Breaking News

ಹಲವು ದಿನಗಳಿಂದ ರೈತರ ನಿದ್ದೆಗೆಡಿಸಿದ್ದ ಅಡಿಕೆ ಕಳ್ಳರು ಅರೆಸ್ಟ್

ಬೆಂಗಳೂರು: ಹಲವು ದಿನಗಳಿಂದ ರೈತರ ನಿದ್ದೆಗೆಡಿಸಿದ್ದ ಮೂವರು ಅಡಿಕೆ ಕಳ್ಳರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಕುದೂರು ಸಮೀಪದ ಬಿಸ್ಕೂರು, ಕೋಡಿಹಳ್ಳಿ ಗ್ರಾಮಸ್ಥರು ಸೋಮವಾರ ರಾತ್ರಿ ಮೂವರು ಅಡಿಕೆ ಕಳ್ಳರನ್ನು ಹಿಡಿದಿದ್ದಾರೆ. ತಿಪ್ಪಸಂದ್ರದ ಪ್ರವೀಣ್(19), ಬೆಂಗಳೂರಿನ ಮತ್ತಿಕೆರೆಯ ಕಿರಣ್(19), ನಾಗೇಂದ್ರ(45) ಬಂಧಿತ ಆರೋಪಿಗಳು.ಪ್ರಕರಣದ ನಾಲ್ಕನೇ ಆರೋಪಿ ಬೆಂಗಳೂರಿನ ಯಶವಂತಪುರದ ಪುನೀತ್(20) ಪರಾರಿಯಾಗಿದ್ದಾನೆ. ಕಳೆದ ಒಂದು ವಾರದಿಂದ ಕೋಡಿಹಳ್ಳಿ, ಬಿಸ್ಕೂರು ಗ್ರಾಮಗಳ ಸುತ್ತಮುತ್ತ ಪ್ರದೇಶಗಳಲ್ಲಿ ರಾತ್ರಿ ವೇಳೆ ತೋಟಕ್ಕೆ ನುಗ್ಗಿ ಬಾಳೆಗೊನೆ, ಅಡಿಕೆ ಕಲಿಯುತ್ತಿದ್ದರು. ಸೋಮವಾರ ಆರೋಪಿಗಳನ್ನು ಹಿಡಿದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *