Breaking News

Breaking News

ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿ ಸಾವು

ಉಡುಪಿ: ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸಂಭವಿಸಿದೆ.ಕೊರಂಗ್ರಪಾಡಿಯ ಪೌಲ್‌ ಡಿಸಿಲ್ವಾ (55) ಮೃತರು. ಮೂರ್ಛೆ ಕಾಯಿಲೆಯಿಂದ ಬಳಲುತ್ತಿದ್ದ ಇವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಿ.18ರಂದು ಬೆಳಗ್ಗೆ ಉಪಹಾರ ಮಾಡಿ ಬಹಿರ್ದೆಸೆಗೆಂದು ಹೊರಗೆ ಹೋಗಿ ಬರುತ್ತೇನೆ ಎಂದು ಮನೆಯ ಹೊರಗೆ ಹೋಗಿದ್ದು ಒಂದು ಗಂಟೆಯಾದರೂ ಮನೆಗೆ ಬಂದಿರಲಿಲ್ಲ.ಅವರ ಪತ್ನಿ ಹುಡುಕಿಕೊಂಡು ಹೋದಾಗ ಪಾಪನಾಶಿನಿ ನದಿ ತೀರದಲ್ಲಿ ಕವಚಿ ಬಿದ್ದು ತೇಲುತ್ತಿರುವ ದೇಹ ಕಂಡಿದ್ದು, ನೋಡಿದಾಗ ಪೌಲ್ …

Read More »

ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದ ಕಿಡಿಗೇಡಿ ಅರೆಸ್ಟ್

ಮಂಗಳೂರು ಜಂಕ್ಷನ್ ಸಮೀಪ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಲ್ಲು ತೂರಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ರೈಲ್ವೆ ರಕ್ಷಣಾ ಪಡೆ(ಆರ್.ಪಿ.ಎಫ್.) ಪೊಲೀಸರು ಆರೋಪಿಯನ್ನು ಬಂಧಿಸಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.ಸುಬ್ಜಿತ್ ಮಲ್ಲಿಕ್(23) ಬಂಧಿತ ಆರೋಪಿ. ಡಿಸೆಂಬರ್ 8ರಂದು ಮಂಗಳೂರು ಜಂಕ್ಷನ್ ಸಮೀಪ ರೈಲು ಸಂಖ್ಯೆ 20645 ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದು, ರೈಲಿನ ಕಿಟಕಿ ಗಾಜುಗಳಿಗೆ ಹಾನಿಯಾಗಿತ್ತು. ವಿಶೇಷ ಆರ್.ಪಿ.ಎಫ್. …

Read More »

ಕಾರ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

ಕಾರ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಹೆಚ್‌ಎಎಲ್ ರಸ್ತೆಯಲ್ಲಿ ತಡರಾತ್ರಿ ಘಟನೆ ನಡೆದಿದೆ.ಕಾರ್ ಡಿಕ್ಕಿಯಾಗಿ 60 ವರ್ಷದ ಜಯಪಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರ್ ಚಾಲಕವನ್ನು ವಶಕ್ಕೆ ಪಡೆಯಲಾಗಿದೆ.ಕಾರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಜೆಬಿ ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಜೈಲು ಸಿಬ್ಬಂದಿಗಳಿಂದಲೇ ದಾಳಿ: ಮೊಬೈಲ್, ಸಿಮ್ ಕಾರ್ಡ್ ಗಳು ಪತ್ತೆ

ಶಿವಮೊಗ್ಗದ ಕೇಂದ್ರ ಕಾರಾಗೃಹದ ಮೇಲೆ ಜೈಲು ಸಿಬ್ಬಂದಿಗಳೇ ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.ಕೆಲ ದಿನಗಳ ಹಿಂದೆ ಜೈಲಿನಲ್ಲಿ ಗಾಂಜಾ ಸೇರಿದಂತೆ ಹಲವಾರು ನಿಷೇಧಿತ ವಸ್ತುಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಕಾರಾಗೃಹ ಸಿಬ್ಬಂದಿಗಳೇ ದಿಢೀರ್ ಆಗಿ ಜೈಲಿನಲ್ಲಿ ದಾಳಿ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ.ದಾಳಿ ವೇಳೆ ಮೂರು ಮೊಬೈಲ್ ಗಳು, ನಾಲ್ಕು ಸಿಮ್ ಕಾರ್ಡ್, ಮೂರು ಡೇಟಾ ಕೇಬಲ್, ಎರಡು ಇಯರ್ ಫೋನ್, …

Read More »

ಬಳ್ಳಾರಿಯಲ್ಲಿ ಇ.ಡಿ ಅಧಿಕಾರಿಗಳ ದಾಳಿ

ಬಳ್ಳಾರಿಯ ಎಪಿಎಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯ ಮಾರುತಿ ನಗರದ ನಿವಾಸಿ ಹಿತೇಶ್‌ ಜೈನ್‌ ಎಂಬುವವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಬೆಳಿಗ್ಗೆಯೇ ಹಿತೇಶ್‌ ಜೈನ್ ನಿವಾಸಕ್ಕೆ ತೆರಳಿದ್ದ ಇ.ಡಿ ಅಧಿಕಾರಿಗಳ ಒಂದು ತಂಡ ಪರಿಶೀಲನೆ ಆರಂಭಿಸಿತು ಎಂದು ಗೊತ್ತಾಗಿದೆ.ಹಿತೇಶ್‌ ಜೈನ್‌ ಹಿನ್ನೆಲೆ ಏನು, ಯಾವ ವೃತ್ತಿ ಅಥವಾ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ. ದಾಳಿಗೆ ನಿಖರವಾದ ಕಾರಣಗಳು ಗೊತ್ತಾಗಿಲ್ಲ. ಇ.ಡಿ ಅಧಿಕಾರಿಗಳು ಸ್ಥಳೀಯ …

Read More »

ಹಾಸನ: ಅಪ್ರಾಪ್ತ ಮಗನಿಗೆ ಚಲಾಯಿಸಲು ಕಾರು ಕೊಟ್ಟ ತಂದೆಗೆ ₹25 ಸಾವಿರ ದಂಡ

ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಚಲಾಯಿಸಲು ವಾಹನ ನೀಡಿದ್ದ ತಂದೆಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಎಂ.ಎಸ್. ಶಶಿಕಲಾ ಅವರು ₹ 25 ಸಾವಿರ ದಂಡ ವಿಧಿಸಿದ್ದಾರೆ.ಡಿಸೆಂಬರ್ 14 ರಂದು ಮಾದಿಹಳ್ಳಿ ಹೋಬಳಿ ಇ. ಹೊಸಳ್ಳಿ ಗ್ರಾಮದ 15 ವರ್ಷದ ಯೋಗಿನ್ ತನ್ನ ತಂದೆಗೆ ಸೇರಿದ ಮಾರುತಿ ಆಲ್ಟೋ ಕಾರನ್ನು ಪಟ್ಟಣದ ನೆಹರುನಗರದಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ.ಈ ವೇಳೆ ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ಪರಿಶೀಲಿಸಿದ್ದು, ಯೋಗಿನ್‌ ತಂದೆ ಜಯಣ್ಣ ವಿರುದ್ಧ ಪ್ರಕರಣ ದಾಖಲಿಸಿದ್ದರು. …

Read More »

ಹೆಬ್ರಿಯ ಸೀತಾನದಿ ಕೂಡ್ಲು ಫಾಲ್ಸ್‌ನಲ್ಲಿ ಜಾರಿ ಬಿದ್ದಿದ್ದ ಬೆಂಗಳೂರಿನ ಯುವಕ ಸಾವು

ಹೆಬ್ರಿಯ ಸೀತಾನದಿ ಕೂಡ್ಲು ಫಾಲ್ಸ್‌ನಲ್ಲಿ ಬಂಡೆಕಲ್ಲಿನಿಂದ ಜಾರಿಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ.ತಾಲ್ಲೂಕಿನ ಆರ್ಡಿ ಕೊಂಜಾಡಿಯ ಮನ್ವಿತ್‌ (25) ತನ್ನ ಪೋಷಕರೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದು ಡಿಸೆಂಬರ್‌ 12ರಂದು ಕೊಂಜಾಡಿಗೆ ಬಂದಿದ್ದರುಡಿಸೆಂಬರ್‌ 14ರಂದು ಸ್ನೇಹಿತರೊಂದಿಗೆ ಕೂಡ್ಲು ಫಾಲ್ಸ್‌ ಗೆ ತೆರಳಿದ್ದರು. ಸ್ನೇಹಿತರು ಸ್ನಾನ ಮಾಡುವಾಗ ಮನ್ವಿತ್‌ ಎತ್ತರದ ಬಂಡೆಯ ಮೇಲೆ ಕುಳಿತುಕೊಂಡಿದ್ದು ಆಕಸ್ಮಿತವಾಗಿ ಜಾರಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಮನ್ವಿತ್‌ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ …

Read More »

ಕೈಮರದಲ್ಲಿ 280 ಗ್ರಾಂ ಒಡವೆ, ನಗದು ಕಳ್ಳತನ

ಮಧುಗಿರಿ: ತಾಲ್ಲೂಕಿನ ಕೈಮರದಲ್ಲಿ ಬುಧವಾರ ಶ್ರೀನಿವಾಸ್ ಎಂಬುವವರ ಮನೆ ಬೀಗ ತೆಗೆದು ಬೀರುವಿನಲ್ಲಿದ್ದ ಒಡವೆ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.ಬೀರುವಿನಲ್ಲಿದ್ದ 280 ಗ್ರಾಂ ಒಡವೆ, ₹30 ಸಾವಿರ ನಗದು ದೋಚಿದ್ದಾರೆ. ಶ್ರೀನಿವಾಸ್ ಕುಟುಂಬದವರು ಮನೆಗೆ ಬೀಗ ಹಾಕಿ ಕೀ ಅನ್ನು ವಿದ್ಯುತ್ ಮೀಟರ್ ಮೇಲಿಟ್ಟು ತೆರಳಿದ್ದರು.ಇದನ್ನು ಗಮನಿಸಿದ ಕಳ್ಳರು ಮನೆಯ ಬೀಗ ತೆಗೆದು ಬಂಗಾರದ ಒಡವೆ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಶಿರಾದಲ್ಲಿ ಜಮೀನು ವಿಚಾರಕ್ಕೆ ಜಗಳ; ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ

ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಗ್ರಾಮದ ಜಮೀನಿನಲ್ಲಿ ಗುರುವಾರ ಜಮೀನು ವಿಚಾರಕ್ಕೆ ಜಗಳ ಪ್ರಾರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.ಕಳ್ಳಂಬೆಳ್ಳ ಗ್ರಾಮದ ಮಧುವನ್ (36) ಕೊಲೆಯಾದವರು. ತುಮಕೂರು ಸಂತೇಪೇಟೆ ನಿವಾಸಿಗಳಾದ ಮಹೇಶ್, ಸಮೀರ್ ಹಾಗೂ ಕಳ್ಳಂಬೆಳ್ಳ ಗ್ರಾಮದ ಮಧುವನ್ ನಡುವೆ ಜಮೀನಿನ ವಿಚಾರವಾಗಿ ಜಗಳ ಪ್ರಾರಂಭವಾಗಿ ಮಾತಿನ ಚಕಮುಕಿ ನಡೆದಿದೆ.ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಮಧುವನ್ ಮೇಲೆ ಮಹೇಶ್ ಮಚ್ಚಿನಿಂದ ಹಲ್ಲೆ ನಡೆಸಿದ್ದು ಸ್ಥಳದಲ್ಲೇ ಮಧುವನ್ ಮೃತ ಪಟ್ಟಿದ್ದಾನೆ. ಕಳ್ಳಂಬೆಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕರ್ತವ್ಯಲೋಪ ಆರೋಪ: ವಿದ್ಯಾರ್ಥಿ ನಿಲಯ ಪಾಲಕಿ ಅಮಾನತು

ಹುಬ್ಬಳ್ಳಿ: ಕರ್ತವ್ಯಲೋಪ ಆರೋಪದ ಮೇಲೆ ಇಲ್ಲಿನ ರಾಜನಗರದ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದ ನಿಲಯ ಪಾಲಕಿಯನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೊರಡಿಸಿದ್ದಾರೆ.ಶೋಭಾ ಚಾಕಲಬ್ಬಿ ಅಮಾನತುಗೊಂಡವರು. ವಿದ್ಯಾರ್ಥಿನಿಲಯದಲ್ಲಿನ ಅವ್ಯವಸ್ಥೆ ಬಗೆಗಿನ ವರದಿ ಆಧರಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಖುದ್ದು ಪರಿಶೀಲನೆ ನಡೆಸಿದ್ದಾರೆ.ಅವರ ವರದಿ ಆಧರಿಸಿ ಇಲಾಖಾ ವಿಚಾರಣೆ ಕಾಯ್ದಿರಿಸಿ, ಅಮಾನತಿನಲ್ಲಿ ಇರಿಸಲಾಗಿದೆ. ಮೇಲಧಿಕಾರಿಗಳ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ …

Read More »