Breaking News

Breaking News

ಫ್ರೀಯಾಗಿ ಎಣ್ಣೆ ಕೊಡೋ..- ಬಾರ್‌ನಲ್ಲಿ ನಾಡ ಬಂದೂಕು ಹಿಡಿದು ವ್ಯಕ್ತಿ ಹೈಡ್ರಾಮಾ!

ಬಾರ್ ನಲ್ಲಿ ಫ್ರೀಯಾಗಿ ಮದ್ಯ ಕೊಡಲು ನಿರಾಕರಿಸಿದ ಸಿಬ್ಬಂದಿಗೆ ವ್ಯಕ್ತಿಯೊಬ್ಬ ಬಂದೂಕು ಹಿಡಿದು ಬೆದರಿಸಿರುವ ಶಾಕಿಂಗ್‌ ಘಟನೆ ನಗರದ ಹೊಸಕೋಟೆಯಲ್ಲಿರುವ ಬಾರ್‌ ಒಂದರಲ್ಲಿ ನಡೆದಿದೆ.ಹೊಸಕೋಟೆ ತಾಲೂಕಿನ ಬಂಡಹಳ್ಳಿ ಗ್ರಾಮದ ಬಳಿಯ ಬಾರ್‌ನಲ್ಲಿ ಈ ಘಟನೆ ನಡೆದಿದೆ. ನೆನ್ನೆ‌ ಸಂಜೆ ವಾಹಿದ್ ಖಾನ್ ಎಂಬಾತ ಎಸ್‌ಎಸ್‌ ಬಾರ್‌ ಬಳಿ‌ ಬಂದು ಕ್ಯಾಷಿಯರ್‌ ಬಳಿ ಫ್ರೀಯಾಗಿ ಮದ್ಯ ನೀಡುವಂತೆ ಕೇಳಿದ್ದಾನೆ. ಆದರೆ ಸಿಬ್ಬಂದಿ ಕೊಡದೇ ಹೋಗಿದ್ದಕ್ಕೆ ನಾಡ ಬಂದೂಕು ತಂದು ಬಾರ್‌ ಬಳಿ …

Read More »

ಊಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ

ಹಳೇಹುಬ್ಬಳ್ಳಿ ಗಬ್ಬೂರ ಸರ್ಕಲ್‌ನ ಕಟ್ಟೆ ಮೇಲೆ ಊಟ ಮಾಡುತ್ತಿದ್ದ ವ್ಯಕ್ತಿಗೆ ಮೂವರು ಸೇರಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.ವಿಜಯಪುರದ ಇಂಡಿ ಮೂಲದ ರಾಜು ಹೊಸಮನಿ ಎಂಬಾತನಿಗೆ ಹಲ್ಲೆ ಮಾಡಲಾಗಿದೆ. ಇಂಡಿಯಿಂದ ಕೆಲಸ ಅರಸಿ ಹುಬ್ಬಳ್ಳಿಗೆ ಬಂದಿದ್ದು, ಗಬ್ಬೂರ ಸರ್ಕಲ್‌ನಲ್ಲಿ ರಾತ್ರಿ 11.30ರ ಸುಮಾರಿಗೆ ಹೋಟೆಲ್‌ನಿಂದ ತಂದ ಊಟ ಮಾಡುತ್ತಿದ್ದ ವೇಳೆ ಹಲ್ಲೆ ಮಾಡಲಾಗಿದೆ ಎಂದು ರಾಜು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Read More »

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಸರ ಕಿತ್ತು ಎಸ್ಕೇಪ್! ಆರೋಪಿ ಅರೆಸ್ಟ್

ಬೆಂಗಳೂರು: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಸರಗಳ್ಳನನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಯಶವಂತ್ (26) ಎಂದು ಗುರುತಿಸಲಾಗಿದ್ದು, ಡಿಸೆಂಬರ್ 24 ರಂದು ಈ ಘಟನೆ ಸಂಭವಿಸಿತ್ತು.ಧನಲಕ್ಷೀ ಎಂಬ ಮಹಿಳೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ, ಹೊಂಚು ಹಾಕಿ ಕುಳಿತಿದ್ದ ಆರೋಪಿ ದ್ವಿಚಕ್ರ ವಾಹನದಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. …

Read More »

ಬೆಂಗಳೂರಲ್ಲಿ ಮಹಿಳೆಯನ್ನ ಕೊಡಲಿಯಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದ ಆರೋಪಿ ಆತ್ಮಹತ್ಯೆಗೆ ಶರಣು!

ಬೆಂಗಳೂರಲ್ಲಿ ಮಹಿಳೆಯನ್ನು ಕೊಚ್ಚಿ ಕೊಂದಿದ್ದ ಆರೋಪಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕೋಳೂರಿನಲ್ಲಿ ನಡೆದಿದೆ. ಕೊಡಲಿಂದ ಕೊಚ್ಚಿ ಕೊಂದಿದ್ದ ಆರೋಪಿ ವೀರಭದ್ರಯ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ.ಕೊಳುರಿನಲ್ಲಿ ವೀರಭದ್ರಯ್ಯ (60) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಕಳೆದ ಶನಿವಾರ ದಾಕ್ಷಾಯಿಣಮ್ಮ ಅವರನ್ನು ವೀರಭದ್ರಯ್ಯ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದ. ಮಹಿಳೆಯನ್ನು ಕೊಂದ ಬಳಿಕ ವೀರಭದ್ರಯ್ಯ ಪರಾರಿಯಾಗಿದ್ದ. ಆರೋಪಿಗಾಗಿ ಪೊಲೀಸರು ಹುಡುಕಾಡಿದ್ದರು. ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಠಾಣೆ ಪೊಲೀಸ್ರು ಭೇಟಿ ನೀಡಿ …

Read More »

ಈ ರೀತಿಯ ಪೊಲೀಸ್ ಮಹಾನಿರ್ದೇಶಕರ (DGP) ಹಾಗೂ ಸರ್ಕಾರದ ಆದೇಶಗಳಿಗೆ ಇಂದು ಕವಡೆ ಕಾಸಿನಷ್ಟು ಬೆಲೆಯೂ ಉಳಿದಿಲ್ಲ…?

ಡಿಜಿ ಆದೇಶಗಳನ್ನು ಗಾಳಿಗೆ ತೂರಿ, ಕೆಲ ಟ್ರಾಫಿಕ್ ಪೊಲೀಸರು ಖಡಕ್ ಅಧಿಕಾರಿಯ ಹೆಸರನ್ನೇ ಬಂಡವಾಳ ಮಾಡಿಕೊಂಡು ತಮ್ಮ ಆಟವನ್ನಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಜನರ ಮುಂದೆ ನಿಂತಿದೆ.ರಸ್ತೆಯಲ್ಲಿ ಸಿಕ್ಕಸಿಕ್ಕ ವಾಹನ ಸವಾರರ ಗೋಳು ಕೇಳೋರು ಯಾರು..? ಗಸ್ತು ತಿರುಗಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾದವರು ಮಾಡಿದ್ದೇನು ಗೊತ್ತಾ…? ಪೊಲೀಸ್ ಕಂಡ ಕಥೆಗಳು… ಕಡ್ಡಾಯವಾಗಿ ವಾರದ ರಜೆ ನೀಡಬೇಕು ಎಂಬ ಆದೇಶ ಬಂದು ಸಾಕಷ್ಟು ವರ್ಷಗಳೇ ಕಳೆದರೂ, ಅದು ಇಂದಿಗೂ ಕಾಗದದಲ್ಲೇ ಉಳಿದಿದೆ. …

Read More »

ಹಲವು ದಿನಗಳಿಂದ ರೈತರ ನಿದ್ದೆಗೆಡಿಸಿದ್ದ ಅಡಿಕೆ ಕಳ್ಳರು ಅರೆಸ್ಟ್

ಬೆಂಗಳೂರು: ಹಲವು ದಿನಗಳಿಂದ ರೈತರ ನಿದ್ದೆಗೆಡಿಸಿದ್ದ ಮೂವರು ಅಡಿಕೆ ಕಳ್ಳರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಕುದೂರು ಸಮೀಪದ ಬಿಸ್ಕೂರು, ಕೋಡಿಹಳ್ಳಿ ಗ್ರಾಮಸ್ಥರು ಸೋಮವಾರ ರಾತ್ರಿ ಮೂವರು ಅಡಿಕೆ ಕಳ್ಳರನ್ನು ಹಿಡಿದಿದ್ದಾರೆ. ತಿಪ್ಪಸಂದ್ರದ ಪ್ರವೀಣ್(19), ಬೆಂಗಳೂರಿನ ಮತ್ತಿಕೆರೆಯ ಕಿರಣ್(19), ನಾಗೇಂದ್ರ(45) ಬಂಧಿತ ಆರೋಪಿಗಳು.ಪ್ರಕರಣದ ನಾಲ್ಕನೇ ಆರೋಪಿ ಬೆಂಗಳೂರಿನ ಯಶವಂತಪುರದ ಪುನೀತ್(20) ಪರಾರಿಯಾಗಿದ್ದಾನೆ. ಕಳೆದ ಒಂದು ವಾರದಿಂದ ಕೋಡಿಹಳ್ಳಿ, ಬಿಸ್ಕೂರು ಗ್ರಾಮಗಳ ಸುತ್ತಮುತ್ತ ಪ್ರದೇಶಗಳಲ್ಲಿ ರಾತ್ರಿ ವೇಳೆ ತೋಟಕ್ಕೆ ನುಗ್ಗಿ ಬಾಳೆಗೊನೆ, ಅಡಿಕೆ …

Read More »

ಕಾರವಾರ: ಅಕ್ರಮವಾಗಿ ಸಾಗಿಸುತ್ತಿದ್ದ ₹1.26 ಲಕ್ಷ ಮೌಲ್ಯದ ಗೋವಾ ಮದ್ಯ ವಶ

ಜೀಪ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹1.26ಲಕ್ಷ ಮೌಲ್ಯದ ಗೋವಾ ಮದ್ಯವನ್ನು ತಾಲ್ಲೂಕಿನ ಚೆಂಚೆವಾಡಾದ ಐಸ್ ಫ್ಯಾಕ್ಟರಿ ಸಮೀಪ ಸೋಮವಾರ ರಾತ್ರಿ ಚಿತ್ತಾಕುಲ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಗೋವಾದಿಂದ ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ವಿವಿಧ ಬ್ರ್ಯಾಂಡುಗಳ ಮದ್ಯ ದಾಸ್ತಾನನ್ನು ವಶಕ್ಕೆ ಪಡೆಯಲಾಗಿದೆ.ಸಾಗಾಟ ಮಾಡುತ್ತಿದ್ದ ಹುಬ್ಬಳ್ಳಿಯ ನೆಹರು ನಗರದ ನಾರಾಯಣ ಗಜಾನನ ದಲಬಂಜನ್ (30) ಎಂಬಾತನನ್ನು ಬಂಧಿಸಲಾಗಿದೆ. ಆತ ಸಾಗಾಟಕ್ಕೆ ಬಳಸಿದ್ದ ವಾಹನ ಮತ್ತು ಮದ್ಯ ದಾಸ್ತಾನನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

Read More »

ಭೀಕರ ರಸ್ತೆ ಅಪಘಾತ, ಇಬ್ಬರ ದುರ್ಮರಣ

ಹನೂರು: ಕೆ.ಎಸ್‌.ಆರ್‌.ಟಿ.ಸಿ. ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಬೈಕ್‌ ಸವಾರರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಮಹದೇಶ್ವರ ಬೆಟ್ಟದ ಮುಖ್ಯರಸ್ತೆಯಲ್ಲಿರುವ ಮೂಕಳ್ಳಿ ಮಾರಮ್ಮ ದೇವಾಲಯದ ಬಳಿ ಜ.13ರ ಮಂಗಳವಾರ ನಡೆದಿದೆ.ತಾಲೂಕಿನ ಪೊನ್ನಾಚಿ ಸಮೀಪದ ರಾಮೇಗೌಡನಹಳ್ಳಿಯ ಶಿವಪ್ಪ (21), ಸತೀಶ (24) ಮೃತ ಬೈಕ್‌ ಸವಾರರು.ಬೈಕ್‌ ಗೆ ಕೆ.ಎಸ್‌.ಆರ್‌.ಟಿ.ಸಿ. ಬಸ್ ಡಿಕ್ಕಿ ಹೊಡೆದು ಅಪಘಾತವಾಗುತ್ತಿದ್ದಂತೆ ಸ್ಥಳದಿಂದ ಬಸ್ ಚಾಲಕ, ನಿರ್ವಾಹಕ ನಾಪತ್ತೆಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ …

Read More »

ಇರಾನ್‌ನಲ್ಲಿ ಹೆಚ್ಚಿದ ಉದ್ವಿಗ್ನತೆ: ಸರ್ಕಾರದ ವಿರುದ್ಧ ಧ್ವನಿ ಎತ್ತಿದ 26ರ ಹರೆಯದ ಯುವಕನಿಗೆ ಗಲ್ಲು ಶಿಕ್ಷೆ !

ವ್ಯಾಪಕವಾದ ಆಡಳಿತ ವಿರೋಧಿ ಪ್ರದರ್ಶನಗಳಿಗೆ ಸಂಬಂಧಿಸಿದಂತೆ ಸಾಮೂಹಿಕ ಬಂಧನಗಳ ನಂತರ ಇರಾನ್ ತನ್ನ ಮೊದಲ ಪ್ರತಿಭಟನಾಕಾರನನ್ನು ಗಲ್ಲಿಗೇರಿಸಲು ಸಜ್ಜಾಗಿದೆ ಎಂದು ಹೇಳಲಾಗಿದೆ.ಕಳೆದ ವಾರ ರಾಜಧಾನಿ ಟೆಹ್ರಾನ್ ಬಳಿಯ ಕರಾಜ್ ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿಸಲ್ಪಟ್ಟ 26 ವರ್ಷದ ಎರ್ಫಾನ್ ಸೊಲ್ಟಾನಿ ಅವರನ್ನು ಸರಿಯಾದ ವಿಚಾರಣೆ ಸಿಗದೆ ಬುಧವಾರ ಗಲ್ಲಿಗೇರಿಸಲಾಗುವುದು ಎಂದು ಮಾನವ ಹಕ್ಕುಗಳ ಗುಂಪುಗಳು ತಿಳಿಸಿವೆ.”ಆತನಿಗೆ ಮರಣದಂಡನೆ ವಿಧಿಸಲಾಗಿದೆ ಮತ್ತು ಜನವರಿ 14 ರಂದು ಶಿಕ್ಷೆ ಜಾರಿಯಾಗಲಿದೆ ಎಂದು …

Read More »

ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿಗೆ 3 ತಿಂಗಳು ಜೈಲು ಶಿಕ್ಷೆ.!

ಬೆಂಗಳೂರಿನ ಹಿರಿಯ ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರು ಹೂಡಿದ್ದ ಸಿವಿಲ್ ಪ್ರಕರಣದಲ್ಲಿ, ನ್ಯಾಯಾಲಯ ನೀಡಿದ್ದ ಆದೇಶವನ್ನು ಪಾಲಿಸದ ಕಾರಣ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿಗೆ ಬೆಂಗಳೂರು ಗ್ರಾಮಾಂತರ ಸಿವಿಲ್ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ರವಿಕಾಂತೇಗೌಡ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ಸಲೀಂ ಈ ಕುರಿತಂತೆ ಆದೇಶಿಸಿದ್ದಾರೆ. 2023ರ ಸೆಪ್ಟೆಂಬರ್ 8ರಂದು …

Read More »