Breaking News

Breaking News

ಊಟ ಖಾಲಿ ಎಂದಿದ್ದಕ್ಕೆ ಹಲ್ಲೆ ಮಾಡಿದ ಜೈಲು ವಾರ್ಡರ್: ಚಿಕಿತ್ಸೆ ಫಲಿಸದೇ ಡಾಬಾ ಮಾಲೀಕ ಬಲಿ

ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್ ಬಳಿ ಊಟ ಖಾಲಿಯಾಗಿದೆ ಎಂದಿದ್ದಕ್ಕೆ ಡಾಬಾ ಮಾಲೀಕ ಮೆಹಬೂಬಸಾಬ್ ಪಟ್ಟೆವಾಲೆ (58) ಮೇಲೆ ಪರಪ್ಪನ ಅಗ್ರಹಾರ ಜೈಲಿನ ಹೆಡ್ ವಾರ್ಡರ್ ಅಡಿವೆಪ್ಪ ಹಲ್ಲೆ ನಡೆಸಿದ್ದಾನೆ. ಸೆ.17ರಂದು ನಡೆದ ಹಲ್ಲೆಯಲ್ಲಿ ಮೆಹಬೂಬಸಾಬ್ ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಸೆ.24ರಂದು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಲಾದಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಹೆಡ್ …

Read More »

ಕ್ರಿಮಿನಾಶಕ ಕಾಳು ಸೇವಿಸಿ ಗೃಹಿಣಿ ಆತ್ಮಹತ್ಯೆ: ಮೂವರ ವಿರುದ್ಧ ಪ್ರಕರಣ ದಾಖಲು, ಓರ್ವನ ಬಂಧನ

ಹುಣಸೂರು ತಾಲೂಕಿನ ಲಕ್ಕನಕೊಪ್ಪಲು ಗ್ರಾಮದಲ್ಲಿ ಗೃಹಿಣಿ ಸಿಂಧೂ (26) ಕ್ರಿಮಿನಾಶಕ ಮಾತ್ರೆ ಸೇವಿಸಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಲ್.ಕೆ. ವಿಕಾಸ್ ಎಂಬಾತನನ್ನು ಬಿಳಿಕೆರೆ ಪೊಲೀಸರು ಬಂಧಿಸಿದ್ದಾರೆ. ಪತಿ ಶ್ರೀಕಾಂತ್ ನೀಡಿದ ದೂರಿನ ಪ್ರಕಾರ, ಸಿಂಧೂ ಹಾಗೂ ವಿಕಾಸ್ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಸಾವಿಗೂ ಮುನ್ನ ಸಿಂಧೂ, ತನ್ನ ಸಾವಿಗೆ ವಿಕಾಸ್ ಕಾರಣ ಎಂದು ತಿಳಿಸಿದ್ದರು. ಕ್ರಿಮಿನಾಶಕ ಸೇವಿಸುವ ಮುನ್ನ ವಿಕಾಸ್ ಜೊತೆ ವಿಡಿಯೋ …

Read More »

ಬಾಂಗ್ಲಾ ಯುವತಿಯನ್ನು ಮದುವೆಯಾಗಿದ್ದ ‘ಹೈಟೆಕ್‌ ಕಳ್ಳ’

ಬೆಂಗಳೂರು: ಬಿ.ಟೆಕ್‌ ವ್ಯಾಸಂಗ ಮಾಡುತ್ತಿದ್ದಾಗಲೇ ಕಳ್ಳತನಕ್ಕೆ ಇಳಿದಿದ್ದ ಹೈಟೆಕ್‌ ಕಳ್ಳನೊಬ್ಬ ವಿಮಾನದಲ್ಲಿ ನಗರಕ್ಕೆ ಬಂದು ಮನೆಗಳ್ಳತನ ಮಾಡಿ ಮತ್ತೆ ವಿಮಾನದಲ್ಲೇ ಪರಾರಿಯಾಗುತ್ತಿದ್ದ ಪ್ರಕರಣವನ್ನು ವಿಲ್ಸನ್‌ ಗಾರ್ಡನ್‌ ಠಾಣೆ ಪೊಲೀಸರು ಭೇದಿಸಿದ್ದಾರೆ. ತೆಲಂಗಾಣದ ನಲ್ಲೂರು ನಿವಾಸಿ ವಿನೋದ್‌ ಕುಮಾರ್‌ (32) ಆರೋಪಿಯಾಗಿದ್ದು, ಬೆಂಗಳೂರಿಗೆ ವಿಮಾನದಲ್ಲಿ ಬಂದು ಕಳ್ಳತನ ಮಾಡಿ ಹೈದರಾಬಾದ್‌ಗೆ ವಾಪಸ್‌ ತೆರಳುತ್ತಿದ್ದ. ದೆಹಲಿಗೆ ತೆರಳಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿಚಾರಣೆ …

Read More »

ಎಂಡಿಎಂಎ ಮಾರಾಟಕ್ಕೆ ಯತ್ನ – 23.20 ಗ್ರಾಂ ಮಾದಕ ವಸ್ತು ವಶ

ಮಂಗಳೂರು: ಮಾದಕ ದ್ರವ್ಯ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಸುಭಾಷ್ (36) ಎಂಬಾತನನ್ನು ಬಂಧಿಸಿದ್ದಾರೆ. ಅರ್ಕುಳ ಜಂಕ್ಷನ್ ಬಳಿ ಸೆ.23ರಂದು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ. ಆರೋಪಿಯಿಂದ ₹1.15 ಲಕ್ಷ ಮೌಲ್ಯದ 23.20 ಗ್ರಾಂ ಎಂಡಿಎಂಎ, ಎರಡು ಮೊಬೈಲ್‌ಗಳು ಹಾಗೂ ತೂಕದ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮಾದಕ ದ್ರವ್ಯ ಮಾರಾಟ ಜಾಲದಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂಬ …

Read More »

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸುವ ಜಾಲ ಪತ್ತೆ, ಮೂವರ ಬಂಧನ

ಬೆಂಗಳೂರು: ಕಳ್ಳತನವಾದ ದುಬಾರಿ ಕಾರುಗಳಿಗೆ ನಕಲಿ ಆರ್‌ಸಿ ಹಾಗೂ ಬ್ಯಾಂಕ್ ಎನ್‌ಒಸಿ ಸೃಷ್ಟಿಸುತ್ತಿದ್ದ ಜಾಲವನ್ನು ವಿಲ್ಸನ್‌ಗಾರ್ಡನ್ ಠಾಣೆ ಪೊಲೀಸರು ಪತ್ತೆಹಚ್ಚಿ ಮೂವರನ್ನು ಬಂಧಿಸಿದ್ದಾರೆ. ಸಂತೋಷ್, ಪ್ರಭಾಕರ್ ಹಾಗೂ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಸೋಮೇಶ್ ಬಂಧಿತರು. ಆರೋಪಿಗಳಿಂದ ₹2 ಕೋಟಿ ಮೌಲ್ಯದ 10 ಕಾರುಗಳು, ದ್ವಿಚಕ್ರ ವಾಹನ, ನಕಲಿ ಆರ್‌ಸಿ ಕಾರ್ಡ್‌ಗಳು, ಬ್ಯಾಂಕ್ ಎನ್‌ಒಸಿ ಪತ್ರಗಳು, ನಕಲಿ ಮುದ್ರೆಗಳು, ಕಂಪ್ಯೂಟರ್ ಹಾಗೂ ಡಿಜಿಟಲ್ ಪ್ರಿಂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ದುಬಾರಿ ಫಾರ್ಚೂನರ್ ಕಾರು ಮಾರಾಟದ …

Read More »

ಪಡುವನ್ನೂರು: ಅಕ್ರಮ ದನ ಸಾಗಾಟ; ಪ್ರಕರಣ ದಾಖಲು

ಪುತ್ತೂರು: ಪಡುವನ್ನೂರು ಗ್ರಾಮದ ಪದಡ್ಕದಲ್ಲಿ ಪಿಕಪ್ ವಾಹನದಲ್ಲಿ ದನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಪುತ್ತೂರು ಗ್ರಾಮಾಂತರ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಕಾಸರಗೋಡಿನ ಸೀತಾರಾಮ ಹಾಗೂ ಮುಳಿಯಾರಿನ ಕೇಲು ಮಣಿಯಾಣಿ ಎಂದು ಗುರುತಿಸಲಾಗಿದೆ. ಪೊಲೀಸರು ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ ಯಾವುದೇ ದಾಖಲೆಗಳಿಲ್ಲದೆ ದನ ಸಾಗಿಸುತ್ತಿರುವುದು ಪತ್ತೆಯಾಗಿದೆ. ದನವನ್ನು ದರ್ಬೆತ್ತಡ್ಕದ ಕೊಟ್ಟಿಗೆಯಿಂದ ದೇವಸ್ಯ ಸಮೀಪದ ಕೋರಮೂಲೆ ಕಡೆಗೆ ಕೊಂಡೊಯ್ಯಲಾಗುತ್ತಿತ್ತು ಎಂದು ಆರೋಪಿಗಳು ತಿಳಿಸಿದ್ದಾರೆ. ಈ ಕುರಿತು …

Read More »

ತುಮಕೂರಲ್ಲಿ ಭೀಕರ ಕೊಲೆ : ಮಾಜಿ ಗಂಡನಿಂದಲೇ ಪತ್ನಿಯ ಪ್ರಿಯಕರನ ಭೀಕರ ಕೊಲೆ!

ತುಮಕೂರು: ಮಾಜಿ ಗಂಡನಿಂದಲೇ ಪತ್ನಿಯ ಪ್ರಿಯಕರನ ಭೀಕರ ಕೊಲೆ ನಡೆದಿರುವ ಘಟನೆ ನಗರದ ಜನತಾ ಕಾಲೋನಿಯಲ್ಲಿ ನಡೆದಿದೆ. 26 ವರ್ಷದ ದಸ್ತಗೀರ್ ಎಂಬಾತ ಕೊಲೆಯಾಗಿದ್ದು, 36 ವರ್ಷದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಮಹಿಳೆ ಗಂಡನಿಂದ ವಿಚ್ಛೇದನ ಪಡೆದು ದಸ್ತಗೀರ್ ಜೊತೆ ವಾಸಿಸುತ್ತಿದ್ದಳು. ಸೆ.16ರಂದು ಮಹಿಳೆಯೊಂದಿಗೆ ಗಲಾಟೆ ವೇಳೆ ಅಡ್ಡ ಬಂದ ದಸ್ತಗೀರ್‌ಗೆ ಗೌಸ್ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ದಸ್ತಗೀರ್ ಮೃತಪಟ್ಟಿದ್ದಾನೆ. ಗೌಸ್ ಹಾಗೂ ದಸ್ತಗೀರ್ ಪರಿಚಯಸ್ಥರಾಗಿದ್ದು, ಇಬ್ಬರೂ …

Read More »

ಮಾದಕ ವಸ್ತು ಪ್ರಕರಣ: ಉಡುಪಿ ಪೊಲೀಸರ ಬೃಹತ್ ಕಾರ್ಯಾಚರಣೆ; 9 ಮಂದಿ ಬಂಧನ

ಉಡುಪಿ: ಶಿರ್ವ ಹಾಗೂ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 9 ಮಂದಿಯನ್ನು ಬಂಧಿಸಿ, ಗಾಂಜಾ, ಮೆಥಾಂಫೆಟಮೈನ್, ನಗದು ಹಾಗೂ ವಾಹನಗಳು ಸೇರಿದಂತೆ ₹16.01 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಿರ್ವ ಠಾಣಾ ವ್ಯಾಪ್ತಿಯಲ್ಲಿ 8 ಮಂದಿಯನ್ನು ಬಂಧಿಸಿ, 1.35 ಕೆಜಿ ಗಾಂಜಾ, 32.74 ಗ್ರಾಂ ಮೆಥಾಂಫೆಟಮೈನ್, ಎರಡು ಕಾರು, ಸ್ಕೂಟರ್, 9 ಮೊಬೈಲ್‌ಗಳು ಹಾಗೂ ₹75,010 ನಗದು ಜಪ್ತಿ ಮಾಡಲಾಗಿದೆ. ಆರೋಪಿಗಳು ಕೇರಳದ …

Read More »

ಡ್ಯಾನ್ಸ್ ಮಾಡಬೇಡ ಎಂದಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಕೊಪ್ಪಳ: ಡ್ಯಾನ್ಸ್ ಮಾಡಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ 16 ವರ್ಷದ ವಿದ್ಯಾರ್ಥಿನಿ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ತಾಲೂಕಿನ ಅಗಳಗೇರಿ ಗ್ರಾಮದಲ್ಲಿ ನಡೆದಿದೆ. ಡ್ಯಾನ್ಸ್ ಮಾಡದಂತೆ ಪೋಷಕರು ಬುದ್ಧಿವಾದ ಹೇಳಿದ್ದರಿಂದ ಮನನೊಂದ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

Read More »

ಬೆಂಗಳೂರಲ್ಲಿ ಉದ್ಯಮಿಯ ಭೀಕರ ಕೊಲೆ – ಅಂಗಡಿಯೊಳಗೆ ನುಗ್ಗಿ ಕೊಲೆಗೈದ ದುಷ್ಕರ್ಮಿ

ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೃಹೋಪಯೋಗಿ ವಸ್ತುಗಳ ಮಳಿಗೆ ನಡೆಸುತ್ತಿದ್ದ ರಾಜು ಸಿಂಗ್ ಎಂಬ ಉದ್ಯಮಿಯನ್ನು ಅಂಗಡಿಯೊಳಗೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಜೆ.ಪಿ.ನಗರ 7ನೇ ಹಂತದ ಗಂಗಾ ಇಂಡಸ್ಟ್ರೀಸ್‌ನ ಮೊದಲ ಮಹಡಿಯಲ್ಲಿ ರಾತ್ರಿ 7.30ರ ಸುಮಾರಿಗೆ ಘಟನೆ ನಡೆದಿದೆ. ಅಂಗಡಿಯಲ್ಲಿ ರಾಜು ಸಿಂಗ್ ಒಬ್ಬರೇ ಇದ್ದಾಗ ಒಳನುಗ್ಗಿದ ದುಷ್ಕರ್ಮಿ ಮಾರಕಾಸ್ತ್ರದಿಂದ ಅವರ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ರಾಜು ಸಿಂಗ್ ಕಳೆದ 30 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಘಟನೆ …

Read More »