊ ಕೇಸ್ ದಾಖಲು

ದಕ್ಷಿಣ ಕನ್ನಡದ ವಿಟ್ಲ ಪಟ್ಟಣದ ಕಾಲೇಜಿನ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬರು ಸೆ.9ರಂದು ಮಗುವಿಗೆ ಜನ್ಮ ನೀಡಿದ್ದಾರೆ. ಸೆ.8ರಂದು ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಕೇರಳ ಮೂಲದ ಅಪ್ರಾಪ್ತ ಬಾಲಕನೊಬ್ಬ ಮೊಬೈಲ್ ಮೂಲಕ ವಿದ್ಯಾರ್ಥಿನಿಗೆ ಪರಿಚಯವಾಗಿ, 2025ರ ಡಿ.21ರಂದು ತನ್ನ ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More »

ಮಣಿಪುರದಲ್ಲಿ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಬಸ್‌ಗೆ ಬೆಂಕಿ: ಲಕ್ಷಾಂತರ ರೂ. ನಷ್ಟ

ಉಡುಪಿ ಸಮೀಪದ ಮಣಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೆಂದೂರು ಕಟ್ಟೆಯಲ್ಲಿ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಬಸ್‌ಗೆ ಬೆಳಗಿನ ಜಾವ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಪೆಟ್ರೋಲ್ ಪಂಪ್ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಿದ್ದಾರೆ. ಬಸ್‌ ಸಮೀಪವೇ ಇನ್ನೆರಡು ಬಸ್‌ಗಳು ಹಾಗೂ ಟೆಂಪೋ ನಿಲ್ಲಿಸಿದ್ದರಿಂದ ದೊಡ್ಡ ಅನಾಹುತದ ಸಾಧ್ಯತೆ ಇತ್ತು. ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಅಪಾಯ ತಪ್ಪಿದೆ. ಘಟನೆಯಲ್ಲಿ ಬಸ್‌ಗೆ ಭಾರೀ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. …

Read More »

ಸಿಲ್ಲಿ ಮ್ಯಾಟರ್ : ಇಬ್ಬರ ಜಗಳದಲ್ಲಿ ಮೂರನೆಯವನ ಬಲಿ

ನೆಲಮಂಗಲ: ಜಗಳ ಬಿಡಿಸಲು ಬಂದಿದ್ದ ಜೀವನ್ (29) ಎಂಬಾತನಿಗೆ ಚಾಕುವಿನಿಂದ ಇರಿದ ಪರಿಣಾಮ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಟಿ. ದಾಸರಹಳ್ಳಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ. ನಾಲ್ಕು ದಿನಗಳ ಹಿಂದೆ ಬಾರ್‌ನಲ್ಲಿ ನಡೆದ ಗಲಾಟೆಯನ್ನು ಜೀವನ್ ಬಿಡಿಸಿ ಕಳುಹಿಸಿದ್ದರು. ಬಳಿಕ ಬಾರ್‌ ಮುಂದೆ ನಿಂತಿದ್ದ ವೇಳೆ ಮಹಮದ್ ಗೌಸ್ ಹಾಗೂ ವಸೀಂ ಬೈಕ್‌ನಲ್ಲಿ ಬಂದು ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಜೀವನ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ …

Read More »

ವಾಯುವಿಹಾರಕ್ಕೆ ಹೋಗಿದ್ದ ಪತ್ರಕರ್ತನ ಮೇಲೆ ಹಲ್ಲೆ

ಬಾಗಲಕೋಟೆ: ಪಟ್ಟಣದ ಎ.ಆರ್. ಹೈಸ್ಕೂಲ್ ಮೈದಾನದಲ್ಲಿ ಬುಧವಾರ ರಾತ್ರಿ ವಾಯುವಿಹಾರಕ್ಕೆ ತೆರಳಿದ್ದ ಪತ್ರಕರ್ತ ಮಹಾಂತೇಶ ಅಂಬಿಗೇರ (49) ಅವರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ. ರಾತ್ರಿ 9.15ರ ಸುಮಾರಿಗೆ ವಿದ್ಯುತ್‌ ಕಡಿತವಾಗಿದ್ದ ವೇಳೆ ಹಲ್ಲೆ ನಡೆಸಿ, ಅವರ ಮೊಬೈಲ್ ಕಸಿದುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ. ಗಾಯಗೊಂಡ ಮಹಾಂತೇಶ ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಮಾಡಿದವರು ಯಾರೆಂಬುದು ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿ ಒಂದು ಜೋಡಿ ಚಪ್ಪಲಿ ಹಾಗೂ ಬಡಿಗೆ …

Read More »

ಶ್ರೀನಿವಾಸ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್‌ ಆರೋಪ: ಒಂಭತ್ತು ಮಂದಿಯ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ನಗರದ ಪಾಂಡೇಶ್ವರದ ಶ್ರೀನಿವಾಸ ವಿಶ್ವವಿದ್ಯಾಲಯದ ಇಬ್ಬರು ಪ್ರಥಮ ವರ್ಷದ ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿದ ಆರೋಪದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆ.19ರಂದು ಇಬ್ಬರು ವಿದ್ಯಾರ್ಥಿಗಳನ್ನು ಬೈಕ್‌ನಲ್ಲಿ ಕರೆದೊಯ್ದು ಮನೆಯೊಂದರ ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನೀರು ಕೇಳಿದಾಗ ಕಲುಷಿತ ನೀರು ನೀಡಿದ್ದು, ಕುಡಿಯದಿದ್ದಾಗ ಮೈಗೆ ಚೆಲ್ಲಿದ್ದಾರೆ ಎನ್ನಲಾಗಿದೆ. ಕ್ಲೀನ್ ಶೇವ್ ಮಾಡಿಕೊಂಡು ಕಾಲೇಜಿಗೆ ಬರಬೇಕು ಹಾಗೂ ಶೂ ಧರಿಸಬಾರದು …

Read More »

1 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಗ್ನಿಶಾಮಕ ಅಧಿಕಾರಿ

ಶಿವಮೊಗ್ಗ: ಶಾಲೆಯ ಹೊಸ ಕಟ್ಟಡಕ್ಕೆ ಅಗ್ನಿಶಾಮಕ ದಳದ ಎನ್‌ಒಸಿ ನೀಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ್ ಕುಮಾರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದೂರುದಾರ ಅನೂಪ್ ನೀಡಿದ ಮಾಹಿತಿಯ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಹಣ ಸ್ವೀಕರಿಸುತ್ತಿದ್ದ ವೇಳೆ ಅಶೋಕ್ ಕುಮಾರ್ ಅವರನ್ನು ಹಣಸಮೇತ ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು …

Read More »

ಬೆಂಗಳೂರು: ಒಂದು ವರ್ಷದಲ್ಲಿ 170ಕ್ಕೂ ಹೆಚ್ಚು ಬಾರಿ ಕಳ್ಳತನ; ಮನೆಗೆಲಸದಾಕೆ ಬಂಧನ

ಬೆಂಗಳೂರು: ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆಗೆಲಸದಾಕೆ ಮಾಲೀಕರಿಗೆ ತಿಳಿಯದಂತೆ ಕಳೆದೊಂದು ವರ್ಷದಲ್ಲಿ 170ಕ್ಕೂ ಹೆಚ್ಚು ಬಾರಿ ಚಿನ್ನಾಭರಣ ಕದ್ದಿದ್ದಾಳೆ ಎನ್ನಲಾಗಿದೆ. ಪರಮೇಶ್ವರಿ ಬಂಧಿತ ಆರೋಪಿ. ಮಡಿವಾಳದ ಸೆಂಟ್ ಥಾಮಸ್ ನಗರದಲ್ಲಿರುವ ಉದ್ಯಮಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಈಕೆ, ಸ್ವಲ್ಪಸ್ವಲ್ಪವಾಗಿ ಚಿನ್ನಾಭರಣ ಕದ್ದಿದ್ದಳು. ಅನುಮಾನಗೊಂಡ ಮಾಲೀಕರು ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಕದ್ದ ಚಿನ್ನವನ್ನು ಮಡಿವಾಳದ ಗಿರವಿ ಅಂಗಡಿಯೊಂದರಲ್ಲಿ ಅಡವಿಟ್ಟಿದ್ದಳು ಎನ್ನಲಾಗಿದ್ದು, ಸುಮಾರು ₹25 ಲಕ್ಷ …

Read More »

ರೌಡಿಗಳೊಂದಿಗೆ ಎಣ್ಣೆ ಪಾರ್ಟಿ ಮಾಡಿದ ಎಎಸ್‌‍ಐ ಅಮಾನತು

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣೆಯ ಎಎಸ್‌ಐ ವೀರೇಂದ್ರ ಅವರನ್ನು ರೌಡಿ ಶೀಟರ್‌ಗಳ ಜೊತೆ ಮದ್ಯಪಾನ ಕೂಟ ಆಯೋಜಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಸುಮಾರು ಒಂದು ವಾರದ ಹಿಂದೆ ಎಮೆದೊಡ್ಡಿ ಸಮೀಪದ ಮುಸ್ಲಾಪುರ ಗ್ರಾಮದ ಬಾರ್‌ನಲ್ಲಿ ವೀರೇಂದ್ರ ಅವರು ರೌಡಿ ಶೀಟರ್‌ಗಳೊಂದಿಗೆ ಪಾರ್ಟಿ ನಡೆಸಿದ್ದು, ತಡರಾತ್ರಿವರೆಗೂ ಜೋರಾಗಿ ಸಂಗೀತ ಹಾಕಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ಮಹಿಳೆಯರು ಬಾರ್‌ ಎದುರು ಪ್ರತಿಭಟನೆ ನಡೆಸಿದ್ದರು. ಈ ಕುರಿತು …

Read More »